- This event is over. However, time travel possible through our Audio & Video! See upcoming events
Krishna to Kaveri | ಕೃಷ್ಣೆಯಿಂದ ಕಾವೇರಿವರೆಗೆ
Celebrating the Confluences of Karnataka
ಕರ್ನಾಟಕದ ವೈವಿಧ್ಯತೆಯನ್ನು ಆಚರಿಸುವ ಸಾಂಸ್ಕೃತಿಕ ಸಂಗಮ
RSVP here
Artists
Winding and binding, Karnataka’s great rivers have always been more than glorious waterways. From Krishna to Kaveri, our rivers are carriers of culture, stories, and transformation. As they flow across varied landscapes, they shape and are shaped by the people, traditions, and communities they touch.
Krishna to Kaveri is a two-day celebration that draws from this natural rhythm, exploring how Karnataka’s cultural life is constantly moving, adapting, and renewing itself. From classical roots to contemporary reinterpretations, this festival offers a vibrant weekend that speaks to a new generation. Expect immersive workshops, indulgent cuisines and impactful performances!
Whether you’re a native Kannadiga or recently moved into Bangalore, this festival is for anyone who wants to connect more deeply with the cultural spirit of the region. Not as outsiders looking in, but as participants in a living, flowing cultural journey.
Let the rivers lead. Let culture move. Let Karnataka unfold.
ಬಳಸುತ್ತಾ ಬೆಸೆಯುತ್ತಾ ಬೆಳೆಸುತ್ತಾ ಸಾಗುವ ಕರ್ನಾಟಕದ ನದಿಗಳು ವೈಭವದ ಜಲಹರಿವುಗಳು ಮಾತ್ರವಲ್ಲ. ಕೃಷ್ಣೆಯಿಂದ ಕಾವೇರಿವರೆಗೆ ವ್ಯಾಪಿಸಿರುವ ನದಿಗಳು ಸಂಸ್ಖೃತಿಯ, ಕಥೆ-ಪುರಾಣಗಳ, ಪರಿವರ್ತನೆಯ ಚಲನಶೀಲ ವಾಹಕಗಳಾಗಿವೆ. ವೈವಿಧ್ಯಮಯ ಸುಂದರ ಭೂಪ್ರದೇಶಗಳ ನಡುವೆ ಮುನ್ನಡೆವ ಈ ನದಿಗಳು ಜನರನ್ನು, ಪರಂಪರೆಗಳನ್ನು, ಸಮುದಾಯಗಳನ್ನು ರೂಪಿಸುತ್ತಾ, ಪರ್ಯಾಯವಾಗಿ ರೂಪುಗೊಳ್ಳುತ್ತಾ ಸಾಗಿವೆ.
ಈ ಸ್ವಾಭಾವಿಕ ಹರಿವಿನ ಲಯದಿಂದ ಹೊಮ್ಮಿರುವ ಎರಡು ದಿನಗಳ ಉತ್ಸವವೆ ‘ಕೃಷ್ಣೆಯಿಂದ ಕಾವೇರಿವರೆಗೆ ʼ. ಕರ್ನಾಟಕದ ಸಾಂಸ್ಕೃತಿಕ ಬದುಕಿನ ನಿರಂತರ ಚಲನೆಯ, ಹೊಂದಾಣಿಕೆಯ, ಪುನಶ್ಚೇತನದ ಶೋಧನೆ. ಈ ಉತ್ಸವವು ಅಭಿಜಾತ ಬೇರುಗಳಿಂದ ವರ್ತಮಾನದ ಮರುವ್ಯಾಖ್ಯಾನಗಳವರೆಗೆ ಹುರುಪಿನ ವಾರಾಂತ್ಯದಲ್ಲಿ ಹೊಸಪೀಳಿಗೆಗೆ ಒಳನೋಟಗಳನ್ನು ಒದಗಿಸಲಿದೆ. ತಲ್ಲೀನಗೊಳಿಸುವ ಕಾರ್ಯಾಗಾರಗಳು, ರುಚಿಕರ ಆಹಾರ, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಹಬ್ಬದಲ್ಲಿ ನಿರೀಕ್ಷಿಸಬಹುದು.
ನೀವು ಮೂಲ ಕನ್ನಡಿಗರಾಗಿರಿ ಅಥವಾ ಇತ್ತೀಚೆಗಷ್ಟೆ ಹೊರಗಿನಿಂದ ಬೆಂಗಳೂರಿಗೆ ಬಂದಿರುವವರೇ ಆಗಿರಿ. ಈ ನೆಲದ ಸಾಂಸ್ಕೃತಿಕ ಚೇತನದೊಂದಿಗೆ ಆಳವಾಗಿ ಬೆರೆಯುವ ಅವಕಾಶವನ್ನು ಈ ಹಬ್ಬ ನಿಮಗೆ ಒದಗಿಸುತ್ತದೆ. ಇಲ್ಲಿನ ಕಾರ್ಯಕ್ರಮಗಳನ್ನು ನೀವು ಹೊರಗಿನವರಾಗಿ ನಿಂತು ನೋಡುವ ಪ್ರೇಕ್ಷಕರಾಗದೆ ಒಂದು ಜೀವಂತ, ಸಾಂಸ್ಕೃತಿಕ ಯಾನದ ಭಾಗವಾಗಲು ಬನ್ನಿರಿ.
ಮುನ್ನಡೆಸಲಿ ನದಿಗಳು. ಪ್ರವಹಿಸಲಿ ಸಂಸ್ಕೃತಿ. ಗೋಚರವಾಗಲಿ ಕರ್ನಾಟಕದ ಸಿರಿ ವೈಭವ!
Download the full schedule here.
Day 1 Schedule
11:00 AM – 11:15 AM: Inauguration | ಉದ್ಘಾಟನೆ
by B. R. Lakshmana Rao & Purushottama Bilimale | ಬಿ. ಆರ್. ಲಕ್ಷ್ಮಣರಾವ್ & ಪುರುಷೋತ್ತಮ ಬಿಳಿಮಲೆ
The program will commence with the singing of the Karnataka state anthem, Jaya Bharata Jananiya Tanujaate by students of Suraaghavi Foundation, followed by inauguration of the event by renowned Kannada poet B. R. Lakshmana Rao and Chairman of Kannada Development Authority, Dr. Purushottama Bilimale.
Jaya Bharata Jananiya Tanujaate – penned by the visionary poet Kuvempu, this anthem captures the fragrance of the land, the beauty of the language, and the soul of the state in a single ocean of words. First published in the pages of the poetry collection Kolalu in 1930, this lyrical composition was officially declared the state anthem in 2004, transforming into the voice and pride of Karnataka. This is a melody that has emerged from the very heart of Karnataka. This song is not merely a collection of words – it is the pulse of the land. It is a poetic ocean that celebrates the unique identity of Karnataka, a garland of sound that praises the state as an inseparable part of India. In the resonance of the language, the pearls of Kannada shine; in the echoes of history, the pride of the land resounds.
ಸುರಾಘವಿ ಫೌಂಡೇಷನ್ ವಿದ್ಯಾರ್ಥಿಗಳು ಕರ್ನಾಟಕದ ನಾಡಗೀತೆಯಾದ “ಜಯ ಭಾರತ ಜನನಿಯ ತನುಜಾತೆ” ಗೀತೆಯನ್ನು ಹಾಡುವುದರೊಂದಿಗೆ ಈ ಕಾರ್ಯಕ್ರಮವು ಪ್ರಾರಂಭವಾಗಲಿದೆ. ತದನಂತರ, ಪ್ರಸಿದ್ಧ ಕನ್ನಡ ಕವಿ ಬಿ. ಆರ್. ಲಕ್ಷ್ಮಣ್ ರಾವ್ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಜಯ ಭಾರತ ಜನನಿಯ ತನುಜಾತೆ – ಕವಿ ಕುವೆಂಪು ಅವರ ಕಲ್ಪನೆಯಿಂದ ರೂಪುತೆಳೆದ ಈ ಗೀತೆ, ನಾಡಿನ ಮಣ್ಣಿನ ಘಮವನ್ನು, ನುಡಿಯ ಸೌಂದರ್ಯವನ್ನು, ಮತ್ತು ನಾಡಿನ ಆತ್ಮವನ್ನು ಒಂದೇ ಶಬ್ದಸಾಗರದಲ್ಲಿ ಹಿಡಿದಿಡುತ್ತದೆ. 1930ರಲ್ಲಿ ಕೊಳಲು ಕವನ ಸಂಕಲನದ ಪುಟಗಳಲ್ಲಿ ಮೊಟ್ಟಮೊದಲಾಗಿ ಮೂಡಿದ ಈ ಕಾವ್ಯ, 2004ರಲ್ಲಿ ನಾಡಗೀತೆಯಾಗಿ ಘೋಷಿತವಾದಾಗ, ಅದು ನಾಡಿನ ಧ್ವನಿಯಾಗಿ, ನಾಡಿನ ಹೆಮ್ಮೆಯಾಗಿ ಪರಿವರ್ತಿತವಾಯಿತು. ಈ ಗೀತೆ ಕೇವಲ ಪದಗಳ ಸಮೂಹವಲ್ಲ, ಅದು ನಾಡಿನ ನಾಡಿಯ ಸ್ಪಂದನೆ. ಅದು ಕನ್ನಡ ನಾಡಿನ ವೈಶಿಷ್ಟ್ಯಗಳನ್ನು ಕೊಂಡಾಡುವ ಕಾವ್ಯಸಾಗರ, ಭಾರತದ ಅವಿಭಾಜ್ಯ ಅಂಗವೆಂದು ನಾಡನ್ನು ಹೊಗಳುವ ನಾದಮಾಲೆ. ನುಡಿಯ ನಾದದಲ್ಲಿ ನಾಡಿನ ನುಡಿಮುತ್ತುಗಳು ಹೊಳೆಯುತ್ತವೆ, ಇತಿಹಾಸದ ಘೋಷದಲ್ಲಿ ನಾಡಿನ ಹೆಮ್ಮೆ ಪ್ರತಿಧ್ವನಿಸುತ್ತದೆ.
11:15 AM – 11:30 AM: Karaga Kolata | ಕರಗ ಕೋಲಾಟ
Where Rhythm Meets Ritual | ತಾಳ – ಲಯ – ಸಂಪ್ರದಾಯಗಳ ಸಮ್ಮಿ ಲನ
Neladavva Kala Kendra Troupe | ನೆಲದವ್ವ ಕಲಾ ಕೇಂದ್ರ ತಂಡ
Rooted in the vibrant folk traditions of coastal Karnataka, Karaga Kolata brings together rhythm, movement and the collective spirit of community celebration. Through energetic footwork, rhythmic stick play and traditional music, the performance offers audiences a glimpse into the region’s rich and diverse cultural heritage. Performed and presented by Neladavva Kala Kendra and curated by Tvarita Arts Collective India, this inaugural performance celebrates the living traditions passed down through generations. As we come together to mark a new beginning, Karaga Kolata sets the stage with the sounds, spirit and cultural identity of Karnataka’s coast.
ಪ್ರದರ್ಶ ನವನ್ನು ಆಯೋ ಜಿಸಿದ್ದು, ನೆಲದವ್ವ ಕಲಾ ಕೇಂದ್ರದವರು ಇದನ್ನು ಪ್ರದರ್ಶಿ ಸುವ ಮೂಲಕ ಹಲವಾರು ತಲೆಮಾರುಗಳಿಂದ ಬಂದಿರುವ ನಮ್ಮ ಈ ಪರಂಪರೆಯನ್ನು ರಂಗದ ಮೇ ಲೆ ಜೀ ವಂತ ತರುವವರಿದ್ದಾರೆ. ಹೊ ಸದೊಂದು ಶುರುವಿನೆಡೆಗೆ ಸಾಗುತ್ತಿರುವ ಈ ಸಂಭ್ರಮದ ಸಮಯದಲ್ಲಿ, ಕರಗ ಕೋ ಲಾಟದ ಈ ಪ್ರದರ್ಶ ನವು ರಂಗದ ಮೇ ಲೆ ಕರಾವಳಿ ಕರ್ನಾ ಟಕದ ಸೊ ಗಡನ್ನು ಚಿತ್ರಿಸಲು ಮುಂದಾಗಿದೆಕರ್ನಾ ಟಕದ ಹಲವಾರು ವಿಭಿನ್ನ ರೀ ತಿಯ ಜನಪದ ಸಂಪ್ರದಾಯಗಳಲ್ಲಿ ಒಂದಾದ ಕರಗ ಕೋ ಲಾಟವು ಲಯ, ಚಲನೆ ಮತ್ರು ಸಾಮೂಹಿಕ ಸಂಭ್ರಮದ ಸ್ಫೂರ್ತಿ ಯನ್ನು ಎತ್ತಿಹಿಡಿಯುತ್ತದೆ. ಚುರುಕು ಹೆಜ್ಜೆ, ಲಯಬದ್ಧಕೋ ಲಿನ ಆಟ ಮತ್ತು ಸಾಂಪ್ರದಾಯಿಕ ಸಂಗೀ ತದ ಮೂಲಕ ಈ ನೃತ್ಯ ಪ್ರದರ್ಶ ನವು ಪ್ರೇಕ್ಷಕರನ್ನು ನಮ್ಮ ನಾಡಿನ ಶ್ರೀಮಂತ ಸಾಂಸ್ಕ್ರತಿಕ ಪರಂಪರೆಗೆ ಪರಿಚಯಿಸುತ್ತದೆ. ತ್ವರಿತ ಆರ್ಟ್ಸ್ ಕಲೆಕ್ಟಿವ್, ಇಂಡಿಯಾ – ಇವರು ಈ .
11:30 AM – 01:00 PM: Crack the Case with Detective Pranav! |ಪತ್ತೇದಾರಿ ಪ್ರಣವ್ ಜೊತೆ ಕೇಸಿನ ಜಾಡು ಹಿಡಿಯಿರಿ!
A Mystery-Filled Reading Adventure | ಒಂದು ರೋಮಾಂಚಕವಾದ ಓದಿನ ಪಯಣ
For Ages 5-12
Anupama K. Benachinamaradi | ಅನುಪಮ ಕೆ. ಬೆಣಚಿನಮರಡಿ
Get ready to put on your detective hats!
Step into the world of Detective Pranav, where an ordinary day can turn into a mystery waiting to be solved. Through an engaging reading session, children will meet Pranav, follow the clues, observe carefully, ask questions and try to crack the case before the final reveal.
But the mystery doesn’t end with the book!
Children will be challenged with a fun treasure hunt that takes the story beyond the pages and into the spaces around them. Working in teams, they will follow clues, connect the dots and discover that being a good detective is not just about finding answers—it is about being curious, observant and willing to look at things differently.
ನಿಮ್ಮ ಪತೆ್ತದಾರಿ ಕಿರೀಟಗಳನು್ನ ಹಾಕಿಕೊಳ್ಳಲು ತಾಯಾರಾಗಿ!
ಪತೆ್ತದಾರಿ ಪ್ರಣವ್ನ ಜಗತಿ್ತಗೆ ಪ್ರವೇಶಿಸಲು ಮುಂದಾಗಿ!
ಇಲ್ಲಿ ಒಂದು ಸಾಮಾನ್ಯ ದಿನವೂ ರಹಸ್ಯಗಳನು್ನ ಕಂಡುಹಿಡಿಯುವ ರೋಚಕಮಯವಾದ ಪ್ರಪಂಚಕೆ್ಕ ಮಾಾಟಾಗುತ್ತದೆ. ಕುತೂಹಲಕಾರಿ ಓದಿನೊಂದರ ಮೂಲಕ, ಮಕ್ಕಳು ಪ್ರಣವ್ನನು್ನ ಭೇಟಿ ಮಾಡಿ, ಸುಳಿವುಗಳನು್ನ ಪತೆ್ತ ಹಚುತಾ್ತ, ತೀಕ್ಷ್ಣವಾಗಿ ಗಮನಿಸುತಾ್ತ, ಪ್ರಶೆ್ನಗಳನು್ನ ಕೇಳುತಾ್ತ, ಅಂತಿಮ ರಹಸ್ಯ ಬಯಲಾಗುವ ಮುನ್ನವೇ ಕೇಸಿನ ಜಾಡು ಹಿಡಿದು ಅದನು್ನ ಬಗೆಹರಿಸಿಬಿಡುತಾ್ತರೆ!
ಆದರೆ…ಈ ರಹಸ್ಯ ಕೇವಲ ಪುಸ್ತಕಕೆ್ಕ ಮಾತ್ರ ಸೀಮಿತವಲ್ಲ!
ಒಂದು ಮಜವಾದ ಟೆ್ರಷರ್ ಹಂಟಿನ ಆಟ ನಮ್ಮ ಮಕ್ಕಳೆಡೆಗೆ ಸವಾಲಾಗಿ ಬಂದು, ಹಾಳೆಯ ಮೇಲಷೇ ಇದ್ದ ಕಥೆಯನು್ನ ಅವರ ಸುತ್ತಲೂ ಜೀವಂತವಾಗಿ ತರುತ್ತದೆ.
12:00 PM – 01:30 PM: Raga and Resonance | ರಾಗ ಮತ್ತು ಅನುರಣನ
The Journey of Sound and Soul | ನಾದ ಮತ್ತು ಆತ್ಮದ ಅಂತರಂಗ ಯಾನ
Ustad Faiyaz Khan, Sarfaraz Khan & Vignesh Kamath | ಉಸ್ತಾದ್ ಫಯಾಜ್ ಖಾನ್, ಸರ್ಫರಾಜ್ ಖಾನ್ & ವಿಘ್ನೇಶ್ ಕಾಮತ್
Raga and Resonance is a grand celebration of Hindustani Classical Music, featuring the masterful artistry of Ustad Faiyaz Khan. The event will immerse the audience in the deep, rich traditions of classical ragas, showcasing intricate improvisations, soulful melodies, and the powerful acoustic resonance of traditional instruments.
As a unique bridge between diverse musical heritages, the concert will culminate in a spiritually uplifting Dasara Pada. This final Kannada bhajan blends the rigorous structure of Hindustani classical style with the profound devotion of Carnatic Haridasa literature, promising listeners a deeply meditative, transcendent, and unforgettable musical journey.
ರಾಗ ಮತ್ತು ಅನುರಣನ – ಫಯಾಜ್ ಖಾನ್ ಅವರ ಅದ್ಭುತ ಗಾಯನದಲ್ಲಿ ಮೂಡಿಬರಲಿರುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಒಂದು ಭವ್ಯ ಆಚರಣೆ. ಈ ಕಾರ್ಯಕ್ರಮವು ಪ್ರೇಕ್ಷಕರನ್ನು ಶಾಸ್ತ್ರೀಯ ರಾಗಗಳ ಆಳವಾದ ಪರಂಪರೆಯಲ್ಲಿ ಮುಳುಗಿಸಲಿದ್ದು, ಜಟಿಲವಾದ ಆಲಾಪನೆಗಳು, ಭಾವಪೂರ್ಣ ಮಧುರತೆ ಮತ್ತು ಸಾಂಪ್ರದಾಯಿಕ ವಾದ್ಯಗಳ ದಿವ್ಯ ನಾದದ ಅನುರಣನಕ್ಕೆ ಸಾಕ್ಷಿಯಾಗಲಿದೆ.
ವಿಭಿನ್ನ ಸಂಗೀತ ಶೈಲಿಗಳ ನಡುವೆ ಒಂದು ಅಪೂರ್ವ ಸೌಹಾರ್ದ ಸೇತುವೆಯಾಗಿ, ಈ ಕಛೇರಿಯು ಆಧ್ಯಾತ್ಮಿಕ ಹಿನ್ನೆಲೆಯ ದಾಸರ ಪದದೊಂದಿಗೆ ಮುಕ್ತಾಯಗೊಳ್ಳಲಿದೆ. ಕೊನೆಯಲ್ಲಿ ಪ್ರಸ್ತುತಪಡಿಸುವ ಈ ಕನ್ನಡ ಭಜನೆಯು, ಹಿಂದೂಸ್ತಾನಿ ಶೈಲಿಯ ಗಾಂಭೀರ್ಯ ಹಾಗೂ ಹರಿದಾಸ ಸಾಹಿತ್ಯದ ಭಕ್ತಿಭಾವದ ಸಮ್ಮಿಲನವಾಗಿದ್ದು, ಶ್ರೋತೃಗಳಿಗೆ ಒಂದು ಧ್ಯಾನಸ್ಥ, ದಿವ್ಯ ಮತ್ತು ಮರೆಯಲಾಗದ ಸಂಗೀತದ ಅನುಭೂತಿಯನ್ನು ನೀಡಲಿದೆ.
12:30 PM – 02:00 PM: Stories from Scraps | ಕಸದಲ್ಲರಳಿದ ಕಥೆಗಳು
Finding Meaning in Mixed Media | ಮಿಶ್ರ ಮಾಧ್ಯಮದಲ್ಲಿ ಅಡಗಿರುವ ಅರ್ಥಗಳು
Giridhar Khasnis | ಗಿರಿಧರ್ ಖಾಸನೀಸ್
Led by senior artist, art writer, and curator Giridhar Khasnis, this immersive 90-minute workshop explores how to transform ordinary everyday materials into art. Drawing from years of dedicated practice and expertise, Khasnis guides participants through intuitive techniques, practical demonstrations, visual storytelling, and fresh ways of seeing the world in simple objects around us. Open to all age groups – from total beginners and curious laymen to seasoned artists – this engaging session offers a creative space to experiment, play with textures, and discover the art hidden in plain sight. An inspiring, hands-on event designed to spark curiosity, free imagination, and change the way you perceive the ordinary.
ಹಿರಿಯ ಕಲಾವಿದರು, ಕಲಾ ಲೇ ಖಕರು ಮತ್ತು ಕಲಾ ಸಂಯೋ ಜಕರಾದಂತಹ ಗಿರಿಧರ್ ಖಾಸ್ನಿಸ್ ಅವರು ನಾಡೆಸಿಕೊ ಡುತ್ತಿರುವಂತಹ ಈ ೯೦ ನಿಮಿಷಗಳ ಕಾರ್ಯ ಗಾರವು, ಅತೀ ಸಾಮಾನ್ಯವಾದ ವಸ್ತುಗಳನ್ನ ಕಲಾತ್ಮಕವಾಗಿ ಮಾರ್ಪ ಡಿಸುವ ರೀ ತಿಯ ಬಗ್ಗೆ ಅನ್ವೇಷಿಸುತ್ತದೆ. ಹಲವಾರು ವರ್ಷ ಗಳ ಪರಿಣಿತಿಯನ್ನು ಹೊ ಂದಿರುವ ಇವರು, ಸಹಜ ಗ್ರಹಿಕೆಗೆ ಆಧರಿಸಿದ ತಂತ್ರಗಳ ಮೂಲಕ, ಹಲವಾರು ರೀ ತಿಯ ಪ್ರಯೋ ಗಗಳ ಮೂಲಕ ಮತ್ತು ದೃಶ್ಯ ಕಥನಗಳ ಮೂಲಕ ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಹೊ ಸ ರೀ ತಿಯಲ್ಲಿ ನೋ ಡುವ ಬಗೆ ಹೇ ಗೆ ಎಂಬುದನ್ನು ತಿಳಿಸಿಕೊ ಡುತ್ತಾರೆ.
02:30 PM – 04:00 PM: Little Lights, Big Ideas | ಸಣ್ಣ ದೀಪಗಳು, ದೊಡ್ಡ ಯೋಜನೆಗಳು
Making Terracotta Diyas by Hand | ಮಣ್ಣಿನ ಹಣತೆಗಳನ್ನು ನಮ್ಮ ಕೈಯಲ್ಲಿಯೇ ತಯಾರಿಸುವುದು
For Ages 6-12
Ullaskar De | ಉಲ್ಲಾಸ್ಕರ್ ಡೇ
Get creative with clay in this hands-on workshop where children explore the traditional craft of terracotta diya making. Working with their hands, young participants will discover the joy of shaping clay into little lamps, experimenting with forms and textures along the way. The session offers an opportunity to engage with a familiar craft, learn through making, and create something of their own to take home. Whether it’s their first time working with clay or an opportunity to try something new, children can look forward to an enjoyable, creative experience that celebrates the simple pleasure of making things by hand.
ಈ ಸೃಜನಶೀಲ ಕಾರ್ಯಗಾರದಲ್ಲಿ ಮಕ್ಕಳು ಸಾಂಪ್ರದಾಯಿಕ ಮಣ್ಣಿನ ಹಣತೆಗಳನ್ನು ಮಾಡುವುದು ಹೇಗೆ ಎಂಬುದನ್ನು ಕಲಿಯುತ್ತಾರೆ. ಮಣ್ಣಿಗೆ ರೂಪು ನೀಡುತ್ತಾ, ಪುಟ್ಟ ಪುಟ್ಟ ದೀಪಗಳನ್ನು ತಯಾರಿಸಿ, ವಿವಿಧ ಆಕಾರ ಮತ್ತು ವಿನ್ಯಾಸಗಳನ್ನು ಅನ್ವೇಷಿಸಿಲಿದ್ದಾರೆ. ಈಗಾಗಲೇ ಪರಿಚಯವಿರುವ ಕಲೆಯೊಂದರೊಂದಿಗೆ ಬೆರೆತು, ಅದರ ಮೇಲೆ ಕೆಲಸ ಮಾಡಿ, ಅವರು ತಯಾರಿಸಿದ ಹಣತೆಯನ್ನು ತಮ್ಮೊಂದಿಗೆ ಮನೆಗೆ ತೆಗೆದುಕೊಂಡು ಹೋಗಬಹುದು! ಮಣ್ಣಿನೊಂದಿಗೆ ಕೆಲಸ ಮಾಡಿ ಅನುಭವ ಇಲ್ಲದೇ, ಹೊಸತನ್ನು ಕಲಿಯುವ ಅಥವಾ ಪ್ರಯತ್ನಿಸುವ ಮಕ್ಕಳಿಗೂ ಈ ಕಾರ್ಯಗಾರ ಅವಕಾಶ ಒದಗಿಸಿಕೊಡುತ್ತದೆ. ಹೊಸ ಕಲೆಯನ್ನು ಕಲಿತು, ತಮ್ಮ ಕೈಯ್ಯಾರೆ ಹಣತೆಗಳನ್ನು ತಯಾರಿಸಿ ಸಂಭ್ರಮಿಸಲು ಇದೊಂದು ಸದವಕಾಶ!
03:00 PM – 04:30 PM: Swaying through a Thousand Mirrors | ಸಾವಿರ ಕನ್ನಡಿಗಳ ನಡುವಿನೋಲಾಟ
A Lambani Dance Workshop | ಲಂಬಾಣಿ ನೃತ್ಯ ಕಾರ್ಯಾಗಾರ
Rudrakshi Bai | ರುದ್ರಾಕ್ಷಿ ಬಾಯಿ
Experience the vibrant world of Lambani dance in this interactive workshop led by Smt. Rudrakshi Bai and her team. Discover the distinctive rhythms, gestures, footwork and expressive movements of this traditional dance form of the Banjara community. Learn simple dance steps directly from experienced practitioners and experience the joy of moving to traditional rhythms.
Whether you are a beginner, a dance enthusiast or simply curious about India’s diverse folk traditions, this workshop offers an opportunity to connect with Lambani culture through movement and participation.
Celebrate living traditions and learn from master artists.
ಶ್ರೀಮತಿ ರುದ್ರಾಕ್ಷಿ ಬಾಯಿ ಮತ್ತು ಅವರ ತಂಡ ನಡೆಸಿಕೊ ಡುತ್ತಿರುವ ಈ ಕಾರ್ಯ ಗಾರವು ನಮ್ಮನ್ನು ಲಂಬಾಣಿ ನೃತ್ಯದ ರೋ ಚಕ ಜಗತ್ತಿಗೆ ಕರೆದೊ ಯ್ಯಲಿದೆ. ಬಂಜಾರ ಸಮುದಾಯದ ಸಾಂಸ್ಕೃತಿಕ ನೃತ್ಯವಾದ ಲಂಬಾಣಿಯ ಲಯ, ಭಂಗಿ, ಹೆಜ್ಜೆ ಮತ್ತು ಚಲನೆಗಳನ್ನು ಈ ಕಾರ್ಯ ಗಾರವು ನಮ್ಮ ಮುಂದಿಡಲಿದೆ. ಸರಳ ಹೆಜ್ಜೆಗಳನ್ನು ನುರಿತ ಕಲಾವಿದರಿಂದ ಕಲಿತು, ನೀ ವೂ ಅದರ ಆನಂದದಲ್ಲಿ ಭಾಗಿಯಾಗಬಹುದು.
ಆರಂಭಿಕರು, ನೃತ್ಯದಲ್ಲಿ ಆಸಕ್ತಿ ಇರುವವರು, ಅಥವಾ ನಮ್ಮ ಜನಪದ ಸಂಪ್ರದಾಯದ ಬಗ್ಗೆ ತಿಳಿದುಕೊ ಳ್ಳಬೇ ಕೆಂದಿರುವವರು, ಎಲ್ಲರೂ ಈ ಕಾರ್ಯ ಗಾರದಲ್ಲಿ ಭಾಗವಹಿಸಿ ಲಂಬಾಣಿ ಸಂಸ್ಕ್ರತಿಯ ಸೊ ಗಡನ್ನು ಸವಿಯಬಹುದು.
ಜೀ ವಂತ ಕಲೆಗಳನ್ನು ಸಂಭ್ರಮಿಸಿ, ನುರಿತ ಕಲಾವಿದರಿಂದ ಕಲೆಯಿರಿ.
03:00 PM – 04:30 PM: Sutta Mutta Gotta? | ಸುತ್ತ ಮುತ್ತ ಗೊತ್ತಾ?
Quizzing All Things Karnataka and Kannada | ಕರ್ನಾಟಕ ಮತ್ತು ಕನ್ನಡದ ಎಲ್ಲ ವಿಷಯಗಳ ಕುರಿತ ಮನರಂಜನಾತ್ಮಕ ಪ್ರಶ್ನೋತ್ತರ ಸ್ಪರ್ಧೆ
Thejaswi Udupa | ತೇಜಸ್ವಿ ಉಡುಪ
A 90 minute journey full of questions on interesting facts and stories from our state. The quiz is for teams of up to two people. There will be a written prelims, followed by a final round for the top teams. Hosted by Thejaswi Udupa, this is bound to be a fun-filled afternoon!
ನಮ್ಮ ರಾಜ್ಯದ ರೋಚಕ ಸಂಗತಿಗಳು ಮತ್ತು ಕಥೆಗಳೊಂದಿಗೆ 90 ನಿಮಿಷಗಳ ಪ್ರಶ್ನೋತ್ತರ ಪ್ರವಾಸ. ಎರಡು ಸದಸ್ಯರ ತಂಡಗಳು ಭಾಗವಹಿಸಬಹುದು. ಮೊದಲು ಬರಹ ರೂಪದ ಪ್ರಾಥಮಿಕ ಸುತ್ತು, ನಂತರ ಅಗ್ರ ತಂಡಗಳಿಗೆ ಅಂತಿಮ ಸುತ್ತು ಇರುತ್ತದೆ. ತೇಜಸ್ವಿ ಉಡುಪ ಅವರ ಆತಿಥ್ಯದಲ್ಲಿ ನಡೆಯುವ ಈ ಕ್ವಿಜ್ ಖಂಡಿತವಾಗಿಯೂ ಮೋಜುಮಸ್ತಿಯಿಂದ ಕೂಡಿದ ಮಧ್ಯಾಹ್ನವಾಗಲಿದೆ!
05:00 PM – 06:30 PM: Namma Jala, Namma Nela | ನಮ್ಮ ಜಲ, ನಮ್ಮ ನೆಲ
Navigating Karnataka’s Environmental Future: Water, Urban Ecology, and the Path to Policy Action | ಕರ್ನಾಟಕದ ಪರಿಸರದ ಭವಿಷ್ಯ: ನೀರು, ನಗರಾಭಿವೃದ್ಧಿ ಪರಿಸರ ಮತ್ತು ನೀತಿ ನಿರೂಪಣೆಯ ಹಾದಿ
Vishwanath Srikantaiah, H. S. Sudhira & Arvind Lakshmisha | ವಿಶ್ವನಾಥ ಶ್ರೀಕಂಠಯ್ಯ, ಎಚ್. ಎಸ್. ಸುಧೀರ & ಅರವಿಂದ್ ಲಕ್ಷ್ಮೀಶ
Namma Jala, Namma Nela is a vital panel discussion exploring Karnataka’s critical environmental and urban challenges. Vishwanath Srikantaiah opens the session by addressing the pressing need for sustainable water conservation and management strategies. Complementing this, Dr. H.S. Sudhira delves into the integration of urban planning and ecology, highlighting key policy frameworks, implementation hurdles, and the importance of civic awareness. Moderated by Arvind Lakshmisha, this timely dialogue aims to bridge the gap between policy design and grassroots execution, driving collaborative solutions for a sustainable, resilient future for our land and water.
ಕರ್ನಾಟಕದ ಪರಿಸರ ಮತ್ತು ನಗರೀಕರಣಕ್ಕೆ ಸಂಬಂಧಿಸಿದ ಗಂಭೀರ ಸವಾಲುಗಳನ್ನು ಚರ್ಚಿಸುವ ಮಹತ್ತ್ವದ ಸಂವಾದವೇ ನಮ್ಮ ಜಲ, ನಮ್ಮ ನೆಲ. ಈ ಗೋಷ್ಠಿಯಲ್ಲಿ ವಿಶ್ವನಾಥ್ ಶ್ರೀಕಂಠಯ್ಯ ಅವರು ಸುಸ್ಥಿರ ಜಲಸಂರಕ್ಷಣೆ ಮತ್ತು ಜಲ ನಿರ್ವಹಣೆಯ ಕಾರ್ಯತಂತ್ರಗಳ ತುರ್ತು ಅಗತ್ಯವನ್ನು ಕುರಿತು ಮಾತನಾಡಲಿದ್ದಾರೆ. ಇದರ ಮುಂದುವರಿದ ಭಾಗವಾಗಿ, ಡಾ. ಎಚ್. ಎಸ್. ಸುಧೀರ ಅವರು ನಗರ ಯೋಜನೆ ಮತ್ತು ಪರಿಸರ ವಿಜ್ಞಾನದ ಸಮನ್ವಯದ ಕುರಿತು ಬೆಳಕು ಚೆಲ್ಲಲಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖ ನೀತಿ ಚೌಕಟ್ಟುಗಳು, ಅವುಗಳ ಅನುಷ್ಠಾನದಲ್ಲಿನ ಸವಾಲುಗಳು ಹಾಗೂ ನಾಗರಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ಮಹತ್ವವನ್ನು ಚರ್ಚಿಸಲಿದ್ದಾರೆ.
ಅರವಿಂದ್ ಲಕ್ಷ್ಮೀಶ ಅವರ ನಿರೂಪಣೆಯಲ್ಲಿ ನಡೆಯಲಿರುವ ಈ ಸಮಯೋಚಿತ ಸಂವಾದವು, ನೀತಿಗಳ ರೂಪುರೇಷೆ ಮತ್ತು ಅವುಗಳ ಸ್ಥಳೀಯ ಮಟ್ಟದ ಅನುಷ್ಠಾನದ ನಡುವಿನ ಅಂತರವನ್ನು ಕಡಮೆ ಮಾಡುವ ಗುರಿ ಹೊಂದಿದೆ. ನಮ್ಮ ನೆಲ ಮತ್ತು ಜಲ ಸಂಪನ್ಮೂಲಗಳ ಸುಸ್ಥಿರತೆ ಹಾಗೂ ಭವಿಷ್ಯದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬಲಪಡಿಸಲು, ಸಹಯೋಗದ ಮೂಲಕ ಕಾರ್ಯಸಾಧ್ಯ ಪರಿಹಾರಗಳನ್ನು ಕಂಡುಕೊಳ್ಳುವುದು ಈ ಸಂವಾದದ ಆಶಯವಾಗಿದೆ.
05:00 PM – 06:30 PM: Narakasura Vadhe | ನರಕಾಸುರ ವಧೆ
A Rod and String Puppet Show | ಸೂತ್ರದ ಗೊಂಬೆಯಾಟ
Rangaputhali Puppeteers |ರಂಗಪುತ್ಥಳಿ ಬೊಂಬೆಯಾಟದವರು
Narakasura, son of Bhudevi and ruler of Pradyoshapuram, gains immense power through Lord Brahma’s blessing. Seeking to conquer heaven with his commander Murasura, he destroys sacred homas and defeats Indra, the king of heaven, seizing his celestial white umbrella. Meanwhile, Queen Satyabhama awaits her lord, Sri Krishna. Seeking help, Indra approaches Krishna, an incarnation of Lord Vishnu. Krishna destroys Murasura and confronts Narakasura, offering him a chance to surrender and return the umbrella. When Narakasura refuses, Krishna defeats him in battle and restores Indra’s celestial symbol, celebrating the triumph of good over evil.
ಭೂದೇವಿಯ ಪುತೃ ಹಾಗೂ ಪ್ರದ್ಯೋಷಪುರದ ರಾಜನಾದ ನರಕಾಸುರನು ಬೃಹ್ಮದೇವನ ವರದಿಂದ ತುಂಬಾ ಬಲಿಷ್ಥನಾಗುತ್ತಾನೆ. ತನ್ನ ಸೇನಾಪತಿ ಮುರಾಸುರನೊಂದಿಗೆ ಸ್ವರ್ಗವನ್ನು ಗೆಲ್ಲಲು ಹೊರಟ ಅವನು, ಪವಿತ್ರ ಹೋಮಗಳನ್ನು ನಾಶ ಮಾಡಿ, ದೇವೇಂದ್ರನನ್ನು ಸೋಲಿಸಿ, ಅವನ ಸ್ವರ್ಗೀಯ ಶ್ವೇತಛತ್ರಿಯನ್ನು ವಶಪಡಿಸಿಕೊಳ್ಳುತ್ತಾನೆ. ಇದೇ ವೇಳೆಯಲ್ಲಿ ಸತ್ಯಭಾಮೆಯು, ತನ್ನ ಪತಿಯಾದ ಶ್ರೀ ಕೃಷ್ಣನಿಗೆ ಕಾಯುತ್ತಿರುತ್ತಾಳೆ. ವಿಷ್ಣುವಿನ ಅವತಾರಿಯಾದ ಶ್ರೀ ಕೃಷ್ಣನ ಸಹಾಯ ಬೇಡುತ್ತಾ ಬಂದ ದೇವೇಂದ್ರನಿಗೆ ಸಹಾಯ ಮಾಡಲು, ಶ್ರೀ ಕೃಷ್ಣನು ಮುರಾಸುರನನ್ನು ಸಂಹರಿಸಿ, ನರಕಾಸುರನಿಗೆ ಛತ್ರಿಯನ್ನು ಹಿಂತಿರುಗಿಸುವ ಅವಕಾಶವನ್ನು ನೀಡುತ್ತಾನೆ. ನರಕಾಸುರನು ಅದನ್ನು ನಿರಾಕರಿಸಿದಾಗ, ಅವನನ್ನು ಸೋಲಿಸಿ, ಶ್ರೀ ಕೃಷ್ಣನು ಆ ಛತ್ರಿಯನ್ನು ಇಂದ್ರನಿಗೆ ಹಿಂತಿರುಗಿಸಿ, ಕೆಡುಕಿನ ವಿರುಧ್ಧ ವಿಜಯ ಸಾಧಿಸುತ್ತಾನೆ.
06:00 PM – 07:30 PM: Traditional Cereals and Seeds | ಸಾಂಪ್ರದಾಯಿಕ ಧಾನ್ಯಗಳು ಮತ್ತು ಬೀಜಗಳು
Local Solutions to Modern Nutritional Needs | ಆಧುನಿಕ ಪೌಷ್ಟಿಕ ಅಗತ್ಯಗಳಿಗೆ ಸ್ಥಳೀಯ ಪರಿಹಾರಗಳು
Megha, Subrahmanya Kumar, Vaishali Jadhav & Sadashiv Naik | ಮೇಘ, ಸುಬ್ರಹ್ಮಣ್ಯ ಕುಮಾರ, ವೈಶಾಲಿ ಜಾಧವ್ & ಸದಾಶಿವ್ ನಾಯಕ್
Despite globalisation, many of us continue to eat foods that have been part of our communities for generations. But how can we bring these traditional ingredients into our diets while meeting today’s nutritional needs? Before reaching for quinoa or chia seeds, take a closer look at what Karnataka’s food pantry has to offer. In this hands-on workshop, explore recipes from the Traditional Foods of Karnataka cookbook that use millets and seeds. Discover how to work with these local ingredients and incorporate them into everyday meals. After all, for a recipe to survive, it has to be tasty too!
ಜಾಗತೀಕರಣದ ಹೊರತಾಗಿಯೂ ನಾವೆಲ್ಲರೂ ನಮಗೆ ವರ್ಷಾನುಗಟ್ಟಲೆಗಳಂದ ತಿಳಿದಿರುವ ಮತ್ತು ನಮ್ಮ ಸುತ್ತಮುತ್ತಲಿನವರು ಸೇವಿಸುವ ಆಹಾರ್ಯವನ್ನೇ ಸೇವಿಸುತ್ತಾ ಬಂದಿದ್ದೇವೆ. ಆದರೆ, ಸಾಂಪ್ರದಾಯಿಕ ತಿನಿಸುಗಳನ್ನು ಸೇವಿಸತ್ತಲೇ ಇಂದಿನ ಪೌಷ್ಟಿಕಾಂಶದ ಅಗತ್ಯಗಳನ್ನು ಈಡೇರಿಸುವಂತಹ ಆಹಾರ್ಯವನ್ನು ವಾಸ್ತವಕ್ಕೆ ತರುವುದು ಹೇಗೆ? ಕ್ವಿನೋವಾ ಅಥವಾ ಚಿಯಾ ಧಾನ್ಯಗಳತ್ತ ಕೈಚಾಚುವ ಮೊದಲು, ನಮ್ಮ ಕರ್ನಾಟಕದ ಆಹಾರ ಪದ್ಧತಿಯಲ್ಲಿ ಬಳಸಲಾಗುವ ಪದಾರ್ಥಗಳನ್ನು ನೋಡಿ. ಈ ಕಾರ್ಯಗಾರವು, ಸಿರಿ ಧಾನ್ಯಗಳನ್ನು ಬಳಸಿ ಮಾಡುವ ಕರ್ನಾಟಕದ ವೈವಿಧ್ಯ ತಿನಿಸುಗಳ ಪರಿಚಯವನ್ನು ನೀಡುತ್ತದೆ. ಈ ಸ್ಥಳೀಯ ಪದಾರ್ಥಗಳನ್ನು ನಮ್ಮ ದಿನನಿತ್ಯದ ಆಹಾರ್ಯದಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಇಲ್ಲಿ ಕಲಿಯಬಹುದು. ಅಡಿಗೆಯೊಂದು ಯಾವತ್ತಿಗೂ ಜೀವಂತವಿರಬೇಕೆಂದರೆ, ಅದು ರುಚಿಯಗಿಯೂ ಇರಬೇಕಲ್ಲವೇ?
06:30 PM – 08:00 PM: Bhaava Lahari | ಭಾವ ಲಹರಿ
Expression Beyond… | ಅಭಿವ್ಯಕ್ತಿಯ ಆಚೆಗೆ…
Sangeeta Katti Kulkarni | ಸಂಗೀತಾ ಕಟ್ಟಿ ಕುಲಕರ್ಣಿ
Indian music is a timeless river that flows across genres, carrying the collective soul, heritage, and emotions of our land. Bhaava Lahari is a thematic musical journey that traces this rich evolution—celebrating the unity within India’s diverse melodic traditions.
From the disciplined depth of Hindustani classical ragas and the surrender of Bhakti sangeet, to the evocative poetry of Bhava geethe, the earthy vibrancy of folk lore, and the timeless nostalgia of Indian cinema, Bhaava Lahari weaves these forms into a cohesive tapestry of life’s moods. Guided by the nuanced artistry of Smt. Sangeeta Katti Kulkarni, the production moves through melody, memory, and rhythm—culminating in an experience that transcends mere emotion to touch the sublime.
ಭಾರತೀಯ ಸಂಗೀತವು ವಿಭಿನ್ನ ಪ್ರಕಾರಗಳ ಮೂಲಕ ಹರಿಯುವ ಒಂದು ನಿರಂತರ ಜೀವನದ ನದಿಯಾಗಿದೆ. ಇದು ನಮ್ಮ ನೆಲದ ಸಾಮೂಹಿಕ ಆತ್ಮ, ಪರಂಪರೆ ಮತ್ತು ಭಾವನೆಗಳನ್ನು ತನ್ನ ಒಡಲಿನಲ್ಲಿ ಹೊತ್ತು ಸಾಗುತ್ತದೆ. ‘ಭಾವ ಲಹರಿ’ ಎನ್ನುವುದು ಭಾರತದ ವೈವಿಧ್ಯಮಯ ಮಧುರ ಸಂಪ್ರದಾಯಗಳ ನಡುವಿನ ಏಕತೆಯನ್ನು ಕೊಂಡಾಡುವ, ಸಂಗೀತದ ಶ್ರೀಮಂತ ವಿಕಾಸವನ್ನು ಅನಾವರಣಗೊಳಿಸುವ ಒಂದು ಪರಿಕಲ್ಪನಾತ್ಮಕ ಸಂಗೀತದ ಪಯಣವಾಗಿದೆ.
ಹಿಂದೂಸ್ತಾನಿ ಶಾಸ್ತ್ರೀಯ ರಾಗಗಳ ಶಿಸ್ತುಬದ್ಧ ಆಳ ಮತ್ತು ಭಕ್ತಿ ಸಂಗೀತದ ಶರಣಾಗತಿಯ ಭಾವದಿಂದ ಹಿಡಿದು, ಭಾವಗೀತೆಗಳ ಭಾವನಾತ್ಮಕ ಕಾವ್ಯ, ಜನಪದ ಸಾಹಿತ್ಯದ ಮಣ್ಣಿನ ಸೊಗಡು ಹಾಗೂ ಭಾರತೀಯ ಚಿತ್ರರಂಗದ ಸದಾ ಹಸಿರಾದ ಸವಿನೆನಪುಗಳವರೆಗೆ—’ಭಾವ ಲಹರಿ’ಯು ಈ ಎಲ್ಲಾ ಪ್ರಕಾರಗಳನ್ನು ಬದುಕಿನ ವಿವಿಧ ಭಾವಗಳ ಸುಂದರ ಹಂದರವಾಗಿ ಹೆಣೆಯುತ್ತದೆ. ಖ್ಯಾತ ವಿದುಷಿ ಶ್ರೀಮತಿ ಸಂಗೀತ ಕಟ್ಟಿ ಕುಲಕರ್ಣಿ ಅವರ ಸೂಕ್ಷ್ಮ ಕಲಾತ್ಮಕ ಮಾರ್ಗದರ್ಶನದಲ್ಲಿ ಮೂಡಿಬರುವ ಈ ಪ್ರಸ್ತುತಿಯು, ನಾದ, ನೆನಪು ಮತ್ತು ಲಯದ ಮೂಲಕ ಸಾಗಿ—ಕೇವಲ ಭಾವನೆಗಳನ್ನಷ್ಟೇ ಅಲ್ಲದೆ, ಪ್ರೇಕ್ಷಕರನ್ನು ಪರಮಾನಂದದ ದಿವ್ಯ ಅನುಭೂತಿಯ ಶಿಖರಕ್ಕೆ ಕೊಂಡೊಯ್ಯುತ್ತದೆ.
08:30 PM – 09:30 PM: A Fresh Take on Life, One Laugh at a Time | ಬದುಕಿನ ಬಣ್ಣಗಳಿಗೆ ನಗುವಿನ ಹೊಸ ಸ್ಪರ್ಶ
A Stand-up Special |ಒಂದು ಸ್ಟ್ಯಾಂಡ್-ಅಪ್ ಕಾಮೆಡಿ ಕಾರ್ಯಕ್ರಮ
Raghavendra Acharya | ರಾಘವೇಂದ್ರ ಆಚಾರ್ಯ
Everyday life is full of little absurdities, unexpected situations, and pressures that often go unnoticed until we pause to laugh at them. This stand-up comedy session brings these familiar experiences to the stage, exploring the contradictions of modern life, the relentless demands of hustle culture, and the amusing challenges of navigating everyday routines. With a distinctly Kannada and Karnataka flavour, the performance draws on local culture, language, and everyday experiences to find humour in the familiar. Through sharp observations and relatable anecdotes, Raghavendra Acharya invites audiences to view life’s complications with a lighter heart, promising an evening of laughter and shared experiences.
ನಮ್ಮ ದೈನಂದಿನ ಬದುಕು ಅನೇಕ ಸಣ್ಣಪುಟ್ಟ ವಿಚಿತ್ರಗಳು, ಅನಿರೀಕ್ಷಿತ ಸನ್ನಿವೇಶಗಳು ಮತ್ತು ಒತ್ತಡಗಳಿಂದ ಕೂಡಿದೆ. ಅವುಗಳನ್ನು ಕ್ಷಣಕಾಲ ನಿಂತು ನಗುವಿನ ದೃಷ್ಟಿಯಿಂದ ನೋಡಿದಾಗ, ಬದುಕಿನ ಹಲವು ಹಾಸ್ಯಾಸ್ಪದ ಮುಖಗಳು ತೆರೆದುಕೊಳ್ಳುತ್ತವೆ. ಈ ಸ್ಟ್ಯಾಂಡ್-ಅಪ್ ಕಾಮಿಡಿ ಕಾರ್ಯಕ್ರಮವು ಆಪ್ತವೆನಿಸುವ ಇಂತಹ ಅನುಭವಗಳನ್ನು ವೇದಿಕೆಗೆ ತರುತ್ತದೆ. ಆಧುನಿಕ ಬದುಕಿನ ವೈರುಧ್ಯಗಳು, ಸದಾ ಏನಾದರೂ ಸಾಧಿಸಬೇಕೆಂಬ ಧಾವಂತದ ಸಂಸ್ಕೃತಿ ಹಾಗೂ ದಿನನಿತ್ಯದ ಬದುಕಿನ ಸವಾಲುಗಳನ್ನು ಹಾಸ್ಯದ ಮೂಲಕ ತೆರೆದಿಡುತ್ತದೆ.
ಕನ್ನಡ ಮತ್ತು ಕರ್ನಾಟಕದ ಸೊಗಡನ್ನು ಒಳಗೊಂಡ ಈ ಪ್ರದರ್ಶನವು ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ನಮ್ಮ ಸುತ್ತಮುತ್ತಲಿನ ಬದುಕಿನ ಅನುಭವಗಳಲ್ಲಿನ ಹಾಸ್ಯವನ್ನು ಅನಾವರಣಗೊಳಿಸುತ್ತದೆ. ತಮ್ಮ ಸೂಕ್ಷ್ಮ ಅವಲೋಕನಗಳು ಮತ್ತು ನಮ್ಮ ಬದುಕಿಗೆ ಹತ್ತಿರವೆನಿಸುವ ಪ್ರಸಂಗಗಳ ಮೂಲಕ ರಾಘವೇಂದ್ರ ಆಚಾರ್ಯ ಅವರು ಜೀವನದ ಸಂಕೀರ್ಣತೆಗಳನ್ನು ಹಗುರವಾಗಿ ನೋಡುವಂತೆ ಪ್ರೇಕ್ಷಕರನ್ನು ಆಹ್ವಾನಿಸುತ್ತಾರೆ. ನಗು, ಚಿಂತನೆ ಮತ್ತು ನಮ್ಮೆಲ್ಲರ ಅನುಭವಗಳನ್ನು ಹಂಚಿಕೊಳ್ಳುವ ಸುಂದರ ಸಂಜೆಯೊಂದಕ್ಕೆ ಈ ಕಾರ್ಯಕ್ರಮ ವೇದಿಕೆಯಾಗಲಿದೆ.
Across the Weekend | 11:00 AM – 7:00 PM
Made in Karnataka | ಕರ್ನಾಟಕದ ತಯಾರಿಕೆಗಳು
A Showcase of Crafts, Makers and Traditions | ಕಲೆ, ಕಲಾವಿದರು ಮತ್ತು ಪರಂಪರೆಗಳ ಪ್ರದರ್ಶನ
Crafts Council of Karnataka | ಕರಕುಶಲ ಪರಿಷತ್ತು, ಕರ್ನಾಟಕ
Made in Karnataka celebrates the rich creative traditions, craftsmanship and cultural heritage of the state. Curated by the Karnataka Crafts Council, the showcase brings together the work of makers and craftspeople, offering visitors an opportunity to engage with the diverse forms of creativity that shape Karnataka’s cultural landscape. Through an exploration of craft, material and tradition, the showcase highlights the enduring value of handmade practices and the people who keep them alive. Visitors are invited to discover, appreciate and connect with the artistry, skill and imagination that continue to inform Karnataka’s vibrant craft traditions across generations.
The participating crafts and artisans are: Lacquerware – Varanam | North Karnataka Weaves – KaleNele | Bidriware – Amarnath | Ganjifa and Mysore Paintings – Babita | Eco-friendly Products – Jagadish | Navalgund Durries and Gajendragad Sarees – Kishore | Kinhal Craft – Kamalini | Terracotta – Ullaskar De | Banjara Embroidery – Sandur Kushala Kala Kendra.
ಈ ಕಾರ್ಯಕ್ರಮವು ನಮ್ಮ ರಾಜ್ಯದ ಶ್ರೀಮಂತ ಕಲೆಗಳ ಪರಂಪರೆಯನ್ನು ಮತ್ತು ಸಂಸ್ಕೃತಿಗಳನ್ನು ಸಂಭ್ರಮಿಸುತ್ತದೆ. ಇದನ್ನು ಕರ್ನಾಟಕ ಕರಕುಶಲ ಮಂಡಳಿ ಆಯೋಜಿಸಿದ್ದು, ಈ ಪ್ರದರ್ಶನವು ವಿವಿಧ ಕುಶಲಕರ್ಮಿಗಳ ಮತ್ತು ಕಲಾವಿದರ ಕಲಾಕ್ರತಿಗಳನ್ನು ಒಂದೆಡಗೆ ತರುತ್ತಿದೆ. ಈ ರೀತಿಯಲ್ಲಿ, ಕರ್ನಾಟಕದ ವೈವಿಧ್ಯಮಯ ಸಾಂಸ್ಕೃತಿಕ ಬದುಕನ್ನು ರೂಪಿಸುವ ಸೃಜನಶೀಲತೆಯನ್ನು ಪರಿಚಯಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ. ಕರಕುಶಲತೆ, ಕಲಾತ್ಮಕ ವಸ್ತುಗಳು ಮತ್ತು ಸಂಪ್ರದಾಯಗಳು – ಇವುಗಳನ್ನು ಅನ್ವೇಶಿಸುವ ಮೂಲಕ, ಇವುಗಳ ಮೌಲ್ಯವನ್ನು, ಮತ್ತು ಈ ಕಲೆಗಳನ್ನು ಇಂದಿಗೂ ಜೀವಂತವಾಗಿಟ್ಟಿರುವ ಕಲಾವಿದರನ್ನೂ ಈ ಪ್ರದರ್ಶನವು ನಮಗೆ ಪರಿಚಯಿಸುತ್ತದೆ.
ಹಲವಾರು ತಲೆಮಾರುಗಳಿಂಧ ಕರ್ನಾಟಕದಲ್ಲಿನ ಕಲಾವಿದರು ತಮ್ಮ ಕಲಾಕ್ರತಿಗಳನ್ನು ರಚಿಸಿರುವ ಬಗೆಯನ್ನು, ವಿಧಾನವನ್ನು ತಿಳಿದುಕೊಳ್ಳುವುದಕ್ಕೆ ಈ ಕಾರ್ಯಕ್ರಮ ಅವಕಾಶ ಮಾಡಿಕೊಡುತ್ತದೆ.
ಭಾಗವಹಿಸುವ ಕರಕುಶಲಗಳು ಮತ್ತು ಕುಶಲಕರ್ಮಿಗಳು: ಮೆರುಗಿನ ವಸ್ತುಗಳು – ವರಣಮ್ | ಉತ್ತರ ಕರ್ನಾಟಕದ ನೇಯ್ಗೆ – ಕಲೆನೆಲೆ | ಬಿದ್ರಿ ಕಲೆ – ಅಮರ್ನಾಥ್ | ಗಂಜೀಫ ಮತ್ತು ಮೈಸೂರಿನ ಚಿತ್ರಕಲೆಗಳು – ಬಬಿತಾ | ಪರಿಸರ ಸ್ನೇಹಿ ವಸ್ತುಗಳು – ಜಲದೀಶ್ | ನವಲಗುಂದು ನೆಲಹಾಸು ಮತ್ತು ಗಜೇಂದ್ರಗಡದ ಸೀರೆಗಳು – ಕಿಶೋರ್ | ಕಿನ್ಹಾಲ್ ಕಲೆ – ಕಮಲಿನಿ | ಮಣ್ಣಿನ ಕಲೆ – ಉಲ್ಲಾಸ್ಕರ್ ಡೇ | ಬಂಜಾರ ಕಸೂತಿ ಕಲೆ – ಸಂದೂರ್ ಕುಶಲ ಕಲಾ ಕೇಂದ್ರ
Ancient Games, Timeless Connections |ಪ್ರಾಚೀನ ಆಟಗಳು, ಕಾಲಾತೀತ ಬೆಸುಗೆಗಳು
A Foray into Games, Stories and Laughter |ಆಟ, ಕಥೆ ಮತ್ತು ನಗುವಿನ ಲೋಕದೆಡೆಗೆ ಒಂದು ಪಯಣ
Kavade | ಕವಡೆ
Step away from screens and rediscover the joy of authentic human connection through ancient board games.
Kavade’s curated games space blends history, strategy and play, showcasing timeless classics rooted in India and shared across cultures worldwide. From the origins of Snakes & Ladders and Ludo to the widespread tradition of Aliguli Mane – discover fascinating insights into how play has evolved over centuries.
More than just entertainment, it is a meaningful cultural intervention: an invitation to reclaim offline sociability, spark genuine camaraderie and bring people together on the ground in an increasingly digital world.
ಪರದೆಗಳಿಂದ ದೂರ ಸರಿದು, ಪ್ರಾಚೀನ ಒಳಾಂಗಣ ಆಟಗಳನ್ನಾಡುತ್ತಾ, ನೈಜ ಮಾನವೀಯ ಸಂಬಂಧವನ್ನು ಕಂಡುಕೊಳ್ಳಿ.
ಕವಡೆ ಸಂಸ್ಥೆ ಸಂಯೋಜಿಸಿರುವ ಈ ವಿಶೇಷ ಆಟಗಳು ಇತಿಹಾಸ, ತಂತ್ರ, ಆಟ – ಇವೆಲ್ಲವುಗಳನ್ನೂ ಒಂದುಗೂಡಿಸಿಕೊಂಡಿದೆ. ಭಾರತದಲ್ಲಿ ಜನಿಸಿ, ಜಗತ್ತಿನ ವಿವಿಧ ಭಾಗಗಳಲ್ಲಿಯೂ ಆಡುವಂತಹ ಆಟಗಳನ್ನು ಇಲ್ಲಿ ಪರಿಚಯಿಸಲಾಗುತ್ತದೆ. ಹಾವು ಏಣಿ, ಚೌಕಾಬಾರದಿಂದ ಹಿಡಿದು ಅಳಗುಳಿಮಣೆಯವರೆಗೂ ಹಲವಾರು ಪ್ರದೇಶಗಳಲ್ಲಿ ಶತಮಾನಗಳಿಂದ ಜನಪ್ರಿಯವಾಗಿರುವ ಈ ಆಟಗಳು ಹೇಗೆ ವಿಕಸನಗೊಳ್ಳುತ್ತಾ ಬಂದಿದೆ ಎಂಬುದನ್ನೂ ಇಲ್ಲಿ ತಿಳಿದುಕೊಳ್ಳಬಹುದು.
ಈ ಸಮಯ ಕೇವಲ ಮನರಂಜನೆಗಷ್ಟೇ ಸೀಮಿತವಲ್ಲ, ನಮ್ಮ ಸಾಂಸ್ಕೃತಿಕ ಬದುಕಿಗೆ ಹೊಸ ಅರ್ಥವನ್ನು ತರುವ ಪ್ರಯತ್ನವೂ ಹೌದು, ಹೆಚ್ಚಾಗುತ್ತಿರುವ ಡಿಜಿಟಲ್ ಜೀವನದಿಂದ ಹೊರಬಂದು ಜನರೊಂದಿಗೆ ಬೆರೆಯುವ ಯತ್ನವೂ ಹೌದು.
Madanika and Makara Torana | ಮದನಿಕಾ ಮತ್ತು ಮಕರ ತೋರಣ
A Fine-Art Exhibition of Handmade Silver Gelatin Photographs | ಹಸ್ತನಿರ್ಮಿತ ಸಿಲ್ವರ್ ಜೆಲಾಟಿನ್ ಛಾಯಾಚಿತ್ರಗಳ ಲಲಿತಕಲಾ ಪ್ರದರ್ಶನ
Karthik K. Samprathi | ಕಾರ್ತಿಕ್ ಕೆ. ಸಂಪ್ರತಿ
The exhibition features two main sections. Madanika comprises a coherent series of 12 photographs capturing the timeless gesture, rhythm, and form of Beluru’s stone-sculpted dancers under changing light and shadow. Makara Torana, the hero photograph, expands this focus to an elaborate sculptural threshold where myth, ornament, and architecture converge.
Both sections include a 2-to-3-minute audio note exploring the project’s background, artistic choices like black-and-white silver gelatin printing, and the visual relationships between the subjects. Accessible via labeled QR codes next to each section, these audio guides also include written transcripts for accessibility.
ಈ ಪ್ರದರ್ಶನವು ಎರಡು ಮುಖ್ಯ ವಿಭಾಗಗಳನ್ನು ಒಳಗೊಂಡಿದೆ. ಮದನಿಕಾ ವಿಭಾಗವು 12 ಛಾಯಾಚಿತ್ರಗಳ ಸರಣಿಯಾಗಿದ್ದು, ಬೆಳಕು ಮತ್ತು ನೆರಳಿನ ಆಟದಲ್ಲಿ ಬೇಲೂರಿನ ಶಿಲಾಬಾಲಿಕೆಯರ ಸದಾಕಾಲದ ಹಾವಭಾವ, ಲಯ ಹಾಗೂ ರೂಪವನ್ನು ಸೆರೆಹಿಡಿದಿದೆ. ಪ್ರಮುಖ ಚಿತ್ರವಾದ ಮಕರ ತೋರಣವು, ಪುರಾಣ, ಅಲಂಕಾರ ಮತ್ತು ವಾಸ್ತುಶಿಲ್ಪಗಳು ಸಂಗಮಿಸುವ ಭವ್ಯವಾದ ಶಿಲ್ಪಕಲೆಯ ಹೊಸ್ತಿಲನ್ನು ಅನಾವರಣಗೊಳಿಸುತ್ತದೆ.
ಎರಡೂ ವಿಭಾಗಗಳು 2 ರಿಂದ 3 ನಿಮಿಷಗಳ ಆಡಿಯೋ ಟಿಪ್ಪಣಿಯನ್ನು ಹೊಂದಿದ್ದು, ಯೋಜನೆಯ ಹಿನ್ನೆಲೆ, ಕಪ್ಪು-ಬಿಳುಪು ಸಿಲ್ವರ್ ಜೆಲಾಟಿನ್ ಪ್ರಿಂಟಿಂಗ್ನಂತಹ ಕಲಾತ್ಮಕ ಆಯ್ಕೆಗಳು ಮತ್ತು ಕೃತಿಗಳ ನಡುವಿನ ದೃಶ್ಯ ಸಂಬಂಧವನ್ನು ವಿವರಿಸುತ್ತವೆ. ಪ್ರತಿ ವಿಭಾಗದ ಪಕ್ಕದಲ್ಲಿರುವ ಕ್ಯೂಆರ್ (QR) ಕೋಡ್ಗಳ ಮೂಲಕ ಈ ಆಡಿಯೋಗಳನ್ನು ಕೇಳಬಹುದು. ಜೊತೆಗೆ, ಸುಲಭ ಲಭ್ಯತೆಗಾಗಿ ಇದರ ಲಿಖಿತ ಪಠ್ಯವನ್ನೂ (Transcript) ನೀಡಲಾಗಿದೆ.
Karnataka Weaves | ಕರ್ನಾಟಕದ ನೇಯ್ಗೆ
Threads That Hold a Heritage | ಪರಂಪರೆಯನ್ನು ಎತ್ತಿಹಿಡಿಯುವ ದಾರದೆಳೆಗಳು
Vimor Handloom Foundation |ವಿಮೋರ್ ಹ್ಯಾಂಡ್ಲೂಮ್ ಫೌಂಡೇಶನ್
Walkthrough with Curator at 04:30 PM (Both Days)
Discover the rich diversity of Karnataka’s weaving traditions through an exhibition of sarees that celebrate the region’s distinctive designs, techniques and textile heritage. Featuring pieces from Molakalmuru, Ilkal, Mysore, Bangalore, Doddaballapur, Gajendragad and other weaving centres, the exhibition brings together a range of patterns, colours and craftsmanship. From intricate ikat weaving and delicate checks to Kasuti embroidery, traditional motifs and distinctive pallu designs, each saree offers a glimpse into the histories and evolving practices of Karnataka’s textile traditions. Together, these pieces reveal a living heritage shaped by skilled artisans, regional identities and efforts to preserve and reinterpret traditional weaves.
ಕರ್ನಾಟಕದ ವಿಶಿಷ್ಟ ನೇಯ್ಗೆ ಶೈಲಿ, ವಿನ್ಯಾಸಗಳು ಮತ್ತು ಜವಳಿ ಪರಂಪರೆಯನ್ನು ಪರಿಚಯಿಸುವ ಈ ಸೀರೆಗಳ ಪ್ರದರ್ಶನವು, ನಮ್ಮ ನಾಡಿನ ನೇಯ್ಗೆ ಕಲೆಯ ಶ್ರೀಮಂತಿಕೆಯನ್ನು ನಮ್ಮ ಮುಂದೆ ತೆರೆದಿಡುತ್ತದೆ. ಮೊಳಕಾಲ್ಮೂರು, ಇಳಕಲ್, ಮೈಸೂರು, ಬೆಂಗಳೂರು, ದೊಡ್ಡಬಳ್ಳಾಪುರ, ಗಜೇಂದ್ರಗಡ ಸೇರಿದಂತೆ ಕರ್ನಾಟಕದ ವಿವಿಧ ನೇಯ್ಗೆ ಕೇಂದ್ರಗಳ ಸೀರೆಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರತಿ ಪ್ರದೇಶದ ವೈಶಿಷ್ಟ್ಯವನ್ನು ಬಿಂಬಿಸುವ ಬಣ್ಣಗಳು, ವಿನ್ಯಾಸಗಳು ಮತ್ತು ನೇಕಾರರ ಕೈಚಳಕ ಈ ಪ್ರದರ್ಶನಕ್ಕೆ ಮೆರುಗು ನೀಡುತ್ತದೆ. ಇಕ್ಕಟ್ ನೇಯ್ಗೆಯ ಸೂಕ್ಷ್ಮ ವಿನ್ಯಾಸಗಳು, ನಾಜೂಕಾದ ಚೌಕಗಳು, ಕಸೂತಿ ಕಲೆ, ಸಾಂಪ್ರದಾಯಿಕ ಚಿತ್ತಾರಗಳು, ವಿಶಿಷ್ಟ ಸೆರಗಿನ ವಿನ್ಯಾಸಗಳು – ಹೀಗೆ ಪ್ರತಿಯೊಂದು ಸೀರೆಯೂ ತನ್ನದೇ ಆದ ಕಥೆಯನ್ನು ಹೇಳುತ್ತದೆ. ಇವುಗಳ ಮೂಲಕ ಕರ್ನಾಟಕದ ಜವಳಿ ಪರಂಪರೆಯ ಇತಿಹಾಸ, ಪ್ರಾದೇಶಿಕ ವೈಶಿಷ್ಟ್ಯಗಳು ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿರುವ ನೇಯ್ಗೆ ಸಂಪ್ರದಾಯಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳಬಹುದು.ಒಟ್ಟಿನಲ್ಲಿ, ಈ ಸೀರೆಗಳು ನಮ್ಮ ನಾಡಿನ ಜೀವಂತ ಪರಂಪರೆಯ ಪ್ರತಿಬಿಂಬಗಳಾಗಿವೆ. ತಲೆಮಾರುಗಳಿಂದ ಬಂದ ನೇಯ್ಗೆಯ ಸಂಪತ್ತು, ನುರಿತ ನೇಕಾರರ ಕೈಚಳಕ ಮತ್ತು ಆಯಾ ಪ್ರದೇಶಗಳ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ತಮ್ಮೊಳಗೆ ಉಳಿಸಿಕೊಂಡು, ಸಾಂಪ್ರದಾಯಿಕ ನೇಯ್ಗೆಯನ್ನು ಸಂರಕ್ಷಿಸುವುದರ ಜೊತೆಗೆ ಅದನ್ನು ಇಂದಿನ ಕಾಲಕ್ಕೂ ಹೊಂದುವಂತೆ ಮುಂದುವರಿಸುವ ಪ್ರಯತ್ನವನ್ನು ನಾವಿಲ್ಲಿ ಕಾಣಬಹುದು.
The Festival Trail | ಹಬ್ಬದ ಸಂಭ್ರಮ ಪಯಣ
A Treasure Hunt through the Building | ರಹಸ್ಯ ನಿಧಿಯ ಹುಡುಕಾಟದ ಆಟ
Gather the whole family for a festive adventure at BIC!
Solve riddles together, uncover fascinating stories, and race from clue to clue as you celebrate this festive time. With surprises around every corner, it’s a chance for little explorers, curious grown-ups, and everyone in between to celebrate and discover.
BICನಲ್ಲಿ ಹಬ್ಬದ ಸಂಭ್ರಮದ ಸಾಹಸಯಾತ್ರೆಗೆ ಇಡೀ ಕುಟುಂಬದೊಂದಿಗೆ ಬನ್ನಿ!
ಒಟ್ಟಾಗಿ ಒಗಟುಗಳನ್ನು ಬಿಡಿಸಿ, ಕುತೂಹಲಕಾರಿ ಕಥೆಗಳನ್ನು ಅನ್ವೇಷಿಸಿ, ಒಂದೊಂದೇ ಸುಳಿವನ್ನು ಬೆನ್ನಟ್ಟಿ ಮುಂದಿನ ಸುಳಿವಿನತ್ತ ಓಡುತ್ತಾ ಹಬ್ಬದ ಸಂಭ್ರಮವನ್ನು ಸವಿಯಿರಿ. ಪ್ರತಿ ತಿರುವಿನಲ್ಲೂ ಅಚ್ಚರಿಗಳು ಕಾದಿರುವ ಈ ಪಯಣ, ಪುಟಾಣಿ ಅನ್ವೇಷಕರಿಗೆ, ಕುತೂಹಲದ ಹಿರಿಯರಿಗೆ ಮತ್ತು ಎಲ್ಲ ವಯೋಮಾನದವರಿಗೂ ಸಂಭ್ರಮಿಸುತ್ತಾ ಹೊಸತನ್ನು ಕಂಡುಕೊಳ್ಳುವ ಸುಂದರ ಅವಕಾಶ!
Find the schedule for Day 2 here!
Presented by:

Artists
Anupama K. Benachinamaradi | ಅನುಪಮ ಕೆ. ಬೆಣಚಿನಮರಡಿ
Anupama K. Benachinamaradi hails from Benivada village in Belagavi district. A postgraduate in engineering, she is also a creative writer and columnist. She has authored 11 children’s books and is the founder of Awwa Pustaka, a publishing house dedicated to children’s books in Kannada and English.She is also the winner of ‘Deccan Herald Changemaker 2026’ by Deccan Herald media and winner of ‘Women to Watch 2026’ by PrintWeek media.
ಅನುಪಮ ಕೆ ಬೆಣಚಿನಮರಡಿಯವರು ಬೆಳಗಾವಿ ತಾಲೂಕಿನ ಬೆನಿವಾಡ ಎಂಬ ಗ್ರಾಮಕ್ಕೆ ಸೇ ರಿದವರು. ಇವರು ಇಂಜಿನಿಯರಿಂಗ್ನಲ್ಲಿ ಸ್ನಾತ್ತಕೋ ತ್ತರ ಪದವಿ ಪಡೆದಿದ್ದು, ಸೃಜನಶೀ ಲ ಲೇ ಖಕಿಯಾಗಿ, ಹಾಗೂ ಅಂಕಣಗಾರ್ತಿ ಯಾಗಿ ಕೆಲಸ ನಿರ್ವ ಹಿಸಿದ್ದಾರೆ. ಸುಮಾರು ೧೧ ಮಕ್ಕಳ ಪುಸ್ತಕಗಳ ಲೇ ಖಕಿಯಾದ ಇವರು, ʼಅವ್ವ ಪುಸ್ತಕʼ ಎಂಬ ಪ್ರಕಾಶನ ಸಂಸ್ಥೆಯ ಸಂಸ್ಥಾಪಕಿ. ಈ ಸಂಸ್ಥೆಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತದೆ. ಅಷ್ಟೇ ಅಲ್ಲದೆ, ಇವರು ಡೆಕ್ಕನ್ ಹೆರಾಲ್ಡಿನ “ಡೆಕ್ಕನ್ ಹೆರಾಲ್ಡ್ ಚೇಂಜ್ ಮೇ ಕರ್ ೨೦೨೬” ಮತ್ತು ಪ್ರಿಂಟ್ ವೀ ಕ್ ಮೀ ಡಿಯಾದ “ವುಮೆನ್ ಟು ವಾಚ್ ೨೦೨೬ʼ – ಈ ಎರಡೂ ಪ್ರಶಸ್ತಿಗಳ ವಿಜೇ ತೆಯೂ ಹೌದು.
Ustad Faiyaz Khan | ಉಸ್ತಾದ್ ಫಯಾಜ್ ಖಾನ್
Ustad Faiyaz Khan Born into the Kirana Gharana, Ustad Faiyaz Khan is an elite vocalist and sarangi player. He won the Karnataka Rajotsava, Kempegowda, and Aryabhata awards, alongside the Nirman Purandara Sangeetha Ratna and National AIR awards. Today, he runs a traditional Gurukul music academy in Bengaluru to preserve classical traditions.
ಉಸ್ತಾದ್ ಫಯಾಜ್ ಖಾನ್ ಕಿರಾನಾ ಘರಾನಾದಲ್ಲಿ ಜನಿಸಿದ ಉಸ್ತಾದ್ ಫಯಾಜ್ ಖಾನ್ ಅವರು ಅತ್ಯುನ್ನತ ಮಟ್ಟದ ಗಾಯಕರು ಮತ್ತು ಸಾರಂಗಿ ವಾದಕರಾಗಿದ್ದಾರೆ. ಇವರು ಕರ್ನಾಟಕ ರಾಜ್ಯೋತ್ಸವ, ಕೆಂಪೇಗೌಡ ಮತ್ತು ಆರ್ಯಭಟ ಪ್ರಶಸ್ತಿಗಳೊಂದಿಗೆ, ನಿರ್ಮಾಣ್ ಪುರಂದರ ಸಂಗೀತ ರತ್ನ ಹಾಗೂ ರಾಷ್ಟ್ರೀಯ ಎ.ಐ.ಆರ್ (AIR) ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರಸ್ತುತ, ಇವರು ಶಾಸ್ತ್ರೀಯ ಸಂಪ್ರದಾಯಗಳನ್ನು ಉಳಿಸಲು ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಗುರುಕುಲ ಸಂಗೀತ ಅಕಾಡೆಮಿಯನ್ನು ನಡೆಸುತ್ತಿದ್ದಾರೆ.
Sarfaraz khan | ಸರ್ಫರಾಜ್ ಖಾನ್
Sarfaraaz Khan is a 9th-generation Kirana Gharana musician and an A-grade AIR Delhi Sarangi player. Trained by his father, Ustad Faiyaz Khan, and legend Pt. Ramnarayan, he is South India’s sole Sarangi artist performing classical, semi-classical, and movie scores across India and abroad.
ಸರ್ಫರಾಜ್ ಖಾನ್ ಸರ್ಫರಾಜ್ ಖಾನ್ ಅವರು ತಮ್ಮ ಕುಟುಂಬದ 9ನೇ ತಲೆಮಾರಿನ ಕಿರಾನಾ ಘರಾನಾ ಸಂಗೀತಗಾರರಾಗಿದ್ದು, ಎ.ಐ.ಆರ್ ದೆಹಲಿಯ ‘ಎ’ ಗ್ರೇಡ್ ಮಾನ್ಯತೆ ಪಡೆದ ಸಾರಂಗಿ ವಾದಕರಾಗಿದ್ದಾರೆ. ತಮ್ಮ ತಂದೆ ಉಸ್ತಾದ್ ಫಯಾಜ್ ಖಾನ್ ಮತ್ತು ಖ್ಯಾತ ದಂತಕಥೆ ಪಂ. ರಾಮನಾರಾಯಣ್ ಅವರ ಬಳಿ ತರಬೇತಿ ಪಡೆದಿರುವ ಇವರು, ಭಾರತ ಹಾಗೂ ವಿದೇಶಗಳಲ್ಲಿ ಶಾಸ್ತ್ರೀಯ, ಉಪ-ಶಾಸ್ತ್ರೀಯ (semi-classical) ಮತ್ತು ಚಲನಚಿತ್ರಗಳ ಹಿನ್ನೆಲೆ ಸಂಗೀತವನ್ನು ನುಡಿಸುವ ದಕ್ಷಿಣ ಭಾರತದ ಏಕೈಕ ಸಾರಂಗಿ ಕಲಾವಿದರಾಗಿದ್ದಾರೆ.
Vignesh Kamath | ವಿಘ್ನೇಶ್ ಕಾಮತ್
Vighnesh Kamath is a Bengaluru-based tabla artist, educator, and Polymer Science Engineer. An AIR B-High graded artist with an MA in Tabla, he trained under Dr. Aneesh Pradhan. He has accompanied top Hindustani maestros and founded Kaladhara Music and Arts Academy.
ವಿಘ್ನೇಶ್ ಕಾಮತ್ ಬೆಂಗಳೂರು ಮೂಲದ ವಿಘ್ನೇಶ್ ಕಾಮತ್ ಅವರು ತಬಲಾ ಕಲಾವಿದರು, ಶಿಕ್ಷಕರು ಮತ್ತು ಪಾಲಿಮರ್ ಸೈನ್ಸ್ ಇಂಜಿನಿಯರ್ ಆಗಿದ್ದಾರೆ. ಎ.ಐ.ಆರ್ನ ‘ಬಿ-ಹೈ’ (B-High) ಗ್ರೇಡ್ ಕಲಾವಿದರಾದ ಇವರು ತಬಲಾದಲ್ಲಿ ಎಂ.ಎ ಪದವಿ ಪಡೆದಿದ್ದು, ಡಾ. ಅನೀಶ್ ಪ್ರಧಾನ್ ಅವರ ಬಳಿ ತರಬೇತಿ ಪಡೆದಿದ್ದಾರೆ. ಇವರು ಪ್ರಮುಖ ಹಿಂದುಸ್ತಾನಿ ದಿಗ್ಗಜರಿಗೆ ತಬಲಾ ಸಾಥ್ ನೀಡಿದ್ದು, ‘ಕಲಾಧಾರ ಮ್ಯೂಸಿಕ್ ಅಂಡ್ ಆರ್ಟ್ಸ್ ಅಕಾಡೆಮಿ’ಯನ್ನು ಸ್ಥಾಪಿಸಿದ್ದಾರೆ.
Giridhar Khasnis | ಗಿರಿಧರ್ ಖಾಸನೀಸ್
Giridhar Khasnis is a senior Bengaluru-based artist, writer, photographer, columnist, and curator of several exhibitions. More than 1000 of his essays on art, literature and world cinema have been published in the Deccan Herald and The Hindu. He served on the jury of the Toto-Tasveer Awards for Photography in 2013 and 2014. In 2017, the Incheon Art Platform invited him to take part in the International Curators’ Residency in South Korea. Navakarnataka Publication has released his collections of Kannada microfiction: Ellindalo Haari Bandu (2024) and Idee Raatri Surida Male (2025). Kathe Kitaki is the column that he writes regularly for Vijaya Karnataka (Sunday Supplement). One of his collages was featured in the International Exhibition of the recently concluded Bucharest miniCollage Biennale (October 2026).
ಗಿರಿಧರ್ ಖಾಸ್ನಿಸ್, ಇವರು ಬೆಂಗಳೂರಿನ ಹಿರಿಯ ಕಲಾವಿದರು, ಲೇ ಖಕರು, ಛಾಯಾಗ್ರಾಹಕರು, ಅಂಕಣಗಾರರು ಹಾಗೂ ಕಲಾ ಸಂಯೋ ಜಕರು. ಇವರು ಬರೆದಿರುವ ಸುಮಾರು ೧೦೦೦ ಪ್ರಬಂಧಗಳು ಡೆಕ್ಕನ್ ಹೆರಾಲ್ಡ್ ಮತ್ತು ದಿ ಹಿಂದು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ೨೦೧೩ ಮತ್ತು ೨೦೧೪ರಲ್ಲಿ ನಡೆದ ಟೋ ಟೋ ತಸ್ವೀರ್ ಪ್ರಶಸ್ತಿಯ ಸಮಾರಂಭದಲ್ಲಿ ಇವರು ಜೂರಿಯಾಗಿ ಕಾರ್ಯ ನಿರ್ವ ಹಿಸಿದ್ದಾರೆ. ೨೦೧೭ರಲ್ಲಿ ದಕ್ಷಿಣ ಕೊ ರಿಯಾದಲ್ಲಿ ನಡೆದ ಇಂಟರ್ನ್ಯಾ ಷ್ನಲ್ ಕ್ಯು ರೇ ಟರ್ಸ್ ರೆಸಿಡೆನ್ಸಿ ಕಾರ್ಯ ಕ್ರಮದಲ್ಲಿ ಭಾಗವಹಿಸಲು ಇವರನ್ನು ಇಂಚೆನ್ ಆರ್ಟ್ ಪ್ಲ್ಯಾ ಟ್ಫಾರ್ಮ್ ಅವರು ಆಹ್ವಾನಿಸಿದ್ದರು. ಇವರ ಸಣ್ಣಕಥೆಗಳಾದಂತಹ “ಎಲ್ಲಿಂದಲೋ ಹಾರಿ ಬಂದು” (೨೦೨೪) ಮತ್ತು “ಇಡೀ ರಾತ್ರಿ ಸುರಿದ ಮಳೆ”(೨೦೨೫)ಯನ್ನು ನವಕರ್ನಾ ಟಕ ಪ್ರಕಾಶನವು ಪ್ರಕಟಿಸಿದೆ. ವಿಜಯ ಕರ್ನಾ ಟಕದ ಭಾನುವಾರದ ಪುರವಣಿಯಲ್ಲಿ “ಕಥೆ ಕಿಟಕಿ” ಎಂಬ ಅಂಕಣವನ್ನು ಇವರು ನಿರಂತರವಾಗಿ ಬರೆಯುತ್ತಾ ಬಂದಿರುವರು. ಇತ್ತೀಚೆಗೆ ನಡೆದ ಬುಖರೆಸ್ಟ್ ಮಿನಿ ಕೊ ಲ್ಯಾ ಜ್ ಬಿನಯಲ್ (೨೦೨೬) ಎಂಬ ಅಂತರಾಷ್ಟ್ರೀಯ ಪ್ರದರ್ಶ ನದಲ್ಲಿ ಇವರ ಕೊ ಲ್ಯಾ ಜೊಂದನ್ನು ಪ್ರದರ್ಶಿ ಸಲಾಗಿತ್ತು.
Ullaskar De | ಉಲ್ಲಾಸ್ಕರ್ ಡೇ
Ullaskar De is a crafts and ceramics specialist who served as Technical Supervisor with the Office of the Development Commissioner (Handicrafts), Ministry of Textiles, Government of India, from 1974 to 2012. He has led and contributed to numerous pottery and terracotta workshops across India, providing technical guidance on traditional craft practices. His recognitions include the Karnataka Shilpa Kala Academy Award (1989) and Lifetime Achievement Award (2020).
ಉಲ್ಲಾಸ್ಕರ್ ಡೇ ಅವರು ಕರಕುಶಲ ಮತ್ತು ಸೆರಾಮಿಕ್ಸ್ (ಮೃತ್ಶಿಲ್ಪ) ಕ್ಷೇತ್ರದಲ್ಲಿ ಪರಿಣಿತರಾಗಿದ್ದು, 1974 ರಿಂದ 2012 ರವರೆಗೆ ಭಾರತ ಸರ್ಕಾರದ ಜವಳಿ ಸಚಿವಾಲಯದ ‘ಅಭಿವೃದ್ಧಿ ಆಯುಕ್ತರ (ಕರಕುಶಲ ವಸ್ತುಗಳು) ಕಚೇರಿ’ಯಲ್ಲಿ ತಾಂತ್ರಿಕ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಭಾರತದಾದ್ಯಂತ ಮಡಿಕೆ ತಯಾರಿಕೆ ಮತ್ತು ಟೆರಾಕೋಟಾ (ಮಣ್ಣಿನ ಕಲೆ) ಕುರಿತಾದ ಅನೇಕ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ ಹಾಗೂ ಸಾಂಪ್ರದಾಯಿಕ ಕರಕುಶಲ ಪದ್ಧತಿಗಳ ಕುರಿತು ತಾಂತ್ರಿಕ ಮಾರ್ಗದರ್ಶನ ನೀಡಿದ್ದಾರೆ. ಇವರಿಗೆ ‘ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ’ (1989) ಮತ್ತು ‘ಜೀವಮಾನ ಸಾಧನೆ ಪ್ರಶಸ್ತಿ’ (2020) ಸೇರಿದಂತೆ ಹಲವು ಗೌರವಗಳು ಸಂದಿವೆ.
Rudrakshi Bai | ರುದ್ರಾಕ್ಷಿ ಬಾಯಿ
Smt. Rudrakshi Bai is a renowned folk artist with over three decades of experience in Lambani dance and other traditional art forms. A recipient of the Karnataka Rajyotsava Award and the Banjara Ratna Award, she is dedicated to preserving and sharing India’s rich cultural heritage.
The workshop is curated by Tvarita Arts Collective India.
ಶ್ರೀಮತಿ ರುದ್ರಾಕ್ಷಿ ಬಾಯಿ, ಇವರು ಖ್ಯಾತ ಜನಪದ ಕಲಾವಿದೆಯಾಗಿದ್ದು, ಲಂಬಾಣಿ ಮತ್ತು ಇತರೆ ಜನಪದ ಕಲೆಗಳ್ಲಲಿ ಸುಮಾರು ಮೂರು ದಶಕಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿರುವವರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ಬಂಜಾರ ರತ್ನ ಪ್ರಶಸ್ತಿ ಪುರಸ್ಕ್ರತರಾದ ಇವರು, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ, ಅದನ್ನು ಇತರರೊಂದಿಗೆ ಹಂಚಿಕೊಳ್ಳುವುದರಲ್ಲಿ ಸಮರ್ಪಿತರಾಗಿದ್ದರೆ.
ಈ ಕಾರ್ಯಗಾರವನ್ನು ಆಯೋಜಿಸಿರುವವರು – ತ್ವರಿತ ಆರ್ಟ್ಸ್ ಕಲೆಕ್ಟಿವ್ ಇಂಡಿಯಾ.
Thejaswi Udupa | ತೇಜಸ್ವಿ ಉಡುಪ
Thejaswi Udupa is a technologist and writer, who has conducted quizzes across India and outside for over two decades now. He has had bylines in The Hindu and Deccan Herald, and writes on history and culture and its intersection with technology. He is also closely associated with the Karnataka Quiz Association, the pre-eminent quizzing body in the state.
ತಂತ್ರಜ್ಞ ಮತ್ತು ಲೇಖಕರಾದ ತೇಜಸ್ವಿ ಉಡುಪ, ಇಪ್ಪತ್ತು ವರ್ಷಕ್ಕಿಂತ ಹೆಚ್ಚು ಕಾಲ ಭಾರತದಲ್ಲಿಯೂ ವಿದೇಶದಲ್ಲಿಯೂ ಕ್ವಿಜ್ಗಳನ್ನು ನಡೆಸಿದ್ದಾರೆ. ದಿ ಹಿಂದೂ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿದ್ದು, ಇತಿಹಾಸ, ಸಂಸ್ಕೃತಿ ಮತ್ತು ತಂತ್ರಜ್ಞಾನಗಳನ್ನು ಸಂಯೋಜಿಸುವ ಬಗ್ಗೆ ಬರೆಯುತ್ತಾರೆ. ಅವರು ಕರ್ನಾಟಕದ ಪ್ರಮುಖ ಕ್ವಿಜಿಂಗ್ ಸಂಸ್ಥೆಯಾದ ‘ಕರ್ನಾಟಕ ಕ್ವಿಜ್ ಅಸೋಸಿಯೇಷನ್’ ಜೊತೆ ಆಳವಾಗಿ ಸಂಪರ್ಕ ಹೊಂದಿದ್ದಾರೆ.
Vishwanath Sreekantaiah | ವಿಶ್ವನಾಥ್ ಶ್ರೀಕಂಠಯ್ಯ
Vishwanath Srikantaiah’s work focuses on innovative water management solutions, blending cultural understanding with engineering expertise. His approach involves diverse water source utilization, groundwater replenishment, and collaboration with traditional well diggers, leading to significant advances in urban and rural water productivity. His efforts have resulted in the creation of new shallow wells and a model replicated across 500 cities. Vishwanath also plays a key role in national initiatives addressing water and sanitation, emphasizing sustainable practices and community empowerment. His work marks a critical shift towards sustainable water management in India.
ವಿವಿಧ ನಗರ ಮತ್ತು ಗ್ರಾಮೀಣ ಪರಿಸರಗಳ ಪರಿಚಯ ಹಾಗೂ ಸಕ್ರಿಯ ಮಾರ್ಗದರ್ಶನದಿಂದ ಪ್ರೇರಿತರಾದ ವಿಶ್ವನಾಥ್ ಶ್ರೀಕಂಠಯ್ಯ ಅವರು, ಆರಂಭಿಕ ಹಂತದಲ್ಲೇ ಜಲವಿಜ್ಞಾನದ (hydrology) ಕಡೆಗೆ ತೀವ್ರ ಆಸಕ್ತಿ ಬೆಳೆಸಿಕೊಂಡರು. ಸಾಮಾಜಿಕ ವಲಯದಲ್ಲಿ ಇವರ ಬುನಾದಿಯ ಪಯಣವು ‘ಅರ್ಘ್ಯಮ್’ ಸಂಸ್ಥೆಯ ನಿರ್ದೇಶಕರಾಗಿ ಹದಿಮೂರು ವರ್ಷಗಳ ಕಾಲ ಮುಂದುವರಿದು, ಅಲ್ಲಿನ ವಿಭಜಿತ ಜಲ ನಿರ್ವಹಣಾ ಸವಾಲುಗಳನ್ನು ಎದುರಿಸಿತು. ನಂತರ, ‘ಬಯೋಮ್ ಟ್ರಸ್ಟ್’ನ ಸಂಸ್ಥಾಪಕ ಸದಸ್ಯರಾಗಿ, ಇವರು ಕರ್ನಾಟಕದಾದ್ಯಂತ ಸಮುದಾಯ ಚಾಲಿತ ಸಮಗ್ರ ಮಳೆನೀರು ಕೊಯ್ಲು ಪದ್ಧತಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ.
Arvind Lakshmisha | ಅರವಿಂದ್ ಲಕ್ಷ್ಮೀಶ
Arvind Lakshmisha is an Assistant Professor at Azim Premji University’s School of Climate Change and Sustainability. An interdisciplinary researcher with a PhD from the University of Kassel, Germany, his expertise spans economics, public policy, and climate science, focusing heavily on water governance and rural-urban dynamics in Bengaluru.
ಅರವಿಂದ್ ಲಕ್ಷ್ಮೀಶ ಅವರು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಹವಾಮಾನ ಬದಲಾವಣೆ ಮತ್ತು ಸುಸ್ಥಿರತೆ ಅಧ್ಯಯನ ಶಾಲೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ಥಶಾಸ್ತ್ರ, ಸಾರ್ವಜನಿಕ ನೀತಿ ಮತ್ತು ಹವಾಮಾನ ವಿಜ್ಞಾನ ಅವರ ಪರಿಣತಿಯ ಕ್ಷೇತ್ರಗಳಾಗಿವೆ. ವಿಶೇಷವಾಗಿ, ಜಲ ಆಡಳಿತ ಹಾಗೂ ಬೆಂಗಳೂರಿನ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಸಂಬಂಧಿತ ಆಯಾಮಗಳ ಕುರಿತು ಅವರು ಹೆಚ್ಚಿನ ಗಮನ ಹರಿಸಿದ್ದಾರೆ.
H. S. Sudhira | ಎಚ್. ಎಸ್. ಸುಧೀರ
H S Sudhira, PhD from IISc Bengaluru, is an urban researcher and founder of Gubbi Labs, focusing on sustainable ecosystems, liveable settlements, spatial planning and environmental sustainability. He teaches, mentors, promotes open-source mapping, and volunteers with the India Literacy Project.
ಡಾ. ಎಚ್. ಎಸ್. ಸುಧೀರ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ (IISc) ಪಿಎಚ್.ಡಿ. ಪದವಿ ಪಡೆದ ನಗರ ಅಧ್ಯಯನ ತಜ್ಞರು ಹಾಗೂ ಗುಬ್ಬಿ ಲ್ಯಾಬ್ಸ್ನ ಸ್ಥಾಪಕರು. ಸುಸ್ಥಿರ ಪರಿಸರ ವ್ಯವಸ್ಥೆಗಳು, ವಾಸಯೋಗ್ಯ ನಗರಗಳು, ಪ್ರಾದೇಶಿಕ ಯೋಜನೆ ಮತ್ತು ಪರಿಸರ ಸುಸ್ಥಿರತೆ ಇವರ ಸಂಶೋಧನೆಯ ಪ್ರಮುಖ ಕ್ಷೇತ್ರಗಳು. ಬೋಧನೆ, ಮಾರ್ಗದರ್ಶನ ಹಾಗೂ ಓಪನ್ ಸೋರ್ಸ್ ಮ್ಯಾಪಿಂಗ್ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.
Rangaputhali Puppeteers | ರಂಗಪುತ್ಥಳಿ ಬೊಂಬೆಯಾಟದವರು
Rangaputhali Puppeteers are among Karnataka’s oldest traditional rod-and-string puppet troupes, practising the Mudrika style of temple-based puppetry. Their wooden puppets, measuring 2.5–3 feet and weighing approximately 10–12 kg, require considerable skill to manipulate. Trained by their father, Sri M. R. Ranganatha Rao, master puppeteer of India, brothers M. R. Ranganatha Rao and M. R. Vijay have continued this art since 1978. They train young artists and experiment with mythological, historical and socially relevant performances to preserve this rare tradition for future generations.
ರಂಗಪುತಲಿ ಬೊಂಬೆಯಾಟ ತಂಡವು, ಕರ್ನಾಟಕದ ಸಾಂಸ್ಕೃತಿಕ ಕಲೆಯಾದ ಸೂತ್ರದ ಗೊಂಬೆಯಾಟವನ್ನು ಅಭ್ಯಾಸ ಮಾಡುತ್ತಿರುವ ಒಂದು ಪಾರಂಪರಿಕ ತಂಡ. ಇವರು ಮುದ್ರಿಕಾ ಶೈಲಿಯ ಶಾಸ್ತ್ರೀಯ ಬೊಂಬೆಯಾಟವನ್ನು ಅಭ್ಯಸಿಸಿರುವರು. ಬೊಂಬೆಗಳನ್ನು ಮರದಿಂದ ಮಾಡಲಾಗಿದ್ದು, ಅವುಗಳು ೨.೫ – ೩ ಅಡಿಯಷ್ಟು ಉದ್ದ ಮತ್ತು ಅಂದಾಜು ೧೦ – ೧೨ ಕೇಜಿಯಷ್ಟು ತೂಕ ಇರುವುದರಿಂದ, ಈ ಗೊಂಬೆಗಳನ್ನು ಆಡಿಸುವವರಿಗೆ ಅಪಾರ ಕೌಶಲ್ಯದ ಅಗತ್ಯವಿರುತ್ತದೆ. ಭಾರತದ ಖ್ಯಾತ ಬೊಂಬೆಯಾಟ ಕಲಾವಿದರಾದ ಶ್ರೀ ಎಂ ಆರ್ ರಂಗನಾಥ ರಾವ್ ಅವರಿಂದ ತರಬೇತಿ ಪಡೆದ ಅವರ ಪುತ್ರರಾದ ಎಂ ಆರ್ ರಂಗನಾಥ ರಾವ ಮತ್ತು ಎಂ ಆರ್ ವಿಜಯ್ ಅವರು ೧೯೭೮ರಿಂದ ಈ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಯುವ ಕಲಾವಿದರಿಗೆ ತರಬೇತಿ ನೀಡುವ ಜೊತೆಗೆ, ಪೌರಾಣಿಕ, ಐತಿಹಾಸಿಕ ಮತ್ತು ಸಮಾಜಿಕ ವಿಷಯಗಳ ಮೇಲೆಯೂ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಅಪರೂಪದ ಈ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವುದೇ ಈ ತಂಡದ ಉದ್ದೇಶ.
Megha | ಮೇಘ
Megha is an Associate Professor at the Centre for Ayurveda Biology and Holistic Nutrition, Trans-Disciplinary University, Bengaluru. Trained in Biochemistry, her current research interests are in the areas of public health nutrition, traditional food knowledge and Ayurveda dietetics. Her team recently completed “Traditional Foods of Karnataka, with Nutritional and Ayurveda Insights”, a community-based documentation project.
ಮೇಘಾ ಬೆಂಗಳೂರಿನ ಟ್ರಾನ್ಸ್-ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಆಯುರ್ವೇದ ಜೀವಶಾಸ್ತ್ರ ಮತ್ತು ಸಮಗ್ರ ಪೋಷಣೆ ಕೇಂದ್ರದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದಾರೆ. ಜೀವರಸಾಯನಶಾಸ್ತ್ರದಲ್ಲಿ ತರಬೇತಿ ಪಡೆದಿರುವ ಅವರ ಪ್ರಸ್ತುತ ಸಂಶೋಧನಾ ಆಸಕ್ತಿಗಳು ಸಾರ್ವಜನಿಕ ಆರೋಗ್ಯ ಪೋಷಣೆ, ಸಾಂಪ್ರದಾಯಿಕ ಆಹಾರ ಜ್ಞಾನ ಮತ್ತು ಆಯುರ್ವೇದ ಆಹಾರ ಪದ್ಧತಿ ಕ್ಷೇತ್ರಗಳಲ್ಲಿವೆ. ಅವರ ತಂಡವು ಇತ್ತೀಚೆಗೆ ಸಮುದಾಯ ಆಧಾರಿತ ದಾಖಲಾತಿ ಯೋಜನೆಯಾದ “ಪೌಷ್ಠಿಕಾಂಶ ಮತ್ತು ಆಯುರ್ವೇದ ಒಳನೋಟಗಳೊಂದಿಗೆ ಕರ್ನಾಟಕದ ಸಾಂಪ್ರದಾಯಿಕ ಆಹಾರಗಳು” ಅನ್ನು ಪೂರ್ಣಗೊಳಿಸಿದೆ.
Subrahmanya Kumar | ಸುಬ್ರಹ್ಮಣ್ಯ ಕುಮಾರ
Subrahmanya Kumar leads the Indian Knowledge Systems Centre of Excellence in the Pharmacology of Medicinal Plants at Trans-Disciplinary University, Bengaluru. His work bridges Ayurveda and modern science, focusing on medicinal plants, formulations, nutraceuticals and digitising Ayurvedic knowledge of food and medicine. He advances evidence-based approaches to traditional medicine and nutrition through research, education and outreach.
ಬೆಂಗಳೂರಿನ ಟ್ರಾನ್ಸ್-ಡಿಸಿಪ್ಲಿನರಿ ವಿಶ್ವವಿದ್ಯಾಲಯದಲ್ಲಿ ಔಷಧೀಯ ಸಸ್ಯಗಳ ಔಷಧಶಾಸ್ತ್ರದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳ ಶ್ರೇಷ್ಠತೆಯ ಕೇಂದ್ರವನ್ನು ಸುಬ್ರಹ್ಮಣ್ಯ ಕುಮಾರ್ ಮುನ್ನಡೆಸುತ್ತಾರೆ. ಅವರ ಕೆಲಸವು ಆಯುರ್ವೇದ ಮತ್ತು ಆಧುನಿಕ ವಿಜ್ಞಾನವನ್ನು ಸಂಪರ್ಕಿಸುತ್ತದೆ, ಔಷಧೀಯ ಸಸ್ಯಗಳು, ಸೂತ್ರೀಕರಣಗಳು, ಪೌಷ್ಟಿಕ ಔಷಧಗಳು ಮತ್ತು ಆಹಾರ ಮತ್ತು ಔಷಧದ ಆಯುರ್ವೇದ ಜ್ಞಾನವನ್ನು ಡಿಜಿಟಲೀಕರಣಗೊಳಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಅವರು ಸಂಶೋಧನೆ, ಶಿಕ್ಷಣ ಮತ್ತು ಪ್ರಭಾವದ ಮೂಲಕ ಸಾಂಪ್ರದಾಯಿಕ ಔಷಧ ಮತ್ತು ಪೋಷಣೆಗೆ ಪುರಾವೆ ಆಧಾರಿತ ವಿಧಾನಗಳನ್ನು ಮುನ್ನಡೆಸುತ್ತಾರೆ.
Vaishali Jadhav | ವೈಶಾಲಿ ಜಾಧವ್
Vaishali Jadhav holds an M.Sc. in Food and Nutrition and was a key researcher on the documentation of traditional foods of Karnataka. She travelled nearly 10,000 km across the state, engaging with communities in over 100 locations and documenting 128 traditional recipes on video. Her interests include traditional foods, nutritional assessment and community-based research.
ವೈಶಾಲಿ ಜಾಧವ್ ಅವರು ಆಹಾರ ಮತ್ತು ಪೋಷಣೆಯಲ್ಲಿ (Food and Nutrition) ಎಂ.ಎಸ್ಸಿ. ಪದವಿ ಪಡೆದಿದ್ದು, ಕರ್ನಾಟಕದ ಸಾಂಪ್ರದಾಯಿಕ ಆಹಾರಗಳ ದಾಖಲೀಕರಣದಲ್ಲಿ ಪ್ರಮುಖ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ರಾಜ್ಯದಾದ್ಯಂತ ಸುಮಾರು 10,000 ಕಿ.ಮೀ. ಪ್ರಯಾಣಿಸಿ, 100ಕ್ಕೂ ಹೆಚ್ಚು ಸ್ಥಳಗಳಲ್ಲಿನ ಸಮುದಾಯಗಳೊಂದಿಗೆ ಬೆರೆತು, 128 ಸಾಂಪ್ರದಾಯಿಕ ಅಡುಗೆ ವಿಧಾನಗಳನ್ನು (ರೆಸಿಪಿಗಳನ್ನು) ವಿಡಿಯೋ ರೂಪದಲ್ಲಿ ದಾಖಲಿಸಿದ್ದಾರೆ. ಸಾಂಪ್ರದಾಯಿಕ ಆಹಾರಗಳು, ಪೌಷ್ಟಿಕಾಂಶದ ಮೌಲ್ಯಮಾಪನ ಮತ್ತು ಸಮುದಾಯ ಆಧಾರಿತ ಸಂಶೋಧನೆಗಳು ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.
Sadashiv Naik | ಸದಾಶಿವ್ ನಾಯಕ್
Sadashiv Naik holds an MSc in Agriculture, specialising in Food Science and Nutrition. He was a key researcher in the documentation of traditional foods of Karnataka, travelling nearly 10,000 km across the state and recording 128 traditional recipes across over 100 locations. He continues to work on medicinal plant data digitisation and traditional knowledge documentation.
ಸದಾಶಿವ ನಾಯಕ್ ಅವರು ಕೃಷಿಯಲ್ಲಿ ಎಂ.ಎಸ್ಸಿ (MSc) ಪದವಿ ಪಡೆದಿದ್ದು, ಆಹಾರ ವಿಜ್ಞಾನ ಮತ್ತು ಪೋಷಣಾ ಶಾಸ್ತ್ರದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ಕರ್ನಾಟಕದ ಸಾಂಪ್ರದಾಯಿಕ ಆಹಾರಗಳ ದಾಖಲೀಕರಣದಲ್ಲಿ ಅವರು ಪ್ರಮುಖ ಸಂಶೋಧಕರಾಗಿದ್ದರು; ಇದಕ್ಕಾಗಿ ಅವರು ರಾಜ್ಯಾದ್ಯಂತ ಸುಮಾರು 10,000 ಕಿ.ಮೀ. ಸಂಚರಿಸಿ, 100ಕ್ಕೂ ಹೆಚ್ಚು ಸ್ಥಳಗಳಿಂದ 128 ಸಾಂಪ್ರದಾಯಿಕ ಅಡುಗೆ ವಿಧಾನಗಳನ್ನು (ರೆಸಿಪಿಗಳನ್ನು) ದಾಖಲಿಸಿದ್ದಾರೆ. ಅವರು ಔಷಧೀಯ ಸಸ್ಯಗಳ ದತ್ತಾಂಶವನ್ನು ಡಿಜಿಟಲೀಕರಣಗೊಳಿಸುವ ಮತ್ತು ಸಾಂಪ್ರದಾಯಿಕ ಜ್ಞಾನವನ್ನು ದಾಖಲಿಸುವ ಕಾರ್ಯದಲ್ಲಿ ಈಗಲೂ ತೊಡಗಿಸಿಕೊಂಡಿದ್ದಾರೆ.
Sangeeta Katti Kulkarni | ಸಂಗೀತಾ ಕಟ್ಟಿ ಕುಲಕರ್ಣಿ
Sangeeta Katti Kulkarni is a globally renowned vocalist who received Karnataka’s highest civilian honor, the Rajyotsava Award, and the Pt. Basavaraj Rajguru Puraskar. She has performed over 7,000 concerts across the USA, UK, and worldwide, gaining international acclaim for her mastery in nine languages across classical and devotional music.
ಸಂಗೀತಾ ಕಟ್ಟಿ ಕುಲಕರ್ಣಿ ಅವರು ಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿ ಮತ್ತು ಪಂ. ಬಸವರಾಜ ರಾಜಗುರು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಅವರು ವಿಶ್ವದಾದ್ಯಂತ 7,000 ಕ್ಕೂ ಹೆಚ್ಚು ಕಛೇರಿಗಳನ್ನು ನೀಡಿದ್ದಾರೆ. ಕ್ಲಾಸಿಕಲ್ ಮತ್ತು ಭಕ್ತಿಗೀತೆಗಳು ಸೇರಿದಂತೆ ಒಂಬತ್ತು ಭಾಷೆಗಳಲ್ಲಿ ಹಾಡುವ ಮೂಲಕ ಅಮೆರಿಕ, ಯುಕೆ ಸೇರಿದಂತೆ ಜಾಗತಿಕವಾಗಿ ಅಪಾರ ಖ್ಯಾತಿ ಗಳಿಸಿದ್ದಾರೆ.
Raghavendra Acharya | ರಾಘವೇಂದ್ರ ಆಚಾರ್ಯ
Raghavendra Acharya is a seasoned Kannada stand-up comedian with over 200 global performances and a feature on Zee Kannada’s Comedy Khiladigalu. Formerly a microbiologist, journalist, and writer for major publications like Kannada Prabha, he has also authored two plays exploring North Karnataka’s migration dynamics to metropolitan cities.
ರಾಘವೇಂದ್ರ ಆಚಾರ್ಯ ಅವರು 200ಕ್ಕೂ ಹೆಚ್ಚು ಜಾಗತಿಕ ಪ್ರದರ್ಶನಗಳನ್ನು ನೀಡಿದ ಮತ್ತು ಜೀ ಕನ್ನಡದ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನುಭವಿ ಕನ್ನಡ ಸ್ಟ್ಯಾಂಡ್-ಅಪ್ ಕಮಿಡಿಯನ್ ಆಗಿದ್ದಾರೆ. ಈ ಹಿಂದೆ ಸೂಕ್ಷ್ಮಜೀವಿ ವಿಜ್ಞಾನಿ ಆಗಿದ್ದ ಇವರು, ‘ಕನ್ನಡ ಪ್ರಭ’ ಸೇರಿದಂತೆ ಪ್ರಮುಖ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಮತ್ತು ಲೇಖಕರಾಗಿ ಕೆಲಸ ಮಾಡಿದ್ದರು. ಜೊತೆಗೆ, ಮಹಾನಗರಗಳಿಗೆ ಉತ್ತರ ಕರ್ನಾಟಕದ ಜನರ ವಲಸೆಯ ಬದುಕನ್ನು ಬಿಂಬಿಸುವ ಎರಡು ನಾಟಕಗಳನ್ನು ಬರೆದಿದ್ದಾರೆ.
Tvarita Arts Collective India | ತ್ವರಿತ ಆರ್ಟ್ಸ್ ಕಲೆಕ್ಟಿವ್ ಇಂಡಿಯಾ
Tvarita Arts Collective India is a women-led cultural enterprise reimagining India’s traditional and indigenous art forms through immersive experiences, storytelling, and creative curation. Working with 1,300+ artists across 53+ art forms, Tvarita partners with institutions, schools, and organisations to celebrate cultural heritage, create sustainable opportunities for artists, and connect audiences with India’s living traditions.
ತ್ವರಿತ ಆರ್ಟ್ಸ್ ಕಲೆಕ್ಟಿವ್ ಇಂಡಿಯಾ, ಇದೊಂದು ಮಹಿಳಾ ನೇ ತೃತ್ವದ ಸಾಂಸ್ಕೃತಿಕ ಕೇಂದ್ರ. ಕಥಾ ನಿರೂಪಣೆ, ಕ್ರಿಯಾತ್ಮಕ ಸಂಯೋ ಜನೆ, ಮತ್ತು ಇನ್ನಿತರೆ ಸಂವಾದಾತ್ಮಕ ಚಟುವಟಿಕೆಗಳ ಮೂಲಕ ಈ ತಂಡವು ಭಾರತದ ಸಾಂಸ್ಕೃತಿಕ ಮತ್ತು ಸ್ಥಳೀ ಯ ಕಲಾ ಪ್ರಕಾರಗಳಿಗೆ ಹೊ ಸ ದೃಷ್ಟಿಕೋ ನವೊಂದನ್ನು ನೀ ಡುವ ಕೆಲಸ ಮಾಡುತ್ತಿದೆ. ಸುಮಾರು ೫೩ಕ್ಕೂ ಹೆಚ್ಚು ಕಲಾ ಪ್ರಕಾರಗಳನ್ನು ಅಭ್ಯಸಿಸುತ್ತಿರುವ ೧೩೦೦ಕ್ಕೂ ಹೆಚ್ಚು ಕಲಾವಿದರೊಂದಿಗೆ, ಶಾಲೆ, ಮತ್ತು ಇನ್ನಿತರೆ ಸಾಂಸ್ಕೃತಿಕ ಸಂಸ್ಥೆಗಳೊಂದಿಗೆ ಕೈ ಜೋ ಡಿಸಿರುವ ತ್ವರಿತಾ ತಂಡವು, ನಮ್ಮ ಪರಂಪರೆಯನ್ನು ಸಂಭ್ರಮಿಸುತ್ತಾ, ಕಲಾವಿದರಿಗೆ ಅನುಕೂಲವಾಗುವಂತೆ ಅವಕಾಶಗಳನ್ನು ನಿರ್ಮಿ ಸುತ್ತಾ ನಮ್ಮ ಸಂಸ್ಕೃತಿಯನ್ನು ಪ್ರೇಕ್ಷಕರಿಕೆ ತಲುಪಿಸುವಂತಹ ಕೆಲಸವನ್ನು ಮಾಡುತ್ತಿದೆ.
Crafts Council of Karnataka | ಕರಕುಶಲ ಪರಿಷತ್ತು, ಕರ್ನಾಟಕ
Established in 1982, the Crafts Council of Karnataka works to preserve, document and promote the state’s traditional crafts and handloom textiles through research, publications, workshops and training. Its retail wing, Kamalini, supports craft communities through the sale of handicrafts, while Vastrabharana and Kuteera are its flagship annual events celebrating textiles, jewellery, crafts and lifestyle products.
1982 ರಲ್ಲಿ ಸ್ಥಾಪನೆಯಾದ ಕರ್ನಾಟಕ ಕರಕುಶಲ ಮಂಡಳಿಯು, ಸಂಶೋಧನೆ, ಪ್ರಕಟಣೆಗಳು, ಕಾರ್ಯಾಗಾರಗಳು ಮತ್ತು ತರಬೇತಿಯ ಮೂಲಕ ರಾಜ್ಯದ ಸಾಂಪ್ರದಾಯಿಕ ಕರಕುಶಲ ವಸ್ತುಗಳು ಮತ್ತು ಕೈಮಗ್ಗ ಜವಳಿಗಳನ್ನು ಸಂರಕ್ಷಿಸಲು, ದಾಖಲಿಸಲು ಮತ್ತು ಉತ್ತೇಜಿಸಲು ಕೆಲಸ ಮಾಡುತ್ತದೆ. ಇದರ ಚಿಲ್ಲರೆ ವಿಭಾಗವಾದ ಕಮಲಿನಿ, ಕರಕುಶಲ ವಸ್ತುಗಳ ಮಾರಾಟದ ಮೂಲಕ ಕರಕುಶಲ ಸಮುದಾಯಗಳನ್ನು ಬೆಂಬಲಿಸುತ್ತದೆ, ಆದರೆ ವಸ್ತ್ರಾಭರಣ ಮತ್ತು ಕುಟೀರಗಳು ಜವಳಿ, ಆಭರಣಗಳು, ಕರಕುಶಲ ವಸ್ತುಗಳು ಮತ್ತು ಜೀವನಶೈಲಿ ಉತ್ಪನ್ನಗಳನ್ನು ಆಚರಿಸುವ ಅದರ ಪ್ರಮುಖ ವಾರ್ಷಿಕ ಕಾರ್ಯಕ್ರಮಗಳಾಗಿವೆ.
Vimor Handloom Foundation | ವಿಮೋರ್ ಹ್ಯಾಂಡ್ಲೂಮ್ ಫೌಂಡೇಶನ್
Founded in 1974 by Mrs. Chimy Nanjappa and her daughter Pavithra Muddaya, Vimor is a handloom brand dedicated to preserving and reviving India’s textile heritage. Inspired by antique sarees and traditional weaving techniques, Vimor documents historic designs, motifs and stories, working with weavers to recreate heritage textiles for contemporary audiences. Its work combines design revival with the preservation of traditional craftsmanship, supporting weavers through training, design development and sustainable livelihood opportunities. In 2004, the Vimor Handloom Foundation was established to further this mission through conservation, research and education. The Vimor Museum of Living Textiles was established in Bangalore in 2019.
ಶ್ರೀಮತಿ ಚಿಮಿ ನಂಜಪ್ಪ ಮತ್ತು ಅವರ ಮಗಳು ಪವಿತ್ರಾ ಮುದ್ದಯ್ಯ ಅವರು 1974 ರಲ್ಲಿ ಸ್ಥಾಪಿಸಿದ ವಿಮೋರ್, ಭಾರತದ ಜವಳಿ ಪರಂಪರೆಯನ್ನು ಸಂರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ಮೀಸಲಾಗಿರುವ ಕೈಮಗ್ಗ ಬ್ರಾಂಡ್ ಆಗಿದೆ. ಪ್ರಾಚೀನ ಸೀರೆಗಳು ಮತ್ತು ಸಾಂಪ್ರದಾಯಿಕ ನೇಯ್ಗೆ ತಂತ್ರಗಳಿಂದ ಪ್ರೇರಿತವಾದ ವಿಮೋರ್, ಐತಿಹಾಸಿಕ ವಿನ್ಯಾಸಗಳು, ಲಕ್ಷಣಗಳು ಮತ್ತು ಕಥೆಗಳನ್ನು ದಾಖಲಿಸುತ್ತದೆ, ಸಮಕಾಲೀನ ಪ್ರೇಕ್ಷಕರಿಗೆ ಪರಂಪರೆಯ ಜವಳಿಗಳನ್ನು ಮರುಸೃಷ್ಟಿಸಲು ನೇಕಾರರೊಂದಿಗೆ ಕೆಲಸ ಮಾಡುತ್ತದೆ. ಇದರ ಕೆಲಸವು ವಿನ್ಯಾಸ ಪುನರುಜ್ಜೀವನವನ್ನು ಸಾಂಪ್ರದಾಯಿಕ ಕರಕುಶಲತೆಯ ಸಂರಕ್ಷಣೆಯೊಂದಿಗೆ ಸಂಯೋಜಿಸುತ್ತದೆ, ತರಬೇತಿ, ವಿನ್ಯಾಸ ಅಭಿವೃದ್ಧಿ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳ ಮೂಲಕ ನೇಕಾರರಿಗೆ ಬೆಂಬಲ ನೀಡುತ್ತದೆ. 2004 ರಲ್ಲಿ, ಸಂರಕ್ಷಣೆ, ಸಂಶೋಧನೆ ಮತ್ತು ಶಿಕ್ಷಣದ ಮೂಲಕ ಈ ಧ್ಯೇಯವನ್ನು ಮುಂದುವರಿಸಲು ವಿಮೋರ್ ಹ್ಯಾಂಡ್ಲೂಮ್ ಫೌಂಡೇಶನ್ ಅನ್ನು ಸ್ಥಾಪಿಸಲಾಯಿತು. ವಿಮೋರ್ ಮ್ಯೂಸಿಯಂ ಆಫ್ ಲಿವಿಂಗ್ ಟೆಕ್ಸ್ಟೈಲ್ಸ್ ಅನ್ನು 2019 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು.
Kavade | ಕವಡೆ
Kavade’s work is a revival not just of forgotten games, but of relationships: between generations, between cultures, and with our shared spaces. To them, culture isn’t stuck in a museum; it’s alive and playful. Since 2009, Kavade has brought back these joys and thrills by making our ancient games accessible, promoting gaming experiences, and creating large game spaces. This is their way of inviting people to try an alternative: to unplug, discover different ways of coming together, and staying together.
ಮರೆತುಹೋಗಿರುವ ಆಟಗಳನ್ನು ನೆನಪಿಸುವುದಷ್ಟೇ ಅಲ್ಲದೆ, ಶತಮಾನಗಳಿಂದ ಕಳೆದುಹೋಗಿರುವ ಸಂಬಂಧಗಳನ್ನು, ಸಂಸ್ಕೃತಿಗಳನ್ನು, ನಮ್ಮ ಸುತ್ತ ಮುತ್ತಲಿನ ಜಾಗದೊಂದಿಗಿರುವ ನಮ್ಮ ನಂಟುಗಳನ್ನೂ ಪುನಃ ನಮ್ಮೆದುರಿಗಿಡುತ್ತಿರುವುದೇ ಕವಡೆ ಸಂಸ್ಥೆಯ ಹಿರಿಮೆ. ೨೦೦೯ರಿಂದ ಹಿಡಿದು ಇಲ್ಲಿಯವರೆಗೂ ಕವಡೆ ಸಂಸ್ಥೆಯು ಈ ಕೆಲಸವನ್ನು ಮಾಡುತ್ತಿದ್ದು, ಹಳೆಯ ಆಟಗಳನ್ನು ಮರಳಿ ತರುತ್ತಾ ಅವುಗಳೊಂದಿಗೆ ಖುಷಿ, ಮತ್ತು ಸಡಗರವನ್ನೂ ಹೊತ್ತಿ ತಂದು ಹೆಚ್ಚು ಜನರು ಅದರಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳುತ್ತಿದೆ. ಜನರು ಈಗಾಗಲೇ ಹೊಂದಿಕೊಂಡಿರುವ ಬದುಕನ್ನು ಕೆಲ ಹೊತ್ತಿನ ಮಟ್ಟಿಗೆ ಮರೆತು, ಇತರರೊಂದಿಗೆ ಇನ್ನೂ ಹೆಚ್ಚು ಬೆರೆಯುವಂತೆ ಮಾಡುವುದೇ ಕವಡೆ ಸಂಸ್ಥೆಯ ಉದ್ದೇಶ.
Karthik K. Samprathi | ಕಾರ್ತಿಕ್ ಕೆ. ಸಂಪ್ರತಿ
Karthik K Samprathi is a black-and-white fine art photographer rooted in Indian philosophical traditions. Specializing in film photography, darkroom printing, and alternative processes, he treats photographs as handcrafted objects. His contemplative practice spans long-term projects exploring perception, time, stillness, devotion, and transformation through exhibitions and books.
ಕಾರ್ತಿಕ್ ಕೆ ಸಂಪ್ರತಿ ಅವರು ಭಾರತೀಯ ತಾತ್ವಿಕ ಪರಂಪರೆ ಆಧರಿಸಿದ ಕಪ್ಪು-ಬಿಳುಪು ಫೈನ್ ಆರ್ಟ್ ಛಾಯಾಗ್ರಾಹಕರು. ಫಿಲ್ಮ್ ಫೋಟೋಗ್ರಫಿ ಮತ್ತು ಡಾರ್ಕ್ರೂಮ್ ಪ್ರಿಂಟಿಂಗ್ ಪರಿಣಿತರಾದ ಇವರು, ಫೋಟೋಗಳನ್ನು ಹಸ್ತಕಲಾ ಕೃತಿಯಂತೆ ರೂಪಿಸುತ್ತಾರೆ. ಇವರ ಪ್ರದರ್ಶನಗಳು ಮತ್ತು ಪುಸ್ತಕಗಳು ಸಮಯ, ನಿಶ್ಚಲತೆ, ಭಕ್ತಿ ಹಾಗೂ ಪರಿವರ್ತನೆಯ ಧ್ಯಾನಸ್ಥ ಪರಿಕಲ್ಪನೆಗಳನ್ನು ಅನ್ವೇಷಿಸುತ್ತವೆ.
