Loading Events
  • This event is over. However, time travel possible through our Audio & Video! See upcoming events

Artists

Senior Film Director | ಹಿರಿಯ ಚಲನಚಿತ್ರ ನಿರ್ದೇಶಕರು
Chairman, Karnataka Shilpakala Academy | ಅಧ್ಯಕ್ಷರು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ
Shashidhara Narasimhaswamy, Anagha Hegde and Smrithi Kumar | ಶಶಿಧರ ನರಸಿಂಹಸ್ವಾಮಿ, ಅನಘ ಹೆಗಡೆ ಮತ್ತು ಸ್ಮೃತಿ ಕುಮಾರ್‌
Storyteller | ಕಥೆಗಾರ್ತಿ
Director, Gottilla Academy | ನಿರ್ದೇಶಕ, ಗೊತ್ತಿಲ್ಲ ಅಕಾಡೆಮಿ
Quizmaster | ಪ್ರಶ್ನಾರಾಜ
The Amazing iTwins | ದಿ ಅಮೇಜಿಂಗ್ ಐಟ್ವಿನ್ಸ್
The Shadow Caster | ದಿ ಶ್ಯಾಡೋ ಕಾಸ್ಟರ್
The Mind Reader | ದಿ ಮೈಂಡ್ ರೀಡರ್
Bass Guitar | ಬೇಸ್ ಗಿಟಾರ್
Vocalist & Guitarist | ಗಾಯಕ ಮತ್ತು ಗಿಟಾರ್ ವಾದಕ
Lead Guitarist | ಮುಖ್ಯ ಗಿಟಾರಿಸ್ಟ್
Vocalist | ಗಾಯಕಿ
Flautist | ಕೊಳಲು ವಾದಕ
Percussions | ತಾಳವಾದ್ಯ

Date & Time

Saturday Sat, 1 Nov 2025

Location

Bangalore International Centre
7, 4th Main Road, Domlur II Stage
Bangalore, Karnataka 560071 India
Winding and binding, Karnataka’s great rivers have always been more than glorious waterways. From Krishna to Kaveri, our rivers are carriers of culture, stories, and transformation. As they flow across varied landscapes, they shape and are shaped by the people, traditions, and communities they touch.
Krishna to Kaveri is a two-day celebration that draws from this natural rhythm, exploring how Karnataka’s cultural life is constantly moving, adapting, and renewing itself. From classical roots to contemporary reinterpretations, this festival offers a vibrant weekend that speaks to a new generation. Expect immersive workshops, indulgent cuisines and impactful performances! 
Whether you’re a native Kannadiga or recently moved into Bangalore, this festival is for anyone who wants to connect more deeply with the cultural spirit of the region. Not as outsiders looking in, but as participants in a living, flowing cultural journey.
Let the rivers lead. Let culture move. Let Karnataka unfold.
ಬಳಸುತ್ತಾ ಬೆಸೆಯುತ್ತಾ ಬೆಳೆಸುತ್ತಾ ಸಾಗುವ ಕರ್ನಾಟಕದ ನದಿಗಳು ವೈಭವದ ಜಲಹರಿವುಗಳು ಮಾತ್ರವಲ್ಲ. ಕೃಷ್ಣೆಯಿಂದ ಕಾವೇರಿವರೆಗೆ ವ್ಯಾಪಿಸಿರುವ ನದಿಗಳು ಸಂಸ್ಖೃತಿಯ, ಕಥೆ-ಪುರಾಣಗಳ, ಪರಿವರ್ತನೆಯ ಚಲನಶೀಲ ವಾಹಕಗಳಾಗಿವೆ. ವೈವಿಧ್ಯಮಯ ಸುಂದರ ಭೂಪ್ರದೇಶಗಳ ನಡುವೆ ಮುನ್ನಡೆವ ಈ ನದಿಗಳು ಜನರನ್ನು, ಪರಂಪರೆಗಳನ್ನು, ಸಮುದಾಯಗಳನ್ನು ರೂಪಿಸುತ್ತಾ, ಪರ್ಯಾಯವಾಗಿ ರೂಪುಗೊಳ್ಳುತ್ತಾ ಸಾಗಿವೆ.
ಈ ಸ್ವಾಭಾವಿಕ ಹರಿವಿನ ಲಯದಿಂದ ಹೊಮ್ಮಿರುವ ಎರಡು ದಿನಗಳ ಉತ್ಸವವೆ ‘ಕೃಷ್ಣೆಯಿಂದ ಕಾವೇರಿವರೆಗೆ ʼ. ಕರ್ನಾಟಕದ ಸಾಂಸ್ಕೃತಿಕ ಬದುಕಿನ ನಿರಂತರ ಚಲನೆಯ, ಹೊಂದಾಣಿಕೆಯ, ಪುನಶ್ಚೇತನದ ಶೋಧನೆ. ಈ ಉತ್ಸವವು ಅಭಿಜಾತ ಬೇರುಗಳಿಂದ ವರ್ತಮಾನದ ಮರುವ್ಯಾಖ್ಯಾನಗಳವರೆಗೆ ಹುರುಪಿನ ವಾರಾಂತ್ಯದಲ್ಲಿ ಹೊಸಪೀಳಿಗೆಗೆ ಒಳನೋಟಗಳನ್ನು ಒದಗಿಸಲಿದೆ. ತಲ್ಲೀನಗೊಳಿಸುವ ಕಾರ್ಯಾಗಾರಗಳು, ರುಚಿಕರ ಆಹಾರ, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಹಬ್ಬದಲ್ಲಿ ನಿರೀಕ್ಷಿಸಬಹುದು.
ನೀವು ಮೂಲ ಕನ್ನಡಿಗರಾಗಿರಿ ಅಥವಾ ಇತ್ತೀಚೆಗಷ್ಟೆ ಹೊರಗಿನಿಂದ ಬೆಂಗಳೂರಿಗೆ ಬಂದಿರುವವರೇ ಆಗಿರಿ. ಈ ನೆಲದ ಸಾಂಸ್ಕೃತಿಕ ಚೇತನದೊಂದಿಗೆ ಆಳವಾಗಿ ಬೆರೆಯುವ ಅವಕಾಶವನ್ನು ಈ ಹಬ್ಬ ನಿಮಗೆ ಒದಗಿಸುತ್ತದೆ. ಇಲ್ಲಿನ ಕಾರ್ಯಕ್ರಮಗಳನ್ನು ನೀವು ಹೊರಗಿನವರಾಗಿ ನಿಂತು ನೋಡುವ ಪ್ರೇಕ್ಷಕರಾಗದೆ ಒಂದು ಜೀವಂತ, ಸಾಂಸ್ಕೃತಿಕ ಯಾನದ ಭಾಗವಾಗಲು ಬನ್ನಿರಿ.
ಮುನ್ನಡೆಸಲಿ ನದಿಗಳು. ಪ್ರವಹಿಸಲಿ ಸಂಸ್ಕೃತಿ. ಗೋಚರವಾಗಲಿ ಕರ್ನಾಟಕದ ಸಿರಿ ವೈಭವ!

Day 1 Schedule

10:00 AM – 10:50 AM: Inauguration | ಉದ್ಘಾಟನೆ
By Nagathihalli Chandrashekhar & M C Ramesh |ನಾಗತಿಹಳ್ಳಿ ಚಂದ್ರಶೇಖರ್‌ ಮತ್ತು ಎಂ ಸಿ ರಮೇಶ್‌ ಅವರಿಂದ
Pooja Kunitha, Somana Kunitha, Flag Hoisting & the State Anthem | ಪೂಜಾ ಕುಣಿತ, ಸೋಮನ ಕುಣಿತ, ಧ್ವಜಾರೋಹಣ ಮತ್ತು ನಾಡಗೀತೆ
Sri Vinayaka Yuvakara Kala Balaga & Students of Suraaghavi Foundation | ಶ್ರೀ ವಿನಾಯಕ ಯುವಕರ ಕಲಾ ಬಲಗ & ಸುರಾಘವಿ ಫೌಂಡೇಷನ್‌ ವಿದ್ಯಾರ್ಥಿಗಳು

Experience the vibrant ritual dances of Hale Mysuru with Pooja Kunitha and Somana Kunitha, performed by K. B. Swamy and team. Rooted in Hassan, Tumakuru, Mandya, and Bangalore Rural, these centuries-old traditions reflect devotion and community life. Pooja Kunitha, performed by the Kuruba community, offers towering, decorated structures to Goddess Shakti, while Somana Kunitha, with striking masks and movements, invokes guardian deities to bless villages. Together, they carry the history, geography, and spirit of Hale Mysuru. This performance, in celebration of Karnataka Rajyotsava, honors the living cultural traditions that continue to shape the soul of the state.

ಹಳೆ ಮೈಸೂರು ಭಾಗದ ಪೂಜಾ ಕುಣಿತ ಹಾಗೂ ಸೋಮನ ಕುಣಿತಗಳಂಥ ನೃತ್ಯದ ಆಚರಣೆಗಳನ್ನು ಜೀವಂತಗೊಳಿಸುವ ಕೆ. ಬಿ. ಸ್ವಾಮಿ ಮತ್ತು ತಂಡದವರ ಪ್ರದರ್ಶನವನ್ನು ನೋಡ ಬನ್ನಿ. ಹಾಸನ, ತುಮಕೂರು, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನೆಲೆಗೊಂಡಿರುವ ಶತಮಾನಗಳ ಹಿಂದಿನ ಈ ಪರಂಪರೆಯು, ಭಕ್ತಿ ಮತ್ತು ಸಾಮುದಾಯಿಕ ಜೀವನವನ್ನು ಬಿಂಬಿಸುತ್ತದೆ. ಕುರುಬ ಸಮುದಾಯದ ಪೂಜಾ ಕುಣಿತವು ಶಕ್ತಿ ದೇವತೆಗೆ ಎತ್ತರದ ಅಲಂಕೃತ ತೊಟ್ಟಿಲುಗಳನ್ನು ಸಮರ್ಪಿಸಿದರೆ, ಸೋಮನ ಕುಣಿತವು ವಿಶಿಷ್ಟ ಮುಖವಾಡಗಳು ಮತ್ತು ಚುರುಕಾದ ಚಲನೆಗಳ ಮೂಲಕ ಗ್ರಾಮರಕ್ಷಕ ದೇವರನ್ನು ಆವಾಹಿಸುತ್ತದೆ. ಇವೆರಡೂ ನೃತ್ಯ ಶೈಲಿಗಳು ಹಳೆ ಮೈಸೂರಿನ ಇತಿಹಾಸ, ಭೌಗೋಳಿಕ ವೈಶಿಷ್ಟ್ಯ ಮತ್ತು ಮನೋಭಾವವನ್ನು ಮುನ್ನೆಲೆಗೆ ತರುತ್ತವೆ. ಕರ್ನಾಟಕ ರಾಜ್ಯೋತ್ಸವದ ಆಚರಣೆಯ ನೆಪದಲ್ಲಿ ಈ ಪ್ರದರ್ಶನವು ರಾಜ್ಯದ ಅಂತ:ಶಕ್ತಿಯನ್ನು ರೂಪಿಸುವ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಜೀವಂತಗೊಳಿಸಿ ಗೌರವಿಸುತ್ತದೆ.

11:00 AM – 12:30 PM: Morning Melodies | ಮುಂಜಾನೆಯ ರಾಗಗಳು
A Hindustani Vocal Recital | ಹಿಂದೂಸ್ತಾನಿ ಗಾಯನ
Vinayak Torvi, Vyasamurthy Katti & Gurumurthy Vaidya | ವಿನಾಯಕ್ ತೊರವಿ, ವ್ಯಾಸಮೂರ್ತಿ ಕಟ್ಟಿ & ಗುರುಮೂರ್ತಿ ವೈದ್ಯ

Begin your morning where melody meets meditation. This Hindustani classical recital brings together three exceptional artists—Pt. Vinayak Torvi, the distinguished vocalist from Dharwad’s revered lineage, whose voice bridges the traditions of Gwalior and Kirana gharanas; Shri. Vyasamurti Katti, a master harmonium player and vocalist known for his nuanced artistry; and Shri. Gurumurthy Vaidya, a tabla virtuoso whose rhythmic clarity completes the ensemble. An immersive morning of song and rhythm, where every note unfolds like dawn itself—gentle, awakening, and full of grace.
ಸ್ವರ ಮತ್ತು ಧ್ಯಾನದ ಸಂಗಮದಲ್ಲಿ ನಿಮ್ಮ ಬೆಳಗನ್ನು ಆರಂಭಿಸಿ. ಈ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮದಲ್ಲಿ ಮೂವರು ಅಪೂರ್ವ ಕಲಾವಿದರು ಒಂದೇ ವೇದಿಕೆಯನ್ನು ಹಂಚಿಕೊಳ್ಳತಿಲಿದ್ದಾರೆ — ಧಾರವಾಡದ ಗೌರವಾನ್ವಿತ ಸಂಗೀತ ಪರಂಪರೆಯ ಪ್ರಸಿದ್ಧ ಗಾಯಕರಾದ ಪಂಡಿತ ವಿನಾಯಕ ತೊರವಿ ಗ್ವಾಲಿಯರ್ ಹಾಗೂ ಕಿರಾನಾ ಘರಣಾಗಳನ್ನು ತಮ್ಮ ಕಂಠದಲ್ಲಿ ಮೇಳೈಸುವರು; ಸೂಕ್ಷ್ಮಾಭಿವ್ಯಕ್ತಿಯಲ್ಲಿಯೇ ಖ್ಯಾತರಾಗಿರುವ ಹಾರ್ಮೋನಿಯಂ ವಾದಕ ಹಾಗೂ ಗಾಯಕರಾದ ಶ್ರೀ ವ್ಯಾಸಮೂರ್ತಿ ಕಟ್ಟಿ ಮತ್ತು ಲಯದ ಸ್ಪಷ್ಟತೆಯಿಂದ ಹೆಸರಾಗಿರುವ ತಬಲಾ ವಾದಕ ಶ್ರೀ ಗುರುಮೂರ್ತಿ ವೈದ್ಯ. ಪ್ರತಿ ಸ್ವರವೂ ಪ್ರಭಾತದಂತೆ ನಿಧಾನವಾಗಿ ಅರಳಿ ಎಚ್ಚರಿಸುವ — ಮಧುರ ಮತ್ತು ಮಂಗಲಕರ ಸಂಗೀತಭರಿತ ಬೆಳಗ್ಗೆ ನಿಮ್ಮನ್ನು ಎದುರು ನೋಡುತ್ತಿದೆ.

11:00 AM – 12:30 PM: The Great Story Hunt | ಶ್ರೇಷ್ಠ ಕಥೆಯ ಹುಡುಕಾಟ
Rivers, Rulers, Quilts, and Queens — A Treasure Trail through Karnataka’s Timeless Scenes | ನದಿಗಳು, ರಾಜ ಮಹಾರಾಜರು,ಹಾಸು- ಹೊದಿಕೆಗಳು, ರಾಣಿಯರು — ಕರ್ನಾಟಕದ ಸಮಯಾತೀತ ದೃಶ್ಯಗಳ ಸಂಪದ್ಭರಿತ ಹಾದಿ
For Ages 6+|6+ ವರ್ಷ ವಯಸ್ಸಿನ ಮಕ್ಕಳಿಗೆ
Seema Karanth | ಸೀಮಾ ಕಾರಂತ್

What travels without tickets, flies without wings, and takes you places while you sit and listen? A story! Seema Karanth leads us into a world where riddles, rhythm, and laughter fuel adventure. This interactive storytelling session is filled with mysteries to solve, clues to chase, and characters to befriend. Children become part of the tale itself: playing, guessing, and imagining their way through adventure. Perfect for curious young explorers and their families to listen, laugh, and journey together!
ಟಿಕೆಟ್ ಕೇಳದೇ, ರೆಕ್ಕೆಗಳಿಲ್ಲದೇ ನಿಮ್ಮನ್ನು ಹೊಸ ಲೋಕಗಳಿಗೆ ಕೊಂಡೊಯ್ಯುವುದು ಯಾವುದು? ಕಥೆ! ಸೀಮಾ ಕಾರಂತ್ ನಮ್ಮನ್ನು ಒಗಟು, ಲಯ ಮತ್ತು ನಗುವಿನ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಪರಸ್ಪರ ಸಂವಾದದ ಮೂಲಕ ತೆರೆದುಕೊಳ್ಳುವ ಈ ಕಥೆಯ ಲೋಕ ರಹಸ್ಯವನ್ನು ಭೇದಿಸುತ್ತಾ, ಸುಳಿವುಗಳನ್ನು ಅರಸುತ್ತಾ, ಪಾತ್ರಗಳೊಂದಿಗೆ ಬೆಸೆಯುತ್ತಾ ಸಾಗುತ್ತದೆ. ಇಲ್ಲಿ ಮಕ್ಕಳು ಕೇವಲ ಕೇಳುವುದಲ್ಲ, ಕಥೆಯೇ ಆಗುತ್ತಾರೆ — ಊಹಿಸುತ್ತಾ ಆಡುತ್ತಾ, ಕುತೂಹಲದಿಂದ ಅನ್ವೇಷಿಸುತ್ತಾ ರೋಮಾಂಚನವನ್ನು ಅನುಭವಿಸುತ್ತಾರೆ.
ಕುತೂಹಲಭರಿತ ಪುಟ್ಟ ಸಾಹಸಿಗಳಿಗೂ, ಅವರ ಮನೆಯವರಿಗೂ ಆಲಿಸುತ್ತಾ, ನಗುತ್ತಾ, ಆಶ್ಚರ್ಯಪಡುತ್ತಾ ಸಾಗುವ ಸಿಹಿ ಸಂಭ್ರಮ!

12:00 PM – 1:30 PM: Kannada Gottilla | ಕನ್ನಡ ಗೊತ್ತಿಲ್ಲ
Kannada 101: A Crash Course in Connection | ಕನ್ನಡ ೧೦೧: ಸಂವಹನದ ತ್ವರಿತ ಪಾಠಕ್ರಮ
Arpith Kumar | ಅರ್ಪಿತ್ ಕುಮಾರ್

Led by Arpith Kumar, Director of Kannada Gottilla, this beginner-friendly workshop makes picking up everyday Kannada simple, engaging, and fun. Through lively games, creative activities, and conversation practice, participants will learn basic phrases to navigate the city, connect with locals, and enjoy the language’s unique rhythm and charm. A warm introduction to Kannada for anyone eager to build confidence, spark curiosity, and feel a little more at home in Bengaluru.
ಕನ್ನಡ ಗೊತ್ತಿಲ್ಲ ಸಂಸ್ಥೆಯ ನಿರ್ದೇಶಕ ಅರ್ಪಿತ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯುವ ಈ ಆರಂಭಿಕ-ಸ್ನೇಹಿ ಕಾರ್ಯಕ್ರಮ, ಪ್ರತಿದಿನ ಬಳಕೆಯಾಗುವ ಕನ್ನಡ ಕಲಿಯುವುದನ್ನು ಸುಲಭ, ಆಸಕ್ತಿದಾಯಕ ಮತ್ತು ರಂಜನೀಯವಾಗಿಸುತ್ತದೆ. ಚುರುಕು ಆಟಗಳು, ಸೃಜನಾತ್ಮಕ ಚಟುವಟಿಕೆಗಳು ಮತ್ತು ಸಂಭಾಷಣೆ ಅಭ್ಯಾಸಗಳ ಮೂಲಕ, ಭಾಗವಹಿಸುವವರು ನಗರದೊಳಗೆ ಸಂಚರಿಸಲು, ಸ್ಥಳೀಯರೊಂದಿಗೆ ಮಾತುಕತೆ ಆರಂಭಿಸಲು, ಮತ್ತು ಕನ್ನಡದ ಲಯ-ಸೊಬಗು ಅನುಭವಿಸಲು ಬೇಕಾದ ಮೂಲಭೂತ ವಾಕ್ಯಗಳನ್ನು ಕಲಿಯುತ್ತಾರೆ. ಸ್ವಲ್ಪ ವಿಶ್ವಾಸ, ಕುತೂಹಲ, ಮತ್ತು ಸ್ವಲ್ಪ “ಇದು ನನ್ನ ಮನೆ” ಎನ್ನುವ ಭಾವನೆ ಬೆಳೆಸಿಕೊಳ್ಳಲು ಬಯಸುವ ಎಲ್ಲರಿಗೂ ಹಿತವಾದ ಕನ್ನಡ ಪರಿಚಯವಾಗುತ್ತದೆ!

2:00 PM – 3:30 PM: Sutta Mutta Gotta? | ಸುತ್ತ ಮುತ್ತ ಗೊತ್ತಾ? 
Quizzing All Things Karnataka and Kannada | ಕರ್ನಾಟಕ ಮತ್ತು ಕನ್ನಡದ ಎಲ್ಲ ವಿಷಯಗಳ ಕುರಿತ ಮನರಂಜನಾತ್ಮಕ ಪ್ರಶ್ನೋತ್ತರ ಸ್ಪರ್ಧೆ
Thejaswi Udupa | ತೇಜಸ್ವಿ ಉಡುಪ

A 90 minute journey full of questions on interesting facts and stories from our state. The quiz is for teams of up to two people. There will be a written prelims, followed by a final round for the top teams. Hosted by Thejaswi Udupa, this is bound to be a fun-filled afternoon!
ನಮ್ಮ ರಾಜ್ಯದ ರೋಚಕ ಸಂಗತಿಗಳು ಮತ್ತು ಕಥೆಗಳೊಂದಿಗೆ 90 ನಿಮಿಷಗಳ ಪ್ರಶ್ನೋತ್ತರ ಪ್ರವಾಸ. ಎರಡು ಸದಸ್ಯರ ತಂಡಗಳು ಭಾಗವಹಿಸಬಹುದು. ಮೊದಲು ಬರಹ ರೂಪದ ಪ್ರಾಥಮಿಕ ಸುತ್ತು, ನಂತರ ಅಗ್ರ ತಂಡಗಳಿಗೆ ಅಂತಿಮ ಸುತ್ತು ಇರುತ್ತದೆ. ತೇಜಸ್ವಿ ಉಡುಪ ಅವರ ಆತಿಥ್ಯದಲ್ಲಿ ನಡೆಯುವ ಈ ಕ್ವಿಜ್‌ ಖಂಡಿತವಾಗಿಯೂ ಮೋಜುಮಸ್ತಿಯಿಂದ ಕೂಡಿದ ಮಧ್ಯಾಹ್ನವಾಗಲಿದೆ!

3:00 PM – 4:00 PM: An Afternoon of Magic | ಮಧ್ಯಾಹ್ನದ ಮಾಯಾಲೋಕ
A Wonder-Full Show for All Ages | ಎಲ್ಲ ವಯಸ್ಸಿನವರಿಗೆ ಬೆರಗಿನ ಪ್ರದರ್ಶನ
Inesh Shenoy and Ishaan Shenoy, Prahlad Acharya & Nakul Shenoy | ಇನೇಶ್ ಶೆಣೈ ಮತ್ತು ಇಶಾನ್ ಶೆಣೈ, ಪ್ರಹ್ಲಾದ್ ಆಚಾರ್ಯ & ನಕುಲ್ ಶೆಣೈ

Experience a world of laughter, mystery, and amazement with Bangalore’s beloved magical ensemble, Nakul Shenoy & Friends. This hour-long performance blends storytelling, comedy, mind-bending magic, and mesmerizing shadow play. Featuring the youthful energy of The Amazing iTwins and Prahlad Acharya’s spellbinding shadowgraphy from Speaking Shadows, the show enchants audiences of all ages. Whether discovering magic for the first time or a lifelong enthusiast, you’ll be transported to a realm where imagination rules and the impossible feels real—an unforgettable, joyous experience for the entire family.
ಬೆಂಗಳೂರಿನ ಜನಪ್ರಿಯ ಮಾಯಾಜಾಲದ ತಂಡ ನಕುಲ್ ಶೆಣೈ ಮತ್ತು ಸ್ನೇಹಿತರು ನಿಮ್ಮನ್ನು ನಗು, ರಹಸ್ಯ ಮತ್ತು ಆಶ್ಚರ್ಯಗಳ ಲೋಕಕ್ಕೆ ಕರೆದೊಯ್ಯುತಾರೆ. ಒಂದು ಗಂಟೆಯ ಈ ಕಾರ್ಯಕ್ರಮದಲ್ಲಿ ಕಥೆ, ಹಾಸ್ಯ, ಮನ ಮರುಳಾಗಿಸುವ ಮಾಯಾಜಾಲ ಮತ್ತು ಆಕರ್ಷಕ ಛಾಯಾ ಪ್ರದರ್ಶನ ಬೆರೆತಿದೆ.  ದಿ ಅಮೇಜಿಂಗ್ ಐಟ್ವಿನ್ಸ್‌ ಯುವ ಶಕ್ತಿ ಮತ್ತು ಪ್ರಹ್ಲಾದ್ ಆಚಾರ್ಯ ಅವರ ಸ್ಪೀಕಿಂಗ್ ಶಾಡೋಸ್ ನ ಛಾಯಾ ಪ್ರದರ್ಶನ ಕೌಶಲ್ಯದಿಂದ, ಈ ಪ್ರದರ್ಶನ ಎಲ್ಲ ವಯಸ್ಸಿನ ಪ್ರೇಕ್ಷಕರನ್ನು ರಂಜಿಸುತ್ತದೆ. ಮಾಯಾಜಾಲವನ್ನು ಮೊದಲ ಬಾರಿ ಕಂಡು ಹರ್ಷಿಸುವವರಾಗಿರಲಿ ಅಥವಾ ಜೀವನಪೂರ್ತಿ ಅಭಿಮಾನಿಗಳಾಗಿರಲಿ, ನೀವು ಸಂಪೂರ್ಣ ಕುಟುಂಬವಾಗಿ ಕಲ್ಪನೆಯ ಲೋಕದಲ್ಲಿ ನಿಂತು ಅಸಾಧ್ಯವನ್ನು ನಿಜವಾಗಿಯೂ ಅನುಭವಿಸುವ, ಅದ್ಭುತ ಸಂತೋಷದ ಕ್ಷಣಗಳನ್ನು ನಿಮ್ಮದಾಗಿಸಿಕೊಳ್ಳುವಿರಿ

3:00 PM – 4:30 PM: Kannada Gottilla | ಕನ್ನಡ ಗೊತ್ತಿಲ್ಲ 
Kannada 101: A Crash Course in Connection | ಕನ್ನಡ ೧೦೧: ಸಂವಹನದ ತ್ವರಿತ ಪಾಠಕ್ರಮ
Arpith Kumar | ಅರ್ಪಿತ್ ಕುಮಾರ್

Led by Arpith Kumar, Director of Kannada Gottilla, this beginner-friendly workshop makes picking up everyday Kannada simple, engaging, and fun. Through lively games, creative activities, and conversation practice, participants will learn basic phrases to navigate the city, connect with locals, and enjoy the language’s unique rhythm and charm. A warm introduction to Kannada for anyone eager to build confidence, spark curiosity, and feel a little more at home in Bengaluru.
ಕನ್ನಡ ಗೊತ್ತಿಲ್ಲ ಸಂಸ್ಥೆಯ ನಿರ್ದೇಶಕ ಅರ್ಪಿತ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯುವ ಈ ಆರಂಭಿಕ-ಸ್ನೇಹಿ ಕಾರ್ಯಕ್ರಮ, ಪ್ರತಿದಿನ ಬಳಕೆಯಾಗುವ ಕನ್ನಡ ಕಲಿಯುವುದನ್ನು ಸುಲಭ, ಆಸಕ್ತಿದಾಯಕ ಮತ್ತು ರಂಜನೀಯವಾಗಿಸುತ್ತದೆ. ಚುರುಕು ಆಟಗಳು, ಸೃಜನಾತ್ಮಕ ಚಟುವಟಿಕೆಗಳು ಮತ್ತು ಸಂಭಾಷಣೆ ಅಭ್ಯಾಸಗಳ ಮೂಲಕ, ಭಾಗವಹಿಸುವವರು ನಗರದೊಳಗೆ ಸಂಚರಿಸಲು, ಸ್ಥಳೀಯರೊಂದಿಗೆ ಮಾತುಕತೆ ಆರಂಭಿಸಲು, ಮತ್ತು ಕನ್ನಡದ ಲಯ-ಸೊಬಗು ಅನುಭವಿಸಲು ಬೇಕಾದ ಮೂಲಭೂತ ವಾಕ್ಯಗಳನ್ನು ಕಲಿಯುತ್ತಾರೆ. ಸ್ವಲ್ಪ ವಿಶ್ವಾಸ, ಕುತೂಹಲ, ಮತ್ತು ಸ್ವಲ್ಪ “ಇದು ನನ್ನ ಮನೆ” ಎನ್ನುವ ಭಾವನೆ ಬೆಳೆಸಿಕೊಳ್ಳಲು ಬಯಸುವ ಎಲ್ಲರಿಗೂ ಹಿತವಾದ ಕನ್ನಡ ಪರಿಚಯವಾಗುತ್ತದೆ!


4:00 PM – 5:30 PM: Beeso Haada – Songs of Labour | ಬೀಸೋ ಹಾಡ – ಶ್ರಮಿಕರ ಗೀತೆಗಳು
Folk Songs from the Soil of North Karnataka | ಉತ್ತರ ಕರ್ನಾಟಕದ ನೆಲದಿಂದ ಹೊಮ್ಮಿದ ಜನಪದ ಗೀತೆಗಳು
Shilpa Mudbi Kothakota & Kalaburagi Kala Mandali | ಶಿಲ್ಪಾ ಮುಡ್ಬಿ ಕೊತಕೋಟ ಕಲಬುರಗಿ ಕಲಾ ಮಂಡಲಿಯ ಕಲಾವಿದರು

Beeso Haada is the collective embodiment of oral musical traditions of labour. These songs collected from different women from across North Karnataka speak of labour of daily life, labour of gender and of caste. Collected and curated meticulously over the last two years, these songs taught by the hereditary practitioners from Kuruba and Golla community, speaks of daily struggles, aspirations, dreams, spirituality and resilience.
ಬೀಸೋ ಹಾಡ – ಕಾರ್ಮಿಕರ ಮೌಖಿಕ ಸಂಗೀತ ಸಂಪ್ರದಾಯಗಳ ಒಂದು ಸಾಮೂಹಿಕ ರೂಪವಾಗಿದೆ. ಉತ್ತರ ಕರ್ನಾಟಕದ ವಿವಿಧ ಭಾಗಗಳ ಮಹಿಳೆಯರಿಂದ ಸಂಗ್ರಹಿಸಲಾದ ಈ ಹಾಡುಗಳು ದೈನಂದಿನ ಬದುಕಿನ ಬವಣೆ, ಲಿಂಗ ಮತ್ತು ಜಾತಿ ಸಂಬಂಧಿತ ಶ್ರಮದ ಕುರಿತದ್ದಾಗಿವೆ. ಕುರುಬ ಮತ್ತು ಗೊಲ್ಲ ಸಮುದಾಯಗಳ ಆಚರಣೆಗಳಲ್ಲಿ ನಿರತರಾದ ಜನ ತಲೆತಲಾಂತರಗಳಿಂದ ಈ ಹಾಡುಗಳನ್ನು ಕಲಿಸುತ್ತಾ ಬಂದಿದ್ದು, ಇವನ್ನು ಕಳೆದ ಎರಡು ವರ್ಷಗಳಲ್ಲಿ ನಿಖರವಾಗಿ ಸಂಗ್ರಹಿಸಿ ಶೇಖರಿಸಲಾಗಿದೆ. ಈ ಹಾಡುಗಳು ಜನರ ದಿನನಿತ್ಯದ ಹೋರಾಟಗಳು, ಆಕಾಂಕ್ಷೆಗಳು, ಕನಸುಗಳು, ಆಧ್ಯಾತ್ಮಿಕತೆ ಮತ್ತು ಪುನಶ್ಚೇತರಿಕೆಯಂಥ ಅಂಶಗಳತ್ತ ಕೇಂದ್ರೀಕೃತವಾಗಿವೆ.

5:30 PM – 6:45 PM: Prathibimba – #13, Srimata, Sadhanakeri, Dharwad | ಪ್ರತಿಬಿಂಬ – #13, ಶ್ರೀಮಾತ, ಸಾಧನಕೇರಿ, ಧಾರವಾಡ
A Multi-Media Tribute to Jnanpith Laureate Da Ra Bendre | ಜ್ಞಾನಪೀಠ ಪ್ರಶಸ್ತಿ ವಿಜೇತ ದ. ರಾ. ಬೇಂದ್ರೆ ಅವರ ಗೌರವಾರ್ಥ ಬಹು-ಮಾಧ್ಯಮ ಪ್ರದರ್ಶನ
Janani Murali & Prathibha Ramaswamy | ಜನನಿ ಮುರಳಿ & ಪ್ರತಿಭಾ ರಾಮಸ್ವಾಮಿ

This performance is a poetic mirror of a man, his art, and the timeless questions he left behind. Da. Ra. Bendre was a poet, philosopher, and pioneer of the Navodaya movement. He remains one of Kannada literature’s most luminous voices. Awarded the Jnanpith in 1973 for Naaku Tanti, his poetry reflected life as he lived it: intimate, questioning, and endlessly evolving. Prathibimba captures the essence of Bendre’s journey: his joys, struggles, and transformation from youth to old age, from words to numbers. Drawing from Tagore and Aurobindo, he wove together nationalism, spirituality, and humanism into a vision that still stirs the soul.
ಈ ಪ್ರದರ್ಶನವು ಒಬ್ಬ ಕವಿ, ಆತನ ಕಲೆ, ಮತ್ತು ಆತ ಬಿಟ್ಟು ಹೋದ ಶಾಶ್ವತ ಪ್ರಶ್ನೆಗಳ ಕಾವ್ಯಮಯ ಪ್ರತಿಬಿಂಬವಾಗಿದೆ. ದ.ರಾ. ಬೆಂದ್ರೆ — ಒಬ್ಬ ಕವಿ, ತತ್ತ್ವಚಿಂತಕ ಮತ್ತು ನವೋದಯ ಚಳವಳಿಯ ಪ್ರವರ್ತಕ. ಅವರು ಇಂದಿಗೂ ಕನ್ನಡ ಸಾಹಿತ್ಯದ ಅತ್ಯಂತ ಧೀಮಂತ ಧ್ವನಿಗಳಲ್ಲಿ ಒಬ್ಬರು. 1973ರಲ್ಲಿ ನಾಕು ತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಬೆಂದ್ರೆಯವರ ಕಾವ್ಯ, ಬದುಕಿನಂತೆಯೇ ಆತ್ಮೀಯವಾಗಿ ಪ್ರಶ್ನಿಸುತ್ತಾ ನಿರಂತರವಾಗಿ ರೂಪಾಂತರಗೊಳ್ಳುವಂತಿತ್ತು. ಪ್ರತಿಬಿಂಬ ಬೆಂದ್ರೆಯವರ ಜೀವನದ ಸಾರವನ್ನು ಹಿಡಿದಿಡುತ್ತದೆ — ಅವರ ಹರ್ಷ, ಹೋರಾಟ, ಮತ್ತು ಯೌವನದಿಂದ ಮುಪ್ಪಿನವರೆಗಿನ ಸಂಘರ್ಷಗಳು; ಪದಗಳಿಂದ ಅಂಕೆಗಳವರೆಗೆ ಅವರ ಪಯಣ. ಟಾಗೋರ್ ಮತ್ತು ಅರವಿಂದರಿಂದ ಪ್ರೇರಣೆ ಪಡೆದ ಅವರು ರಾಷ್ಟ್ರಭಾವ, ಆಧ್ಯಾತ್ಮಿಕತೆ ಮತ್ತು ಮಾನವೀಯತೆಯನ್ನು ಒಂದೆಡೆ ಸೇರಿಸಿ, ಇಂದಿಗೂ ಮನಸ್ಸನ್ನು ತಟ್ಟುವ ದೃಷ್ಟಿಕೋನವನ್ನು ಹೆಣೆದರು.

7:30 PM – 9:00 PM: 100 Years of Grooving! | ನೂರು ವರ್ಷಗಳ ಸಂಭ್ರಮ! 
Time Travel through a Century of Bengaluru’s Beats | ಬೆಂಗಳೂರಿನ ತಾಳಮೇಳಗಳ ಮೂಲಕ ನೂರು ವರ್ಷಗಳ‌ ಕಾಲಯಾನ
Berty, Rajesh Radhakrishnan, Hari, Steve, Divya, Prithwin & Swami | ಬರ್ಟಿ, ರಾಜೇಶ್ ರಾಧಾಕೃಷ್ಣನ್, ಹರಿ, ಸ್ಟೀವ್, ದಿವ್ಯ, ಪೃಥ್ವಿನ್ & ಸ್ವಾಮಿ

Step into a soundscape where history has rhythm and every decade hums a new tune. GROOVE BLR takes you on a rollicking ride through 100 years of Bengaluru’s music: from the regal echoes of colonial brass bands and veena virtuosos to disco fever, bhavageethe’s lyrical grace, and the punch of Kannada rap. Narrated by a sharp, quick-witted Quizmaster armed with stories, surprises, and city trivia, this concert blends live performance, storytelling, and laughter in one irresistible mix. Expect clever musical mashups, playful audience interactions, and a few surprises in between. As melodies shift from Gayana Samaja’s grandeur to the pulsing pubs of Church Street, you’ll hear the city’s journey through change, chaos, and creativity. A musical celebration that proves one thing: Bengaluru doesn’t just make music, it becomes music.
ಇತಿಹಾಸದ ಧ್ವನಿತರಂಗಗಳಲ್ಲಿ ಪ್ರತಿಯೊಂದು ದಶಕವೂ ಹೊಸ ನಾದವನ್ನು ಹುಟ್ಟಿಸುವ ಸಂಗೀತ ಲೋಕಕ್ಕೆ ಹೆಜ್ಜೆಯಿಡಿ. GROOVE BLR ನಿಮ್ಮನ್ನು ಬೆಂಗಳೂರಿನ ಶತಮಾನದ ಸಂಗೀತ ಪಯಣದಲ್ಲಿ ತೇಲಿಸಿಕೊಂಡು ಹೋಗುತ್ತದೆ: ಫಿರಂಗಿಯರ  ಬ್ರಾಸ್ ಬ್ಯಾಂಡ್‌ಗಳ ಭಾರೀ ಪ್ರತಿಧ್ವನಿ ಹಾಗೂ ನಮ್ಮ ಪುಣ್ಯಭೂಮಿಯ ಸುಮಧುರ ವೀಣೆಯಿಂದ  ಹಿಡಿದು ನವೀನಯುಗದ ಡಿಸ್ಕೋ, ಹೃದಯಸ್ಪರ್ಶಿ ಭಾವಗೀತೆಗಳು, ಕನ್ನಡದ ರಾಪ್‌  ಸಂಗೀತದವರೆಗೂ. ಚತುರ ಮತ್ತು ಸ್ವಾರಸ್ಯಪೂರ್ಣ ರಸಪ್ರಶ್ನೆ ನಿರೂಪಕನಿಂದ ನಿಮಗೆ ಹಲವು ರೋಚಕ ಕತೆಗಳು, ವಿಸ್ಮಯಗಳು, ನಗರದ ಹಲವು ಕುತೂಹಲಕಾರಿ ವಿಷಯಗಳು ತಿಳಿಯುತ್ತವೆ. ಜೊತೆಗೆ ಜೀವಂತ ಸಂಗೀತ, ಕಥೆಗಳು ಮತ್ತು ನಗೆಬುಗ್ಗೆ ನಿಮ್ಮನ್ನು ಯಕ್ಷಲೋಕಕ್ಕೆ ಕೊಂಡೊಯ್ಯುತ್ತದೆ. ಚತುರ ಸಂಗೀತ ಮಿಶ್ರಣಗಳು, ಪ್ರೇಕ್ಷಕರೊಡನೆ ಆಟದಂತಹ ಸಂವಹನಗಳು, ಮತ್ತು ಕೆಲ ಅಚ್ಚರಿಗಳನ್ನು ಈ ಪ್ರದರ್ಶನದಲ್ಲಿ ನಿರೀಕ್ಷಿಸಬಹುದು. ಗಾಯನ ಸಮಾಜದ ಗಂಭೀರತೆಯಿಂದ ಹಿಡಿದು ಚರ್ಚ್ ಸ್ಟ್ರೀಟ್‌ನ ಪಬ್‌ ಗಳ ತಾಳದವರೆಗೆ, ನಗರವು ಹಲವು ಬದಲಾವಣೆ, ಅಸ್ತವ್ಯಸ್ತತೆ, ಮತ್ತು ಸೃಜನಶೀಲತೆಯ ಮೂಲಕ ನಡೆಸಿದ ಪಯಣವನ್ನು ಕೇಳಬಹುದು. ಈ ಸಂಗೀತೋತ್ಸವ ಒಂದನ್ನಂತೂ ಸಾಬೀತು ಪಡಿಸುತ್ತದೆ: ಬೆಂಗಳೂರು ಕೇವಲ ಸಂಗೀತವನ್ನು ಸೃಷ್ಟಿಸುವುದಲ್ಲ, ಅದು ತಾನೇ ಸಂಗೀತವಾಗುತ್ತದೆ.

Across the Weekend | 11:00 AM – 7:00 PM

Exploring Karnataka Exhibition | ಕರ್ನಾಟಕ ಕುರಿತ ಪ್ರದರ್ಶನದೊಳಗೊಂದು ಸುತ್ತು
Monuments from across the State by Rudragaud Indi | ರುದ್ರಗೌಡ ಇಂಡಿ ಅವರಿಂದ ರಾಜ್ಯದೆಲ್ಲೆಡೆಯ ಪ್ರದರ್ಶನ ಸ್ಮಾರಕಗಳು
Ground Floor Foyer
Journey through Karnataka’s monuments and marvels—an ode to the state’s rich heritage, innovation, and timeless artistry captured through striking pieces from across the region.
ಕರ್ನಾಟಕದ ಸ್ಮಾರಕಗಳ ಮತ್ತು ಅದ್ಭುತಗಳ ಲೋಕದಲ್ಲಿ ಒಂದು ಸಂಚಾರ — ಈ ರಾಜ್ಯದ ಸಮೃದ್ಧ ಪರಂಪರೆ, ಹೊಸ ಆವಿಷ್ಕಾರ ಮನೋಭಾವ ಹಾಗೂ ಕಾಲಾತೀತ ಕಲಾಮೌಲ್ಯಗಳನ್ನು ಒಳಗೊಂಡ ಕಲಾಕೃತಿಗಳ ಮೂಲಕ ಸಂಭ್ರಮಿಸುವ ನಮನ.
Aata Aadu Bengaluru by Kavade | ಕವಡೆ ತಂಡದಿಂದ ಆಟ ಆಡು ಬೆಂಗಳೂರು
Learn to Play Traditional Board Games with Family and Friends | ಮನೆ ಮಂದಿ ಮತ್ತು ಗೆಳೆಯರೊಂದಿಗೆ ಪಾರಂಪರಿಕ ಮಣೆಯಾಟಗಳನ್ನಾಡಲು ಕಲಿಯಿರಿ
Ground Floor Foyer
Roll the dice, count your seeds, and rediscover joy! Traditional board games for all ages—where fun, family, and a touch of nostalgia meet.
ಪಾಸೆ ಎಸೆದು, ಅಕ್ಕಿ ಎಣಿಸಿ, ಹಳೆ ಖುಷಿಯನ್ನು ಮತ್ತೆ ಕಂಡುಹಿಡಿಯಿರಿ! ಎಲ್ಲಾ ವಯಸ್ಸಿನವರಿಗೂ ಸೂಕ್ತವಾದ ಈ ಪೌರಾಣಿಕ ಆಟಗಳಲ್ಲಿ ಸಂಭ್ರಮ, ಕುಟುಂಬ ಮತ್ತು ನೆನಪಿನ ಸಿಹಿತನ ಒಂದೇ ವೇದಿಕೆಯಲ್ಲಿ ಸೇರುತ್ತವೆ.
Art Showcase by Art Park | ಆರ್ಟ್‌ ಪಾರ್ಕ್‌ ವತಿಯಿಂದ ಕಲಾ ಪ್ರದರ್ಶನ
Display of Traditional Arts by Modern Artists | ಆಧುನಿಕ ಕಲಾವಿದರಿಂದ ಪಾರಂಪರಿಕ ಕಲಾ ಪ್ರದರ್ಶನ
First Floor Foyer
A vibrant display where young artists reinterpret Karnataka’s traditional art forms through contemporary eyes—bridging heritage and modernity in bold, creative strokes.
ಯುವ ಕಲಾವಿದರು ಕರ್ನಾಟಕದ ಪಾರಂಪರಿಕ ಕಲಾರೂಪಗಳನ್ನು ಆಧುನಿಕ ದೃಷ್ಟಿಯಿಂದ ಮರುಸ್ವರೂಪಗೊಳಿಸಿರುವ ಚೈತನ್ಯಭರಿತ ಪ್ರದರ್ಶನ — ಪಾರಂಪರ್ಯ ಮತ್ತು ನವೀನತೆಯ ಸೇತುವೆಯಂತೆ, ಕಲಾತ್ಮಕ ಹೊಳೆಯೊಳಗೆ ನಿಮಗೂ ಆಹ್ವಾನ.
Book Nook by Atta Galata | ಆಟಾ ಗಲಾಟ ವತಿಯಿಂದ ಪುಸ್ತಕ ಮೂಲೆ
Read. Revel. Rejoice. | ಓದಿ. ಸಂಭ್ರಮಿಸಿ. ಆನಂದಿಸಿ.
Hall 2
Find your next Kannada favourite! A cozy corner to browse, read, and revel in stories from Karnataka’s literary landscape—perfect for readers of all ages.
ನಿಮ್ಮ ಮುಂದಿನ ನೆಚ್ಚಿನ ಕನ್ನಡ ಪುಸ್ತಕವನ್ನು ಇಲ್ಲಿ ಕಂಡುಹಿಡಿಯಿರಿ! ಕರ್ನಾಟಕದ ಸಾಹಿತ್ಯಲೋಕದ ಕಥೆಗಳಲ್ಲಿ ತಲೆಮರೆಸಿಕೊಳ್ಳಲು ಸೂಕ್ತವಾದ — ಎಲ್ಲಾ ವಯಸ್ಸಿನ ಓದುಗರಿಗೂ ಮನಸೂರೆಗೊಳ್ಳುವ ಹಿತಕರ ಪುಸ್ತಕ ಮೂಲೆ.
Karnataka Wildlife in Light and Shadow
| ನೆರಳು ಬೆಳಕಿನಲ್ಲಿ ಕರ್ನಾಟಕದ ವನ್ಯಜೀವಿ ಸಂಕುಲ
Capturing Biodiversity by Arun Kumar Krishnaiah | ಅರುಣ್‌ ಕುಮಾರ್‌ ಕೃಷ್ಣಯ್ಯ ಅವರಿಂದ ಜೀವವೈವಿಧ್ಯದ ಬೆಡಗಿನ ಸೂರೆ
Gallery
Through Arun Kumar Krishnaiah’s lens, glimpse Karnataka’s wild heart—majestic, intimate, and alive in every play of light, shadow, and silence.
ಅರುಣ್ ಕುಮಾರ್ ಕೃಷ್ಣಯ್ಯ ಅವರ ಕ್ಯಾಮೆರಾ ಕಣ್ಣಿನ ಮೂಲಕ ಕರ್ನಾಟಕದ ಕಾಡಿನ ಮಿಡಿತವನ್ನು ಅನುಭವಿಸಿ — ಪ್ರತಿಯೊಂದು ಬೆಳಕು, ನೆರಳು ಮತ್ತು ಮೌನದಲ್ಲೂ ಜೀವಂತವಾಗಿರುವ ಗೌರವಪೂರ್ಣ
, ಆಂತರಿಕ ಮತ್ತು ಚೇತನಭರಿತ ಪ್ರಕೃತಿಯ ರಹಸ್ಯ ಮುಖಗಳನ್ನು ನೋಡಬಹುದು.
Chasing Clues, Celebrating Culture | ಸುಳುಹುಗಳ ಬೆನ್ನು ಹತ್ತಿ, ಸಂಸ್ಕೃತಿಯ ವಿಜೃಂಭಣೆ
A Scavenger Hunt through Karnataka! | ಕರ್ನಾಟಕದ ಉದ್ದಗಲಕ್ಕೆ ಒಂದು ಸಂಸ್ಕೃತಿ-ಶೋಧಕ ಬೇಟೆ!
Across the Building
Unravel riddles, uncover stories, and race through Karnataka’s cultural heritage—an exciting scavenger hunt adventure for the whole family at BIC!
ಒಗಟುಗಳನ್ನು ಬಿಚ್ಚಿ, ಕಥೆಗಳನ್ನು ಪತ್ತೆಹಚ್ಚಿ, ಕರ್ನಾಟಕದ ಸಂಸ್ಕೃತಿಯ ಹಾದಿಯಲ್ಲಿ ಓಡಾಡಿ — ಕುಟುಂಬದ ಎಲ್ಲ ಸದಸ್ಯರಿಗೂ ರೋಚಕ ಅನುಭವ ಕೊಡುವ ಈ ಹುಡುಕಾಟ ಸಾಹಸಕ್ಕೆ BICನಲ್ಲಿ ಭಾಗಿಯಾಗಿ!
Women Vachana Poets of Karnataka by Azim Premji University | ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ವತಿಯಿಂದ ಕರ್ನಾಟಕದ ವಚನಕಾರ್ತಿಯರು
Cataloguing the Wisdom of Life  | ಜೀವನ ವಿವೇಕದ ಸಂಗ್ರಹ
Second Floor Foyer
Discover the poetic soul of North Karnataka—vachanas brought to life through research, illustration, and design, preserving voices that continue to inspire centuries later.
ಉತ್ತರ ಕರ್ನಾಟಕದ ಕಾವ್ಯಾತ್ಮಕ ಆತ್ಮವನ್ನು ಅನ್ವೇಷಿಸಿ — ಸಂಶೋಧನೆ, ಚಿತ್ರಣ ಮತ್ತು ವಿನ್ಯಾಸಗಳ ಮೂಲಕ ಜೀವಂತಗೊಳಿಸಿರುವ ವಚನಗಳು, ಶತಮಾನಗಳ ನಂತರವೂ ಪ್ರೇರಣೆ ನೀಡುತ್ತಿರುವ ಸ್ವರಗಳನ್ನು ಸಂರಕ್ಷಿಸುತ್ತವೆ.
Sculptures in Soap | ಸಾಬೂನಿನಲ್ಲಿ ಶಿಲ್ಪಗಳು
A Legacy Preserved by N S Seshadri (1936-2009)|ಎನ್‌ ಎಸ್‌ ಶೇಷಾದ್ರಿ (1936-2009) ಅವರಿಂದ ಪರಂಪರೆಯ ಸಂರಕ್ಷಣೆ
Second Floor Foyer

N S Seshadri (1936-2009) was an incredibly gifted artist whose legacy has been preserved through intricately carved soap sculptures. Self-taught, he created with passion and precision in equal measure. His daughter, Chinmai, has curated a selection of the 60-year-old sculptures in display of skill and devotion to craft.
ಅದ್ಭುತ ಸಹಜ ಪ್ರತಿಭೆಯ ಮೇರು ಕಲಾವಿದರಾದ ಎನ್‌ . ಎಸ್‌. ಶೇಷಾದ್ರಿ (1936-2009) ಅವರ ಕಲಾ ಪರಂಪರೆಯು ಸೂಕ್ಷ್ಮವಾಗಿ ಕೆತ್ತಲ್ಪಟ್ಟಿರುವ ಸಾಬೂನು ಶಿಲ್ಪಗಳಲ್ಲಿ ಜೀವಂತವಾಗಿ ಉಳಿದಿದೆ. ಸ್ವ-ಕಲಿಕೆಯಿಂದ ರೂಪುಗೊಂಡ ಒತ್ತಾಸೆಯೊಂದಿಗೆ ನಿಖರತೆಯ ಸಮಾನ ಸಂಯೋಜನೆ ಅವರ ಕಲೆಯ ವಿಶಿಷ್ಠತೆ. ಅವರ ಪುತ್ರಿ ಚಿನ್ಮಯಿ ಅವರು ಕೌಶಲ್ಯ ಹಾಗೂ ಕಲಾನಿಷ್ಠೆಯನ್ನು  ಬಿಂಬಿಸುವ ಆರು ದಶಕಗಳ ಕಲಾಕೃತಿಗಳನ್ನು ಆಯ್ದು ಸಂಗ್ರಹಿಸಿ ರಸಾಸ್ವಾದನೆಗೆ ಒದಗಿಸಿದ್ದಾರೆ.

 

Find the schedule for Day 2 here!

 

Presented by:

Artists

Nagathihalli Chandrashekhar | ನಾಗತಿಹಳ್ಳಿ ಚಂದ್ರಶೇಖರ್

Senior Film Director | ಹಿರಿಯ ಚಲನಚಿತ್ರ ನಿರ್ದೇಶಕರು

Dr. Nagathihalli Chandrashekhar is a celebrated author, lyricist, and director. Dr. Chandrashekhar’s cinematic journey began with the award-winning screenplay for Kaadina Benki and his distinguished directorial career includes 15 feature films and 10 teleserials. His film America! America! remains a Kannada classic. He has penned acclaimed novels like Valase Hakkiya Haadu and Baa Nalle Madhuchandrake, short story collections such as Chidra, Nanna Preethiya Huduganige and Kathayatre, travelogues including Ayana and Dakshina Druvadim.

A three-time National Film award winner, he has also received 13 Karnataka State Film awards, 3 Filmfare awards, and prestigious honors like the Rajyotsava, Nudisiri and Puttanna Kanagal Lifetime achievement awards. Beyond the arts, he has undertaken cultural and rural transformation work in his native village Nagathihalli through his ‘Abhivyakti Saamskrutika Vedike’, manifesting his deep commitment to social causes.  

ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರು ಕರ್ನಾಟಕದ ಹೆಸರಾಂತ ಲೇಖಕ, ಗೀತರಚನಕಾರ ಮತ್ತು ನಿರ್ದೇಶಕರಾಗಿದ್ದಾರೆ. ಚಿತ್ರರಂಗದಲ್ಲಿ ಅವರ ಪಯಣ ಕಾಡಿನ ಬೆಂಕಿ ಚಿತ್ರಕಥೆ ಮೂಲಕ ಆರಂಭವಾಗಿ, 15 ಚಲನಚಿತ್ರಗಳು ಮತ್ತು 10 ಧಾರಾವಾಹಿಗಳ ನಿರ್ದೇಶನದೊಂದಿಗೆ ಮುಂದುವರಿದಿದೆ. ಅಮೆರಿಕಾ! ಅಮೆರಿಕಾ!  ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಆಗಿದೆ. ಅವರು ವಲಸೆ ಹಕ್ಕಿಯ ಹಾಡು, ಬಾ ನಲ್ಲೆ ಮಧುಚಂದ್ರಕೆ ಎಂಬ ಪ್ರಸಿದ್ಧ ಕಾದಂಬರಿಗಳನ್ನು ಹಾಗೂ ಛಿದ್ರ, ನನ್ನ ಪ್ರೀತಿಯ ಹುಡುಗನಿಗೆ, ಕಥಾಯಾತ್ರೆ ಎಂಬ ಕಥಾ ಸಂಕಲನಗಳನ್ನು ಹಾಗೂ ಅಯನ ಮತ್ತು ದಕ್ಷಿಣ ದ್ರುವದಿಂ ಎಂಬ ಪ್ರವಾಸ ಕಥನಗಳನ್ನು ರಚಿಸಿದ್ದಾರೆ.

ಅವರು 3 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 13 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, 3 ಫಿಲ್ಮ್‌ಫೇರ್ ಪ್ರಶಸ್ತಿಗಳು ಹಾಗೂ ರಾಜ್ಯೋತ್ಸವ, ನುಡಿಸಿರಿ, ಪುಟ್ಟಣ್ಣ ಕಣಗಾಲ್ ಜೀವನ ಸಾಧನೆ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಲೆಗಳ ಹೊರತಾಗಿ, ಡಾ. ಚಂದ್ರಶೇಖರ್ ಅವರು ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ’ ಮೂಲಕ ತಮ್ಮ ಹಳ್ಳಿ ನಾಗತಿಹಳ್ಳಿಯಲ್ಲಿ ಸಾಂಸ್ಕೃತಿಕ ಮತ್ತು ಗ್ರಾಮೀಣ ಪರಿವರ್ತನೆಗಳಂತಹ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ತಮ್ಮ ಸಾಮಾಜಿಕ ಬದ್ದತೆಯನ್ನು ಮೆರೆದಿದ್ದಾರೆ.

M C Ramesh | ಎಂ ಸಿ ರಮೇಶ್‌

Chairman, Karnataka Shilpakala Academy | ಅಧ್ಯಕ್ಷರು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ

M C Ramesh, a Bangalore-based visual artist and sculptor, is trained in Drawing and Painting at Ken School of Art, Bengaluru (1991). He honed his practice at the Kanoria Centre for Arts, Ahmedabad (1992–94), and has since exhibited his works widely across India and abroad. His artistic journey includes participation in Mark Clifford sculpture exhibition at Jehangir Art Gallery, Mumbai, Arythmia solo travelling shows at various Alliance Française centres, and involvement in numerous art camps across the country – all of which have significantly shaped his creative evolution.
Ramesh has received several prestigious honours for his work, including the Karnataka Lalita Kala Academy Award, the Junior Fellowship Grant from the Ministry of Human Resource Development, New Delhi, the Bendre-Hussain Scholarship Award from the Bombay Art Society, and First Place in the International Street Art Contest held in Geldren, Germany.
He currently serves as the Chairman of the Karnataka Shilpakala Academy, Government of Karnataka.
ಎಂ ಸಿ ರಮೇಶ್ ಬೆಂಗಳೂರು ಮೂಲದವರಾಗಿದ್ದು  ದೃಶ್ಯ ಮತ್ತು ಶಿಲ್ಪಕಲೆ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ ಕಲಾವಿದರಾಗಿದ್ದಾರೆ. ಅವರು ಬೆಂಗಳೂರಿನ ಕೆನ್ ಆರ್ಟ್ ಶಾಲೆಯಿಂದ ಚಿತ್ರಣ ಮತ್ತು ಚಿತ್ರಕಲೆ ವಿಭಾಗಗಳಲ್ಲಿ ತರಬೇತಿ ಪಡೆದಿದ್ದಾರೆ. 1992ರಿಂದ 1994ರವರೆಗೆ ಅಹಮದಾಬಾದ್‌ನ ಕನೋರಿಯಾ ಕಲಾ ಕೇಂದ್ರದಲ್ಲಿ ಕೌಶಲಗಳನ್ನು ಬೆಳೆಸಿಕೊಂಡ ಅವರು ಭಾರತ ಮತ್ತು ವಿದೇಶಗಳಲ್ಲಿ ತಮ್ಮ ಕಲಾಕೃತಿಗಳನ್ನು ವ್ಯಾಪಕವಾಗಿ ಪ್ರದರ್ಶಿಸಿದ್ದಾರೆ. ಮುಂಬೈಯ ಜೆಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಮಾರ್ಕ್‌ ಕ್ಲಿಫೊರ್ಡ್‌ ಪ್ರದರ್ಶನ, ಭಾರತದ ವಿವಿಧ ಅಲೈಯನ್ಸ್‌ ಫ್ರಾನ್ಕೈಸ್‌ ಕೇಂದ್ರಗಳಲ್ಲಿ ಆರಿಥಿಮಿಯ ಸೋಲೋ ಟ್ರಾವೆಲಿಂಗ್‌ ಶೋ ಹಾಗೂ ದೇಶದ ವಿವಿಧ ಕಲಾ ಮತ್ತು ಶಿಲ್ಪ ಶಿಬಿರಗಳಲ್ಲಿ ನಿರಂತರವಾಗಿ ಭಾಗವಹಿಸಿದ್ದು ಅವರ ಸೃಜನಾತ್ಮಕ ಬೆಳವಣಿಗೆಗೆ ವೇದಿಕೆ ಒದಗಿಸಿವೆ.
ಕಲಾ ಕ್ಷೇತ್ರದಲ್ಲಿನ ಸಾಧನೆಗಾಗಿ ರಮೇಶ್‌ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಜೂನಿಯರ್ ಫೆಲೋಶಿಪ್,  ಬಾಂಬೆ ಆರ್ಟ್‌ ಸೊಸೈಟಿ ವತಿಯಿಂದ ಬೆಂದ್ರೆ-ಹುಸೇನ್ ವಿದ್ಯಾರ್ಥಿವೇತನ ಮತ್ತು ಜರ್ಮನಿಯ ಗೆಲ್ಬರ್ನ್‌ ನಲ್ಲಿ ನಡೆದ  ಅಂತರರಾಷ್ಟ್ರೀಯ ಬೀದಿ ಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಇವರಿಗೆ ಲಭಿಸಿದೆ.
ರಮೇಶ್ ಅವರು ಪ್ರಸ್ತುತ ರಾಜ್ಯ ಸರ್ಕಾರದ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Sri Vinayaka Yuvakara Kala Balaga | ಶ್ರೀ ವಿನಾಯಕ ಯುವಕರ ಕಲಾ ಬಳಗ

Performers | ಕಲಾವಿದರು

Sri Vinayaka Yuvakara Kala Balaga, Mandya, led by renowned folk artist K.B. Swamy, celebrates Karnataka’s traditional arts including Pooja Kunita, Dollu Kunita, Kolata, and Donne Varase. Honored by the Department of Kannada and Culture, Swamy is famed for his acrobatic Pooja Kunita, preserving and teaching these vibrant folk traditions nationwide.

ಖ್ಯಾತ ಜನಪದ ಕಲಾವಿದ ಮಂಡ್ಯದ ಕೆ. ಬಿ. ಸ್ವಾಮಿ ಅವರ ನೇತೃತ್ವದ ಶ್ರೀ ವಿನಾಯಕ ಯುವಕರ ಕಲಾ ಬಳಗವು ಪೂಜಾ ಕುಣಿತ, ಡೊಳ್ಳು ಕುಣಿತ, ಕೋಲಾಟ, ಮತ್ತು ದೊಣ್ಣೆ ವರಸೆ ಸೇರಿದಂತೆ ಕರ್ನಾಟಕದ ಪಾರಂಪರಿಕ ಕಲಾ ವಿಧಾನಗಳನ್ನು ಸಂಭ್ರಮಿಸುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗೌರವಕ್ಕೆ ಭಾಜನರಾದ ಸ್ವಾಮಿಯವರು ಪೂಜಾ ಕುಣಿತಕ್ಕೆ ಹೆಸರಾಗಿದ್ದಾರೆ. ಅಲ್ಲದೆ ತಮ್ಮ ಶಾರೀರಿಕ ಕೌಶಲ್ಯದಿಂದ ಇಂಥ ಜೀವಂತ ಜಾನಪದ ಕಲೆಗಳನ್ನು ಉಳಿಸಿ, ದೇಶಾದ್ಯಂತ ಪರಿಚಯಿಸುತಿದ್ದಾರೆ.

Students of Suraaghavi Foundation | ಸುರಾಘವಿ ಫೌಂಡೇಷನ್ ವಿದ್ಯಾರ್ಥಿಗಳು

Shashidhara Narasimhaswamy, Anagha Hegde and Smrithi Kumar | ಶಶಿಧರ ನರಸಿಂಹಸ್ವಾಮಿ, ಅನಘ ಹೆಗಡೆ ಮತ್ತು ಸ್ಮೃತಿ ಕುಮಾರ್‌

Vinayak Torvi | ವಿನಾಯಕ ತೊರವಿ

Vocalist | ಗಾಯಕ

Pt. Vinayak Torvi is a distinguished Hindustani vocalist from Dharwad, representing both the Gwalior and Kirana gharanas. A disciple of Gayanacharya Gururao Deshpande and Bharat Ratna Pt. Bhimsen Joshi, he trained rigorously for over 20 years under the traditional gurukul system. A postgraduate in music from Karnataka University, he further honed his art under Pt. Mallikarjun Mansoor and Padmavibhushan Dr. Gangubai Hangal. With over 100 original compositions, Pt. Torvi has performed at prestigious national and international festivals, including Sawai Gandharva Mahotsav and the SAARC Music Festival. Founder of the Gururao Deshpande Sangeet Sabha, his initiatives like Graama Sangeet Yatra have brought classical music to rural audiences, cementing his legacy as both an artiste and cultural visionary.

ಪಂಡಿತ ವಿನಾಯಕ ತೊರವಿ ಧಾರವಾಡದ ಗಣ್ಯ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾಗಿದ್ದು, ಗ್ವಾಲಿಯರ್ ಹಾಗೂ ಕಿರಾನಾ ಘರಣೆಯ ಪರಂಪರೆಯನ್ನು ಪ್ರತಿನಿಧಿಸುತ್ತಾರೆ. ಗಾಯನಾಚಾರ್ಯ ಗುರುರಾವ್ ದೇಶಪಾಂಡೆ ಹಾಗೂ ಭಾರತ ರತ್ನ ಪಂಡಿತ ಭೀಮಸೇನ್ ಜೋಷಿ ಅವರ ಶಿಷ್ಯರಾಗಿರುವ ಅವರು ಪರಂಪರೆಯಂತೆ ಗುರುಕುಲ ಪದ್ಧತಿಯಲ್ಲಿ 20 ವರ್ಷಕ್ಕಿಂತ ಹೆಚ್ಚು ಕಾಲ ಕಠಿಣ ತರಬೇತಿ ಪಡೆದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ನಂತರ ಪಂಡಿತ ಮಲ್ಲಿಕಾರ್ಜುನ ಮನ್ಸೂರ್ ಹಾಗೂ ಪದ್ಮವಿಭೂಷಣ ಡಾ. ಗಂಗುಬಾಯಿ ಹಾನಗಲ್ ಅವರ ಮಾರ್ಗದರ್ಶನದಲ್ಲೂ ತಮ್ಮ ಸಾಧನೆಯನ್ನು ಮತ್ತಷ್ಟು ಬೆಳೆಸಿಕೊಂಡಿದ್ದಾರೆ. ನೂರಕ್ಕಿಂತ ಹೆಚ್ಚು ಮೂಲಭೂತ ರಚನೆಗಳ ರಚನೆಕಾರರಾದ ಪಂಡಿತ ತೊರವಿ  ಅವರು ಸವಾಯಿ ಗಂಧರ್ವ ಮಹೋತ್ಸವ ಮತ್ತು ಸಾರ್ಕ್ ಸಂಗೀತೋತ್ಸವ ಮುಂತಾದ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಗಾಯನ ನೀಡಿದ್ದಾರೆ. ಗುರುರಾವ್ ದೇಶಪಾಂಡೆ ಸಂಗೀತ ಸಭೆಯ ಸ್ಥಾಪಕರಾಗಿರುವ ಅವರು ಗ್ರಾಮ ಸಂಗೀತ ಯಾತ್ರೆಯಂತಹ ಅನೇಕ ಉಪಕ್ರಮಗಳ ಮೂಲಕ ಶಾಸ್ತ್ರೀಯ ಸಂಗೀತವನ್ನು ಗ್ರಾಮೀಣ ಜನತೆಗೆ ತಲುಪಿಸುವುದರ ಮೂಲಕ ಕಲಾವಿದರ ಗುರುವೇ ಅಲ್ಲದೆ ಸಾಂಸ್ಕೃತಿಕ ಮುಂಗಾಣ್ಕೆಯುಳ್ಳವರಾಗಿಯೂ ಖ್ಯಾತರು.

Gurumurthy Vaidya | ಗುರುಮೂರ್ತಿ ವೈದ್ಯ

Tabla | ತಬಲಾ

Pandit Gurumurthy Vaidya, affectionately known as “Tabla Guru,” is among India’s foremost percussionists, celebrated for his precision, versatility, and deep-rooted understanding of rhythm. Hailing from Yellapura, Karnataka, he was initiated into tabla by Pt. G. G. Hegde, and later trained under Pt. Basavaraj Bendigere before becoming a disciple of the legendary Pt. Ravindra Yavagal of the Farrukhabad Gharana. His mastery reflects a seamless blend of technical brilliance and soulful artistry. Deeply inspired by the rhythmic traditions of Yakshagana, Gurumurthy has become a sought-after accompanist and solo performer, carrying forward the illustrious lineage of Ustad Ahmed Jan Thirakhwa with grace and distinction.

ಪಂಡಿತ ಗುರುಮೂರ್ತಿ ವೈದ್ಯ, ಪ್ರೀತಿಯಿಂದ “ಬಲಾ ಗುರು” ಎಂದು ಪರಿಚಿತರಾದವರು. ಇವರು ಭಾರತದ ಪ್ರಮುಖ ತಾಳ ವಾದಕರಲ್ಲಿ ಒಬ್ಬರಾಗಿದ್ದು. ಅಚ್ಚುಕಟ್ಟಾದ ಶೈಲಿ, ಬಹುವಿಧ ಸೃಜನಶೀಲತೆ ಮತ್ತು ಲಯಬದ್ಧತೆ ಅವರ ವಿಶೇಷತೆ. ಯಲ್ಲಾಪುರದಲ್ಲಿ ಹುಟ್ಟಿದ ಅವರು ಪಂಡಿತ ಜಿ.ಜಿ. ಹೆಗ್ಡೆ ಅವರಿಂದ ಬಲಾ ಶಿಕ್ಷಣವನ್ನು ಆರಂಭಿಸಿ ನಂತರ ಪಂಡಿತ ಬಸವರಾಜ ಬೆಂಡಿಗೇರಿ ಅವರ ಬಳಿಯಲ್ಲಿ ತರಬೇತಿ ಪಡೆದರು. ನಂತರ ಫರ್ರುಕಾಬಾದ್ ಘರಾಣೆಯ ದಿಗ್ಗಜ ಪಂಡಿತ ರವೀಂದ್ರ ಯಾವಗಲ್‌ ಅವರ ಶಿಷ್ಯರಾಗಿ ಸಂಪೂರ್ಣ ಸಂಪ್ರದಾಯಬದ್ಧ ಮಾರ್ಗವನ್ನು ಅನುಸರಿಸಿದರು. ಅವರ ವಾದನದಲ್ಲಿ ತಾಂತ್ರಿಕ ನಿಖರತೆ ಮತ್ತು ಮನತಣಿಸುವ ಭಾವನಾತ್ಮಕತೆ ಸಹಜವಾಗಿ ಬೆರೆತಿದೆ. ಯಕ್ಷಗಾನದ ತಾಳ ಪರಂಪರೆಯಿಂದ ಆಳವಾಗಿ ಪ್ರೇರಣೆ   ಪಡೆದಿರುವ ಗುರುಮೂರ್ತಿ ಅವರು ಸಹ ಮತ್ತು ಸ್ವತಂತ್ರ ವಾದಕರಾಗಿ ಬಹು ಬೇಡಿಕೆಯ ಕಲಾವಿದರಾಗಿದ್ದು, ಉಸ್ತಾದ್ ಅಹಮದ್ ಜಾನ್ ಥಿರಖ್ವಾ ಅವರ ಘನ ಪರಂಪರೆಯನ್ನು ಗೌರವಪೂರ್ವಕವಾಗಿ ಮುಂದುವರಿಸುತ್ತಿದ್ದಾರೆ.

Vyasamurthy Katti | ವ್ಯಾಸಮೂರ್ತಿ ಕಟ್ಟಿ

Harmonium | ಹಾರ್ಮೋನಿಯಂ

Shri Vyasmurti Katti, an acclaimed harmonium virtuoso from Sholapur, began his musical journey under Pt. Ramacharya Bagewadi and continues his vocal training under Pt. Indudhar Nirody of the Agra Gharana. Renowned for his sensitivity and skill, he has accompanied legends such as Pt. Bhimsen Joshi, Dr. Gangubai Hangal, Pt. Rajan and Sajan Mishra, and Ustad Rashid Khan. Katti’s performances span major platforms including Sapthak and Hindustani Sangeet Kalakar Mandali, earning wide acclaim. A trained electronics engineer who chose music as his life’s calling, he has performed across India, the USA, Europe, and Asia, earning recognition as one of the finest harmonium accompanists and soloists of his generation.

ಶ್ರೀ ವ್ಯಾಸಮೂರ್ತಿ ಕಟ್ಟಿ ಶೋಲಾಪುರ ಮೂಲದ ಖ್ಯಾತ ಹಾರ್ಮೋನಿಯಂ ವಿದ್ವಾಂಸರು.  ಅವರು ತರಬೇತಿಗೊಳಗಾದ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಆಗಿದ್ದರೂ ಸಂಗೀತವನ್ನೇ ತಮ್ಮ ಜೀವನದ ಧರ್ಮವನ್ನಾಗಿ ಆರಿಸಿಕೊಂಡಿದ್ದಾರೆ.ತಮ್ಮ ಸಂಗೀತಯಾತ್ರೆಯನ್ನು ಪಂಡಿತ ರಾಮಚಾರ್ಯ ಬಾಗೆವಾಡಿ ಅವರ ಬಳಿ ಆರಂಭಿಸಿ, ಇಂದಿಗೂ ಆಗ್ರಾ ಘರಣೆಯ ಪಂಡಿತ ಇಂದುಧರ ನಿರೋಡಿ ಅವರ ಬಳಿಯಲ್ಲಿ ವೋಕಲ್ ತರಬೇತಿಯನ್ನು ಮುಂದುವರಿಸಿಕೊಂಡಿದ್ದಾರೆ. ಸೂಕ್ಷ್ಮವಾದ ಅಭಿವ್ಯಕ್ತಿ ಮತ್ತು ಕೌಶಲ್ಯಕ್ಕಾಗಿ ಹೆಸರಾಗಿರುವ ಅವರು ಪಂಡಿತ ಭೀಮಸೇನ್ ಜೋಷಿ, ಡಾ. ಗಂಗುಬಾಯಿ ಹಂಗಲ್, ಪಂಡಿತ ರಾಜನ್-ಸಜನ್ ಮಿಶ್ರಾ, ಉಸ್ತಾದ್ ರಶೀದ್ ಖಾನ್ ಮತ್ತಿತರ ದಿಗ್ಗಜರೊಂದಿಗೆ ಸಂಗಡಿಗರಾಗಿ ವಾದಿಸಿದ್ದಾರೆ. ಸಪ್ತಕ್ ಹಾಗೂ ಹಿಂದೂಸ್ತಾನಿ ಸಂಗೀತ ಕಲಾಕಾರ ಮಂಡಳಿ ಮುಂತಾದ ಪ್ರಮುಖ ವೇದಿಕೆಗಳಲ್ಲಿ ಅವರು ಸಂಗೀತ ಕಚೇರಿಗಳಲ್ಲಿ ನುಡಿಸಿದ್ದಾರೆ. ಭಾರತ, ಅಮೆರಿಕಾ, ಯೂರೋಪ್ ಮತ್ತು ಏಷ್ಯಾದ ಅನೇಕ ದೇಶಗಳಲ್ಲಿ ತಮ್ಮ ಪ್ರದರ್ಶನಗಳ ಮೂಲಕ ಇಂದಿನ ಪೀಳಿಗೆಯ ಅತ್ಯುತ್ತಮ ಹಾರ್ಮೋನಿಯಂ ಸಹ-ವಾದಕ ಮತ್ತು ಸ್ವತಂತ್ರ ವಾದಕರಲ್ಲಿ ಒಬ್ಬರಾಗಿದ್ದಾರೆ.

Seema Karanth | ಸೀಮಾ ಕಾರಂತ್

Storyteller | ಕಥೆಗಾರ್ತಿ

Seema Karanth is a Bengaluru-based storyteller who left a successful corporate career to embrace her passion for stories. Through “Stories with Seema,” she now shares tales across schools, libraries, festivals, and community spaces.  A firm believer in the transformative power of stories, Seema creates magical spaces where children read, imagine, question, and create.

ಬೆಂಗಳೂರು ಮೂಲದ ಕಥೆಗಾರ್ತಿ ಸೀಮಾ ಕಾರಂತ್, ಯಶಸ್ವಿ ಕಾರ್ಪೊರೇಟ್ ವೃತ್ತಿಜೀವನವನ್ನು ಬಿಟ್ಟು ಕಥೆಗಳ ಲೋಕವನ್ನು ಆರಿಸಿಕೊಂಡರು. “ಸ್ಟೋರೀಸ್ ವಿತ್ ಸೀಮಾ” ಮೂಲಕ ಅವರು ಶಾಲೆಗಳು, ಗ್ರಂಥಾಲಯಗಳು, ಹಬ್ಬಗಳು ಮತ್ತು ಸಮುದಾಯಗಳಲ್ಲಿ ಕಥೆಗಳನ್ನು ಹಂಚಿಕೊಳ್ಳುತ್ತಾರೆ. ಕಥೆಗಳ ಪರಿವರ್ತನಾ ಶಕ್ತಿಯ ಮೇಲೆ ಆಳವಾದ ನಂಬಿಕೆಯುಳ್ಳ ಸೀಮಾ, ಮಕ್ಕಳಿಗೆ ಓದಲು, ಕಲ್ಪನೆ ಮಾಡಲು, ಪ್ರಶ್ನಿಸಲು ಮತ್ತು ಸೃಜನಾತ್ಮಕವಾಗಲು ಪ್ರೇರಣೆ ನೀಡುವ ಮಾಯಾಲೋಕವನ್ನು ಸೃಷ್ಟಿಸುತ್ತಾರೆ.

Arpith Kumar | ಅರ್ಪಿತ್ ಕುಮಾರ್

Director, Gottilla Academy | ನಿರ್ದೇಶಕ, ಗೊತ್ತಿಲ್ಲ ಅಕಾಡೆಮಿ

Arpith Kumar is the Director of Gottilla Academy, with over eight years of experience teaching Kannada. He has conducted 36+ workshops, trained professionals across major corporations, and designed innovative Kannada learning modules. A Mechanical Engineering graduate from NIE, Mysore, Arpith also manages finance and administration for the Gottilla Academy.

ಗೊತ್ತಿಲ್ಲ ಅಕಾಡಮಿಯ ನಿರ್ದೇಶಕರಾಗಿರುವ ಅರ್ಪಿತ್ ಕುಮಾರ್, ಕನ್ನಡ ಬೋಧನೆಯಲ್ಲಿ ಎಂಟು ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿದ್ದಾರೆ. ಅವರು 36ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿದ್ದು, ಪ್ರಮುಖ ಕಂಪನಿಗಳ ನೂರಾರು ವೃತ್ತಿಪರರಿಗೆ ಕನ್ನಡ ತರಬೇತಿ ನೀಡಿದ್ದಾರೆ. ಕನ್ನಡ ಕಲಿಕೆಯನ್ನು ಸೃಜನಾತ್ಮಕವಾಗಿ ಸುಲಭಗೊಳಿಸುವ ಹೊಸ ವಿಧಾನಗಳನ್ನು ಅವರೇ ರೂಪಿಸಿದ್ದಾರೆ.

ಮೈಸೂರು NIEಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿರುವ ಅವರು ಗೊತ್ತಿಲ್ಲ ಅಕಾಡೆಮಿಯ ಹಣಕಾಸು ಮತ್ತು ವ್ಯವಸ್ಥಾಪನ ಕಾರ್ಯಗಳನ್ನೂ ನಿರ್ವಹಿಸುತ್ತಿದ್ದಾರೆ.

Thejaswi Udupa | ತೇಜಸ್ವಿ ಉಡುಪ

Quizmaster | ಪ್ರಶ್ನಾರಾಜ

Thejaswi Udupa is a technologist and writer, who has conducted quizzes across India and outside for over two decades now. He has had bylines in The Hindu and Deccan Herald, and writes on history and culture and its intersection with technology. He is also closely associated with the Karnataka Quiz Association, the pre-eminent quizzing body in the state.

ತಂತ್ರಜ್ಞ ಮತ್ತು ಲೇಖಕರಾದ ತೇಜಸ್ವಿ ಉಡುಪ, ಇಪ್ಪತ್ತು ವರ್ಷಕ್ಕಿಂತ ಹೆಚ್ಚು ಕಾಲ ಭಾರತದಲ್ಲಿಯೂ ವಿದೇಶದಲ್ಲಿಯೂ ಕ್ವಿಜ್‌ಗಳನ್ನು ನಡೆಸಿದ್ದಾರೆ. ದಿ ಹಿಂದೂ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿದ್ದು, ಇತಿಹಾಸ, ಸಂಸ್ಕೃತಿ ಮತ್ತು ತಂತ್ರಜ್ಞಾನಗಳನ್ನು ಸಂಯೋಜಿಸುವ ಬಗ್ಗೆ ಬರೆಯುತ್ತಾರೆ. ಅವರು ಕರ್ನಾಟಕದ ಪ್ರಮುಖ ಕ್ವಿಜಿಂಗ್ ಸಂಸ್ಥೆಯಾದ ‘ಕರ್ನಾಟಕ ಕ್ವಿಜ್ ಅಸೋಸಿಯೇಷನ್‌’ ಜೊತೆ ಆಳವಾಗಿ ಸಂಪರ್ಕ ಹೊಂದಿದ್ದಾರೆ.

Inesh Shenoy and Ishaan Shenoy | ಇನೇಶ್ ಶೆಣೈ ಮತ್ತು ಇಶಾನ್ ಶೆಣೈ

The Amazing iTwins | ದಿ ಅಮೇಜಿಂಗ್ ಐಟ್ವಿನ್ಸ್

Inesh Shenoy & Ishaan Shenoy aka ‘The Amazing iTwins’ are teen magicians who love to create wonder with their quirky magic and creative storytelling. Drawing inspiration from their favourite superheroes and storybooks, these second-generation magicians perform unique conjuring acts that are engaging and entertaining for children and adults alike. 

ಇನೇಶ್ ಮತ್ತು ಇಶಾನ್ ಶೆಣೈ, ‘ಅಮೇಜಿಂಗ್ ಐಟ್ವಿನ್ಸ್’, ಯುವ ಮಾಯಾಜಾಲಗಾರರು. ತಮ್ಮ ವಿಚಿತ್ರ ಮಾಯಾಜಾಲ ಮತ್ತು ಸೃಜನಾತ್ಮಕ ಕಥನಶೈಲಿ ಮೂಲಕ ಬೆರಗನ್ನು ಸೃಷ್ಟಿಸುತ್ತಾರೆ. ತಮ್ಮ ಪ್ರಿಯ ಸೂಪರ್‌ ಹೀರೋಗಳು ಮತ್ತು ಕಥಾಪುಸ್ತಕಗಳಿಂದ ಪ್ರೇರಿತರಾಗಿ, ಈ ದ್ವಿತೀಯ ಪೀಳಿಗೆಯ ಮಾಯಾಜಾಲಗಾರರು ವಿಶಿಷ್ಟ ಮ್ಯಾಜಿಕ್ ಪ್ರದರ್ಶನಗಳನ್ನು ಮಕ್ಕಳಿಗೂ ಮತ್ತು ಹಿರಿಯರಿಗೂ ಮನರಂಜನೀಯವಾಗಿಸಿ ನೀಡುತ್ತಾರೆ.

Prahlad Acharya | ಪ್ರಹ್ಲಾದ್ ಆಚಾರ್ಯ

The Shadow Caster | ದಿ ಶ್ಯಾಡೋ ಕಾಸ್ಟರ್

Prahlad Acharya is The Shadow Caster – an internationally renowned shadow play artist and storyteller. A master magician and an accomplished ventriloquist, he is one of the few entertainers in the world who use only their bare hands to create an unbelievable world of light and shade, aptly called Speaking Shadows.

ಪ್ರಹ್ಲಾದ್ ಆಚಾರ್ಯ, ‘ಶಾಡೋ ಕ್ಯಾಸ್ಟರ್’, ಅಂತಾರಾಷ್ಟ್ರೀಯ ಪ್ರಸಿದ್ಧ ಛಾಯಾ ಪ್ರದರ್ಶನ ಕಲಾವಿದ ಮತ್ತು ಕಥೆಗಾರ. ಮಾಯಾಜಾಲದ ನಿಪುಣರು ಮತ್ತು ಕಂಠವ್ಯಂಜನದಲ್ಲಿ ಪರಿಣತರು, ಖಾಲಿ ಕೈಗಳನ್ನು ಮಾತ್ರ ಬಳಸಿಕೊಂಡು ಅಸಾಧ್ಯ ಬೆಳಕು-ನೆರಳಿನ ಲೋಕವನ್ನು ರಚಿಸುವ ಕೆಲವೇ ಕಲಾವಿದರಲ್ಲಿ ಒಬ್ಬರು, ಈ ಕಾರ್ಯಕ್ರಮಕ್ಕೆ ‘ಸ್ಪೀಕಿಂಗ್ ಶಾಡೋಸ್’ ಎಂದು ಹೆಸರಿಸಲಾಗಿದೆ.

Nakul Shenoy | ನಕುಲ್ ಶೆಣೈ

The Mind Reader | ದಿ ಮೈಂಡ್ ರೀಡರ್

Nakul Shenoy is The Mind Reader – an internationally acclaimed mentalist and mystery entertainer. A master at blending intuition, inspiration, and storytelling to create unforgettable experiences, he is a sought-after speaker for Fortune 500 companies, a 10-time TEDx speaker, and the author of ‘Smart Course in Magic’.

ನಕುಲ್ ಶೆಣೈ, ‘ಮೈಂಡ್ ರೀಡರ್’, ಅಂತಾರಾಷ್ಟ್ರೀಯ ಖ್ಯಾತಿಯ ಮನೋವಿಜ್ಞಾನಿ ಮತ್ತು ಮಾಯಾಲೋಕದ ಕಲಾವಿದ. ಅಂತರ್ದೃಷ್ಟಿ, ಪ್ರೇರಣೆ ಮತ್ತು ಕಥನಶೈಲಿ ಒಟ್ಟುಗೂಡಿಸಿ ಸ್ಮರಣೀಯ ಅನುಭವಗಳನ್ನು ಸೃಷ್ಟಿಸುವ ನಿಪುಣರು. ಫಾರ್ಚೂನ್ 500 ಕಂಪನಿಗಳಿಗೆ ಬೇಡಿಕೆಯ ಸ್ಪೀಕರ್, 10-ಸಾರಿ TEDx ಸ್ಪೀಕರ್ ಮತ್ತು ‘Smart Course in Magic’ ಪುಸ್ತಕದ ಲೇಖಕ.

Shilpa Mudbi Kothakota | ಶಿಲ್ಪಾ ಮುಡಿಬಿ ಕೊತಕೋಟ

Artiste | ಕಲಾವಿದರು

Shilpa Mudbi Kothakota is an artist and Co-founder of the Urban Folk Project, dedicated to preserving North Karnataka’s oral traditions. A Media Arts graduate from Sydney, she has worked in social justice, documentary filmmaking, and theatre. Her work bridges folk and urban worlds, amplifying community voices through art, research, and performance.

ಅರ್ಬನ್ ಫೋಕ್ ಪ್ರಾಜೆಕ್ಟ್‌ನ ಸಹ–ಸಂಸ್ಥಾಪಕಿ ಮತ್ತು ಜನಪದ ಕಲಾವಿದೆಯಾದ ಶಿಲ್ಪಾ ಮುಡಿಬಿ ಕೊತಕೋಟಾ, ಉತ್ತರ ಕರ್ನಾಟಕದ ಮೌಖಿಕ ಪರಂಪರೆಯನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸಿಡ್ನಿ ವಿಶ್ವವಿದ್ಯಾಲಯದಿಂದ ಮೀಡಿಯಾ ಆರ್ಟ್ಸ್ ವಿಷಯದಲ್ಲಿ ಪದವೀಧರೆಯಾದ ಇವರು ಸಾಮಾಜಿಕ ನ್ಯಾಯ, ಡಾಕ್ಯುಮೆಂಟರಿ ಚಿತ್ರತಯಾರಿಕೆ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಕಾರ್ಯಗಳ ಮೂಲಕ ಜನಪದ ಮತ್ತು ನಗರ ಸಂಸ್ಕೃತಿಗಳ ಮಧ್ಯೆ ನಂಟನ್ನು ಬೆಸೆದು, ಸಮುದಾಯದ ಧ್ವನಿಗಳಿಗೆ ಕಲೆ, ಸಂಶೋಧನೆ ಮತ್ತು ಪ್ರದರ್ಶನಗಳ ಮೂಲಕ ಮನ್ನಣೆ ದೊರಕಿಸುತ್ತಿದ್ದಾರೆ.

Kalaburagi Kala Mandali | ಕಲಬುರಗಿ ಕಲಾ ಮಂಡಲಿ

Artistes | ಕಲಾವಿದರು

Kalaburgi Kala Mandali, an initiative of the Urban Folk Project, unites young voices from across Gulbarga district. Rooted in North Karnataka’s oral traditions, it celebrates songs of labour, devotion, and resilience. Emerging from the Living Lightly Festival 2024, the collective nurtures new performers while preserving folk knowledge, fostering pride in regional identity and sustainable livelihoods.

ಅರ್ಬನ್ ಫೋಕ್ ಪ್ರಾಜೆಕ್ಟ್‌ನ ಉಪಕ್ರಮವಾದ ಕಲಬುರಗಿ ಕಲಾ ಮಂಡಳಿ, ಕಲಬುರಗಿ ಜಿಲ್ಲೆಯ ಯುವ ಧ್ವನಿಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ನಿರತವಾಗಿದೆ. ಉತ್ತರ ಕರ್ನಾಟಕದ ಮೌಖಿಕ ಪರಂಪರೆಯಲ್ಲಿ ನೆಲೆಗೊಂಡು ದುಡಿಮೆ, ಭಕ್ತಿ ಮತ್ತು ದೈನಂದಿನ ಬದುಕಿನ ಹಾಡುಗಳನ್ನು ಸಂಭ್ರಮಿಸುತ್ತದೆ. ಲಿವಿಂಗ್ ಲೈಟ್ಲಿ ಫೆಸ್ಟಿವಲ್ 2024ರಿಂದ ರೂಪುಗೊಂಡ ಈ ಸಂಘಟನೆ ಜನಪದ ಪರಂಪರೆಯನ್ನು ಉಳಿಸುತ್ತಾ, ಹೊಸ ಕಲಾವಿದರನ್ನು ಬೆಳೆಸುತ್ತಿದೆ. ಜೊತೆಗೆ ಪ್ರಾದೇಶಿಕ ಅಸ್ಮಿತೆಗೆ ಗೌರವವನ್ನು ತರಿಸಿ ಸುಸ್ಥಿರ ಜೀವನೋಪಾಯ ವಿಧಾನಗಳನ್ನು ಪೋಷಿಸುತ್ತಿದೆ.

Prathibha Ramaswamy | ಪ್ರತಿಭಾ ರಾಮಸ್ವಾಮಿ

Dancer | ನರ್ತಕಿ

Prathibha Ramaswamy is a Bengaluru-based Bharatanatyam practitioner, “A” Grade artiste of Doordarshan, and ICCR-empanelled performer. With over three decades in the art, her choreographic works such as Akka Mahadevi and Krishnakumari have received critical acclaim. She has performed at premier venues including Dover Lane, Kalakshetra, and Kinkini Festival.

ಬೆಂಗಳೂರು ಮೂಲದ ಭರತನಾಟ್ಯ ಕಲಾವಿದೆ, ಶಿಕ್ಷಕಿ ಹಾಗೂ ದೂರದರ್ಶನದ “A Grade – ಎ ಗ್ರೇಡ್” ಕಲಾವಿದೆ. ಐಸಿಸಿಆರ್ (ICCR – ಐಸಿಸಿಆರ್) ಮಾನ್ಯತೆ ಪಡೆದ ಕಲಾವಿದೆಯೂ ಹೌದು. ಮೂರೂವರೆ ದಶಕಗಳ ಕಲಾ ಪ್ರಯಾಣದಲ್ಲಿ ಅಕ್ಕ ಮಹಾದೇವಿ ಮತ್ತು ಕೃಷ್ಣಕುಮಾರಿ ಮೊದಲಾದ ನೃತ್ಯಕೃತಿಗಳು ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿವೆ. ಡೋವರ್ ಲೇನ್ (Dover Lane – ಡೋವರ್ ಲೇನ್), ಕಲಾಕ್ಷೇತ್ರ (Kalakshetra – ಕಲಾಕ್ಷೇತ್ರ) ಮತ್ತು ಕಿಂಕಿಣಿ ಫೆಸ್ಟಿವಲ್‌ಗಳಲ್ಲಿ (Kinkini Festival – ಕಿಂಕಿಣಿ ಫೆಸ್ಟಿವಲ್) ತಮ್ಮ ನೃತ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.

Janani Murali | ಜನನಿ ಮುರಳಿ

Dancer | ನರ್ತಕಿ

Janani Murali is a Bharatanatyam dancer, educator, and “A” Grade performer of Doordarshan with ICCR accreditation. Her repertoire includes acclaimed productions like Mohanam Krishnam Ashraye, Shivam Shankaram, and A Goddess’s Dream. With over thirty years in the field, she has performed at Khajuraho, Nishagandhi, and Sankat Mochan festivals across India.

ಜನನಿ ಮುರಳಿ ಅವರು ಭರತನಾಟ್ಯ ಕಲಾವಿದೆ, ಶಿಕ್ಷಕಿ ಹಾಗೂ ದೂರದರ್ಶನದ “A Grade – ಎ ಗ್ರೇಡ್” ಕಲಾವಿದೆ. ಐಸಿಸಿಆರ್ (ICCR – ಐಸಿಸಿಆರ್) ಮಾನ್ಯತೆ ಪಡೆದ ಕಲಾವಿದೆಯೂ ಆಗಿದ್ದಾರೆ. ಮೋಹನಂ ಕೃಷ್ಣಂ ಆಶ್ರಯೇ, ಶಿವಂ ಶಂಕರಂ, ಮತ್ತು A Goddess’s Dream – ಎ ಗಾಡ್ಡೆಸ್ ಡ್ರೀಮ್ ಮೊದಲಾದ ನೃತ್ಯಸಂಯೋಜನೆಗಳು ಅಪಾರ ಮೆಚ್ಚುಗೆ ಪಡೆದಿವೆ. ಮೂವತ್ತು ವರ್ಷಗಳ ಕಲಾ ಜೀವನದಲ್ಲಿ ಖಜುರಾಹೋ (Khajuraho – ಖಜುರಾಹೋ), ನಿಶಾಗಂಧಿ (Nishagandhi – ನಿಶಾಗಂಧಿ), ಮತ್ತು ಸಂಕಟ ಮೋಚನ (Sankat Mochan – ಸಂಕಟ ಮೋಚನ) ಉತ್ಸವಗಳಲ್ಲಿ ತಮ್ಮ ನೃತ್ಯ ಕಲೆ ಪ್ರದರ್ಶಿಸಿದ್ದಾರೆ.

Berty | ಬರ್ಟಿ

Bass Guitar | ಬೇಸ್ ಗಿಟಾರ್

Bassist and leader of the ensemble, quiz master by brain, scientist by day. He can drop a bassline, a fact, and a chemical formula—all before lunch.

ಬ್ಯಾಂಡ್‌ನ ನಾಯಕ ಮತ್ತು ಬೇಸ್ ಗಿಟಾರ್ (Bass Guitar) ವಾದಕ. ವೃತ್ತಿಯಲ್ಲಿ ವಿಜ್ಞಾನಿ, ಪ್ರವೃತ್ತಿಯಲ್ಲಿ  ರಸಪ್ರಶ್ನೆ ನಿರೂಪಕ. ವಿನೂತನ ವಾದನ, ಹೊಸವಿಚಾರ ಮತ್ತು ರಾಸಾಯನಿಕ ಸೂತ್ರ – ಇವೆಲ್ಲವನ್ನೂ ಏಕಕಾಲದಲ್ಲಿ ಅರಗಿಸಿಕೊಂಡ ಕಲಾವಿದ!

Rajesh Radhakrishnan (RRK) | ರಾಜೇಶ್ ರಾಧಾಕೃಷ್ಣನ್ (ಆರ್.ಆರ್.ಕೆ.)

Vocalist | ಗಾಯಕ

Vocalist, but when not singing at karaoke bars he is the CFO for Phonepe. And no, not the finance version. He is the Chief Fun Officer.

ಗಾಯಕರು. Karaoke ಬಾರ್ ನಲ್ಲಿ ಹಾಡುತ್ತಾ ಇಲ್ಲದಿರುವಾಗ, ಇವರು ಫೋನ್‌ಪೇ ಯ CFO – “ಚೀಫ್ ಫನ್ ಆಫೀಸರ್”! ಸಂಗೀತ ಮತ್ತು ಹಾಸ್ಯ ಇವರ ಎರಡು ಶಕ್ತಿಗಳು.

Hari | ಹರಿ

Vocalist & Guitarist | ಗಾಯಕ ಮತ್ತು ಗಿಟಾರ್ ವಾದಕ

Vocalist & Guitarist Trained in Hindustani classical music, Hari delivers soulful vocals with ease—especially those tricky high notes. He also brings his flair to the guitar, blending classical and modern styles effortlessly.

ಹಿಂದೂಸ್ತಾನಿ ಶೈಲಿಯಲ್ಲಿ ತರಬೇತಿ ಪಡೆದ ಹರಿ, ತಮ್ಮ ಸುಮಧುರ ಧ್ವನಿಯಿಂದ ಹೃದಯ ಮುಟ್ಟುವಂತೆ ಹಾಡುತ್ತಾರೆ. ಉನ್ನತ ಸ್ವರಗಳನ್ನೂ ಸಹ ಸುಲಭವಾಗಿ ಹಾಡುವ ಹರಿ, ಗಿಟಾರ್‌ನಲ್ಲಿ ಕೂಡ ಶಾಸ್ತ್ರೀಯ ಮತ್ತು ಆಧುನಿಕ ಶೈಲಿಗಳನ್ನು ಕಲಾತ್ಮಕವಾಗಿ ಬೆರೆಸುತ್ತಾರೆ.

Steve | ಸ್ಟೀವ್

Lead Guitarist | ಮುಖ್ಯ ಗಿಟಾರಿಸ್ಟ್

HOD for the guitar department at MUZIKGARAGE and plays with various bands: Ahin Viswam project, Vineeth Vincent and the area boys, Pepper box, Boon O phonic, Algorhythm, High note. Be it rock, blues, metal or folk, he has the riffs.

 MUZIKGARAGE ನಲ್ಲಿ ಗಿಟಾರ್ ವಿಭಾಗದ ಮುಖ್ಯಸ್ಥರು. ಅವರು ವಾದ್ಯಮೇಳಗಳಾದ ‘ಅಹಿನ್ ವಿಶ್ವಂ ಪ್ರಾಜೆಕ್ಟ್’, ‘ವಿನೀತ್ ವಿನ್ಸೆಂಟ್ ಅಂಡ್ ದ ಏರಿಯಾ ಬಾಯ್ಸ್’, ‘ಪೆಪ್ಪರ್ ಬಾಕ್ಸ್’ , ‘ಬೂನ್ ಓ ಫಾನಿಕ್’, ‘ಆಲ್ಗೋರಿದಮ್’, ಮತ್ತು  ‘ಹೈ ನೋಟ್’ ಸೇರಿದಂತೆ ಹಲವಾರು ಬ್ಯಾಂಡ್‌ಗಳೊಂದಿಗೆ ವಾದನ ನೀಡುತ್ತಾರೆ. ರಾಕ್ (Rock), ಬ್ಲೂಸ್ (Blues), ಮೆಟಲ್ (Metal) ಅಥವಾ ಜನಪದ — ಎಲ್ಲಕ್ಕೂ ಅವರು ಸಿದ್ಧ!

Divya | ದಿವ್ಯ

Vocalist | ಗಾಯಕಿ

A vocalist trained in Carnatic music, showcases a range that spans from traditional ragas to modern musical notes. Lead singer of The Loysum Trio. 

ಕರ್ನಾಟಕ ಶಾಸ್ತ್ರೀಯ ಶೈಲಿಯಲ್ಲಿ ತರಬೇತಿ ಪಡೆದ ಗಾಯಕಿ. ಸಾಂಪ್ರದಾಯಕ ರಾಗಗಳಿಂದ ಹಿಡಿದು ಆಧುನಿಕ ಸ್ವರಗಳವರೆಗೂ ತನ್ನ ಧ್ವನಿಯ ವ್ಯಾಪ್ತಿಯನ್ನು ಪ್ರದರ್ಶಿಸುತ್ತಾರೆ.  ‘ದ ಲಾಯ್ಸಮ್ ಟ್ರಿಯೋ’ ಬ್ಯಾಂಡ್‌ನ ಪ್ರಮುಖ ಗಾಯಕಿ.

Prithwin | ಪೃಥ್ವಿನ್

Flautist | ಕೊಳಲು ವಾದಕ

Student of renowned flautist Prakash Hegde Kallaremane from Sirsi and flautist of Divine Raaga that featured on Kappa TV’s Music Mojo.

ಶಿರಸಿಯ ಪ್ರಸಿದ್ಧ ಕೊಳಲು ವಾದಕ ಪ್ರಕಾಶ ಹೆಗಡೆ ಕಲ್ಲರಮನೆ ಅವರ ಶಿಷ್ಯರು. ‘ಡಿವೈನ್ ರಾಗಾ’ ಬ್ಯಾಂಡ್‌ನೊಂದಿಗೆ ವಾದನ ಮಾಡಿದ್ದು, ‘ಕಪ್ಪಾ ಟಿವಿಯ ಮ್ಯೂಸಿಕ್ ಮೋಜೋ,’ನಲ್ಲೂ ಕಾಣಿಸಿಕೊಂಡಿದ್ದಾರೆ.

Swami | ಸ್ವಾಮಿ

Percussions | ತಾಳವಾದ್ಯ

Experiments with various instruments and genres. He has worked with Sivamani, Vasundhara Das, and Khalid Ahamed (Parvaaz), Blackstrat blues, and is a member of the Musicians Federation of India.

ವಿಭಿನ್ನ ವಾದ್ಯಗಳು ಮತ್ತು ಶೈಲಿಗಳಲ್ಲಿ ಪ್ರಯೋಗ ಮಾಡುತ್ತಾರೆ. ಸಿವಮನಿ, ವಸುಂಧರಾ ದಾಸ್, ಖಾಲಿದ್ ಅಹಮದ್ (ಪರ್ವಾಜ್) ಮತ್ತು, ‘ಬ್ಲ್ಯಾಕ್ಸ್ಟ್ರಾಟ್ ಬ್ಲ್ಯೂಸ್’ ಸೇರಿದಂತೆ ಅನೇಕ ಕಲಾವಿದರೊಂದಿಗೆ ಸಹಪ್ರಯೋಗ ಮಾಡಿದ್ದಾರೆ. ಮ್ಯೂಸಿಷನ್ಸ್ ಫೆಡರೇಶನ್ ಆಫ್ ಇಂಡಿಯಾ ದ ಸದಸ್ಯರೂ ಆಗಿದ್ದಾರೆ.