Loading Events
  • This event is over. However, time travel possible through our Audio & Video! See upcoming events

Artists

Chairperson, Crafts Council of Karnataka | ಅಧ್ಯಕ್ಷರು, ಕರಕುಶಲ ಪರಿಷತ್ತು, ಕರ್ನಾಟಕ
Managing Trustee, Vimor Handloom Foundation | ವ್ಯವಸ್ಥಾಪಕ ಟ್ರಸ್ಟಿ, ವಿಮೋರ್ ಹ್ಯಾಂಡ್‌ಲೂಮ್ ಫೌಂಡೇಶನ್
Associate Professor | ಸಹ ಪ್ರಾಧ್ಯಾಪಕರು
Research Fellow | ರೀಸರ್ಚ್‌ ಫೆಲೋ
Research Fellow | ರೀಸರ್ಚ್‌ ಫೆಲೋ
Writer & Voice Artist | ಲೇಖಕಿ ಮತ್ತು ಧ್ವನಿ ಕಲಾವಿದೆ
Entrepreneur | ಉದ್ಯಮಿ
Entrepreneur | ಉದ್ಯಮಿ
Photographer | ಛಾಯಾಗ್ರಾಹಕ
Mandolin | ಮ್ಯಾಂಡೊಲಿನ್
Harmonium | ಹಾರ್ಮೋನಿಯಂ
Ghazal Analyst | ಗಜಲ್ ವಿಶ್ಲೇಷಕರು
Visual Artist | ದೃಶ್ಯ ಕಲಾವಿದ
Curator | ಸಂಯೋಜಕರು

Date & Time

Sunday Sun, 8 Nov 2026

Location

Bangalore International Centre
7, 4th Main Road, Domlur II Stage
Bangalore, Karnataka 560071 India
Winding and binding, Karnataka’s great rivers have always been more than glorious waterways. From Krishna to Kaveri, our rivers are carriers of culture, stories, and transformation. As they flow across varied landscapes, they shape and are shaped by the people, traditions, and communities they touch.
Krishna to Kaveri is a two-day celebration that draws from this natural rhythm, exploring how Karnataka’s cultural life is constantly moving, adapting, and renewing itself. From classical roots to contemporary reinterpretations, this festival offers a vibrant weekend that speaks to a new generation. Expect immersive workshops, indulgent cuisines and impactful performances!
Whether you’re a native Kannadiga or recently moved into Bangalore, this festival is for anyone who wants to connect more deeply with the cultural spirit of the region. Not as outsiders looking in, but as participants in a living, flowing cultural journey.
Let the rivers lead. Let culture move. Let Karnataka unfold.
ಬಳಸುತ್ತಾ ಬೆಸೆಯುತ್ತಾ ಬೆಳೆಸುತ್ತಾ ಸಾಗುವ ಕರ್ನಾಟಕದ ನದಿಗಳು ವೈಭವದ ಜಲಹರಿವುಗಳು ಮಾತ್ರವಲ್ಲ. ಕೃಷ್ಣೆಯಿಂದ ಕಾವೇರಿವರೆಗೆ ವ್ಯಾಪಿಸಿರುವ ನದಿಗಳು ಸಂಸ್ಖೃತಿಯ, ಕಥೆ-ಪುರಾಣಗಳ, ಪರಿವರ್ತನೆಯ ಚಲನಶೀಲ ವಾಹಕಗಳಾಗಿವೆ. ವೈವಿಧ್ಯಮಯ ಸುಂದರ ಭೂಪ್ರದೇಶಗಳ ನಡುವೆ ಮುನ್ನಡೆವ ಈ ನದಿಗಳು ಜನರನ್ನು, ಪರಂಪರೆಗಳನ್ನು, ಸಮುದಾಯಗಳನ್ನು ರೂಪಿಸುತ್ತಾ, ಪರ್ಯಾಯವಾಗಿ ರೂಪುಗೊಳ್ಳುತ್ತಾ ಸಾಗಿವೆ.
ಈ ಸ್ವಾಭಾವಿಕ ಹರಿವಿನ ಲಯದಿಂದ ಹೊಮ್ಮಿರುವ ಎರಡು ದಿನಗಳ ಉತ್ಸವವೆ ‘ಕೃಷ್ಣೆಯಿಂದ ಕಾವೇರಿವರೆಗೆ ʼ. ಕರ್ನಾಟಕದ ಸಾಂಸ್ಕೃತಿಕ ಬದುಕಿನ ನಿರಂತರ ಚಲನೆಯ, ಹೊಂದಾಣಿಕೆಯ, ಪುನಶ್ಚೇತನದ ಶೋಧನೆ. ಈ ಉತ್ಸವವು ಅಭಿಜಾತ ಬೇರುಗಳಿಂದ ವರ್ತಮಾನದ ಮರುವ್ಯಾಖ್ಯಾನಗಳವರೆಗೆ ಹುರುಪಿನ ವಾರಾಂತ್ಯದಲ್ಲಿ ಹೊಸಪೀಳಿಗೆಗೆ ಒಳನೋಟಗಳನ್ನು ಒದಗಿಸಲಿದೆ. ತಲ್ಲೀನಗೊಳಿಸುವ ಕಾರ್ಯಾಗಾರಗಳು, ರುಚಿಕರ ಆಹಾರ, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಹಬ್ಬದಲ್ಲಿ ನಿರೀಕ್ಷಿಸಬಹುದು.
ನೀವು ಮೂಲ ಕನ್ನಡಿಗರಾಗಿರಿ ಅಥವಾ ಇತ್ತೀಚೆಗಷ್ಟೆ ಹೊರಗಿನಿಂದ ಬೆಂಗಳೂರಿಗೆ ಬಂದಿರುವವರೇ ಆಗಿರಿ. ಈ ನೆಲದ ಸಾಂಸ್ಕೃತಿಕ ಚೇತನದೊಂದಿಗೆ ಆಳವಾಗಿ ಬೆರೆಯುವ ಅವಕಾಶವನ್ನು ಈ ಹಬ್ಬ ನಿಮಗೆ ಒದಗಿಸುತ್ತದೆ. ಇಲ್ಲಿನ ಕಾರ್ಯಕ್ರಮಗಳನ್ನು ನೀವು ಹೊರಗಿನವರಾಗಿ ನಿಂತು ನೋಡುವ ಪ್ರೇಕ್ಷಕರಾಗದೆ ಒಂದು ಜೀವಂತ, ಸಾಂಸ್ಕೃತಿಕ ಯಾನದ ಭಾಗವಾಗಲು ಬನ್ನಿರಿ.
ಮುನ್ನಡೆಸಲಿ ನದಿಗಳು. ಪ್ರವಹಿಸಲಿ ಸಂಸ್ಕೃತಿ. ಗೋಚರವಾಗಲಿ ಕರ್ನಾಟಕದ ಸಿರಿ ವೈಭವ!
Download the full schedule here.

Day 2 Schedule

11:00 AM – 12:30 PM: Azim Premji University’s Kathavana Children’s Book Series – 1 | ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಕಥಾವನ ಮಕ್ಕಳ ಪುಸ್ತಕ ಸರಣಿ – ೧
Celebrating Kannada Children’s Literature | ಕನ್ನಡ ಮಕ್ಕಳ ಸಾಹಿತ್ಯೋತ್ಸವ

Azim Premji University’s Kathavana Children’s Book Series brings together ten selected works that aim to enrich Kannada children’s literature and encourage emerging writers across Karnataka. Finalised after a year-long process of submissions, shortlisting, and review by an eminent jury, the collection features diverse literary forms, including picture poems, poetry, stories, plays, and informational works. The selected books are Koli by Santosh Ganagatte, Chitte Helida Guttu by Shekarayya T. M. H., Putta Totake Hodanu by Shivananda B. Tavali, Golla Mattu Tola by Tejavathi H. D., Motte by Vidya Aramane, Gaali Kaledu Hogide by Somu Kudarhalla, Gandhi Mahatma Aagiddu by Sudha Aadukala, Trideviyaru Thoo Bittaru by K. S. Chaitra, Karadige Guruvada Jinke by Satyanarayana S., and Aakashana Rekhaganita Mattu Hase Chittara by Shashi Sampalli.
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಕಥಾವನ ಮಕ್ಕಳ ಪುಸ್ತಕ ಸರಣಿಯು ಕನ್ನಡ ಮಕ್ಕಳ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಹಾಗೂ ಕರ್ನಾಟಕದ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯ್ಕೆ ಮಾಡಲಾದ ಹತ್ತು ಕೃತಿಗಳನ್ನು ಒಳಗೊಂಡಿದೆ. ಒಂದು ವರ್ಷದ ಅವಧಿಯಲ್ಲಿ ಬರಹಗಳನ್ನು ಆಹ್ವಾನಿಸಿ, ಅವುಗಳನ್ನು ಆಯ್ಕೆ ಮಾಡಿ, ಗಣ್ಯ ಸಾಹಿತಿಗಳನ್ನೊಳಗೊಂಡ ತೀರ್ಪುಗಾರರ ಸಮಿತಿಯು ಪರಿಶೀಲಿಸಿದ ನಂತರ ಈ ಕೃತಿಗಳನ್ನು ಅಂತಿಮಗೊಳಿಸಲಾಗಿದೆ. ಈ ಸಂಕಲನದಲ್ಲಿ ಚಿತ್ರಕವಿತೆಗಳು, ಕವನ ಸಂಕಲನ, ಕಥೆಗಳು, ನಾಟಕ ಹಾಗೂ ಮಾಹಿತಿ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಿಗಳಂತಹ ವೈವಿಧ್ಯಮಯ ಸಾಹಿತ್ಯ ಪ್ರಕಾರಗಳಿವೆ. ಆಯ್ಕೆಯಾದ ಪುಸ್ತಕಗಳು: ಕೋಳಿ — ಸಂತೋಷ್ ಗಣಗಟ್ಟೆ, ಚಿಟ್ಟೆ ಹೇಳಿದ ಗುಟ್ಟು — ಶೇಖರಯ್ಯ ಟಿ.ಎಂ.ಎಚ್., ಪುಟ್ಟ ತೋಟಕ್ಕೆ ಹೋದನು — ಶಿವಾನಂದ ಬಿ. ತಾವಳಿ, ಗೊಲ್ಲ ಮತ್ತು ತೋಳ — ತೇಜವತಿ ಎಚ್.ಡಿ., ಮೊಟ್ಟೆ — ವಿದ್ಯಾ ಅರಮನೆ, ಗಾಳಿ ಕಳೆದು ಹೋಗಿದೆ — ಸೋಮು ಕುದರಹಳ್ಳ, ಗಾಂಧಿ ಮಹಾತ್ಮ ಆಗಿದ್ದು — ಸುಧಾ ಆಡುಕಳ, ತ್ರಿದೇವಿಯರು ಟೂ ಬಿಟ್ಟರು — ಕೆ.ಎಸ್. ಚೈತ್ರ, ಕರಡಿಗೆ ಗುರುವಾದ ಜಿಂಕೆ — ಸತ್ಯನಾರಾಯಣ ಎಸ್. ಮತ್ತು ಆಕಾಶನ ರೇಖಾಗಣಿತ ಮತ್ತು ಹಸೆ ಚಿತ್ತಾರ — ಶಶಿ ಸಂಪಳ್ಳಿ.

11:00 AM – 12:30 PM: Crafts of Karnataka |ಕರ್ನಾಟಕದ ಕರಕುಶಲ ಕಲೆಗಳು
A Legacy to Cherish and Take Forward | ಉಳಿಸಿ ಬೆಳೆಸಬೇಕಾದ ಪರಂಪರೆಗಳು
Chandra Jain | ಚಂದ್ರ ಜೈನ್‌

Karnataka’s rich craft traditions reflect a legacy shaped by generations of knowledge, skill, creativity and cultural exchange. This session explores the enduring value of traditional crafts and their place in our lives today. It offers an opportunity to reflect on the importance of preserving these practices, recognising the artisans who sustain them, and ensuring that their knowledge continues to reach new generations. This talk by Chandra Jain, Chairperson of the Crafts Council of Karnataka, invites audiences to consider how we can celebrate our craft heritage while creating meaningful opportunities for it to evolve, thrive and remain relevant in a changing world.
ಕರ್ನಾಟಕದ ಶ್ರೀಮಂತ ಕರಕುಶಲ ಕಲೆಗಳು, ತಲೆಮಾರುಗಳಿಂದ ಬೆಳೆದು ಬಂದಿರುವ ನಮ್ಮ ನಾಡಿನ ಙ್ಞಾನ – ಸೃಜನಶೀಲತೆ ಮತ್ತು ಪರಂಪರೆಯ ಪ್ರತಿಬಿಂಬವಾಗಿದೆ. ಈ ಕಾರ್ಯಕ್ರಮವು ನಮ್ಮ ಸಾಂಪ್ರದಾಯಿಕ ಕರಕುಶಲ ಕಲೆಗಳ ಮಹತ್ವವ ಮತ್ತು ಪ್ರಸ್ತುತ ಬದುಕಿನಲ್ಲಿ ಅವುಗಳ ಸ್ಥಾನದ ಕುರಿತು ತಿಳಿಸಿಕೊಡುತ್ತದೆ. ಈ ಕಲಾಪ್ರಕಾರಗಳನ್ನು ಸಂರಕ್ಷಿಸುವುದು, ಅವುಗಳನ್ನು ಜೀವಂತವಾಗಿರಿಸುವ ಕಲಾವಿದರನ್ನು ಗುರುತಿಸಿ ಗೌರವಿಸುವುದು ಮತ್ತು ಈ ಕಲೆಯನ್ನು ಅವರ ಮೂಲಕ ಮುಂದಿನ ತಲೆಮಾರುಗಳಿಗೆ ತಲುಪುವಂತೆ ನೋಡಿಕೊಳ್ಳುವುದು ಮುಖ್ಯವೇಕೆ ಎಂಬುದನ್ನು ಇಲ್ಲಿ ತಿಳಿಯಬಹುದು.ಕರ್ನಾಟಕದ ಕರಕುಶಲ ಮಂಡಳಿಯ ಅಧ್ಯಕ್ಷರಾದ ಚಂದ್ರಾ ಜೈನ್‌ ಅವರ ಈ ಉಪನ್ಯಾಸವು, ನಾವುಗಳು ನಮ್ಮಲ್ಲಿರುವ ಈ ಕಲೆಗಳನ್ನು ಹೇಗೆ ಸಂಭ್ರಮಿಸಲು ಸಾಧ್ಯ, ಮತ್ತು ಅದರ ಜೊತೆ ಜೊತೆಗೆ ಅವುಗಳಿಂದ ಅವಕಾಶಗಳನ್ನು ಪಡೆದುಕೊಂಡು ಪ್ರಸ್ತುತ ಕಾಲಕ್ಕೆ ಅದನ್ನು ನಾವು ಹೇಗೆ ನೆರವಾಗಿಸಿಕೊಳ್ಳಬಹುದು ಎಂಬುದರ ಬಗ್ಗೆ ಇರುತ್ತದೆ.

12:30 PM – 02:30 PM: Mysuru Mallige | ಮೈಸೂರು ಮಲ್ಲಿಗೆ
A Timeless Garland of Poetry, Music and Theatre | ಕಾವ್ಯ, ಸಂಗೀತ ಮತ್ತು ರಂಗಭೂಮಿಯ ಮಧುರ ಸಂಗಮ   
Kalagangotri | ಕಲಾಗಂಗೋತ್ರಿ

Mysuru Mallige, a celebrated theatrical production by Kalagangotri, is based on the immortal love poems of renowned Kannada poet K. S. Narasimha Swamy. First published in 1942, the original collection has seen more than 27 reprints. Conceptualised and directed by Dr. B. V. Rajaram, this musical play has completed over 350 successful performances. It beautifully portrays the joys, struggles, innocent love and emotional bonds of a middle-class couple through poetry, music, dance and acting. Enriched by the memorable musical compositions of C. Ashwath and Raju Ananthaswamy, the production offers an unforgettable theatrical experience, captivating audiences with its lyrical beauty and emotional depth.
ಕಲಾಗಂಗೋತ್ರಿ ರಂಗತಂಡದ ಜನಪ್ರಿಯ ರಂಗಪ್ರಯೋಗವಾದ ಮೈಸೂರು ಮಲ್ಲಿಗೆ, ಕನ್ನಡದ ಪ್ರಸಿದ್ಧ ಪ್ರೇಮಕವಿ ಕೆ. ಎಸ್. ನರಸಿಂಹಸ್ವಾಮಿ ಅವರ ಅಮರ ಪ್ರೇಮಕವನಗಳನ್ನು ಆಧರಿಸಿದೆ. 1942ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ಮೂಲ ಕವನಸಂಕಲನವು 27ಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿದೆ. ಡಾ. ಬಿ. ವಿ. ರಾಜಾರಾಂ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಈ ಗೀತನಾಟಕವು ಈಗಾಗಲೇ 350ಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ಮಧ್ಯಮ ವರ್ಗದ ದಂಪತಿಗಳ ಬದುಕಿನ ಏಳುಬೀಳುಗಳು, ಮುಗ್ಧ ಪ್ರೀತಿ ಮತ್ತು ಕೌಟುಂಬಿಕ ಭಾವನೆಗಳನ್ನು ಕಾವ್ಯ, ಸಂಗೀತ, ನೃತ್ಯ ಹಾಗೂ ಅಭಿನಯದ ಮೂಲಕ ಮನಮುಟ್ಟುವಂತೆ ಕಟ್ಟಿಕೊಡುತ್ತದೆ. ಸಿ. ಅಶ್ವತ್ಥ್ ಮತ್ತು ರಾಜು ಅನಂತಸ್ವಾಮಿ ಅವರ ಮಧುರ ರಾಗಸಂಯೋಜನೆ ಈ ರಂಗಪ್ರಯೋಗದ ಸೊಬಗನ್ನು ಹೆಚ್ಚಿಸಿ, ಪ್ರೇಕ್ಷಕರನ್ನು ಭಾವಲೋಕಕ್ಕೆ ಕರೆದೊಯ್ಯುತ್ತದೆ.

01:00 PM – 02:30 PM: Karnataka’s Woven Treasures | ಕರ್ನಾಟಕದ ನೇಯ್ಗೆಯ ನಿಧಿಗಳು
Celebrating Kannadiga Inheritance | ಕನ್ನಡಿಗರ ಪರಂಪರೆಗಳ ಸಂಭ್ರಮ   
Pavithra Muddaya | ಪವಿತ್ರಾ ಮುದ್ದಯ್ಯ

In this talk, Pavithra Muddaya will explore how authentic antique handlooms from Karnataka inspire her work, and the processes through which she recreates these traditional designs. By bringing historic weaves into the present, she seeks to ensure the continuity of textile traditions while creating sustainable livelihoods with dignity for everyone involved. Her work offers a proven model for preserving Karnataka’s rich weaving heritage while keeping its craft practices relevant for future generations.
ಈ ಉಪನ್ಯಾಸದಲ್ಲಿ ಪವಿತ್ರ ಮುದ್ದಯ್ಯ ಅವರು ಕರ್ನಾಟಕದ ಪ್ರಾಚೀನ ಕೈ ಮಗ್ಗದ ಸೀರೆಗಳು ಮತ್ತು ಜವಳಿಗಳು ತಮ್ಮ ಕೆಲಸಕ್ಕೆ ಹೇಗೆ ಸ್ಫೂರ್ತಿಯಾಗಿವೆ ಎನ್ನುವುದರ ಬಗ್ಗೆ ಮತ್ತು ಈ ಸಾಂಪ್ರದಾಯಿಕ ವಿನ್ಯಾಸಗಳನ್ನು ಆಕೆ ಹೇಗೆ ಮರು ಸೃಷ್ಟಿಸುತ್ತಾರೆ ಎನ್ನುವುದರ ಕುರಿತು ಮಾತನಾಡಲಿದ್ದಾರೆ. ಸಾಂಪ್ರದಾಯಿಕ ನೇಯ್ಗೆಯ ವಿನ್ಯಾಸಗಳನ್ನು ಪುನಃ ಚಾಲ್ತಿಗೆ ತರುವ ಮೂಲಕ, ಈ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಅಲ್ಲದೇ, ಈ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಎಲ್ಲರಿಗೂ ಗೌರವಯುತ ಮತ್ತು ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸುವ ಉದ್ದೇಶವನ್ನೂ ಹೊಂದಿದ್ದಾರೆ. ಈ ಪರಂಪರೆಯನ್ನು, ಅದರ ವಿನ್ಯಾಸದ ಕಲೆಯನ್ನು ಸಂರಕ್ಷಿಸುತ್ತಾ, ಅದು ಮುಂದಿನ ಪೀಳಿಗೆಗೂ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ.

02:30 PM – 04:00 PM: Traditional Foods of Karnataka | ಕರ್ನಾಟಕದ ಸಾಂಪ್ರದಾಯಿಕ ತಿನಿಸುಗಳು
Taste Meets Nutrition |ರುಚಿಯೊಂದಿಗೆ ಪೌಷ್ಟಿಕಾಂಶ  
Megha & Sadashiv Naik | ಮೇಘ & ಸದಾಶಿವ್ ನಾಯಕ್‌

Traditional Foods of Karnataka is a collaborative project by Trans-Disciplinary University, Bengaluru, and CCRAS-Central Ayurveda Research Institute (CARI) to document and preserve Karnataka’s culinary heritage. Over three years, the team travelled nearly 10,000 km across the state, documenting food habits across seasons and stages of life. The project resulted in 128 traditional recipes, compiled in an illustrated book and a YouTube channel featuring recipe demonstrations. In this lecture, the team will share cultural, nutritional and Ayurvedic insights into these recipes and explore how traditional food knowledge can inform public health and nutrition. Discover how even garden weeds can enrich your diet!
ಈ ಕಾರ್ಯಕ್ರಮವು ಕರ್ನಾಟಕದ ವಿವಿಧ ತಿನಿಸುಗಳನ್ನು ದಾಖಲಿಸಿ ಸಂರಕ್ಷಿಸುವ ಉದ್ದೇಶವನ್ನು ಹೊಂದಿದೆ. ಬೆಂಗಳೂರಿನ ಟ್ರಾನ್ಸ್‌ ಡಿಸಿಪ್ಲಿನರಿ ವಿಶ್ವವಿದ್ಯಾಲಯ ಮತ್ತು ಸಿಸಿಆರ್‌ಎಎಸ್‌ – ಸೆಂಟ್ರಲ್‌ ಆಯುರ್ವೇದ ರೀಸರ್ಚ್‌ ಸೆಂಟರ್‌ (cari), ಈ ಎರಡೂ ಸಂಸ್ಥೆಗಳು ಈ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಲಿದ್ದಾರೆ. ಮೂರು ವರ್ಷಗಳ ಕಾಲಾವಧಿಯಲ್ಲಿ, ಈ ತಂಡವು ರಾಜ್ಯದಾದ್ಯಂತ ೧೦,೦೦೦ ಕಿ.ಮೀ ದೂರ ಪ್ರಯಾಣಿಸಿ, ಹಲವಾರು ಪ್ರದೇಶಗಳಲ್ಲಿನ ಆಹಾರ ಪದ್ಧತಿಗಳನ್ನು, ಋತುಗಳ ಪ್ರಕಾರ ಮತ್ತು ಬದಲಾಗುವ ಜನರ ಜೀವನ ಶೈಲಿಗಳ ಪ್ರಕಾರ ದಾಖಲಿಸಿದೆ. ಈ ಯೋಜನೆಯಿಂದ ಸುಮಾರು ೧೨೮ ಹೊಸ ಸಾಂಪ್ರದಾಯಿಕ ತಿನಿಸುಗಳ ಸಂಗ್ರಹವಾಗಿದೆ. ಅವುಗಳ ತಯಾರಿ ವಿಧವನ್ನು ಒಂದು ಪುಸ್ತಕದ ರೂಪದಲ್ಲಿ ಮತ್ತು ಯೂಟ್ಯೂಬ್‌ ವೀಡಿಯೋಗಳ ರೂಪದಲ್ಲಿ ದಾಖಲಿಸಲಾಗಿದೆ. ಈ ತಿನಿಸುಗಳ ಸಾಂಸ್ಕೃತಿಕ, ಪೌಷ್ಠಿಕ ಮತ್ತು ಆಯುರ್ವೇದಕ್ಕೆ ಸಂಬಂಧಪಟ್ಟ ವಿಷಯಗಳನ್ನು ಈ ಉಪನ್ಯಾಸದಲ್ಲಿ ಹಂಚಿಕೊಳ್ಳಲಾಗುತ್ತದೆ. ಅಲ್ಲದೇ, ಸಾಂಪ್ರದಾಯಿಕ ಆಹಾರ ಙ್ನಾನವು ಸಾರ್ವಕನಿಕರ ಆರೋಗ್ಯ ಮತ್ತು ಪೌಷ್ಠಿಕತೆಯನ್ನು ಸುಧಾರಿಸಲು ಹೇಗೆ ನೆರವಾಗುತ್ತದೆ ಎಂಬುದರ ಬಗ್ಗೆಯೂ ಇಲ್ಲಿ ಮಾತನಾಡಲಾಗುತ್ತದೆ. ಮನೆ ತೋಟದ ಗಿಡಗಳೂ ಹೇಗೆ ನಿಮ್ಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯೋಣ ಬನ್ನಿ!

03:00 PM – 05:00 PM: The Light That Drenched the Entire World – Raj | ಜಗವೆಲ್ಲ ತೊಯ್ದ ಬೆಳಕು – ರಾಜ್
Dimensions of a Cultural Icon through a New Documentary | ಹೊಸ ಸಾಕ್ಷ್ಯಚಿತ್ರದ ಮೂಲಕ ಸಾಂಸ್ಕೃತಿಕ ಮೇರುಪರ್ವತದ ವಿವಿಧ ಆಯಾಮಗಳ ಅನಾವರಣ
B. K. Sumathi | ಬಿ. ಕೆ. ಸುಮತಿ

Dr. Rajkumar embodies the very pulse of Kannada culture, seamlessly bringing history, mythology, and social values to literate and illiterate audiences alike. Over a four-decade career, his unmatched screen presence and personality transformed him into Karnataka’s beloved jewel. Though physically gone for twenty years, he remains a household name, inspiring generations through daily social media and family traditions. He lived his art like a saint, sharing pure joy. This documentary is a multi-dimensional exploration into his enduring legacy, analyzing his films, music, family, global influence, and the untold stories that make his magic timeless.
ಡಾ. ರಾಜ್‌ಕುಮಾರ್ ಅವರು ಕನ್ನಡ ಸಂಸ್ಕೃತಿಯ ನಾಡಿಮಿಡಿತವಾಗಿದ್ದಾರೆ. ಇವರು ಇತಿಹಾಸ, ಪುರಾಣ ಮತ್ತು ಸಾಮಾಜಿಕ ಮೌಲ್ಯಗಳನ್ನು ಅಕ್ಷರಸ್ಥ ಹಾಗೂ ಅನಕ್ಷರಸ್ಥ ಪ್ರೇಕ್ಷಕರಿಬ್ಬರಿಗೂ ಸುಲಭವಾಗಿ ತಲುಪಿಸಿದರು. ನಾಲ್ಕು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ, ತಮ್ಮ ಸಾಟಿಯಿಲ್ಲದ ನಟನೆ ಮತ್ತು ವ್ಯಕ್ತಿತ್ವದಿಂದ ಕರ್ನಾಟಕದ ಪ್ರೀತಿಯ ರತ್ನವಾದರು. ಅವರು ದೈಹಿಕವಾಗಿ ನಮ್ಮನ್ನು ಅಗಲಿ ಇಪ್ಪತ್ತು ವರ್ಷಗಳಾಗಿದ್ದರೂ, ಇಂದಿಗೂ ಪ್ರತಿ ಮನೆಯ ಹೆಸರಾಗಿದ್ದಾರೆ; ಸಾಮಾಜಿಕ ಮಾಧ್ಯಮಗಳು ಮತ್ತು ಕೌಟುಂಬಿಕ ನೆನಪುಗಳ ಮೂಲಕ ತಲೆಮಾರುಗಳಿಗೆ ಸ್ಪೂರ್ತಿಯಾಗಿದ್ದಾರೆ. ಕಲೆಯನ್ನೇ ಬದುಕಿದ ಅವರು ಸಂತನಂತೆ ಎಲ್ಲರಿಗೂ ಆನಂದವನ್ನು ಹಂಚಿದರು. ಈ ಸಾಕ್ಷ್ಯಚಿತ್ರವು ಅವರ ಚಲನಚಿತ್ರಗಳು, ಸಂಗೀತ, ಕುಟುಂಬ, ಜಾಗತಿಕ ಪ್ರಭಾವ ಹಾಗೂ ಅವರ ಮ್ಯಾಜಿಕ್ ಅನ್ನು ಶಾಶ್ವತವಾಗಿಸಿದ ಅನ್‌ಟೋಲ್ಡ್ ಸ್ಟೋರಿಗಳನ್ನು (ಹೇಳದ ಕಥೆಗಳನ್ನು) ವಿಶ್ಲೇಷಿಸುವ ಒಂದು ಬಹು ಆಯಾಮದ ಅನ್ವೇಷಣೆಯಾಗಿದೆ.

04:00 PM – 05:30 PM: Janapada Sangeeta Sambhrama | ಜನಪದ ಸಂಗೀತ ಸಂಭ್ರಮ
Celebrating the Folk Rhythms and Musical Traditions of Karnataka | ಕರ್ನಾಟಕದ ಜನಪದ ಸಂಗೀತ ಪರಂಪರೆಯ ಸೊಗಡು ಮತ್ತು ಸಂಭ್ರಮದ ಅನಾವರಣ 
Appagere Thimmaraju | ಅಪ್ಪಗೆರೆ ತಿಮ್ಮರಾಜು

Experience the vibrant spirit of Karnataka through Janapada Sangeeta Sambhrama, a celebration of the state’s rich folk music traditions. Rooted in the everyday lives, customs, beliefs and collective memories of its people, Karnataka’s folk songs carry the essence of its cultural heritage. Through soulful melodies, rhythmic expressions and traditional singing, this session invites audiences to discover the diversity and enduring beauty of Janapada Sangeetha. Join us for an engaging musical journey that honours the voices of the people, celebrates Karnataka’s cultural identity and keeps its timeless folk traditions alive for generations to come.
ಜಾನಪದ ಸಂಗೀತ ಸಂಭ್ರಮ’ದ ಮೂಲಕ ಕರ್ನಾಟಕದ ರೋಮಾಂಚಕ ಚೇತನವನ್ನು ಅನುಭವಿಸಿ. ಇದು ನಮ್ಮ ರಾಜ್ಯದ ಶ್ರೀಮಂತ ಜಾನಪದ ಸಂಗೀತ ಸಂಪ್ರದಾಯಗಳ ಭವ್ಯ ಆಚರಣೆಯಾಗಿದೆ. ಜನರ ದೈನಂದಿನ ಜೀವನ, ಆಚರಣೆಗಳು, ನಂಬಿಕೆಗಳು ಮತ್ತು ಸಾಮೂಹಿಕ ನೆನಪುಗಳಲ್ಲಿ ಬೇರೂರಿರುವ ಕರ್ನಾಟಕದ ಜಾನಪದ ಗೀತೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಸಾರವನ್ನು ಹೊಂದಿವೆ. ಭಾವಪೂರ್ಣ ಮಧುರ ಧ್ವನಿ, ಲಯಬದ್ಧ ಅಭಿವ್ಯಕ್ತಿಗಳು ಮತ್ತು ಸಾಂಪ್ರದಾಯಿಕ ಗಾಯನದ ಮೂಲಕ, ಈ ಕಾರ್ಯಕ್ರಮವು ಜಾನಪದ ಸಂಗೀತದ ವೈವಿಧ್ಯತೆ ಮತ್ತು ಶಾಶ್ವತ ಸೌಂದರ್ಯವನ್ನು ಅನ್ವೇಷಿಸಲು ಪ್ರೇಕ್ಷಕರನ್ನು ಆಹ್ವಾನಿಸುತ್ತದೆ. ಜನರ ಧ್ವನಿಯನ್ನು ಗೌರವಿಸುವ, ಕರ್ನಾಟಕದ ಸಾಂಸ್ಕೃತಿಕ ಅನನ್ಯತೆಯನ್ನು ಆಚರಿಸುವ ಮತ್ತು ಮುಂಬರುವ ಪೀಳಿಗೆಗಾಗಿ ಈ ಕಾಲಾತೀತ ಜಾನಪದ ಸಂಪ್ರದಾಯಗಳನ್ನು ಜೀವಂತವಾಗಿಡುವ ಈ ಆಕರ್ಷಕ ಸಂಗೀತ ಪ್ರಯಾಣದಲ್ಲಿ ನಮ್ಮೊಂದಿಗೆ ಕೈಜೋಡಿಸಿ.

04:30 PM – 05:30 PM: Kannadiga Entrepreneurship in the AI Era | ಎ ಐ ಕಾಲದಲ್ಲಿ ಕನ್ನಡಿಗರ ಉದ್ಯಮಶೀಲತೆ
Empowering Kannadiga Entrepreneurs for Global Success | ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಕನ್ನಡಿಗರ ಉದ್ಯಮಶೀಲತೆ ಮತ್ತು ಜಾಗತಿಕ ಅವಕಾಶಗಳ ಅನಾವರಣ
Vasant Shetty, Sanjay Anandaram & Sachin Naik | ವಸಂತ ಶೆಟ್ಟಿ, ಸಂಜಯ್ ಆನಂದರಾಮ್ & ಸಚಿನ್ ನಾಯಕ್

From historic trading legacies to modern-day unicorns, Kannadiga entrepreneurs have quietly ruled markets and continue to drive global innovation today. As we enter the era of Artificial Intelligence, this panel celebrates these success stories while exploring how to scale this entrepreneurial spirit even further. AI is lowering barriers to entry, offering an unprecedented launchpad for local talent. This session brings together visionaries to discuss how the community can leverage emerging technology to amplify its innate business acumen. It is a forward-looking roadmap to inspire, empower, and accelerate the next massive wave of Kannadiga-led global enterprises.
ಐತಿಹಾಸಿಕ ವ್ಯಾಪಾರ ಪರಂಪರೆಯಿಂದ ಇಂದಿನ ಯೂನಿಕಾರ್ನ್‌ಗಳವರೆಗೆ, ಕನ್ನಡಿಗ ಉದ್ಯಮಿಗಳು ಮಾರುಕಟ್ಟೆಯನ್ನು ಆಳುತ್ತಾ ಜಾಗತಿಕ ಆವಿಷ್ಕಾರಗಳನ್ನು ಮುನ್ನಡೆಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆಯ (AI) ಈ ಯುಗದಲ್ಲಿ, ಈ ಚರ್ಚಾಗೋಷ್ಠಿಯು ಕನ್ನಡಿಗರ ಯಶೋಗಾಥೆಗಳನ್ನು ಕೊಂಡಾಡುತ್ತಾ, ಉದ್ಯಮಶೀಲತೆಯ ಉತ್ಸಾಹವನ್ನು ಮತ್ತಷ್ಟು ವಿಸ್ತರಿಸುವ ಮಾರ್ಗಗಳನ್ನು ಅನ್ವೇಷಿಸುತ್ತದೆ. AI ತಂತ್ರಜ್ಞಾನವು ಹೊಸಬರ ಹಾದಿಯನ್ನು ಸುಲಭಗೊಳಿಸುತ್ತಿದ್ದು, ಸ್ಥಳೀಯ ಪ್ರತಿಭೆಗಳಿಗೆ ಅಭೂತಪೂರ್ವ ವೇದಿಕೆಯನ್ನು ಒದಗಿಸುತ್ತಿದೆ. ಈ ಉದಯೋನ್ಮುಖ ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ಸಹಜ ವ್ಯವಹಾರ ಜ್ಞಾನವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂದು ಚರ್ಚಿಸಲು ಈ ಗೋಷ್ಠಿಯು ದಾರ್ಶನಿಕರನ್ನು ಒಂದೆಡೆ ಸೇರಿಸುತ್ತದೆ. ಇದು ಮುಂದಿನ ಪೀಳಿಗೆಯ ಕನ್ನಡಿಗ ನೇತೃತ್ವದ ಜಾಗತಿಕ ಉದ್ಯಮಗಳನ್ನು ಪ್ರೇರೇಪಿಸುವ ಮತ್ತು ವೇಗಗೊಳಿಸುವ ಒಂದು ಪ್ರಗತಿಪರ ಮಾರ್ಗಸೂಚಿಯಾಗಿದೆ.

06:00 PM – 08:00 PM: Photographing Heritage and Understanding Prints | ಪರಂಪರೆಯ ಛಾಯಾಗ್ರಹಣ ಮತ್ತು ಪ್ರಿಂಟ್‌ಗಳ ಗ್ರಹಿಕೆ
An Illustrated Journey through Heritage Photography, Contemporary Black-And-White Photography, and Traditional Printmaking | ಪಾರಂಪರಿಕ ಛಾಯಾಗ್ರಹಣದಿಂದ ಸಮಕಾಲೀನ ಕಪ್ಪು-ಬಿಳುಪು ಛಾಯಾಗ್ರಹಣ ಮತ್ತು ಸಾಂಪ್ರದಾಯಿಕ ಮುದ್ರಣ ಕಲೆಯವರೆಗಿನ ಚಿತ್ರಸಹಿತ ಪಯಣ 
Karthik K. Samprathi & Shankar Kiragi | ಕಾರ್ತಿಕ್ ಕೆ. ಸಂಪ್ರತಿ & ಶಂಕರ್ ಕಿರಗಿ

Photographing Heritage and Understanding Prints is a two-hour illustrated workshop and live demonstration exploring how photography records and interprets India’s monuments.
Karthik Samprathi will discuss how light, shadow, texture, and composition elevate black-and-white architectural photography beyond simple documentation. The session then tracks the journey from photograph to physical print, comparing inkjet, silver gelatin, and alternative processes to show how materials affect the final image.
Finally, photographer Shankar Kiragi will conduct a live demonstration of the cyanotype process—a 19th-century method using ultraviolet light to create distinctive blue prints. No prior experience is required.
ಪರಂಪರೆಯ ಛಾಯಾಗ್ರಹಣ ಮತ್ತು ಮುದ್ರಣಗಳ ತಿಳುವಳಿಕೆ ಎಂಬುದು ಎರಡು ಗಂಟೆಗಳ ಚಿತ್ರಸಹಿತ ಕಾರ್ಯಾಗಾರ ಮತ್ತು ನೇರ ಪ್ರಾತ್ಯಕ್ಷಿಕೆಯಾಗಿದೆ. ಇದು ಛಾಯಾಗ್ರಹಣವು ಭಾರತದ ಸ್ಮಾರಕಗಳನ್ನು ಹೇಗೆ ದಾಖಲಿಸುತ್ತದೆ ಮತ್ತು ವಿಶ್ಲೇಷಿಸುತ್ತದೆ ಎಂಬುದನ್ನು ಅನ್ವೇಷಿಸುತ್ತದೆ.
ಕಾರ್ತಿಕ್ ಸಂಪ್ರತಿ ಅವರು ಬೆಳಕು, ನೆರಳು, ವಿನ್ಯಾಸ ಮತ್ತು ಸಂಯೋಜನೆಗಳು ಕಪ್ಪು-ಬಿಳುಪು ವಾಸ್ತುಶಿಲ್ಪದ ಛಾಯಾಗ್ರಹಣವನ್ನು ಕೇವಲ ದಾಖಲಾತಿಗಿಂತ ಹೇಗೆ ಮೇಲಕ್ಕೆತ್ತುತ್ತವೆ ಎಂಬುದನ್ನು ಚರ್ಚಿಸಲಿದ್ದಾರೆ. ನಂತರ, ಈ ಸೆಷನ್ ಭಾವಚಿತ್ರದಿಂದ ಭೌತಿಕ ಮುದ್ರಣದವರೆಗಿನ ಪ್ರಯಾಣವನ್ನು ಗುರುತಿಸುತ್ತದೆ; ಹಾಗೂ ಬಳಸುವ ವಸ್ತುಗಳು ಅಂತಿಮ ಚಿತ್ರದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ತೋರಿಸಲು ಇಂಕ್‌ಜೆಟ್, ಸಿಲ್ವರ್ ಜೆಲಾಟಿನ್ ಮತ್ತು ಪರ್ಯಾಯ ಪ್ರಕ್ರಿಯೆಗಳನ್ನು ಹೋಲಿಕೆ ಮಾಡುತ್ತದೆ.
ಅಂತಿಮವಾಗಿ, ಛಾಯಾಗ್ರಾಹಕ ಶಂಕರ್ ಕಿರಗಿ ಅವರು ಸಯನೋಟೈಪ್ (cyanotype) ಪ್ರಕ್ರಿಯೆಯ ನೇರ ಪ್ರಾತ್ಯಕ್ಷಿಕೆಯನ್ನು ನೀಡಲಿದ್ದಾರೆ. ಇದು ವಿಶಿಷ್ಟವಾದ ನೀಲಿ ಮುದ್ರಣಗಳನ್ನು ರಚಿಸಲು ನೇರಳೆಾತೀತ (UV) ಬೆಳಕನ್ನು ಬಳಸುವ 19 ನೇ ಶತಮಾನದ ವಿಧಾನವಾಗಿದೆ. ಈ ಕಾರ್ಯಾಗಾರಕ್ಕೆ ಯಾವುದೇ ಪೂರ್ವ ಅನುಭವದ ಅಗತ್ಯವಿಲ್ಲ.

06:30 PM – 08:00 PM: Ghazal Yaana Madhura Gaana | ಗಜಲ್ ಯಾನ ಮಧುರ ಗಾನ
An Evening of Melodious Verses and Critical Insights | ಮಧುರ ಕಾವ್ಯ ಹಾಗೂ ವಿಶ್ಲೇಷಣೆಯ ಒಂದು ಸಾಹಿತ್ಯ ಸಂಜೆ
Imtiaz Sultan, Abhishek Davangere, Karthik, Pramod Jeeva & Mandalagiri Prasanna | ಇಮ್ತಿಯಾಜ್ ಸುಲ್ತಾನ್, ಅಭಿಷೇಕ್ ದಾವಣಗೆರೆ, ಕಾರ್ತಿಕ್ಇ,  ಪ್ರಮೋದ್ ಜೀವ & ಮಂಡಲಗಿರಿ ಪ್ರಸನ್ನ

Experience the profound beauty of Kannada ghazals through a unique, dual-perspective presentation. This curated evening presented by Karnataka Ghazal Academy, bridges the gap between pure musical ecstasy and literary appreciation. A master vocalist will breathe life into the delicate melodies, capturing the universal themes of love, longing, and mysticism inherent in the ghazal form. Interspersed with the musical performance, a literary expert will decode the intricate layers of the poetry. By analyzing the metaphors, cultural context, and structural nuances of each piece, the program offers both an emotional and intellectual journey, making the art form accessible to all.
ವಿಶಿಷ್ಟವಾದ ದ್ವಿಮುಖ ದೃಷ್ಟಿಕೋನದ ಪ್ರಸ್ತುತಿಯ ಮೂಲಕ ಕನ್ನಡ ಗಜಲ್‌ಗಳ ಆಳವಾದ ಸೌಂದರ್ಯವನ್ನು ಅನುಭವಿಸಿ. ಕರ್ನಾಟಕ ಗಜಲ್ ಅಕಾಡೆಮಿ ಪ್ರಸ್ತುತಪಡಿಸುವ, ಈ ವಿಶೇಷ ಸಂಜೆಯು ಶುದ್ಧ ಸಂಗೀತದ ಆನಂದ ಮತ್ತು ಸಾಹಿತ್ಯಿಕ ಮೌಲ್ಯಮಾಪನದ ನಡುವೆ ಒಂದು ಅದ್ಭುತ ಸೇತುವೆಯನ್ನು ನಿರ್ಮಿಸಲಿದೆ. ಒಬ್ಬ ಪ್ರಮುಖ ಗಾಯಕರು ಇಲ್ಲಿನ ಸೂಕ್ಷ್ಮ ಮಧುರ ಸಾಲುಗಳಿಗೆ ಜೀವ ತುಂಬಲಿದ್ದಾರೆ; ಗಜಲ್ ರೂಪದಲ್ಲಿ ಅಂತರ್ಗತವಾಗಿರುವ ಪ್ರೀತಿ, ಹಂಬಲ ಮತ್ತು ಆಧ್ಯಾತ್ಮಿಕತೆಯ ಸಾರ್ವತ್ರಿಕ ಆಶಯಗಳನ್ನು ತಮ್ಮ ಗಾಯನದಲ್ಲಿ ಸೆರೆಹಿಡಿಯಲಿದ್ದಾರೆ.
ಸಂಗೀತದ ಪ್ರದರ್ಶನದ ನಡುವೆ, ಸಾಹಿತ್ಯ ತಜ್ಞರೊಬ್ಬರು ಕಾವ್ಯದ ಆಳವಾದ ಪದರಗಳನ್ನು ಬಿಡಿಸಿ ವಿಶ್ಲೇಷಿಸಲಿದ್ದಾರೆ. ಪ್ರತಿಯೊಂದು ಘಜಲ್‌ನ ರೂಪಕಗಳು, ಸಾಂಸ್ಕೃತಿಕ ಹಿನ್ನೆಲೆ ಮತ್ತು ರಚನಾತ್ಮಕ ಸೂಕ್ಷ್ಮತೆಗಳನ್ನು ವಿಶ್ಲೇಷಿಸುವ ಮೂಲಕ, ಈ ಕಾರ್ಯಕ್ರಮವು ಭಾವನಾತ್ಮಕ ಹಾಗೂ ಬೌದ್ಧಿಕ ಪ್ರಯಾಣ ಎರಡನ್ನೂ ಒಟ್ಟಿಗೆ ನೀಡುತ್ತದೆ. ಆ ಮೂಲಕ ಈ ಅದ್ಭುತ ಕಲಾ ಪ್ರಕಾರವನ್ನು ಎಲ್ಲರಿಗೂ ಸುಲಭವಾಗಿ ತಲುಪುವಂತೆ ಮಾಡುತ್ತದೆ.

08:00 PM – 09:30 PM: Sand Melodies | ಮರಳು ಮಾಧುರ್ಯ
An Evening of Sand Art and Music | ಮರಳ ಕಲೆಯೊಂದಿಗೆ ಸಂಗೀತದ ನಿನಾದ
Praveen D. Rao & Raghavendra Hegde | ಪ್ರವೀಣ್ ಡಿ. ರಾವ್ & ರಾಘವೇಂದ್ರ ಹೆಗಡೆ

A mesmerising confluence of sand art and music, ಮರಳು ಮಾಧುರ್ಯ (Sand Melodies) takes the audience on an evocative journey along the sacred banks of various rivers of Karnataka flowing between the Krishna and Cauvery rivers. Through the ephemeral beauty of sand art and the timeless power of music, the presentation brings alive the spiritual heritage, sacred shrines, historic landmarks and cultural traditions that have flourished along these riverbanks. Celebrating the rivers as eternal witnesses to faith, history and civilisation, the evening weaves together images, melodies and stories that transcend time — offering an immersive tribute to the enduring soul of our land.
ಕೃಷ್ಣೆಯಿಂ ದ ಕಾವೇ ರಿಯವರೆಗೆ ಹರಡಿರುವ ಪವಿತ್ರ ನದೀ ತೀ ರಗಳ ಧಾರ್ಮಿ ಕ ಶ್ರದ್ಧೆ, ಐತಿಹಾಸಿಕ ವೈ ಭವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮರಳ ಕಲೆ ಮತ್ತು ಸಂಗೀ ತದ ಅನನ್ಯ ಸಂಗಮದ ಮೂಲಕ ಅನಾವರಣಗೊ ಳಿಸುವ ಕಲಾನುಭವ. ಮರಳಿನ ಮೇಲೆ ಅರಳುವ ಚಿತ್ರಗಳು, ಸಂಗೀ ತದಲ್ಲಿ ಮಿಡಿಯುವ ಭಾವಗಳು — ಇವುಗಳ ಮೂಲಕ ನದಿಗಳ ದಡದಲ್ಲಿ ಅರಳಿದ ದೇ ವಾಲಯಗಳು, ಪವಿತ್ರ ಕ್ಷೇ ತ್ರಗಳು, ಐತಿಹಾಸಿಕ ತಾಣಗಳು ಮತ್ತು ಜನಜೀ ವನದ ಕಥೆಗಳು ಜೀ ವಂತವಾಗುತ್ತವೆ.

Across the Weekend | 11:00 AM – 7:00 PM

Made in Karnataka|ಕರ್ನಾಟಕದ ತಯಾರಿಕೆಗಳು       
A Showcase of Crafts, Makers and Traditions | ಕಲೆ, ಕಲಾವಿದರು ಮತ್ತು ಪರಂಪರೆಗಳ ಪ್ರದರ್ಶನ
Crafts Council of Karnataka | ಕರಕುಶಲ ಪರಿಷತ್ತು, ಕರ್ನಾಟಕ

Made in Karnataka celebrates the rich creative traditions, craftsmanship and cultural heritage of the state. Curated by the Karnataka Crafts Council, the showcase brings together the work of makers and craftspeople, offering visitors an opportunity to engage with the diverse forms of creativity that shape Karnataka’s cultural landscape. Through an exploration of craft, material and tradition, the showcase highlights the enduring value of handmade practices and the people who keep them alive. Visitors are invited to discover, appreciate and connect with the artistry, skill and imagination that continue to inform Karnataka’s vibrant craft traditions across generations. 
The participating crafts and artisans are: Lacquerware – Varanam | North Karnataka Weaves – KaleNele | Bidriware – Amarnath | Ganjifa and Mysore Paintings – Babita | Eco-friendly Products – Jagadish | Navalgund Durries and Gajendragad Sarees – Kishore | Kinhal Craft – Kamalini | Terracotta – Ullaskar De | Banjara Embroidery – Sandur Kushala Kala Kendra.
ಈ ಕಾರ್ಯಕ್ರಮವು ನಮ್ಮ ರಾಜ್ಯದ ಶ್ರೀಮಂತ ಕಲೆಗಳ ಪರಂಪರೆಯನ್ನು ಮತ್ತು ಸಂಸ್ಕೃತಿಗಳನ್ನು ಸಂಭ್ರಮಿಸುತ್ತದೆ. ಇದನ್ನು ಕರ್ನಾಟಕ ಕರಕುಶಲ ಮಂಡಳಿ ಆಯೋಜಿಸಿದ್ದು, ಈ ಪ್ರದರ್ಶನವು ವಿವಿಧ ಕುಶಲಕರ್ಮಿಗಳ ಮತ್ತು ಕಲಾವಿದರ ಕಲಾಕ್ರತಿಗಳನ್ನು ಒಂದೆಡಗೆ ತರುತ್ತಿದೆ. ಈ ರೀತಿಯಲ್ಲಿ, ಕರ್ನಾಟಕದ ವೈವಿಧ್ಯಮಯ ಸಾಂಸ್ಕೃತಿಕ ಬದುಕನ್ನು ರೂಪಿಸುವ ಸೃಜನಶೀಲತೆಯನ್ನು ಪರಿಚಯಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ. ಕರಕುಶಲತೆ, ಕಲಾತ್ಮಕ ವಸ್ತುಗಳು ಮತ್ತು ಸಂಪ್ರದಾಯಗಳು – ಇವುಗಳನ್ನು ಅನ್ವೇಶಿಸುವ ಮೂಲಕ, ಇವುಗಳ ಮೌಲ್ಯವನ್ನು, ಮತ್ತು ಈ ಕಲೆಗಳನ್ನು ಇಂದಿಗೂ ಜೀವಂತವಾಗಿಟ್ಟಿರುವ ಕಲಾವಿದರನ್ನೂ ಈ ಪ್ರದರ್ಶನವು ನಮಗೆ ಪರಿಚಯಿಸುತ್ತದೆ.
ಹಲವಾರು ತಲೆಮಾರುಗಳಿಂಧ ಕರ್ನಾಟಕದಲ್ಲಿನ ಕಲಾವಿದರು ತಮ್ಮ ಕಲಾಕ್ರತಿಗಳನ್ನು ರಚಿಸಿರುವ ಬಗೆಯನ್ನು, ವಿಧಾನವನ್ನು ತಿಳಿದುಕೊಳ್ಳುವುದಕ್ಕೆ ಈ ಕಾರ್ಯಕ್ರಮ ಅವಕಾಶ ಮಾಡಿಕೊಡುತ್ತದೆ.
ಭಾಗವಹಿಸುವ ಕರಕುಶಲಗಳು ಮತ್ತು ಕುಶಲಕರ್ಮಿಗಳು: ಮೆರುಗಿನ ವಸ್ತುಗಳು – ವರಣಮ್ | ಉತ್ತರ ಕರ್ನಾಟಕದ ನೇಯ್ಗೆ – ಕಲೆನೆಲೆ | ಬಿದ್ರಿ ಕಲೆ – ಅಮರ್ನಾಥ್ | ಗಂಜೀಫ ಮತ್ತು ಮೈಸೂರಿನ ಚಿತ್ರಕಲೆಗಳು – ಬಬಿತಾ | ಪರಿಸರ ಸ್ನೇಹಿ ವಸ್ತುಗಳು – ಜಲದೀಶ್‌ | ನವಲಗುಂದು ನೆಲಹಾಸು ಮತ್ತು ಗಜೇಂದ್ರಗಡದ ಸೀರೆಗಳು – ಕಿಶೋರ್‌ | ಕಿನ್ಹಾಲ್‌ ಕಲೆ – ಕಮಲಿನಿ | ಮಣ್ಣಿನ ಕಲೆ – ಉಲ್ಲಾಸ್ಕರ್‌ ಡೇ | ಬಂಜಾರ ಕಸೂತಿ ಕಲೆ – ಸಂದೂರ್‌ ಕುಶಲ ಕಲಾ ಕೇಂದ್ರ

Ancient Games, Timeless Connections | ಪ್ರಾಚೀನ ಆಟಗಳು, ಕಾಲಾತೀತ ಬೆಸುಗೆಗಳು
A Foray into Games, Stories and Laughter |ಆಟ, ಕಥೆ ಮತ್ತು ನಗುವಿನ ಲೋಕದೆಡೆಗೆ ಒಂದು ಪಯಣ
Kavade | ಕವಡೆ

Step away from screens and rediscover the joy of authentic human connection through ancient board games. 
Kavade’s curated games space blends history, strategy and play, showcasing timeless classics rooted in India and shared across cultures worldwide. From the origins of Snakes & Ladders and Ludo to the widespread tradition of Aliguli Mane – discover fascinating insights into how play has evolved over centuries.
More than just entertainment, it is a meaningful cultural intervention: an invitation to reclaim offline sociability, spark genuine camaraderie and bring people together on the ground in an increasingly digital world.
ಪರದೆಗಳಿಂದ ದೂರ ಸರಿದು, ಪ್ರಾಚೀನ ಒಳಾಂಗಣ ಆಟಗಳನ್ನಾಡುತ್ತಾ, ನೈಜ ಮಾನವೀಯ ಸಂಬಂಧವನ್ನು  ಕಂಡುಕೊಳ್ಳಿ. 
ಕವಡೆ ಸಂಸ್ಥೆ ಸಂಯೋಜಿಸಿರುವ ಈ ವಿಶೇಷ ಆಟಗಳು ಇತಿಹಾಸ, ತಂತ್ರ, ಆಟ – ಇವೆಲ್ಲವುಗಳನ್ನೂ ಒಂದುಗೂಡಿಸಿಕೊಂಡಿದೆ. ಭಾರತದಲ್ಲಿ ಜನಿಸಿ, ಜಗತ್ತಿನ ವಿವಿಧ ಭಾಗಗಳಲ್ಲಿಯೂ ಆಡುವಂತಹ ಆಟಗಳನ್ನು ಇಲ್ಲಿ ಪರಿಚಯಿಸಲಾಗುತ್ತದೆ. ಹಾವು ಏಣಿ, ಚೌಕಾಬಾರದಿಂದ ಹಿಡಿದು ಅಳಗುಳಿಮಣೆಯವರೆಗೂ ಹಲವಾರು ಪ್ರದೇಶಗಳಲ್ಲಿ ಶತಮಾನಗಳಿಂದ ಜನಪ್ರಿಯವಾಗಿರುವ ಈ ಆಟಗಳು ಹೇಗೆ ವಿಕಸನಗೊಳ್ಳುತ್ತಾ ಬಂದಿದೆ ಎಂಬುದನ್ನೂ ಇಲ್ಲಿ ತಿಳಿದುಕೊಳ್ಳಬಹುದು. 
ಈ ಸಮಯ ಕೇವಲ ಮನರಂಜನೆಗಷ್ಟೇ ಸೀಮಿತವಲ್ಲ, ನಮ್ಮ ಸಾಂಸ್ಕೃತಿಕ ಬದುಕಿಗೆ ಹೊಸ ಅರ್ಥವನ್ನು ತರುವ ಪ್ರಯತ್ನವೂ ಹೌದು, ಹೆಚ್ಚಾಗುತ್ತಿರುವ ಡಿಜಿಟಲ್‌ ಜೀವನದಿಂದ ಹೊರಬಂದು ಜನರೊಂದಿಗೆ ಬೆರೆಯುವ ಯತ್ನವೂ ಹೌದು. 

Madanika and Makara Torana | ಮದನಿಕಾ ಮತ್ತು ಮಕರ ತೋರಣ    
A Fine-Art Exhibition of Handmade Silver Gelatin Photographs | ಹಸ್ತನಿರ್ಮಿತ ಸಿಲ್ವರ್ ಜೆಲಾಟಿನ್ ಛಾಯಾಚಿತ್ರಗಳ ಲಲಿತಕಲಾ ಪ್ರದರ್ಶನ
Karthik K. Samprathi | ಕಾರ್ತಿಕ್ ಕೆ. ಸಂಪ್ರತಿ

The exhibition features two main sections. Madanika comprises a coherent series of 12 photographs capturing the timeless gesture, rhythm, and form of Beluru’s stone-sculpted dancers under changing light and shadow. Makara Torana, the hero photograph, expands this focus to an elaborate sculptural threshold where myth, ornament, and architecture converge.
Both sections include a 2-to-3-minute audio note exploring the project’s background, artistic choices like black-and-white silver gelatin printing, and the visual relationships between the subjects. Accessible via labeled QR codes next to each section, these audio guides also include written transcripts for accessibility.
ಈ ಪ್ರದರ್ಶನವು ಎರಡು ಮುಖ್ಯ ವಿಭಾಗಗಳನ್ನು ಒಳಗೊಂಡಿದೆ. ಮದನಿಕಾ ವಿಭಾಗವು 12 ಛಾಯಾಚಿತ್ರಗಳ ಸರಣಿಯಾಗಿದ್ದು, ಬೆಳಕು ಮತ್ತು ನೆರಳಿನ ಆಟದಲ್ಲಿ ಬೇಲೂರಿನ ಶಿಲಾಬಾಲಿಕೆಯರ ಸದಾಕಾಲದ ಹಾವಭಾವ, ಲಯ ಹಾಗೂ ರೂಪವನ್ನು ಸೆರೆಹಿಡಿದಿದೆ. ಪ್ರಮುಖ ಚಿತ್ರವಾದ ಮಕರ ತೋರಣವು, ಪುರಾಣ, ಅಲಂಕಾರ ಮತ್ತು ವಾಸ್ತುಶಿಲ್ಪಗಳು ಸಂಗಮಿಸುವ ಭವ್ಯವಾದ ಶಿಲ್ಪಕಲೆಯ ಹೊಸ್ತಿಲನ್ನು ಅನಾವರಣಗೊಳಿಸುತ್ತದೆ.
ಎರಡೂ ವಿಭಾಗಗಳು 2 ರಿಂದ 3 ನಿಮಿಷಗಳ ಆಡಿಯೋ ಟಿಪ್ಪಣಿಯನ್ನು ಹೊಂದಿದ್ದು, ಯೋಜನೆಯ ಹಿನ್ನೆಲೆ, ಕಪ್ಪು-ಬಿಳುಪು ಸಿಲ್ವರ್ ಜೆಲಾಟಿನ್ ಪ್ರಿಂಟಿಂಗ್‌ನಂತಹ ಕಲಾತ್ಮಕ ಆಯ್ಕೆಗಳು ಮತ್ತು ಕೃತಿಗಳ ನಡುವಿನ ದೃಶ್ಯ ಸಂಬಂಧವನ್ನು ವಿವರಿಸುತ್ತವೆ. ಪ್ರತಿ ವಿಭಾಗದ ಪಕ್ಕದಲ್ಲಿರುವ ಕ್ಯೂಆರ್ (QR) ಕೋಡ್‌ಗಳ ಮೂಲಕ ಈ ಆಡಿಯೋಗಳನ್ನು ಕೇಳಬಹುದು. ಜೊತೆಗೆ, ಸುಲಭ ಲಭ್ಯತೆಗಾಗಿ ಇದರ ಲಿಖಿತ ಪಠ್ಯವನ್ನೂ (Transcript) ನೀಡಲಾಗಿದೆ. 

Karnataka Weaves | ಕರ್ನಾಟಕದ ನೇಯ್ಗೆ      
Threads That Hold a Heritage | ಪರಂಪರೆಯನ್ನು ಎತ್ತಿಹಿಡಿಯುವ ದಾರದೆಳೆಗಳು
Vimor Handloom Foundation | ವಿಮೋರ್ ಹ್ಯಾಂಡ್‌ಲೂಮ್ ಫೌಂಡೇಶನ್
Walkthrough with Curator at 04:30 PM (Both Days)

Discover the rich diversity of Karnataka’s weaving traditions through an exhibition of sarees that celebrate the region’s distinctive designs, techniques and textile heritage. Featuring pieces from Molakalmuru, Ilkal, Mysore, Bangalore, Doddaballapur, Gajendragad and other weaving centres, the exhibition brings together a range of patterns, colours and craftsmanship. From intricate ikat weaving and delicate checks to Kasuti embroidery, traditional motifs and distinctive pallu designs, each saree offers a glimpse into the histories and evolving practices of Karnataka’s textile traditions. Together, these pieces reveal a living heritage shaped by skilled artisans, regional identities and efforts to preserve and reinterpret traditional weaves.

ಕರ್ನಾಟಕದ ವಿಶಿಷ್ಟ ನೇಯ್ಗೆ ಶೈಲಿ, ವಿನ್ಯಾಸಗಳು ಮತ್ತು ಜವಳಿ ಪರಂಪರೆಯನ್ನು ಪರಿಚಯಿಸುವ ಈ ಸೀರೆಗಳ ಪ್ರದರ್ಶನವು, ನಮ್ಮ ನಾಡಿನ ನೇಯ್ಗೆ ಕಲೆಯ ಶ್ರೀಮಂತಿಕೆಯನ್ನು ನಮ್ಮ ಮುಂದೆ ತೆರೆದಿಡುತ್ತದೆ. ಮೊಳಕಾಲ್ಮೂರು, ಇಳಕಲ್, ಮೈಸೂರು, ಬೆಂಗಳೂರು, ದೊಡ್ಡಬಳ್ಳಾಪುರ, ಗಜೇಂದ್ರಗಡ ಸೇರಿದಂತೆ ಕರ್ನಾಟಕದ ವಿವಿಧ ನೇಯ್ಗೆ ಕೇಂದ್ರಗಳ ಸೀರೆಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರತಿ ಪ್ರದೇಶದ ವೈಶಿಷ್ಟ್ಯವನ್ನು ಬಿಂಬಿಸುವ ಬಣ್ಣಗಳು, ವಿನ್ಯಾಸಗಳು ಮತ್ತು ನೇಕಾರರ ಕೈಚಳಕ ಈ ಪ್ರದರ್ಶನಕ್ಕೆ ಮೆರುಗು ನೀಡುತ್ತದೆ. ಇಕ್ಕಟ್ ನೇಯ್ಗೆಯ ಸೂಕ್ಷ್ಮ ವಿನ್ಯಾಸಗಳು, ನಾಜೂಕಾದ ಚೌಕಗಳು, ಕಸೂತಿ ಕಲೆ, ಸಾಂಪ್ರದಾಯಿಕ ಚಿತ್ತಾರಗಳು, ವಿಶಿಷ್ಟ ಸೆರಗಿನ ವಿನ್ಯಾಸಗಳು – ಹೀಗೆ ಪ್ರತಿಯೊಂದು ಸೀರೆಯೂ ತನ್ನದೇ ಆದ ಕಥೆಯನ್ನು ಹೇಳುತ್ತದೆ. ಇವುಗಳ ಮೂಲಕ ಕರ್ನಾಟಕದ ಜವಳಿ ಪರಂಪರೆಯ ಇತಿಹಾಸ, ಪ್ರಾದೇಶಿಕ ವೈಶಿಷ್ಟ್ಯಗಳು ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿರುವ ನೇಯ್ಗೆ ಸಂಪ್ರದಾಯಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳಬಹುದು. ಒಟ್ಟಿನಲ್ಲಿ, ಈ ಸೀರೆಗಳು ನಮ್ಮ ನಾಡಿನ ಜೀವಂತ ಪರಂಪರೆಯ ಪ್ರತಿಬಿಂಬಗಳಾಗಿವೆ. ತಲೆಮಾರುಗಳಿಂದ ಬಂದ ನೇಯ್ಗೆಯ ಸಂಪತ್ತು, ನುರಿತ ನೇಕಾರರ ಕೈಚಳಕ ಮತ್ತು ಆಯಾ ಪ್ರದೇಶಗಳ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ತಮ್ಮೊಳಗೆ ಉಳಿಸಿಕೊಂಡು, ಸಾಂಪ್ರದಾಯಿಕ ನೇಯ್ಗೆಯನ್ನು ಸಂರಕ್ಷಿಸುವುದರ ಜೊತೆಗೆ ಅದನ್ನು ಇಂದಿನ ಕಾಲಕ್ಕೂ ಹೊಂದುವಂತೆ ಮುಂದುವರಿಸುವ ಪ್ರಯತ್ನವನ್ನು ನಾವಿಲ್ಲಿ ಕಾಣಬಹುದು.

The Festival Trail | ಹಬ್ಬದ ಸಂಭ್ರಮದ ಪಯಣ       
A Treasure Hunt through the Building | ರಹಸ್ಯ ನಿಧಿಯ ಹುಡುಕಾಟದ ಆಟ

Gather the whole family for a festive adventure at BIC! 
Solve riddles together, uncover fascinating stories, and race from clue to clue as you celebrate this festive time. With surprises around every corner, it’s a chance for little explorers, curious grown-ups, and everyone in between to celebrate and discover.
BICನಲ್ಲಿ ಹಬ್ಬದ ಸಂಭ್ರಮದ ಸಾಹಸಯಾತ್ರೆಗೆ ಇಡೀ ಕುಟುಂಬದೊಂದಿಗೆ ಬನ್ನಿ! 
ಒಟ್ಟಾಗಿ ಒಗಟುಗಳನ್ನು ಬಿಡಿಸಿ, ಕುತೂಹಲಕಾರಿ ಕಥೆಗಳನ್ನು ಅನ್ವೇಷಿಸಿ, ಒಂದೊಂದೇ ಸುಳಿವನ್ನು ಬೆನ್ನಟ್ಟಿ ಮುಂದಿನ ಸುಳಿವಿನತ್ತ ಓಡುತ್ತಾ ಹಬ್ಬದ ಸಂಭ್ರಮವನ್ನು ಸವಿಯಿರಿ. ಪ್ರತಿ ತಿರುವಿನಲ್ಲೂ ಅಚ್ಚರಿಗಳು ಕಾದಿರುವ ಈ ಪಯಣ, ಪುಟಾಣಿ ಅನ್ವೇಷಕರಿಗೆ, ಕುತೂಹಲದ ಹಿರಿಯರಿಗೆ ಮತ್ತು ಎಲ್ಲ ವಯೋಮಾನದವರಿಗೂ ಸಂಭ್ರಮಿಸುತ್ತಾ ಹೊಸತನ್ನು ಕಂಡುಕೊಳ್ಳುವ ಸುಂದರ ಅವಕಾಶ!

Find the schedule for Day 1 here!

Presented by:

Artists

Chandra Jain | ಚಂದ್ರ ಜೈನ್‌

Chairperson, Crafts Council of Karnataka | ಅಧ್ಯಕ್ಷರು, ಕರಕುಶಲ ಪರಿಷತ್ತು, ಕರ್ನಾಟಕ

Chandra Jain is a longstanding advocate of India’s crafts and textiles and also serves as Chairperson of the Crafts Council of Karnataka. As Founder-President of Kadambari, she has spent over two decades promoting Banaras brocade and supporting traditional artisans through design, awareness and market development, while championing endangered craft traditions.

ಚಂದ್ರ ಜೈನ್ ಅವರು ಭಾರತದ ಕರಕುಶಲ ವಸ್ತುಗಳು ಮತ್ತು ಜವಳಿಗಳ ದೀರ್ಘಕಾಲೀನ ವಕೀಲರಾಗಿದ್ದಾರೆ ಮತ್ತು ಕರ್ನಾಟಕದ ಕರಕುಶಲ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕಾದಂಬರಿಯ ಸ್ಥಾಪಕ-ಅಧ್ಯಕ್ಷರಾಗಿ, ಅವರು ಬನಾರಸ್ ಬ್ರೊಕೇಡ್ ಅನ್ನು ಉತ್ತೇಜಿಸಲು ಮತ್ತು ವಿನ್ಯಾಸ, ಜಾಗೃತಿ ಮತ್ತು ಮಾರುಕಟ್ಟೆ ಅಭಿವೃದ್ಧಿಯ ಮೂಲಕ ಸಾಂಪ್ರದಾಯಿಕ ಕುಶಲಕರ್ಮಿಗಳನ್ನು ಬೆಂಬಲಿಸಲು ಎರಡು ದಶಕಗಳಿಗೂ ಹೆಚ್ಚು ಕಾಲ ಕಳೆದಿದ್ದಾರೆ, ಅದೇ ಸಮಯದಲ್ಲಿ ಅಳಿವಿನಂಚಿನಲ್ಲಿರುವ ಕರಕುಶಲ ಸಂಪ್ರದಾಯಗಳನ್ನು ಪ್ರತಿಪಾದಿಸುತ್ತಿದ್ದಾರೆ.

Kalagangotri | ಕಲಾಗಂಗೋತ್ರಿ

Troupe | ತಂಡ

Founded in 1971 by legendary actor-director Dr. B. V. Rajaram, Kalagangotri is a premier theatre group that has staged thousands of plays, street performances, and mime productions like Mooki-Taaki. Former Rangayana Director Dr. Rajaram has spent over five decades enriching Kannada theatre through acclaimed productions, workshops, and extensive community outreach.

Names of Artists

Pradeep Nadig, Dr. M. S. Vidya, Dr. Sandhya T. N., Dakshinamurthy, Sushma, K. R. Srinivasa Meshtru, Suguna, Suresh, Srinivasa Kaiwara, Kodi Rajesh, Manjunatha Hegde, Siddharth Bhat, Pavanaputra, Prabhanjan, Kalagangotri Manju, Sridevi Gartikere, Sanjay Aradhya, Lokesh, Abhijna, Chandana Batni, Dhanya Gowda, Kiran Kantavara, Durgadas, Mutturaj, Bharanikumar

1971ರಲ್ಲಿ ಹೆಸರಾಂತ ನಟ-ನಿರ್ದೇಶಕ ಡಾ. ಬಿ. ವಿ. ರಾಜಾರಾಮ್ ಅವರಿಂದ ಸ್ಥಾಪಿಸಲ್ಪಟ್ಟ ಕಲಾಗಂಗೋತ್ರಿಯು ಒಂದು ಪ್ರಮುಖ ರಂಗಭೂಮಿ ತಂಡವಾಗಿದ್ದು, ಸಾವಿರಾರು ನಾಟಕಗಳು, ಬೀದಿ ನಾಟಕಗಳು ಮತ್ತು ‘ಮೂಕಿ-ಟಾಕಿ’ ಯಂತಹ ಮೂಕಾಭಿನಯ ಪ್ರದರ್ಶನಗಳನ್ನು ನೀಡಿದೆ. ರಂಗಾಯಣದ ಮಾಜಿ ನಿರ್ದೇಶಕರಾದ ಡಾ. ರಾಜಾರಾಮ್ ಅವರು ಪ್ರಶಂಸನೀಯ ಪ್ರದರ್ಶನಗಳು, ಕಾರ್ಯಾಗಾರಗಳು ಮತ್ತು ವ್ಯಾಪಕ ಸಮುದಾಯ ತಲುಪುವ ಕಾರ್ಯಕ್ರಮಗಳ ಮೂಲಕ ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಲು ಐದೂವರೆ ದಶಕಗಳಿಗೂ ಹೆಚ್ಚು ಕಾಲವನ್ನು ಮುಡುಪಾಗಿಟ್ಟಿದ್ದಾರೆ.

ಕಲಾವಿದರ ಹೆಸರುಗಳು 

ಪ್ರದೀಪ್ ನಾಡಿಗ್, ಡಾ. ಎಂ. ಎಸ್. ವಿದ್ಯಾ, ಡಾ. ಸಂಧ್ಯಾ ಟಿ. ಎನ್., ದಕ್ಷಿಣಾಮೂರ್ತಿ, ಸುಷ್ಮಾ, ಕೆ. ಆರ್. ಶ್ರೀನಿವಾಸ ಮೇಷ್ಟ್ರು, ಸುಗುಣ, ಸುರೇಶ್, ಶ್ರೀನಿವಾಸ ಕೈವಾರ, ಕೋಡಿ ರಾಜೇಶ್, ಮಂಜುನಾಥ ಹೆಗಡೆ, ಸಿದ್ಧಾರ್ಥ ಭಟ್, ಪವನಪುತ್ರ, ಪ್ರಭಂಜನ್, ಕಲಾಗಂಗೋತ್ರಿ ಮಂಜು, ಶ್ರೀದೇವಿ ಗಾರ್ತಿಕೆರೆ, ಸಂಜಯ್ ಆರಾಧ್ಯ, ಲೋಕೇಶ್, ಅಭಿಜ್ಞಾ, ಚಂದನಾ ಬಟ್ನಿ, ಧನ್ಯಾ ಗೌಡ, ಕಿರಣ್ ಕಾಂತಾವರ, ದುರ್ಗಾದಾಸ್, ಮುತ್ತುರಾಜ್, ಭರಣಿಕುಮಾರ್.

Pavithra Muddaya | ಪವಿತ್ರಾ ಮುದ್ದಯ್ಯ

Managing Trustee, Vimor Handloom Foundation | ವ್ಯವಸ್ಥಾಪಕ ಟ್ರಸ್ಟಿ, ವಿಮೋರ್ ಹ್ಯಾಂಡ್‌ಲೂಮ್ ಫೌಂಡೇಶನ್

Pavithra Muddaya has worked in the handloom sector in India for the last 48 years. She is the managing trustee of the Vimor Handloom Foundation and started the Vimor Museum of Living Textiles in Bangalore. She has been part of both the Central and State Ministry of textiles. Her primary mission is design development, documentation of oral history, traditional designs and techniques of heritage handloom. The foundation works on skilling and supporting weavers, and it is actively involved in relief and employment generation in this post covid-era. Through her work at Vimor, a home store started along with her mother Chimy, she has impacted hundreds of weavers and associated labourers.

ಪವಿತ್ರಾ ಮುದ್ದಯಾ ಅವರು ಕಳೆದ 48 ವರ್ಷಗಳಿಂದ ಭಾರತದಲ್ಲಿ ಕೈಮಗ್ಗ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ವಿಮೋರ್ ಹ್ಯಾಂಡ್ಲೂಮ್ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿಯಾಗಿದ್ದಾರೆ ಮತ್ತು ಬೆಂಗಳೂರಿನಲ್ಲಿ ವಿಮೋರ್ ಮ್ಯೂಸಿಯಂ ಆಫ್ ಲಿವಿಂಗ್ ಟೆಕ್ಸ್‌ಟೈಲ್ಸ್ ಅನ್ನು ಪ್ರಾರಂಭಿಸಿದ್ದಾರೆ. ಅವರು ಕೇಂದ್ರ ಮತ್ತು ರಾಜ್ಯ ಜವಳಿ ಸಚಿವಾಲಯದ ಭಾಗವಾಗಿದ್ದಾರೆ. ಅವರ ಪ್ರಾಥಮಿಕ ಧ್ಯೇಯವೆಂದರೆ ವಿನ್ಯಾಸ ಅಭಿವೃದ್ಧಿ, ಮೌಖಿಕ ಇತಿಹಾಸದ ದಾಖಲೀಕರಣ, ಸಾಂಪ್ರದಾಯಿಕ ವಿನ್ಯಾಸಗಳು ಮತ್ತು ಪರಂಪರೆಯ ಕೈಮಗ್ಗದ ತಂತ್ರಗಳು. ಈ ಪ್ರತಿಷ್ಠಾನವು ನೇಕಾರರನ್ನು ಕೌಶಲ್ಯಗೊಳಿಸುವುದು ಮತ್ತು ಬೆಂಬಲಿಸುವ ಕೆಲಸ ಮಾಡುತ್ತದೆ ಮತ್ತು ಈ ಕೋವಿಡ್-ನಂತರದ ಯುಗದಲ್ಲಿ ಪರಿಹಾರ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ವಿಮೋರ್‌ನಲ್ಲಿ ತಮ್ಮ ತಾಯಿ ಚಿಮಿ ಅವರೊಂದಿಗೆ ಪ್ರಾರಂಭವಾದ ಹೋಮ್ ಸ್ಟೋರ್ ಮೂಲಕ, ಅವರು ನೂರಾರು ನೇಕಾರರು ಮತ್ತು ಸಂಬಂಧಿತ ಕಾರ್ಮಿಕರ ಮೇಲೆ ಪ್ರಭಾವ ಬೀರಿದ್ದಾರೆ.

Megha | ಮೇಘ

Associate Professor | ಸಹ ಪ್ರಾಧ್ಯಾಪಕರು

Megha is an Associate Professor at the Centre for Ayurveda Biology and Holistic Nutrition, Trans-Disciplinary University, Bengaluru. Trained in Biochemistry, her current research interests are in the areas of public health nutrition, traditional food knowledge and Ayurveda dietetics. Her team recently completed “Traditional Foods of Karnataka, with Nutritional and Ayurveda Insights”, a community-based documentation project.

ಮೇಘಾ ಬೆಂಗಳೂರಿನ ಟ್ರಾನ್ಸ್-ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಆಯುರ್ವೇದ ಜೀವಶಾಸ್ತ್ರ ಮತ್ತು ಸಮಗ್ರ ಪೋಷಣೆ ಕೇಂದ್ರದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದಾರೆ. ಜೀವರಸಾಯನಶಾಸ್ತ್ರದಲ್ಲಿ ತರಬೇತಿ ಪಡೆದಿರುವ ಅವರ ಪ್ರಸ್ತುತ ಸಂಶೋಧನಾ ಆಸಕ್ತಿಗಳು ಸಾರ್ವಜನಿಕ ಆರೋಗ್ಯ ಪೋಷಣೆ, ಸಾಂಪ್ರದಾಯಿಕ ಆಹಾರ ಜ್ಞಾನ ಮತ್ತು ಆಯುರ್ವೇದ ಆಹಾರ ಪದ್ಧತಿ ಕ್ಷೇತ್ರಗಳಲ್ಲಿವೆ. ಅವರ ತಂಡವು ಇತ್ತೀಚೆಗೆ ಸಮುದಾಯ ಆಧಾರಿತ ದಾಖಲಾತಿ ಯೋಜನೆಯಾದ “ಪೌಷ್ಠಿಕಾಂಶ ಮತ್ತು ಆಯುರ್ವೇದ ಒಳನೋಟಗಳೊಂದಿಗೆ ಕರ್ನಾಟಕದ ಸಾಂಪ್ರದಾಯಿಕ ಆಹಾರಗಳು” ಅನ್ನು ಪೂರ್ಣಗೊಳಿಸಿದೆ.

Vaishali Jadhav | ವೈಶಾಲಿ ಜಾಧವ್‌

Research Fellow | ರೀಸರ್ಚ್‌ ಫೆಲೋ

Vaishali Jadhav holds an M.Sc. in Food and Nutrition and was a key researcher on the documentation of traditional foods of Karnataka. She travelled nearly 10,000 km across the state, engaging with communities in over 100 locations and documenting 128 traditional recipes on video. Her interests include traditional foods, nutritional assessment and community-based research.

ವೈಶಾಲಿ ಜಾಧವ್ ಅವರು ಆಹಾರ ಮತ್ತು ಪೋಷಣೆಯಲ್ಲಿ (Food and Nutrition) ಎಂ.ಎಸ್ಸಿ. ಪದವಿ ಪಡೆದಿದ್ದು, ಕರ್ನಾಟಕದ ಸಾಂಪ್ರದಾಯಿಕ ಆಹಾರಗಳ ದಾಖಲೀಕರಣದಲ್ಲಿ ಪ್ರಮುಖ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ರಾಜ್ಯದಾದ್ಯಂತ ಸುಮಾರು 10,000 ಕಿ.ಮೀ. ಪ್ರಯಾಣಿಸಿ, 100ಕ್ಕೂ ಹೆಚ್ಚು ಸ್ಥಳಗಳಲ್ಲಿನ ಸಮುದಾಯಗಳೊಂದಿಗೆ ಬೆರೆತು, 128 ಸಾಂಪ್ರದಾಯಿಕ ಅಡುಗೆ ವಿಧಾನಗಳನ್ನು (ರೆಸಿಪಿಗಳನ್ನು) ವಿಡಿಯೋ ರೂಪದಲ್ಲಿ ದಾಖಲಿಸಿದ್ದಾರೆ. ಸಾಂಪ್ರದಾಯಿಕ ಆಹಾರಗಳು, ಪೌಷ್ಟಿಕಾಂಶದ ಮೌಲ್ಯಮಾಪನ ಮತ್ತು ಸಮುದಾಯ ಆಧಾರಿತ ಸಂಶೋಧನೆಗಳು ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.

Sadashiv Naik | ಸದಾಶಿವ್ ನಾಯಕ್‌

Research Fellow | ರೀಸರ್ಚ್‌ ಫೆಲೋ

Sadashiv Naik holds an MSc in Agriculture, specialising in Food Science and Nutrition. He was a key researcher in the documentation of traditional foods of Karnataka, travelling nearly 10,000 km across the state and recording 128 traditional recipes across over 100 locations. He continues to work on medicinal plant data digitisation and traditional knowledge documentation.

ಸದಾಶಿವ ನಾಯಕ್ ಅವರು ಕೃಷಿಯಲ್ಲಿ ಎಂ.ಎಸ್ಸಿ (MSc) ಪದವಿ ಪಡೆದಿದ್ದು, ಆಹಾರ ವಿಜ್ಞಾನ ಮತ್ತು ಪೋಷಣಾ ಶಾಸ್ತ್ರದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ಕರ್ನಾಟಕದ ಸಾಂಪ್ರದಾಯಿಕ ಆಹಾರಗಳ ದಾಖಲೀಕರಣದಲ್ಲಿ ಅವರು ಪ್ರಮುಖ ಸಂಶೋಧಕರಾಗಿದ್ದರು; ಇದಕ್ಕಾಗಿ ಅವರು ರಾಜ್ಯಾದ್ಯಂತ ಸುಮಾರು 10,000 ಕಿ.ಮೀ. ಸಂಚರಿಸಿ, 100ಕ್ಕೂ ಹೆಚ್ಚು ಸ್ಥಳಗಳಿಂದ 128 ಸಾಂಪ್ರದಾಯಿಕ ಅಡುಗೆ ವಿಧಾನಗಳನ್ನು (ರೆಸಿಪಿಗಳನ್ನು) ದಾಖಲಿಸಿದ್ದಾರೆ. ಅವರು ಔಷಧೀಯ ಸಸ್ಯಗಳ ದತ್ತಾಂಶವನ್ನು ಡಿಜಿಟಲೀಕರಣಗೊಳಿಸುವ ಮತ್ತು ಸಾಂಪ್ರದಾಯಿಕ ಜ್ಞಾನವನ್ನು ದಾಖಲಿಸುವ ಕಾರ್ಯದಲ್ಲಿ ಈಗಲೂ ತೊಡಗಿಸಿಕೊಂಡಿದ್ದಾರೆ.

B. K. Sumathi | ಬಿ. ಕೆ. ಸುಮತಿ

Writer & Voice Artist | ಲೇಖಕಿ ಮತ್ತು ಧ್ವನಿ ಕಲಾವಿದೆ

Senior AIR announcer B. K. Sumathi is an acclaimed writer and voice artist who has scripted and hosted hundreds of documentaries. She researched the landmark “Bhanuli Kaligalu” series, published multiple books, and interacted with the Prime Minister during COVID-19. Today, she trains leading professionals in the Kannada electronic media industry.

ಆಕಾಶವಾಣಿಯ ಹಿರಿಯ ನಿರೂಪಕಿ ಬಿ. ಕೆ. ಸುಮತಿ ಅವರು ನೂರಾರು ಸಾಕ್ಷ್ಯಚಿತ್ರಗಳನ್ನು ಬರೆದು ನಡೆಸಿಕೊಟ್ಟಿರುವ ಪ್ರಖ್ಯಾತ ಲೇಖಕಿ ಮತ್ತು ಧ್ವನಿ ಕಲಾವಿದರಾಗಿದ್ದಾರೆ. ಅವರು ಮೈಲಿಗಲ್ಲಾದ “ಭಾನುಲಿ ಕಲಿಗಳು” ಸರಣಿಯನ್ನು ಸಂಶೋಧಿಸಿ, ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಹಾಗೂ ಕೋವಿಡ್-19 ಸಮಯದಲ್ಲಿ ಪ್ರಧಾನಮಂತ್ರಿಯವರೊಂದಿಗೆ ಸಂವಾದ ನಡೆಸಿದ್ದಾರೆ. ಇಂದು ಅವರು ಕನ್ನಡ ಎಲೆಕ್ಟ್ರಾನಿಕ್ ಮಾಧ್ಯಮ ರಂಗದ ಪ್ರಮುಖ ವೃತ್ತಿಪರರಿಗೆ ತರಬೇತಿ ನೀಡುತ್ತಿದ್ದಾರೆ.

Appagere Thimmaraju | ಅಪ್ಪಗೆರೆ ತಿಮ್ಮರಾಜು

Folk Singer | ಜನಪದ ಗಾಯಕರು

Dr. Appagere Thimmaraju is a renowned folk singer, writer, and researcher from Karnataka. Gaining fame through popular songs like ‘Thingalu Mulugidavo’ and albums such as ‘Janapada Jogi’, he has played a significant role in preserving and nurturing rural folk culture. He holds a D.Litt. degree for his research on *Tatvapadas* (philosophical folk songs) and was honored with the prestigious ‘Karnataka Rajyotsava Award’ in 2015.

ಡಾ. ಅಪ್ಪಗೆರೆ ತಿಮ್ಮರಾಜು ಅವರು ಕರ್ನಾಟಕದ ಪ್ರಸಿದ್ಧ ಜಾನಪದ ಗಾಯಕರು, ಬರಹಗಾರರು ಮತ್ತು ಸಂಶೋಧಕರು. ‘ತಿಂಗಳು ಮುಳುಗಿದವೋ’ ಅಂತಹ ಜನಪ್ರಿಯ ಗೀತೆಗಳು ಹಾಗೂ ‘ಜಾನಪದ ಜೋಗಿ’ ಆಲ್ಬಮ್‌ಗಳ ಮೂಲಕ ಪ್ರಸಿದ್ಧಿ ಪಡೆದ ಇವರು, ಗ್ರಾಮೀಣ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತತ್ವಪದಗಳ ಸಂಶೋಧನೆಗಾಗಿ ಡಿ.ಲಿಟ್ (D.Litt.) ಪದವಿ ಪಡೆದಿರುವ ಇವರಿಗೆ, 2015 ರಲ್ಲಿ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

Vasant Shetty | ವಸಂತ ಶೆಟ್ಟಿ

Entrepreneur | ಉದ್ಯಮಿ

Born in Karavali and raised in North Karnataka, engineer Vasant Shetty spent 15 years in top tech firms. Since 2008, he has championed Kannada by promoting it in markets and lifting dubbing bans. He hosted 100+ science talks, co-founded MyLang Books (2,000+ digital books), and launched the “Munde Banni” podcast, mentoring 10,000+ entrepreneurs.

ವಸಂತ್ ಶೆಟ್ಟಿ ಅವರು ಕರಾವಳಿಯಲ್ಲಿ ಹುಟ್ಟಿ ಉತ್ತರ ಕರ್ನಾಟಕದಲ್ಲಿ ಬೆಳೆದ ಇಂಜಿನಿಯರ್. 15 ವರ್ಷ ಟೆಕ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಇವರು, 2008 ರಿಂದ ಕನ್ನಡ ಮಾರುಕಟ್ಟೆ ಚಳುವಳಿ ಮತ್ತು ಡಬ್ಬಿಂಗ್ ನಿಷೇಧ ಮುಕ್ತಗೊಳಿಸಲು ಶ್ರಮಿಸಿದ್ದಾರೆ. ಮುನ್ನೋಟದ ಮೂಲಕ 100ಕ್ಕೂ ಹೆಚ್ಚು ವಿಜ್ಞಾನಗೋಷ್ಠಿ ನಡೆಸಿದ ಇವರು, 2,000ಕ್ಕೂ ಹೆಚ್ಚು ಡಿಜಿಟಲ್ ಪುಸ್ತಕಗಳಿರುವ ‘ಮೈಲ್ಯಾಂಗ್ ಬುಕ್ಸ್’ ಸಹ-ಸ್ಥಾಪಿಸಿದ್ದಾರೆ. ಪ್ರಸ್ತುತ ‘ಮುಂದೆ ಬನ್ನಿ’ ಪಾಡ್‌ಕಾಸ್ಟ್ ಮೂಲಕ 10,000ಕ್ಕೂ ಹೆಚ್ಚು ಉದ್ಯಮಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

Sanjay Anandaram | ಸಂಜಯ್ ಆನಂದರಾಮ್

Entrepreneur | ಉದ್ಯಮಿ

Sanjay Anandaram has over 38 years of experience as an entrepreneur, investor, corporate executive, teacher, board member, columnist and mentor. He is involved with various funds, startups, and organizations and believes in the power of technology, entrepreneurship and entrepreneurial thinking to transform societies.

ಸಂಜಯ್ ಆನಂದರಾಮ್ ಅವರು ಉದ್ಯಮಿ, ಹೂಡಿಕೆದಾರ, ಕಾರ್ಪೊರೇಟ್ ಕಾರ್ಯನಿರ್ವಾಹಕ, ಶಿಕ್ಷಕ, ಮಂಡಳಿ ಸದಸ್ಯ, ಅಂಕಣಕಾರ ಮತ್ತು ಮಾರ್ಗದರ್ಶಕರಾಗಿ 38ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ. ಇವರು ವಿವಿಧ ನಿಧಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಸಂಸ್ಥೆಗಳೊಂದಿಗೆ ತೊಡಗಿಸಿಕೊಂಡಿದ್ದಾರೆ. ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಉದ್ಯಮಶೀಲತೆಯ ಚಿಂತನೆಯು ಸಮಾಜಗಳನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ ಎಂದು ಇವರು ನಂಬುತ್ತಾರೆ.

Sachin Naik | ಸಚಿನ್ ನಾಯಕ್

Entrepreneur | ಉದ್ಯಮಿ

Sachin Naik is founder of Bengaluru-based CuzorLabs, building Indian-designed consumer electronics through original engineering and manufacturing. With experience at Lava/XOLO and Ottomate, he led HIVE, India’s first custom Android ROM, and Fusion, a music player with eight million downloads. He champions innovation, engineering talent, and globally competitive Indian technology businesses.

ಸಚಿನ್ ನಾಯಕ್ ಅವರು ಬೆಂಗಳೂರಿನ CuzorLabs ಸಂಸ್ಥೆಯ ಸಂಸ್ಥಾಪಕರು. ಸ್ವತಂತ್ರ ವಿನ್ಯಾಸ ಮತ್ತು ಸ್ವದೇಶಿ ತಂತ್ರಜ್ಞಾನ ಆಧಾರಿತ ಗ್ರಾಹಕ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದು ಅವರ ಉದ್ದೇಶ. Lava/XOLO ಮತ್ತು Ottomate ಸಂಸ್ಥೆಗಳಲ್ಲಿ ಅನುಭವ ಹೊಂದಿರುವ ಅವರು, ಭಾರತದ ಮೊದಲ ಕಸ್ಟಮ್ ಆಂಡ್ರಾಯ್ಡ್ ರಾಂ ಆಗಿರುವ HIVE ಹಾಗೂ 80 ಲಕ್ಷ ಡೌನ್‌ಲೋಡ್‌ಗಳನ್ನು ಕಂಡ ಸಂಗೀತ ಪ್ಲೇಯರ್ Fusion ಅಭಿವೃದ್ಧಿಗೆ ನಾಯಕತ್ವ ವಹಿಸಿದ್ದರು. ನಾವೀನ್ಯತೆ, ಎಂಜಿನಿಯರಿಂಗ್ ಪ್ರತಿಭೆಯ ಪೋಷಣೆ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಭಾರತೀಯ ತಂತ್ರಜ್ಞಾನ ಉದ್ಯಮಗಳ ನಿರ್ಮಾಣಕ್ಕೆ ಅವರು ಬದ್ಧರಾಗಿದ್ದಾರೆ.

Karthik K. Samprathi | ಕಾರ್ತಿಕ್ ಕೆ. ಸಂಪ್ರತಿ

Photographer | ಛಾಯಾಗ್ರಾಹಕ

Karthik K Samprathi is a black-and-white fine art photographer whose practice explores perception, time, and Indian philosophical traditions. Working with film, darkroom, and alternative processes, he treats the handcrafted print as the final expression of his work. His contemplative projects examine themes of stillness, devotion, memory, and transformation.

ಕಾರ್ತಿಕ್ ಕೆ. ಸಂಪ್ರತಿ ಅವರು ಕಪ್ಪು-ಬಿಳುಪು ಫೈನ್ ಆರ್ಟ್ ಛಾಯಾಗ್ರಾಹಕರಾಗಿದ್ದು, ಇವರ ಕಲೆಯು ಗ್ರಹಿಕೆ, ಸಮಯ ಮತ್ತು ಭಾರತೀಯ ದಾರ್ಶನಿಕ ಸಂಪ್ರದಾಯಗಳನ್ನು ಅನ್ವೇಷಿಸುತ್ತದೆ. ಫಿಲ್ಮ್, ಡಾರ್ಕ್‌ರೂಮ್ ಮತ್ತು ಪರ್ಯಾಯ ಪ್ರಕ್ರಿಯೆಗಳೊಂದಿಗೆ ಕೆಲಸ ಮಾಡುವ ಇವರು, ಕೈಯಿಂದ ತಯಾರಿಸಿದ ಮುದ್ರಣವನ್ನು (print) ತಮ್ಮ ಕೃತಿಯ ಅಂತಿಮ ಅಭಿವ್ಯಕ್ತಿ ಎಂದು ಪರಿಗಣಿಸುತ್ತಾರೆ. ಇವರ ಚಿಂತನಶೀಲ ಯೋಜನೆಗಳು ನಿಶ್ಯಬ್ದತೆ, ಭಕ್ತಿ, ನೆನಪು ಮತ್ತು ರೂಪಾಂತರದ ವಿಷಯಗಳನ್ನು ಪರಿಶೀಲಿಸುತ್ತವೆ.

Shankar Kiragi | ಶಂಕರ್ ಕಿರಗಿ

Photographer | ಛಾಯಾಗ್ರಾಹಕ

Cohost Shankar Kiragi is a Bengaluru-based engineer and passionate photographer with over 26 years of experience across digital and analogue formats. Specializing in traditional cyanotype prints, he advocates for a slow, deliberate photographic process. Notably, his creative cyanotype artwork was proudly exhibited at the Karnataka Chitrakala Parishath in 2026.

ಶಂಕರ್ ಕಿರಗಿ ಅವರು ಬೆಂಗಳೂರು ಮೂಲದ ಇಂಜಿನಿಯರ್ ಮತ್ತು ಭಾವೋದ್ರಿಕ್ತ ಛಾಯಾಗ್ರಾಹಕರಾಗಿದ್ದು, ಡಿಜಿಟಲ್ ಮತ್ತು ಅನಲಾಗ್ ಮಾದರಿಗಳಲ್ಲಿ 26 ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ. ಸಾಂಪ್ರದಾಯಿಕ ಸಯನೋಟೈಪ್ (cyanotype) ಮುದ್ರಣಗಳಲ್ಲಿ ಪರಿಣತಿ ಪಡೆದಿರುವ ಇವರು, ನಿಧಾನ ಮತ್ತು ವ್ಯವಸ್ಥಿತವಾದ ಛಾಯಾಗ್ರಹಣ ಪ್ರಕ್ರಿಯೆಯನ್ನು ಪ್ರತಿಪಾದಿಸುತ್ತಾರೆ. ವಿಶೇಷವಾಗಿ, ಇವರ ಸೃಜನಶೀಲ ಸಯನೋಟೈಪ್ ಕಲಾಕೃತಿಗಳು 2026 ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಹೆಮ್ಮೆಯಿಂದ ಪ್ರದರ್ಶಿಸಲ್ಪಟ್ಟಿವೆ.

Imtiaz Sultan | ಇಮ್ತಿಯಾಜ್ ಸುಲ್ತಾನ್

Vocalist | ಗಾಯಕ

Ghazal singer Imtiaz Sultan, from Shivamogga’s Konandur village, discovered his passion for music in childhood. Trained in Hindustani classical music by Humayun Haralapur, he has won acclaim on numerous stages. Remarkably, he is among the rare artists performing Kannada Ghazals, recently winning widespread praise at Dasara.

ಶಿವಮೊಗ್ಗದ ಕೋಣಂದೂರಿನ ಗಜಲ್ ಗಾಯಕ ಇಮ್ತಿಯಾಜ್ ಸುಲ್ತಾನ್, ಬಾಲ್ಯದಿಂದಲೇ ಸಂಗೀತದ ಕಡೆಗೆ ಆಕರ್ಷಿತರಾದವರು. ಹುಮಾಯೂನ್ ಹರಳಾಪುರ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತ ಇವರು, ಹಲವು ವೇದಿಕೆಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಕನ್ನಡದಲ್ಲಿ ಗಜಲ್ ಹಾಡುವ ಅಪರೂಪದ ಕಲಾವಿದರಾದ ಇವರು, ಇತ್ತೀಚಿನ ದಸರಾ ಉತ್ಸವದ ಗಾಯನದಲ್ಲಿ ಅಪಾರ ಸಾರ್ವಜನಿಕ ಪ್ರಶಂಸೆ ಗಳಿಸಿದ್ದಾರೆ.

Abhishek Davangere | ಅಭಿಷೇಕ್ ದಾವಣಗೆರೆ

Tabla | ತಬಲಾ

Karthik | ಕಾರ್ತಿಕ್

Mandolin | ಮ್ಯಾಂಡೊಲಿನ್

Pramod Jeeva | ಪ್ರಮೋದ್ ಜೀವ

Harmonium | ಹಾರ್ಮೋನಿಯಂ

Mandalagiri Prasanna | ಮಂಡಲಗಿರಿ ಪ್ರಸನ್ನ

Ghazal Analyst | ಗಜಲ್ ವಿಶ್ಲೇಷಕರು

Mandalagiri Prasanna – Originally from Raichur and a retired engineer, he has written across poetry, drama, essays, children’s literature and criticism. His ghazal collection is Nidire Irada Irulu.

ಮಂಡಲಗಿರಿ ಪ್ರಸನ್ನ – ಮೂಲತಃ ರಾಯಚೂರಿನವರು ಹಾಗೂ ನಿವೃತ್ತ ಇಂಜಿನಿಯರ್. ಕಾವ್ಯ, ನಾಟಕ, ಪ್ರಬಂಧ, ಮಕ್ಕಳ ಸಾಹಿತ್ಯ ಮತ್ತು ವಿಮರ್ಶೆ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದು, ‘ನಿದಿರೆ ಇರದ ಇರುಳು’ ಇವರ ಗಜಲ್ ಸಂಕಲನ.

Praveen D. Rao | ಪ್ರವೀಣ್ ಡಿ. ರಾವ್

Musician | ಸಂಗೀತಗಾರ

Pt Praveen D Rao is a globally renowned classical musician, multi-instrumentalist, and composer with over three decades of experience. A disciple of Pt R V Sheshadri Gavai and Pt Ravindra Yavagal, he won the Karnataka Kalashree award and serves as the Director of Param Culture.

ಕರ್ನಾಟಕ ಕಲಾಶ್ರೀ ಪಂ. ಪ್ರವೀಣ್ ಡಿ ರಾವ್ ಅವರು ಮೂರು ದಶಕಗಳ ಅನುಭವವಿರುವ ಜಾಗತಿಕ ಮಟ್ಟದ ಶಾಸ್ತ್ರೀಯ ಸಂಗೀತಗಾರ, ಬಹು-ವಾದ್ಯಗಾರ ಮತ್ತು ಸಂಯೋಜಕರು. ಪಂ. ಆರ್ ವಿ ಶೇಷಾದ್ರಿ ಗವಾಯಿ ಮತ್ತು ಪಂ. ರವೀಂದ್ರ ಯಾವಗಲ್ ಅವರ ಶಿಷ್ಯರಾದ ಇವರು, ಪ್ರಸ್ತುತ ‘ಪರಂ ಕಲ್ಚರ್’ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

 

Raghavendra Hegde | ರಾಘವೇಂದ್ರ ಹೆಗ್ಡೆ

Visual Artist | ದೃಶ್ಯ ಕಲಾವಿದ

Raghavendra Hegde is a post-graduate visual artist who completed his MVA (Masters in Visual Arts) at Chitrakala Parishath, Bangalore. He began his sand art journey in 2010, performing more than 900 shows around the globe, including showcasing his sand art at the G-20 summit.

ರಾಘವೇಂದ್ರ ಹೆಗಡೆ ಅವರು ಸ್ನಾತಕೋತ್ತರ ದೃಶ್ಯ ಕಲಾವಿದರಾಗಿದ್ದು (Post graduate visual artist), ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ತಮ್ಮ ಎಂ.ವಿ.ಎ (ಮಾಸ್ಟರ್ಸ್ ಇನ್ ವಿಶುವಲ್ ಆರ್ಟ್ಸ್) ಪದವಿಯನ್ನು ಪೂರೈಸಿದ್ದಾರೆ. ಇವರು 2010 ರಲ್ಲಿ ತಮ್ಮ ಮರಳು ಕಲೆಯ ಜರ್ನಿಯನ್ನು ಪ್ರಾರಂಭಿಸಿದರು. ವಿಶ್ವದಾದ್ಯಂತ 900 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದು, ಜಿ-20 ಶೃಂಗಸಭೆಯಲ್ಲೂ (G-20 summit) ತಮ್ಮ ಮರಳು ಕಲೆಯನ್ನು ಪ್ರದರ್ಶಿಸಿದ್ದಾರೆ.

Crafts Council of Karnataka | ಕರಕುಶಲ ಪರಿಷತ್ತು, ಕರ್ನಾಟಕ

Curator | ಸಂಯೋಜಕರು

Established in 1982, the Crafts Council of Karnataka works to preserve, document and promote the state’s traditional crafts and handloom textiles through research, publications, workshops and training. Its retail wing, Kamalini, supports craft communities through the sale of handicrafts, while Vastrabharana and Kuteera are its flagship annual events celebrating textiles, jewellery, crafts and lifestyle products.

1982 ರಲ್ಲಿ ಸ್ಥಾಪನೆಯಾದ ಕರ್ನಾಟಕ ಕರಕುಶಲ ಮಂಡಳಿಯು, ಸಂಶೋಧನೆ, ಪ್ರಕಟಣೆಗಳು, ಕಾರ್ಯಾಗಾರಗಳು ಮತ್ತು ತರಬೇತಿಯ ಮೂಲಕ ರಾಜ್ಯದ ಸಾಂಪ್ರದಾಯಿಕ ಕರಕುಶಲ ವಸ್ತುಗಳು ಮತ್ತು ಕೈಮಗ್ಗ ಜವಳಿಗಳನ್ನು ಸಂರಕ್ಷಿಸಲು, ದಾಖಲಿಸಲು ಮತ್ತು ಉತ್ತೇಜಿಸಲು ಕೆಲಸ ಮಾಡುತ್ತದೆ. ಇದರ ಚಿಲ್ಲರೆ ವಿಭಾಗವಾದ ಕಮಲಿನಿ, ಕರಕುಶಲ ವಸ್ತುಗಳ ಮಾರಾಟದ ಮೂಲಕ ಕರಕುಶಲ ಸಮುದಾಯಗಳನ್ನು ಬೆಂಬಲಿಸುತ್ತದೆ, ಆದರೆ ವಸ್ತ್ರಾಭರಣ ಮತ್ತು ಕುಟೀರಗಳು ಜವಳಿ, ಆಭರಣಗಳು, ಕರಕುಶಲ ವಸ್ತುಗಳು ಮತ್ತು ಜೀವನಶೈಲಿ ಉತ್ಪನ್ನಗಳನ್ನು ಆಚರಿಸುವ ಅದರ ಪ್ರಮುಖ ವಾರ್ಷಿಕ ಕಾರ್ಯಕ್ರಮಗಳಾಗಿವೆ.

Kavade | ಕವಡೆ

Curator | ಸಂಯೋಜಕರು

Kavade’s work is a revival not just of forgotten games, but of relationships: between generations, between cultures, and with our shared spaces. To them, culture isn’t stuck in a museum; it’s alive and playful. Since 2009, Kavade has brought back these joys and thrills by making our ancient games accessible, promoting gaming experiences, and creating large game spaces. This is their way of inviting people to try an alternative: to unplug, discover different ways of coming together, and staying together.

ಮರೆತುಹೋಗಿರುವ ಆಟಗಳನ್ನು ನೆನಪಿಸುವುದಷ್ಟೇ ಅಲ್ಲದೆ, ಶತಮಾನಗಳಿಂದ ಕಳೆದುಹೋಗಿರುವ ಸಂಬಂಧಗಳನ್ನು, ಸಂಸ್ಕೃತಿಗಳನ್ನು, ನಮ್ಮ ಸುತ್ತ ಮುತ್ತಲಿನ ಜಾಗದೊಂದಿಗಿರುವ ನಮ್ಮ ನಂಟುಗಳನ್ನೂ ಪುನಃ ನಮ್ಮೆದುರಿಗಿಡುತ್ತಿರುವುದೇ ಕವಡೆ ಸಂಸ್ಥೆಯ ಹಿರಿಮೆ. ೨೦೦೯ರಿಂದ ಹಿಡಿದು ಇಲ್ಲಿಯವರೆಗೂ ಕವಡೆ ಸಂಸ್ಥೆಯು ಈ ಕೆಲಸವನ್ನು ಮಾಡುತ್ತಿದ್ದು, ಹಳೆಯ ಆಟಗಳನ್ನು ಮರಳಿ ತರುತ್ತಾ ಅವುಗಳೊಂದಿಗೆ ಖುಷಿ, ಮತ್ತು ಸಡಗರವನ್ನೂ ಹೊತ್ತಿ ತಂದು ಹೆಚ್ಚು ಜನರು ಅದರಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳುತ್ತಿದೆ. ಜನರು ಈಗಾಗಲೇ ಹೊಂದಿಕೊಂಡಿರುವ ಬದುಕನ್ನು ಕೆಲ ಹೊತ್ತಿನ ಮಟ್ಟಿಗೆ ಮರೆತು, ಇತರರೊಂದಿಗೆ ಇನ್ನೂ ಹೆಚ್ಚು ಬೆರೆಯುವಂತೆ ಮಾಡುವುದೇ ಕವಡೆ ಸಂಸ್ಥೆಯ ಉದ್ದೇಶ. 

Vimor Handloom Foundation | ವಿಮೋರ್ ಹ್ಯಾಂಡ್‌ಲೂಮ್ ಫೌಂಡೇಶನ್

Curator | ಸಂಯೋಜಕರು

Founded in 1974 by Mrs. Chimy Nanjappa and her daughter Pavithra Muddaya, Vimor is a handloom brand dedicated to preserving and reviving India’s textile heritage. Inspired by antique sarees and traditional weaving techniques, Vimor documents historic designs, motifs and stories, working with weavers to recreate heritage textiles for contemporary audiences. Its work combines design revival with the preservation of traditional craftsmanship, supporting weavers through training, design development and sustainable livelihood opportunities. In 2004, the Vimor Handloom Foundation was established to further this mission through conservation, research and education. The Vimor Museum of Living Textiles was established in Bangalore in 2019.

ಶ್ರೀಮತಿ ಚಿಮಿ ನಂಜಪ್ಪ ಮತ್ತು ಅವರ ಮಗಳು ಪವಿತ್ರಾ ಮುದ್ದಯ್ಯ ಅವರು 1974 ರಲ್ಲಿ ಸ್ಥಾಪಿಸಿದ ವಿಮೋರ್, ಭಾರತದ ಜವಳಿ ಪರಂಪರೆಯನ್ನು ಸಂರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ಮೀಸಲಾಗಿರುವ ಕೈಮಗ್ಗ ಬ್ರಾಂಡ್ ಆಗಿದೆ. ಪ್ರಾಚೀನ ಸೀರೆಗಳು ಮತ್ತು ಸಾಂಪ್ರದಾಯಿಕ ನೇಯ್ಗೆ ತಂತ್ರಗಳಿಂದ ಪ್ರೇರಿತವಾದ ವಿಮೋರ್, ಐತಿಹಾಸಿಕ ವಿನ್ಯಾಸಗಳು, ಲಕ್ಷಣಗಳು ಮತ್ತು ಕಥೆಗಳನ್ನು ದಾಖಲಿಸುತ್ತದೆ, ಸಮಕಾಲೀನ ಪ್ರೇಕ್ಷಕರಿಗೆ ಪರಂಪರೆಯ ಜವಳಿಗಳನ್ನು ಮರುಸೃಷ್ಟಿಸಲು ನೇಕಾರರೊಂದಿಗೆ ಕೆಲಸ ಮಾಡುತ್ತದೆ. ಇದರ ಕೆಲಸವು ವಿನ್ಯಾಸ ಪುನರುಜ್ಜೀವನವನ್ನು ಸಾಂಪ್ರದಾಯಿಕ ಕರಕುಶಲತೆಯ ಸಂರಕ್ಷಣೆಯೊಂದಿಗೆ ಸಂಯೋಜಿಸುತ್ತದೆ, ತರಬೇತಿ, ವಿನ್ಯಾಸ ಅಭಿವೃದ್ಧಿ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳ ಮೂಲಕ ನೇಕಾರರಿಗೆ ಬೆಂಬಲ ನೀಡುತ್ತದೆ. 2004 ರಲ್ಲಿ, ಸಂರಕ್ಷಣೆ, ಸಂಶೋಧನೆ ಮತ್ತು ಶಿಕ್ಷಣದ ಮೂಲಕ ಈ ಧ್ಯೇಯವನ್ನು ಮುಂದುವರಿಸಲು ವಿಮೋರ್ ಹ್ಯಾಂಡ್ಲೂಮ್ ಫೌಂಡೇಶನ್ ಅನ್ನು ಸ್ಥಾಪಿಸಲಾಯಿತು. ವಿಮೋರ್ ಮ್ಯೂಸಿಯಂ ಆಫ್ ಲಿವಿಂಗ್ ಟೆಕ್ಸ್‌ಟೈಲ್ಸ್ ಅನ್ನು 2019 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು.