- This event is over. However, time travel possible through our Audio & Video! See upcoming events
Krishna to Kaveri | ಕೃಷ್ಣೆಯಿಂದ ಕಾವೇರಿವರೆಗೆ
Celebrating the Confluences of Karnataka
ಕರ್ನಾಟಕದ ವೈವಿಧ್ಯತೆಯನ್ನು ಆಚರಿಸುವ ಸಾಂಸ್ಕೃತಿಕ ಸಂಗಮ
Artists
Winding and binding, Karnataka’s great rivers have always been more than glorious waterways. From Krishna to Kaveri, our rivers are carriers of culture, stories, and transformation. As they flow across varied landscapes, they shape and are shaped by the people, traditions, and communities they touch.
Krishna to Kaveri is a two-day celebration that draws from this natural rhythm, exploring how Karnataka’s cultural life is constantly moving, adapting, and renewing itself. From classical roots to contemporary reinterpretations, this festival offers a vibrant weekend that speaks to a new generation. Expect immersive workshops, indulgent cuisines and impactful performances!
Whether you’re a native Kannadiga or recently moved into Bangalore, this festival is for anyone who wants to connect more deeply with the cultural spirit of the region. Not as outsiders looking in, but as participants in a living, flowing cultural journey.
Let the rivers lead. Let culture move. Let Karnataka unfold.
ಬಳಸುತ್ತಾ ಬೆಸೆಯುತ್ತಾ ಬೆಳೆಸುತ್ತಾ ಸಾಗುವ ಕರ್ನಾಟಕದ ನದಿಗಳು ವೈಭವದ ಜಲಹರಿವುಗಳು ಮಾತ್ರವಲ್ಲ. ಕೃಷ್ಣೆಯಿಂದ ಕಾವೇರಿವರೆಗೆ ವ್ಯಾಪಿಸಿರುವ ನದಿಗಳು ಸಂಸ್ಖೃತಿಯ, ಕಥೆ-ಪುರಾಣಗಳ, ಪರಿವರ್ತನೆಯ ಚಲನಶೀಲ ವಾಹಕಗಳಾಗಿವೆ. ವೈವಿಧ್ಯಮಯ ಸುಂದರ ಭೂಪ್ರದೇಶಗಳ ನಡುವೆ ಮುನ್ನಡೆವ ಈ ನದಿಗಳು ಜನರನ್ನು, ಪರಂಪರೆಗಳನ್ನು, ಸಮುದಾಯಗಳನ್ನು ರೂಪಿಸುತ್ತಾ, ಪರ್ಯಾಯವಾಗಿ ರೂಪುಗೊಳ್ಳುತ್ತಾ ಸಾಗಿವೆ.
ಈ ಸ್ವಾಭಾವಿಕ ಹರಿವಿನ ಲಯದಿಂದ ಹೊಮ್ಮಿರುವ ಎರಡು ದಿನಗಳ ಉತ್ಸವವೆ ‘ಕೃಷ್ಣೆಯಿಂದ ಕಾವೇರಿವರೆಗೆ ʼ. ಕರ್ನಾಟಕದ ಸಾಂಸ್ಕೃತಿಕ ಬದುಕಿನ ನಿರಂತರ ಚಲನೆಯ, ಹೊಂದಾಣಿಕೆಯ, ಪುನಶ್ಚೇತನದ ಶೋಧನೆ. ಈ ಉತ್ಸವವು ಅಭಿಜಾತ ಬೇರುಗಳಿಂದ ವರ್ತಮಾನದ ಮರುವ್ಯಾಖ್ಯಾನಗಳವರೆಗೆ ಹುರುಪಿನ ವಾರಾಂತ್ಯದಲ್ಲಿ ಹೊಸಪೀಳಿಗೆಗೆ ಒಳನೋಟಗಳನ್ನು ಒದಗಿಸಲಿದೆ. ತಲ್ಲೀನಗೊಳಿಸುವ ಕಾರ್ಯಾಗಾರಗಳು, ರುಚಿಕರ ಆಹಾರ, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಹಬ್ಬದಲ್ಲಿ ನಿರೀಕ್ಷಿಸಬಹುದು.
ನೀವು ಮೂಲ ಕನ್ನಡಿಗರಾಗಿರಿ ಅಥವಾ ಇತ್ತೀಚೆಗಷ್ಟೆ ಹೊರಗಿನಿಂದ ಬೆಂಗಳೂರಿಗೆ ಬಂದಿರುವವರೇ ಆಗಿರಿ. ಈ ನೆಲದ ಸಾಂಸ್ಕೃತಿಕ ಚೇತನದೊಂದಿಗೆ ಆಳವಾಗಿ ಬೆರೆಯುವ ಅವಕಾಶವನ್ನು ಈ ಹಬ್ಬ ನಿಮಗೆ ಒದಗಿಸುತ್ತದೆ. ಇಲ್ಲಿನ ಕಾರ್ಯಕ್ರಮಗಳನ್ನು ನೀವು ಹೊರಗಿನವರಾಗಿ ನಿಂತು ನೋಡುವ ಪ್ರೇಕ್ಷಕರಾಗದೆ ಒಂದು ಜೀವಂತ, ಸಾಂಸ್ಕೃತಿಕ ಯಾನದ ಭಾಗವಾಗಲು ಬನ್ನಿರಿ.
ಮುನ್ನಡೆಸಲಿ ನದಿಗಳು. ಪ್ರವಹಿಸಲಿ ಸಂಸ್ಕೃತಿ. ಗೋಚರವಾಗಲಿ ಕರ್ನಾಟಕದ ಸಿರಿ ವೈಭವ!
Day 2 Schedule
7:30 AM – 9:00 AM: Yoga in Karnataka: Concepts and Traditions | ಕನಾ೯ಟಕದಲ್ಲಿ ಯೋಗ: ಪರಿಕಲ್ಪನೆಗಳು ಮತ್ತು ಪರಂಪರೆ
Exploring the Essence of Yoga in Karnataka | ಕರ್ನಾಟಕದಲ್ಲಿ ಯೋಗದ ಮೂಲತತ್ವದ ಅನ್ವೇಷಣೆ
Medha Bhaskar | ಮೇಧಾ ಭಾಸ್ಕರ್
Medha Bhaskar takes us on a reflective journey into the spirit of yoga as practiced, preserved, and passed on as a living continuum within Karnataka. Beginning with a 45-minute experiential practice of asanas drawn from classical traditions, pranayama, and a short meditation, this session aims to embody the pursuit of balance between the worldly and the transcendent, the individual and the universal. A 30 minute discussion will follow, tracing the evolution of yoga in Karnataka across three broad periods: its ancient roots in Shaiva and Jain ascetic lineages, the medieval flowering of practice and philosophy, and the modern renaissance led by teachers and scholars from Mysore, Bangalore, and beyond. Yoga is both a cultural and contemplative inheritance — a practice through which Karnataka’s intellectual, artistic, and spiritual imagination continues to express itself. The session will close with a Q&A session.
ಮೇಧಾ ಭಾಸ್ಕರ್ ಕರ್ನಾಟಕದಲ್ಲಿ ಆಚರಣೆಯಿಂದ ಬಂದಿರುವ, ಸಂರಕ್ಷಿಸಲ್ಪಟ್ಟಿರುವ ಮತ್ತು ಪೀಳಿಗೆಯಿಂದ ಪೀಳಿಗೆಗೆ ಜೀವಂತವಾಗಿ ಮುಂದುವರಿದಿರುವ ಯೋಗದ ಸಾರವನ್ನು ಪರಿಚಯಿಸುವ ಪರ್ಯಾಲೋಚಕ ಯಾತ್ರೆಗೆ ನಮ್ಮನ್ನು ಕರೆದೊಯ್ಯುತಾರೆ. ಶಾಸ್ತ್ರೀಯ ಪರಂಪರೆಯ ಆಸನ, ಪ್ರಾಣಾಯಾಮ ಮತ್ತು ಸಂಕ್ಷಿಪ್ತ ಧ್ಯಾನದ 45 ನಿಮಿಷಗಳ ಅಭ್ಯಾಸದಿಂದ ಭೌತಿಕ ಮತ್ತು ಆತ್ಮೀಯ ಸಮತೋಲನವನ್ನು ಅನುಭವಿಸಬಹುದು. ನಂತರ 30 ನಿಮಿಷಗಳ ಸಂವಾದದಲ್ಲಿ ಪೌರಾಣಿಕ ಶೈವ-ಜೈನ ಪರಂಪರೆಯ ಬೇರುಗಳು, ಮಧ್ಯಯುಗದ ತತ್ತ್ವ ಮತ್ತು ಅಭ್ಯಾಸದ ಬೆಳವಣಿಗೆ, ಹಾಗೂ ಮೈಸೂರು, ಬೆಂಗಳೂರು ಮುಂತಾದ ಪ್ರದೇಶಗಳ ವಿದ್ವಾಂಸರು, ಶಿಕ್ಷಕರಿಂದ ಉಂಟಾದ ಆಧುನಿಕ ಪುನರುತ್ಥಾನದ ಹಾದಿಯ ಅವಲೋಕನ ಮಾಡಲಾಗುತ್ತದೆ. ಯೋಗವು ಕರ್ನಾಟಕದ ಬೌದ್ಧಿಕ, ಕಲಾತ್ಮಕ ಮತ್ತು ಆಧ್ಯಾತ್ಮಿಕತೆಯ ಕಲ್ಪನೆಯಾಗಿದ್ದು ಹಿಂದಿನಿಂದ ಬಂದ ಸಾಂಸ್ಕೃತಿಕ ಮತ್ತು ಚಿಂತನಶೀಲ ಬಳುವಳಿಯಾಗಿದೆ. ಪ್ರೇಕ್ಷಕರಿಗೆ ಸಂವಾದದ ಅವಕಾಶ ನೀಡುತ್ತಾ,ಕಾರ್ಯಕ್ರಮವು ಪ್ರಶ್ನೋತ್ತರದೊಂದಿಗೆ ಮುಕ್ತಾಯಗೊಳ್ಳುತ್ತದೆ.
10:00 AM – 11:00 AM: Songs from the Banks of Krishna and Kaveri | ಕೃಷ್ಣಾ ಮತ್ತು ಕಾವೇರಿ ನದಿ ತೀರದ ಹಾಡುಗಳು
Melodies of the River Saints | ನದಿ ಸಂತರ ನಾದಗಳು
Chandana Bala Kalyan, Satyajit Sanju & Adarsh Shenoy | ಚಂದನ ಬಾಲ ಕಲ್ಯಾಣ್, ಸತ್ಯಜಿತ್ ಸಂಜು & ಆದರ್ಶ್ ಶೆಣೈ
Step into the musical world of Karnataka’s rivers, where devotion flows through melody. Chandana Bala Kalyan presents compositions of Saint poets who lived along the Krishna and Kaveri rivers and their tributaries, bringing alive the spiritual voices of centuries past. The evening traces the Abhanga of the Varkaris celebrating Panduranga on the Bhima River, journeys to the Haridasa Sahitya along the Tunga-Bhadra, and celebrates Kodava songs at Talakaveri in Kodagu. It concludes with selections from Mysore composers along the banks of the Kaveri. Accompanied by Satyajit Sanju on harmonium and Adarsh Shenoy on tabla, the performance weaves devotion, rhythm, and story into an immersive experience.
ಭಕ್ತಿ – ನಾದದ ಮೂಲಕ ಹರಿಯುವ ಕರ್ನಾಟಕದ ನದಿಗಳ ಸಂಗೀತ ಲೋಕವನ್ನು ಪ್ರವೇಶಿಸಿ ಬನ್ನಿ. ಚಂದನ ಬಾಲ ಕಲ್ಯಾಣ್ ಅವರು ಕೃಷ್ಣ ಮತ್ತು ಕಾವೇರಿ ನದಿ ತೀರಗಳು ಮತ್ತು ಅಲ್ಲಿನ ಉಪನದಿಗಳ ಸುತ್ತ ಬದುಕಿದ ಸಂತಕವಿಗಳ ರಚನೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಶತಮಾನಗಳ ಹಳೆಯ ಆಧ್ಯಾತ್ಮಿಕ ಧ್ವನಿಗಳನ್ನು ಜೀವಂತಗೊಳಿಸುತ್ತಾರೆ. ಕಾರ್ಯಕ್ರಮವು ಭೀಮಾ ನದಿ ದಂಡೆಯ ಮೇಲೆ ಪಾಂಡುರಂಗನನ್ನು ಸ್ಮರಿಸುವ ವರ್ಕಾರಿಗಳ ಅಭಂಗಗಳನ್ನು ಹಾಡಿಕೊಂಡು ಸಾಗುತ್ತ, ತುಂಗ-ಭದ್ರಾ ನದಿಗಳ ಬಳಿ ಹರಿದಾಸ ಕೃತಿಗಳನ್ನು ಆಸ್ವಾದಿಸುತ್ತಾ, ಕೊಡಗಿನ ತಲಕಾವೇರಿಯಲ್ಲಿ ಕೊಡವರ ಹಾಡುಗಳನ್ನು ಸಂಭ್ರಮಿಸುತ್ತದೆ. ಅಂತಿಮವಾಗಿ, ಕಾವೇರಿ ತೀರದ ಮೈಸೂರಿನ ವಾಗ್ಗೇಯಕಾರರ ರಚನೆಗಳನ್ನು ಪ್ರಸ್ತುತಪಡಿಸುತ್ತದೆ. ಸತ್ಯಜಿತ್ ಸಂಜು ಹಾರ್ಮೋನಿಯಂ ಮತ್ತು ಆದರ್ಶ್ ಶೆಣೈ ತಬಲಾ ಸಹಕಾರದೊಂದಿಗೆ ನಿರ್ವಹಿಸುವ ಈ ಸಂಗೀತ ಪ್ರದರ್ಶನ ಭಕ್ತಿ, ತಾಳ ಮತ್ತು ಕಥೆಗಳನ್ನು ಮೇಳೈಸಿ ವಿಶಿಷ್ಟ ಅನುಭವವನ್ನು ನೀಡುತ್ತದೆ.
11:00 AM – 12:30 PM: The Missing Rocks of Hampi | ಹಂಪಿಯ ಕಾಣೆಯಾದ ಕಲ್ಲುಗಳು
History, Mystery, and Storytelling for Young Explorers | ಯುವ ಅನ್ವೇಷಕರಿಗೆ ಇತಿಹಾಸ, ನಿಗೂಢತೆ ಹಾಗೂ ಕಥಾ ಹಂದರಗಳು
For Ages 6+|6+ ವರ್ಷ ವಯಸ್ಸಿನ ಮಕ್ಕಳಿಗೆ
Mala Kumar | ಮಾಲಾ ಕುಮಾರ್
What made Hampi one of the most awe-inspiring cities of its time? The Missing Rocks of Hampi uncovers the secret through two thrilling stories: one of Devyani, Sarang, and Nakul, the Seekers from Bengaluru, and another of Shubha, a young dreamer in the Vijayanagara empire. As mysteries unfold along the Tungabhadra, children explore ancient water systems, culture, and clever engineering. The session includes fun, hands-on activities (yes, even acting like langurs!) that make history come alive. This Sunday, Mala Kumar leads an exploration of Hampi: where every rock has a secret to tell!
ಹಂಪಿಯನ್ನು ತನ್ನ ಕಾಲದ ಅತ್ಯಂತ ಅದ್ಭುತ ನಗರವನ್ನಾಗಿಸಿದ್ದು ಏನು? ಕಾಣೆಯಾದ ಹಂಪಿಯ ಶಿಲೆ ಎಂಬ ಕಥೆ ಆ ರಹಸ್ಯವನ್ನು ಅನಾವರಣಗೊಳಿಸುತ್ತದೆ – ಒಂದೆಡೆ ಬೆಂಗಳೂರಿನಿಂದ ಬಂದ ದೇವಯಾನಿ, ಸಾರಂಗ್ ಮತ್ತು ನಕುಲ್ ಎಂಬ ಅನ್ವೇಷಕ ಮಕ್ಕಳ ರೋಚಕ ಸಾಹಸ, ಮತ್ತೊಂದೆಡೆ ವಿಜಯನಗರ ಸಾಮ್ರಾಜ್ಯದ ಕನಸುಗಾರ ಹುಡುಗಿ ಶುಭಾಳ ಬದುಕು. ತುಂಗಭದ್ರಾ ತೀರದಲ್ಲಿ ರಹಸ್ಯಗಳು ಬಿಚ್ಚಿಕೊಳ್ಳುತ್ತಿದ್ದಂತೆ, ಮಕ್ಕಳು ಪುರಾತನ ಜಲವ್ಯವಸ್ಥೆ, ಸಂಸ್ಕೃತಿ ಹಾಗೂ ಕುಶಲ ತಾಂತ್ರಿಕತೆಯನ್ನು ಅನುಭವಿಸುತ್ತಾರೆ. ಈ ಅವಧಿಯಲ್ಲಿ ಇತಿಹಾಸವನ್ನು ಜೀವಂತಗೊಳಿಸುವ ಮೋಜು, ಸಕ್ರಿಯ ಚಟುವಟಿಕೆ (ಮಂಗನಂತಿರುವ ಲಂಗುರ್ ನಂತೆ ನಟುಸುವುದೂ ಸೇರಿ) ಎಲ್ಲವೂ ಇರುತ್ತವೆ. ಈ ಭಾನುವಾರ ಮಾಲಾ ಕುಮಾರ್, ಪ್ರತಿಯೊಂದು ಶಿಲೆಗೂ ತಾನು ಹೇಳಬೇಕೆಂದಿರುವ ರಹಸ್ಯದ ಅನ್ವೇಷಣೆಗಾಗಿ ನಿಮ್ಮನ್ನು ಹಂಪಿಯತ್ತ ಕರೆದೊಯ್ಯುತಾರೆ!
11:30 AM – 1:00 PM: The Golden Era of Kannada Cinema | ಕನ್ನಡ ಚಿತ್ರರಂಗದ ಸ್ವರ್ಣಯುಗ
A Journey Through the Cinematic Transformations of 1974–75 | 1974–75 ರ ಚಿತ್ರರಂಗದ ಪರ್ವಕಾಲದೊಳೊಂದು ಪಯಣ
N S Sridhar Murthy, Sundar Raj & Students of Hamsalekha Desi Vidyalaya | ಎನ್ ಎಸ್ ಶ್ರೀಧರ ಮೂರ್ತಿ, ಸುಂದರ್ ರಾಜ್ & ಹಂಸಲೇಖ ದೇಸಿ ವಿದ್ಯಾಲಯದ ವಿದ್ಯಾರ್ಥಿಗಳು
The mid-1970s marked a turning point for Kannada cinema, with the shift of film production to Bengaluru and Mysuru, and the arrival of colour films shaping a distinctive identity. Art-house classics like Chomana Dudi and Hamsageethe brought national acclaim, while innovative film music enriched its aesthetic. Legends like Dr. Rajkumar and rising stars such as Vishnuvardhan defined this golden era. This session celebrates that remarkable journey through iconic scenes, vintage posters, and conversations with industry stalwarts, highlighting how these films not only shaped the industry but continue to inspire audiences across generations.
1970ರ ಮಧ್ಯಭಾಗ ಕನ್ನಡ ಚಿತ್ರರಂಗದ ಪರ್ವಕಾಲವಾಗಿದ್ದು, ಚಿತ್ರತಯಾರಿಕೆ ಬೆಂಗಳೂರು ಮತ್ತು ಮೈಸೂರಿಗೆ ಸ್ಥಳಾಂತರಗೊಂಡಿತು. ಬಹುತೇಕ ವರ್ಣಚಿತ್ರಗಳೇ ರೂಪುಗೊಳ್ಳುತ್ತಾ ವಿಶಿಷ್ಟತೆಯನ್ನು ಹೆಚ್ಚಿಸಿತು. ಚೋಮನ ದುಡಿ, ಹಂಸಗೀತೆಯಂತಹ ಕಲಾತ್ಮಕ ಚಿತ್ರಗಳು ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ಪಡೆದವು. ನವೀನ ಬಗೆಯ ಪ್ರಯೋಗಗಳು ಚಿತ್ರಸಂಗೀತವನ್ನು ಶ್ರೀಮಂತಗೊಳಿಸಿದವು. ಡಾ. ರಾಜಕುಮಾರ್ ಆಗಲೇ ಜನಪ್ರಯರಾಗಿದ್ದು ವಿಷ್ಣುವರ್ಧನ್ ಮುಂತಾದ ಕಲಾವಿದರು ಈ ಸುವರ್ಣ ಯುಗವನ್ನು ಪ್ರಭಾವಿಸಿದರು. ಇಂದಿಗೂ ಎಲ್ಲ ಪೀಳಿಗೆಯವರನ್ನು ಪ್ರೇರೇಪಿಸುತ್ತಿರುವ ಈ ಚಿತ್ರಗಳ ಯುಗ ಪ್ರವರ್ತಕ ದೃಶ್ಯಗಳು, ಹಳೆಯ ಪೋಸ್ಟರ್‌ಗಳು ಮತ್ತು ಸಿನಿ ತಾರೆಯರೊಂದಿಗಿನ ಸಂವಾದಗಳ ಮೂಲಕ ಆ ಅದ್ಭುತ ಪಯಣವನ್ನು ಸಂಭ್ರಮಿಸಲಾಗುತ್ತದೆ.
2:00 PM – 3:30 PM: Digital Kannada Fonts | ಡಿಜಿಟಲ್ ಕನ್ನಡ ಅಕ್ಷರಶೈಲಿ
Bridging Traditional and Modern Communication | ಸಾಂಪ್ರದಾಯಿಕ ಮತ್ತು ಆಧುನಿಕ ಸಂವಹನದ ಸೇತುವೆ
Manjunatha R
| ಮಂಜುನಾಥ ಆರ್
Discover the art and evolution of Kannada script in this hands-on font design workshop with Manjunatha R. Participants will explore how the careful crafting of letters can preserve cultural identity while adapting to modern communication. The session blends tradition and creativity, showing how digital and hand-rendered forms of the script connect heritage with contemporary design. By the end, you’ll gain practical skills, a deeper appreciation for the script, and the confidence to create your own Kannada lettering!
ಮಂಜುನಾಥ ಆರ್ ಅವರೊಂದಿಗೆ ನಡೆಯುವ ಈ ಅನುಭವಾತ್ಮಕ ಅಕ್ಷರ ವಿನ್ಯಾಸ ಕಾರ್ಯಾಗಾರದಲ್ಲಿ ಕನ್ನಡ ಲಿಪಿಯ ಕಲೆ ಮತ್ತು ಬೆಳವಣಿಗೆಯನ್ನು ಅನ್ವೇಷಿಸುತ್ತಾ. ಸೂಕ್ಷ್ಮವಾಗಿ ರೂಪಿಸಿದ ಅಕ್ಷರಗಳು ಸಾಂಸ್ಕೃತಿಕ ಗುರುತನ್ನು ಹೇಗೆ ಉಳಿಸಿಕೊಳ್ಳುತ್ತವೆ ಮತ್ತು ಆಧುನಿಕ ಸಂವಹನಕ್ಕೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಅನುಭವಾತ್ಮಕವಾಗಿ ಅರಿಯಲು ಅವಕಾಶವಿರುತ್ತದೆ. ಪರಂಪರೆ ಮತ್ತು ಸೃಜನಾತ್ಮಕತೆಯನ್ನು ಬೆಸೆಯುವ ಈ ಅವಧಿ, digital ಹಾಗೂ ಕೈಯಿಂದ ರೂಪಿಸಲಾದ ಲಿಪಿ ರೂಪಗಳು ಪರಂಪರೆ ಮತ್ತು ಸಮಕಾಲೀನ ವಿನ್ಯಾಸದ ನಡುವೆ ಹೇಗೆ ಸೇತುವೆಯಾಗಿ ನಿಲ್ಲುತ್ತವೆ ಎಂಬುದನ್ನು ತೋರಿಸುತ್ತದೆ. ಕಾರ್ಯಾಗಾರದ ಅಂತ್ಯದ ವೇಳೆಗೆ, ನೀವು ಪ್ರಾಯೋಗಿಕ ಕೌಶಲ್ಯಗಳ ಜೊತೆಗೆ ಕನ್ನಡ ಲಿಪಿಯ ಬಗ್ಗೆ ಹೊಸ ಮೆಚ್ಚುಗೆಯನ್ನೂ ಪಡೆದುಕೊಳ್ಳುತ್ತೀರಿ — ಹಾಗೆಯೇ ನಿಮ್ಮದೇ ಅಕ್ಷರವಿನ್ಯಾಸ ಮಾಡಲು ಆತ್ಮವಿಶ್ವಾಸವನ್ನೂ ಸಹ!
3:00 PM – 4:30 PM: Ilidu Baa Taaye | ಇಳಿದು ಬಾ ತಾಯೆ
A Journey Through Emotion and Melody | ಭಾವ ಮತ್ತು ಮಧುರಗಾನದ ಪಯಣ
Supriya Raghunandan, Mangala Ravi, Anagha Hegde, Shashidhara Narasimhaswamy, Smriti Kumar, Srushti Umesh, Raj Kiran, Ravi Kiran & Srushti Srinivas | ಸುಪ್ರಿಯಾ ರಘುನಂದನ್, ಮಂಗಳಾ ರವಿ, ಅನಘಾ ಹೆಗಡೆ, ಶಶಿಧರ ನರಸಿಂಹಸ್ವಾಮಿ, ಸ್ಮೃತಿ ಕುಮಾರ್, ಸೃಷ್ಟಿ ಉಮೇಶ್, ರಾಜ್ ಕಿರಣ್, ರವಿ ಕಿರಣ್ & ಸೃಷ್ಟಿ ಶ್ರೀನಿವಾಸ್
This 90-minute concert celebrates Sugama Sangeetha, Karnataka’s distinctive light music tradition that seamlessly blends classical and folk strains to amplify emotions – devotion, love towards people and nature and philosophical outlook. Experience the timeless verses of literary greats such as Bendre, Kuvempu, Gopalakrishna Adiga, G.P. Rajaratnam, Dr. G.S. Shivarudrappa and Dr. H.S. Venkateshamurthy brought alive through the evocative compositions of Balappa Hukkeri, Padmacharan, H.R. Leelavathi, Mysore Ananthaswamy, Dr. C. Ashwath, and Raju Ananthaswamy. An evening where words and music entwine to stir the heart and mind!
90 ನಿಮಿಷಗಳ ಈ ಕಾರ್ಯಕ್ರಮವು ಶಾಸ್ತ್ರೀಯ ಮತ್ತು ಜನಪದ ಶೈಲಿಗಳನ್ನು ಮೇಳೈಸಿ ಜನರು ಮತ್ತು ಪ್ರಕೃತಿಯ ಬಗೆಗಿನ ಪ್ರೀತಿ, ಭಕ್ತಿ ಭಾವನೆ ಮತ್ತು ತತ್ತ್ವಚಿಂತನೆಗಳನ್ನು ಹೊರಹೊಮ್ಮಿಸುವ ಕರ್ನಾಟಕದ ಸುಗಮ ಸಂಗೀತದ ವೈಶಿಷ್ಟ್ಯತೆಯನ್ನು ಸಂಭ್ರಮಿಸುತ್ತದೆ. ಬೇಂದ್ರೆ, ಕುವೆಂಪು, ಗೋಪಾಲಕೃಷ್ಣ ಅಡಿಗ, ಜಿ.ಪಿ. ರಾಜರತ್ನಂ, ಡಾ. ಜಿ.ಎಸ್. ಶಿವರುದ್ರಪ್ಪ ಮತ್ತು ಡಾ. ಎಚ್.ಎಸ್. ವೆಂಕಟೇಶಮೂರ್ತಿ ಮುಂತಾದ ದಿಗ್ಗಜ ಸಾಹಿತ್ತಿಗಳ ಕಾಲಾತೀತ ಪದ್ಯಗಳನ್ನು, ಬಾಳಪ್ಪ ಹುಕ್ಕೇರಿ, ಪದ್ಮಚರಣ್, ಎಚ್.ಆರ್. ಲೀಲಾವತಿ, ಮೈಸೂರು ಅನಂತಸ್ವಾಮಿ, ಡಾ. ಸಿ. ಅಶ್ವಥ್ ಮತ್ತು ರಾಜು ಅನಂತಸ್ವಾಮಿ ಅವರುಗಳ ಸಂಯೋಜನೆಗಳು ಜೀವಂತಗೊಳಿಸಿವೆ. ಬನ್ನಿ, ನಮ್ಮ ಹೃದಯ-ಮನಸ್ಸುಗಳನ್ನು ಮುದಗೊಳಿಸುವ, ಸಂಗೀತ ಮತ್ತು ಭಾವಪೂರ್ಣ ಕವಿತೆಗಳು ಮೇಳೈಸುವ ಈ ಸಂಜೆಯಲ್ಲಿ ಜೊತೆಯಾಗೋಣ!
3:00 PM – 4:30 PM: Chittara Folk Art for Kids | ಚಿತ್ತಾರ – ಮಕ್ಕಳಿಗಾಗಿ ಜಾನಪದ ಕಲೆ
From Mud Walls to Little Hands, Chittara Comes Alive! | ಮಣ್ಣಿನ ಗೋಡೆಗಳಿಂದ ಹಸುಳೆಗಳ ಕೈಗಳವರೆಗೂ, ಚಿತ್ತಾರ ಮತ್ತೆ ಜೀವಂತವಾಗುತ್ತದೆ!
For Ages 6+|6+ ವರ್ಷ ವಯಸ್ಸಿನ ಮಕ್ಕಳಿಗೆ
Geetha Bhat & Shruti Belli | ಗೀತಾ ಭಟ್ & ಶೃತಿ ಬೆಳ್ಳಿ
Chittara is a traditional mural art form of the Deevaru community from the Shivamogga district of Karnataka. In this playful, hands-on workshop, children will discover how simple lines, patterns, and natural colours come together to tell stories of everyday life. They’ll learn about the symbolism and eco-friendly materials behind this beautiful tradition and create their very own Chittara painting: a joyful keepsake of Karnataka’s living heritage!
ಶಿವಮೊಗ್ಗ ಜಿಲ್ಲೆಯ ದೀವರು ಸಮುದಾಯದ ಸಾಂಪ್ರದಾಯಿಕ ಭಿತ್ತಿ ಚಿತ್ರಕಲೆ — ಚಿತ್ತಾರ. ಈ ಹರ್ಷಭರಿತ ಚಟುವಟಿಕೆ ಆಧಾರಿತ ಕಾರ್ಯಾಗಾರದಲ್ಲಿ ಮಕ್ಕಳು ಸರಳ ರೇಖೆಗಳಿಂದ, ವಿನ್ಯಾಸಗಳಿಂದ ಮತ್ತು ನೈಸರ್ಗಿಕ ಬಣ್ಣಗಳಿಂದ ಕಥೆಗಳನ್ನು ಹೇಗೆ ಮೂಡಿಸಬಹುದು ಎಂಬುದನ್ನು ತಿಳಿಯುತ್ತಾರೆ. ಜೀವನದ ದೈನಂದಿನ ಸಂಗತಿಗಳನ್ನೇ ಕಲೆಯಾಗಿ ನೋಡುವ ಈ ಪರಂಪರೆಯಲ್ಲಿರುವ ಅರ್ಥಗಳು, ಸಂಕೇತಗಳು ಮತ್ತು ಪರಿಸರಸ್ನೇಹಿ ವಸ್ತುಗಳ ಕುರಿತು ತಿಳಿದುಕೊಳ್ಳುತ್ತಾರೆ. ಅಂತಿಮವಾಗಿ, ಕರ್ನಾಟಕದ ಜೀವಂತ ಪರಂಪರೆಯ ಸುಂದರ ನೆನಪಾಗಿ ತಮ್ಮದೇ ಕೈಯಿಂದ ರಚಿಸಲಾದ ಸಣ್ಣಪುಟ್ಟ ಚಿತ್ತಾರ ಚಿತ್ರಗಳನ್ನು ತಮ್ಮ ಬಳಿಯೇ ಉಳಿಸಿಕೊಳ್ಳುತ್ತಾರೆ.
5:00 PM – 6:30 PM: Digital Kannada Fonts | ಡಿಜಿಟಲ್ ಕನ್ನಡ ಅಕ್ಷರಶೈಲಿ
Bridging Traditional and Modern Communication | ಸಂಪ್ರದಾಯ ಮತ್ತು ಆಧುನಿಕ ಸಂವಹನ
Manjunatha R
| ಮಂಜುನಾಥ ಆರ್
5:30 PM – 7:00 PM: Wondrous Flow of Krishna and Kaveri | ಕೃಷ್ಣೆ-ಕಾವೇರಿಯರ ಹರಿವಿನ ಬೆರಗು
Enchanting Glow of Folk Faith | ಜನಪದರ ಭಕ್ತಿ-ನಂಬಿಕೆಯ ಸೊಬಗು
Srinivasa G Kappanna & Savithakka (Savitha Ganesh Prasad) | ಶ್ರೀನಿವಾಸ ಜಿ ಕಪ್ಪಣ್ಣ & ಸವಿತಕ್ಕ (ಸವಿತಾ ಗಣೇಶ್ ಪ್ರಸಾದ್)
This 90-minute folk music session celebrates the soulful songs that have flowed through generations along the banks of the Krishna and Kaveri – rivers that nurture the very heart of our cultural spirit. These songs mirror the lives, beliefs, and spiritual faith of village folk, capturing the depth of their lived and devotional experiences. Born of vibrant oral traditions, these melodies give voice to the people’s deep reverence for deities such as Yellamma, Kaveramma, Chamundi, Madeshwara, Shiva, Mailaralinga, and many others. Songs of belief and belonging, they continue to shape both their hearts and ours.
90 ನಿಮಿಷಗಳ ಜನಪದ ಗೀತೆಗಳ ಈ ಪಯಣದಲ್ಲಿ ನಮ್ಮ ಸಂಸ್ಕೃತಿಯ ಜೀವಾಳವಾದ ಕೃಷ್ಣ ಮತ್ತು ಕಾವೇರಿ ನದಿಗಳ ಆಸು ಪಾಸಿನ ಪ್ರದೇಶಗಳಲ್ಲಿ ಹುಟ್ಟಿದ ಜನಪದರ ಹಾಡುಗಳನ್ನು ಸಂಭ್ರಮಿಸಲಾಗುತ್ತದೆ. ಈ ಹಾಡುಗಳು ನಮ್ಮ ಹಳ್ಳಿಗರ ಬದುಕು, ನಂಬಿಕೆ, ಸಂಸ್ಕೃತಿ, ಆಧ್ಯಾತ್ಮದ ಸ್ಪಂದನೆ ಮತ್ತು ಜೀವನಾನುಭವದ ಪ್ರತೀಕಗಳಾಗಿ ಹೊರಹೊಮ್ಮಿವೆ. ಯಲ್ಲಮ್ಮ, ಕಾವೇರಮ್ಮ, ಚಾಮುಂಡಿ, ಮಾದೇಶ್ವರ, ಶಿವ, ಮೈಲಾರಲಿಂಗ ಮುಂತಾದ ದೈವಗಳ ಮೇಲಿನ ಜನರ ನಂಬಿಕೆಗಳು ಮೂರ್ತಿವೆತ್ತಂತೆ ಈ ಹಾಡುಗಳು ಮೌಖಿಕವಾಗಿ ರೂಪುಗೊಂಡಿವೆ. ಹೀಗೆ ರೂಪುಗೊಂಡ ಸಾಮುದಾಯಿಕ ಗೀತೆಗಳು ಜನರ ಬದುಕನ್ನು, ನಮ್ಮ ಮನಸ್ಸನ್ನು ಹದಗೊಳಿಸುತ್ತವೆ.
7:30 PM – 9:00 PM: Vasu Dixit Collective | ವಾಸು ದೀಕ್ಷಿತ್ ಕಲೆಕ್ಟಿವ್
Electronic Folk Music | ಇಲೆಕ್ಟ್ರಾನಿಕ್ ಫೋಕ್ ಮ್ಯೂಸಿಕ್
The Vasu Dixit Collective perform writings of celebrated poets and lyricists set to a fusion of guitars, vocals and synths. Their repertoire includes special renditions of poems by saint poets such as Purandaradasa, Basavanna, and Kabir that reflect the energetic and soulful performance style of front-man Vasu Dixit. A strand from Vasu Dixit’s illustrious journey as a composer, musician, and filmmaker, VDC is a coming together of his many artistic nuances into one space and offers a free-spirited celebration of life. Folktronica or electronic folk is a musical genre that combines elements from folk and electronica, frequently incorporating acoustic instruments, particularly stringed ones and embraces a diverse range of influences that vary based on the artists’ sound choices.
“ವಾಸು ದೀಕ್ಷಿತ್ ಕಲೆಕ್ಟಿವ್” ಪ್ರಸಿದ್ಧ ಕವಿಗಳು ಮತ್ತು ಗೀತರಚನೆಕಾರರ ಕೃತಿಗಳನ್ನು ಗಿಟಾರ್, ಗಾಯನ ಮತ್ತು “ಸಿಂಥ್” ಗಳ ಸಂಯೋಜನೆಯೊಂದಿಗೆ ಹೊಸ ರೂಪದಲ್ಲಿ ಪ್ರಸ್ತುತಪಡಿಸುವ ತಂಡ. ಪುರಂದರ ದಾಸ, ಬಸವಣ್ಣ, ಕಬೀರ ರಂತಹ ಸಂತ ಕವಿಗಳ ರಚನೆಗಳನ್ನು ಪ್ರಭಾವಶಾಲಿ ಕಂಠದ ವಾಸು ದೀಕ್ಷಿತ್ ತಮ್ಮದೇ ಶೈಲಿಯಲ್ಲಿ ಹಾಡಿ ಕೇಳುಗರಿಗೆ ಸ್ಪೂರ್ತಿಯಾಗುತ್ತಾರೆ. . ಸಂಗೀತಗಾರ, ಸಂಯೋಜಕ ಮತ್ತು ಚಲನಚಿತ್ರ ತಯಾರಕರಾಗಿ ವಾಸು ದೀಕ್ಷಿತ್ ಹಾದು ಬಂದ ವಿಶಿಷ್ಟ ಕಲಾ ಪಯಣದ ಒಂದು ಅಂಶವಾದ “ವಾಸು ದೀಕ್ಷಿತ್ ಕಲೆಕ್ಟಿವ್” ಜೀವನವನ್ನು ಉಲ್ಲಾಸಮಯ ಸಂಗೀತ ಸಂಭ್ರಮವಾಗಿ ರೂಪಾಂತರಗೊಳಿಸುವ ವೇದಿಕೆಯಾಗಿದೆ. “ಫೋಕ್‌ಟ್ರಾನಿಕಾ” ಅಥವಾ “ಎಲೆಕ್ಟ್ರಾನಿಕ್ ಫೋಕ್” ಅನ್ನುವುದು ಜನಪದ ಮತ್ತು ಎಲೆಕ್ಟ್ರಾನಿಕ್ ಸಂಗೀತದ ಸಂಯೋಜನೆ – ಸಾಮಾನ್ಯವಾಗಿ ತಂತಿವಾದ್ಯಗಳಂತಹ ಸಾಂಪ್ರದಾಯಿಕ ವಾದ್ಯಗಳ ಜೊತೆಗೆ, ಆಧುನಿಕ ಧ್ವನಿವಿನ್ಯಾಸಗಳನ್ನು ಸಂಯೋಜಿಸಿ, ಕಲಾವಿದರ ಶೈಲಿಗೆ ತಕ್ಕಂತೆ ವೈವಿಧ್ಯಮಯ ಪ್ರೇರಣೆಗೊಳಗಾಗುತ್ತದೆ.
Across the Weekend | 11:00 AM – 7:00 PM
Exploring Karnataka Exhibition | ಕರ್ನಾಟಕ ಕುರಿತ ಪ್ರದರ್ಶನದೊಳಗೊಂದು ಸುತ್ತು
Monuments from across the State by Rudragaud Indi | ರುದ್ರಗೌಡ ಇಂಡಿ ಅವರಿಂದ ರಾಜ್ಯದೆಲ್ಲೆಡೆಯ ಪ್ರದರ್ಶನ ಸ್ಮಾರಕಗಳು
Ground Floor Foyer
Journey through Karnataka’s monuments and marvels—an ode to the state’s rich heritage, innovation, and timeless artistry captured through striking pieces from across the region.
ಕರ್ನಾಟಕದ ಸ್ಮಾರಕಗಳ ಮತ್ತು ಅದ್ಭುತಗಳ ಲೋಕದಲ್ಲಿ ಒಂದು ಸಂಚಾರ — ಈ ರಾಜ್ಯದ ಸಮೃದ್ಧ ಪರಂಪರೆ, ಹೊಸ ಆವಿಷ್ಕಾರ ಮನೋಭಾವ ಹಾಗೂ ಕಾಲಾತೀತ ಕಲಾಮೌಲ್ಯಗಳನ್ನು ಒಳಗೊಂಡ ಕಲಾಕೃತಿಗಳ ಮೂಲಕ ಸಂಭ್ರಮಿಸುವ ನಮನ.
Aata Aadu Bengaluru by Kavade | ಕವಡೆ ತಂಡದಿಂದ ಆಟ ಆಡು ಬೆಂಗಳೂರು
Learn to Play Traditional Board Games with Family and Friends | ಮನೆ ಮಂದಿ ಮತ್ತು ಗೆಳೆಯರೊಂದಿಗೆ ಪಾರಂಪರಿಕ ಮಣೆಯಾಟಗಳನ್ನಾಡಲು ಕಲಿಯಿರಿ
Ground Floor Foyer
Roll the dice, count your seeds, and rediscover joy! Traditional board games for all ages—where fun, family, and a touch of nostalgia meet.
ಪಾಸೆ ಎಸೆದು, ಅಕ್ಕಿ ಎಣಿಸಿ, ಹಳೆ ಖುಷಿಯನ್ನು ಮತ್ತೆ ಕಂಡುಹಿಡಿಯಿರಿ! ಎಲ್ಲಾ ವಯಸ್ಸಿನವರಿಗೂ ಸೂಕ್ತವಾದ ಈ ಪೌರಾಣಿಕ ಆಟಗಳಲ್ಲಿ ಸಂಭ್ರಮ, ಕುಟುಂಬ ಮತ್ತು ನೆನಪಿನ ಸಿಹಿತನ ಒಂದೇ ವೇದಿಕೆಯಲ್ಲಿ ಸೇರುತ್ತವೆ.
Art Showcase by Art Park | ಆರ್ಟ್ ಪಾರ್ಕ್ ವತಿಯಿಂದ ಕಲಾ ಪ್ರದರ್ಶನ
Display of Traditional Arts by Modern Artists | ಆಧುನಿಕ ಕಲಾವಿದರಿಂದ ಪಾರಂಪರಿಕ ಕಲಾ ಪ್ರದರ್ಶನ
First Floor Foyer
A vibrant display where young artists reinterpret Karnataka’s traditional art forms through contemporary eyes—bridging heritage and modernity in bold, creative strokes.
ಯುವ ಕಲಾವಿದರು ಕರ್ನಾಟಕದ ಪಾರಂಪರಿಕ ಕಲಾರೂಪಗಳನ್ನು ಆಧುನಿಕ ದೃಷ್ಟಿಯಿಂದ ಮರುಸ್ವರೂಪಗೊಳಿಸಿರುವ ಚೈತನ್ಯಭರಿತ ಪ್ರದರ್ಶನ — ಪಾರಂಪರ್ಯ ಮತ್ತು ನವೀನತೆಯ ಸೇತುವೆಯಂತೆ, ಕಲಾತ್ಮಕ ಹೊಳೆಯೊಳಗೆ ನಿಮಗೂ ಆಹ್ವಾನ.
Book Nook by Atta Galata | ಆಟಾ ಗಲಾಟ ವತಿಯಿಂದ ಪುಸ್ತಕ ಮೂಲೆ
Read. Revel. Rejoice. | ಓದಿ. ಸಂಭ್ರಮಿಸಿ. ಆನಂದಿಸಿ.
Hall 2
Find your next Kannada favourite! A cozy corner to browse, read, and revel in stories from Karnataka’s literary landscape—perfect for readers of all ages.
ನಿಮ್ಮ ಮುಂದಿನ ನೆಚ್ಚಿನ ಕನ್ನಡ ಪುಸ್ತಕವನ್ನು ಇಲ್ಲಿ ಕಂಡುಹಿಡಿಯಿರಿ! ಕರ್ನಾಟಕದ ಸಾಹಿತ್ಯಲೋಕದ ಕಥೆಗಳಲ್ಲಿ ತಲೆಮರೆಸಿಕೊಳ್ಳಲು ಸೂಕ್ತವಾದ — ಎಲ್ಲಾ ವಯಸ್ಸಿನ ಓದುಗರಿಗೂ ಮನಸೂರೆಗೊಳ್ಳುವ ಹಿತಕರ ಪುಸ್ತಕ ಮೂಲೆ.
Karnataka Wildlife in Light and Shadow
| ನೆರಳು ಬೆಳಕಿನಲ್ಲಿ ಕರ್ನಾಟಕದ ವನ್ಯಜೀವಿ ಸಂಕುಲ
Capturing Biodiversity by Arun Kumar Krishnaiah | ಅರುಣ್ ಕುಮಾರ್ ಕೃಷ್ಣಯ್ಯ ಅವರಿಂದ ಜೀವವೈವಿಧ್ಯದ ಬೆಡಗಿನ ಸೂರೆ
Gallery
Through Arun Kumar Krishnaiah’s lens, glimpse Karnataka’s wild heart—majestic, intimate, and alive in every play of light, shadow, and silence.
ಅರುಣ್ ಕುಮಾರ್ ಕೃಷ್ಣಯ್ಯ ಅವರ ಕ್ಯಾಮೆರಾ ಕಣ್ಣಿನ ಮೂಲಕ ಕರ್ನಾಟಕದ ಕಾಡಿನ ಮಿಡಿತವನ್ನು ಅನುಭವಿಸಿ — ಪ್ರತಿಯೊಂದು ಬೆಳಕು, ನೆರಳು ಮತ್ತು ಮೌನದಲ್ಲೂ ಜೀವಂತವಾಗಿರುವ ಗೌರವಪೂರ್ಣ, ಆಂತರಿಕ ಮತ್ತು ಚೇತನಭರಿತ ಪ್ರಕೃತಿಯ ರಹಸ್ಯ ಮುಖಗಳನ್ನು ನೋಡಬಹುದು.
Chasing Clues, Celebrating Culture | ಸುಳುಹುಗಳ ಬೆನ್ನು ಹತ್ತಿ, ಸಂಸ್ಕೃತಿಯ ವಿಜೃಂಭಣೆ
A Scavenger Hunt through Karnataka! | ಕರ್ನಾಟಕದ ಉದ್ದಗಲಕ್ಕೆ ಒಂದು ಸಂಸ್ಕೃತಿ-ಶೋಧಕ ಬೇಟೆ!
Across the Building
Unravel riddles, uncover stories, and race through Karnataka’s cultural heritage—an exciting scavenger hunt adventure for the whole family at BIC!
ಒಗಟುಗಳನ್ನು ಬಿಚ್ಚಿ, ಕಥೆಗಳನ್ನು ಪತ್ತೆಹಚ್ಚಿ, ಕರ್ನಾಟಕದ ಸಂಸ್ಕೃತಿಯ ಹಾದಿಯಲ್ಲಿ ಓಡಾಡಿ — ಕುಟುಂಬದ ಎಲ್ಲ ಸದಸ್ಯರಿಗೂ ರೋಚಕ ಅನುಭವ ಕೊಡುವ ಈ ಹುಡುಕಾಟ ಸಾಹಸಕ್ಕೆ BICನಲ್ಲಿ ಭಾಗಿಯಾಗಿ!
Women Vachana Poets of Karnataka by Azim Premji University | ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ವತಿಯಿಂದ ಕರ್ನಾಟಕದ ವಚನಕಾರ್ತಿಯರು
Cataloguing the Wisdom of Life | ಜೀವನ ವಿವೇಕದ ಸಂಗ್ರಹ
Second Floor Foyer
Discover the poetic soul of North Karnataka—vachanas brought to life through research, illustration, and design, preserving voices that continue to inspire centuries later.
ಉತ್ತರ ಕರ್ನಾಟಕದ ಕಾವ್ಯಾತ್ಮಕ ಆತ್ಮವನ್ನು ಅನ್ವೇಷಿಸಿ — ಸಂಶೋಧನೆ, ಚಿತ್ರಣ ಮತ್ತು ವಿನ್ಯಾಸಗಳ ಮೂಲಕ ಜೀವಂತಗೊಳಿಸಿರುವ ವಚನಗಳು, ಶತಮಾನಗಳ ನಂತರವೂ ಪ್ರೇರಣೆ ನೀಡುತ್ತಿರುವ ಸ್ವರಗಳನ್ನು ಸಂರಕ್ಷಿಸುತ್ತವೆ.
Sculptures in Soap | ಸಾಬೂನಿನಲ್ಲಿ ಶಿಲ್ಪಗಳು
A Legacy Preserved by N S Seshadri (1936-2009)|ಎನ್ ಎಸ್ ಶೇಷಾದ್ರಿ (1936-2009) ಅವರಿಂದ ಪರಂಪರೆಯ ಸಂರಕ್ಷಣೆ
Second Floor Foyer
N S Seshadri (1936-2009) was an incredibly gifted artist whose legacy has been preserved through intricately carved soap sculptures. Self-taught, he created with passion and precision in equal measure. His daughter, Chinmai, has curated a selection of the 60-year-old sculptures in display of skill and devotion to craft.
ಅದ್ಭುತ ಸಹಜ ಪ್ರತಿಭೆಯ ಮೇರು ಕಲಾವಿದರಾದ ಎನ್ . ಎಸ್. ಶೇಷಾದ್ರಿ (1936-2009) ಅವರ ಕಲಾ ಪರಂಪರೆಯು ಸೂಕ್ಷ್ಮವಾಗಿ ಕೆತ್ತಲ್ಪಟ್ಟಿರುವ ಸಾಬೂನು ಶಿಲ್ಪಗಳಲ್ಲಿ ಜೀವಂತವಾಗಿ ಉಳಿದಿದೆ. ಸ್ವ-ಕಲಿಕೆಯಿಂದ ರೂಪುಗೊಂಡ ಒತ್ತಾಸೆಯೊಂದಿಗೆ ನಿಖರತೆಯ ಸಮಾನ ಸಂಯೋಜನೆ ಅವರ ಕಲೆಯ ವಿಶಿಷ್ಠತೆ. ಅವರ ಪುತ್ರಿ ಚಿನ್ಮಯಿ ಅವರು ಕೌಶಲ್ಯ ಹಾಗೂ ಕಲಾನಿಷ್ಠೆಯನ್ನು ಬಿಂಬಿಸುವ ಆರು ದಶಕಗಳ ಕಲಾಕೃತಿಗಳನ್ನು ಆಯ್ದು ಸಂಗ್ರಹಿಸಿ ರಸಾಸ್ವಾದನೆಗೆ ಒದಗಿಸಿದ್ದಾರೆ.
Find the schedule for Day 1 here!
Presented by:
Artists
Medha Bhaskar | ಮೇಧಾ ಭಾಸ್ಕರ್
Medha Bhaskar is one of the founders of Amrutha Bindu Yoga, a Bangalore based yoga studio dedicated to classical yoga and its contemporary application. Her work integrates classical yoga philosophy with modern movement science and pedagogy. A teacher and writer, her work weaves philosophy, movement, and contemplative practice, creating immersive spaces for learning that honour yoga’s depth, cultural roots, and evolving relevance in modern life.
ಮೇಧಾ ಅವರು ಪಾರಂಪರಿಕ ಯೋಗ ಮತ್ತು ಅದರ ಆಧುನಿಕ ಅನ್ವಯಕ್ಕೆ ಮುಡಿಪಾಗಿರುವ, ಬೆಂಗಳೂರಿನ ಅಮೃತ ಬಿಂದು ಯೋಗಶಾಲೆಯ ಸಹ ಸಂಸ್ಥಾಪಕರು. ಅವರು ಪ್ರಾಚೀನ ಯೋಗದ ಮೂಲತತ್ವಗಳನ್ನು ಇಂದಿನ ಚಲನಾ ವಿಜ್ಞಾನ ಮತ್ತು ಬೋಧನಾಕ್ರಮದೊಂದಿಗೆ ಅನ್ವಯಿಸಿ ಹೊಸ ಜನಾಂಗಕ್ಕೆ ತರಬೇತಿ ನೀಡುವುದರಲ್ಲಿ ಪರಿಣಿತಿ ಹೊಂದಿದ್ದಾರೆ. ಯೋಗ ಶಿಕ್ಷಣದ ಜೊತೆಯಲ್ಲಿ ಲೇಖಕಿ- ಕಲಾವಿದೆ ಆಗಿರುವ ಮೇಧಾ ಅವರು ಭಾರತೀಯ ತತ್ವಶಾಸ್ತ್ರ, ಆಧುನಿಕ ದೈಹಿಕ ಚಲನ ಶಾಸ್ತ್ರ, ಚಿಂತನಶೀಲ ಅಭ್ಯಾಸಗಳ ಸಮ್ಮಿಲನದಿಂದ ಯೋಗದ ವಿಸ್ತೃತ ನೆಲೆ, ಸಾಂಸ್ಕೃತಿಕ ಬೇರುಗಳು, ಮತ್ತು ಆಧುನಿಕ ಕಾಲಘಟ್ಟದಲ್ಲಿ ಅದರ ಪ್ರಸ್ತುತತೆಗಳನ್ನು ಉಳಿಸುತ್ತಾ, ಶ್ರದ್ಧೆಯಿಂದ ಅಭ್ಯಾಸ ಮಾಡುವುದಕ್ಕೆ ಅವಕಾಶಗಳನ್ನು ಸೃಷ್ಟಿಸುವಲ್ಲಿ ನಿರತರಾಗಿದ್ದಾರೆ.
Chandana Bala Kalyan | ಚಂದನ ಬಾಲ ಕಲ್ಯಾಣ್
Chandana Bala Kalyan is an award-winning Carnatic classical and contemporary singer and TEDx speaker. She performs worldwide as a soloist and with bands, exploring spiritual poetry through genres like Carnatic, Sufi, Baul, Abhanga, Bhajan, and folk. A Top Grade artist in both devotional and Carnatic music, she has received the Ananya Yuva Puraskara, M.S. Subbalakshmi Award, and Nadajyoti Puraskara. Her albums Marma and Taaraa Marma feature 12 compositions, 11 composed by her. Chandana has appeared on MTV Coke Studio, Annamayya Paataku Pattaabhishekham (SVBC), and Ra Ga Ra Sa (ETV).
ಚಂದನ ಬಾಲ ಕಲ್ಯಾಣ್ ಪ್ರಶಸ್ತಿ ವಿಜೇತ ಸಮಕಾಲೀನ ಕರ್ನಾಟಕ ಶಾಸ್ತ್ರೀಯ ಗಾಯಕಿ ಮತ್ತು TEDx ಸ್ಪೀಕರ್. ಅವರು ಒಬ್ಬ ಏಕವ್ಯಕ್ತಿ ಕಲಾವಿದೆಯಾಗಿ ಹಾಗೂ ಬ್ಯಾಂಡ್‌ಗಳೊಂದಿಗೆ ಜಾಗತಿಕ ವೇದಿಕೆಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಸೂಫಿ, ಬವುಲ್, ಅಭಂಗ, ಭಜನೆ ಮತ್ತು ಜಾನಪದ ಸೇರಿದಂತೆ ವಿವಿಧ ಶೈಲಿಗಳ ಮೂಲಕ ಆಧ್ಯಾತ್ಮಿಕ ಕಾವ್ಯವನ್ನು ಅನ್ವೇಷಿಸುತ್ತಾರೆ. ಭಕ್ತಿಗೀತೆ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಉನ್ನತ ಕಲಾವಿದೆಯಾಗಿ ಅವರು “ಅನನ್ಯ ಯುವ ಪುರಸ್ಕಾರ”, “ಎಂ.ಎಸ್. ಸುಬ್ಬಲಕ್ಷ್ಮಿ ಪ್ರಶಸ್ತಿ” ಮತ್ತು “ನಾದಜ್ಯೋತಿ ಪುರಸ್ಕಾರ” ಪಡೆದಿದ್ದಾರೆ. ಅವರ ಆಲ್ಬಂಗಳಾದ ಮರ್ಮ ಮತ್ತು ತಾರಾ ಮರ್ಮ 12 ಸಂಗೀತ ರಚನೆಗಳನ್ನು ಒಳಗೊಂಡಿದ್ದು ಅವುಗಳಲ್ಲಿ 11 ರಚನೆಗಳು ಅವರದೇ ಆಗಿವೆ. ಚಂದನ ಎಂಟಿವಿ ಕೋಕ್ ಸ್ಟುಡಿಯೊ, ಅನ್ನಮಯ್ಯ ಪಾಟಕು ಪಟ್ಟಾಭಿಷೇಕಮ್ (SVBC), ಮತ್ತು ರ ಗ ರ ಸ (ETV) ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
Satyajit Sanju | ಸತ್ಯಜಿತ್ ಸಂಜು
Adarsh Shenoy | ಆದರ್ಶ್ ಶೆಣಯ್
Mala Kumar | ಮಾಲಾ ಕುಮಾರ್
Mala Kumar is a children’s book author and editor. Her books include The Missing Rocks of Hampi, Travelling Treasures: 100 Incredible Tales of How Things Came to India, Up the Mountains of India, Crazy Mazy’s Maths Puzzles, and many picture books including the Ritu Chakra series, and a biography of Sir M Visvesvaraya. She writes articles about education, culture, environment and people.
ಮಾಲಾ ಕುಮಾರ್ ಮಕ್ಕಳ ಪುಸ್ತಕಗಳ ಲೇಖಕಿ ಮತ್ತು ಸಂಪಾದಕಿ. ಅವರ ಪುಸ್ತಕಗಳಲ್ಲಿ ಹಂಪಿಯ ಕಾಣೆಯಾದ ಶಿಲೆಗಳು, ಟ್ರಾವೆಲ್ಲಿಂಗ್ ಟ್ರೆಶರ್ಸ್: 100 ಇನ್‌ಕ್ರೆಡಿಬಲ್ ಟೇಲ್ಸ್ ಆಫ್ ಹೌ ಥಿಂಗ್ಸ್ ಕೇಮ್ ಟು ಇಂಡಿಯಾ, ‘ಅಪ್ ದ ಮೌಂಟನ್ಸ್ ಆಫ್ ಇಂಡಿಯಾ’, ‘ಕ್ರೇಝಿ ಮೇಝಿʼಯ ಗಣಿತದ ಒಗಟುಗಳು ’, ಹಾಗೂ ಋತು ಚಕ್ರ ಸರಣಿಯ ಅನೇಕ ಚಿತ್ರಪುಸ್ತಕಗಳು ಸೇರಿವೆ. ಅವರು ಶ್ರೀ ಎಂ. ವಿಶ್ವೇಶ್ವರಯ್ಯನವರ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶಿಕ್ಷಣ, ಸಂಸ್ಕೃತಿ, ಪರಿಸರ ಮತ್ತು ಜನರ ಬಗ್ಗೆ ಲೇಖನಗಳನ್ನೂ ಬರೆಯುತ್ತಾರೆ.
N S Sridhar Murthy | ಎನ್ ಎಸ್ ಶ್ರೀಧರ ಮೂರ್ತಿ
S. Sridhar Murthy, cultural historian, journalist, and scholar, currently teaches at M. P. Birla Institute of Management and coordinates publications at the Kannada Sahitya Parishat. Author of 52 books and over 4,000 articles, he received the first Fellowship from the Karnataka Chalanachitra Academy and awards including the R.N.R., Suvarna Karnataka, and Aryabhata. His prolific work continues to illuminate Karnataka’s cinematic and cultural heritage.
ಸಾಂಸ್ಕೃತಿಕ ಇತಿಹಾಸಕಾರ, ಪತ್ರಕರ್ತ ಮತ್ತು ವಿದ್ವಾಂಸರಾದ ಎನ್. ಎಸ್. ಶ್ರೀಧರಮೂರ್ತಿಯವರು ಪ್ರಸ್ತುತ ಎಂ.ಪಿ. ಬಿರ್ಲಾ ಮ್ಯಾನೇಜ್‌ಮೆಂಟ್ ಇನ್ಸ್ಟಿಟ್ಯೂಟ್‌ನಲ್ಲಿ ಬೋಧಿಸುತ್ತಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಾಶನ ವಿಭಾಗದ ಸಂಯೋಜಕರಾಗಿದ್ದಾರೆ. 52 ಪುಸ್ತಕಗಳು ಮತ್ತು 4000ಕ್ಕೂ ಹೆಚ್ಚು ಲೇಖನಗಳನ್ನು ರಚಿಸಿರುವ ಅವರು, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮೊದಲ ಫೆಲೋಶಿಪ್ ಸೇರಿದಂತೆ ಆರ್.ಎನ್.ಆರ್, ಸುವರ್ಣ ಕರ್ನಾಟಕ, ಆರ್ಯಭಟ ಪ್ರಶಸ್ತಿಗಳ ಪುರಸ್ಕೃತರು. ಅವರ ಕೊಡುಗೆಗಳು ಕನ್ನಡ ಚಿತ್ರರಂಗ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬೆಳಗಿಸಿವೆ.
Sundar Raj | ಸುಂದರ್ ರಾಜ್
Veteran actor Sundar Raj, with over five decades in Kannada cinema, has portrayed an extraordinary range of roles across 180 films including Immadi Pulikeshi, Kurigalu Saar Kurigalu, Ondaanondu Kaaladalli and Chandanada Gombe. Celebrated for his versatility and enduring screen presence, he remains a cherished figure in Karnataka’s cultural landscape – contributing not only as an actor but also as a custodian of the state’s rich performing arts heritage.
ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿರುವ ಖ್ಯಾತ ಹಿರಿಯ ನಟ ಸುಂದರ್ ರಾಜ್, ಇಮ್ಮಡಿ ಪುಲಿಕೇಶಿ, ಕುರಿಗಳು ಸಾರ್ ಕುರಿಗಳು, ಒಂದಾನೊಂದು ಕಾಲದಲ್ಲಿ ಮತ್ತು ಚಂದನದ ಗೊಂಬೆ ಸೇರಿದಂತೆ 180ಕ್ಕೂ ಹೆಚ್ಚು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಹುಮುಖ ಅಭಿನಯ ಸಾಮರ್ಥ್ಯ ಮತ್ತು ಪ್ರೇಕ್ಷಕರನ್ನು ಪರದೆಯೆಡೆಗೆ ಆಕರ್ಷಿಸಬಲ್ಲ ಇವರು ರಾಜ್ಯದ ಸಾಂಸ್ಕೃತಿಕ ರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದು, ಶ್ರೀಮಂತ ಕಲಾ ಪರಂಪರೆಯನ್ನು ಉಳಿಸುವ ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡಿದ್ದಾರೆ.
Students of Hamsalekha Desi Vidyalaya | ಹಂಸಲೇಖ ದೇಸಿ ವಿದ್ಯಾಲಯದ ವಿದ್ಯಾರ್ಥಿಗಳು
Manjunatha R | ಮಂಜುನಾಥ ಆರ್
Supriya Raghunandan | ಸುಪ್ರಿಯಾ ರಘುನಂದನ್
Supriya Raghunandan is a distinguished vocalist whose repertoire spans Sugama Sangeetha, Light Music, and Classical traditions. A disciple of stalwarts like Dr. C. Ashwath and Pandit Parameshwar Hegde, she has sung iconic tracks such as “Nee Amruthadhaare” and “Dennana Dennana.” A recipient of the Kannada Rajyotsava Award from HAL (2023), AIR National Award, and Radio Mirchi Award, she leads Suraaghavi Foundation and Suraaghavi Studios, nurturing young musicians.
ಸುಪ್ರಿಯಾ ರಘುನಂದನ್ ಸುಗಮ ಸಂಗೀತ, ಲಘು ಸಂಗೀತ ಮತ್ತು ಶಾಸ್ತ್ರೀಯ ಪರಂಪರೆಗಳ ವಿಶಾಲ ಗಾಯನಶೈಲಿಗಳನ್ನು ರೂಢಿಸಿಕೊಂಡಿರುವ ನಾಡಿನ ಪ್ರಮುಖ ಗಾಯಕಿ. ಡಾ. ಸಿ. ಅಶ್ವಥ್ ಮತ್ತು ಪಂಡಿತ್ ಪರಮೇಶ್ವರ ಹೆಗ್ಡೆ ಅವರ ಶಿಷ್ಯೆಯಾಗಿರುವ ಅವರು “ನೀ ಅಮೃತಧಾರೆ”, “ದೆನ್ನಾನಾ ದೆನ್ನಾನಾ” ಮುಂತಾದ ಜನಪ್ರಿಯ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಎಚ್.ಎ.ಎಲ್ ಸಂಸ್ಥೆಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (2023), ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ ಮತ್ತು ರೇಡಿಯೋ ಮಿರ್ಚಿ ಪ್ರಶಸ್ತಿಗಳಿಗೆ ಭಾಜನರಾಗಿರುವ ಅವರು ಸುರಾಘವಿ ಫೌಂಡೇಶನ್ ಮತ್ತು ಸುರಾಘವಿ ಸ್ಟುಡಿಯೋಸ್ ಮೂಲಕ ಯುವ ಸಂಗೀತ ಪ್ರತಿಭೆಗಳನ್ನು ಬೆಳೆಸುತ್ತಿದ್ದಾರೆ.
Mangala Ravi | ಮಂಗಲಾ ರವಿ
Mangala Ravi, an acclaimed singer with over 25 years of musical excellence, has performed in 600 concerts worldwide and recorded over 1200 albums in five languages. A disciple of Vid. Raju Anantaswamy, she co-founded Aalapana Kala Samsthe, mentoring hundreds of young singers. Honored with the Kempegowda Award, KIMA Award, and GV Atri Award, her contributions to Sugama Sangeetha and Kannada music remain deeply influential.
ಮಂಗಳಾ ರವಿ ಹೆಸರಾಂತ ಗಾಯಕಿಯಾಗಿದ್ದು 25 ವರ್ಷಗಳ ಸಂಗೀತ ಸೇವೆಯನ್ನು ಪೂರೈಸಿದ್ದಾರೆ. ದೇಶ–ವಿದೇಶಗಳಲ್ಲಿ 600ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಇವರು ಐದು ಭಾಷೆಗಳಲ್ಲಿ 1200ಕ್ಕೂ ಹೆಚ್ಚು ಆಲ್ಬಮ್‌ಗಳಿಗೆ ಧ್ವನಿಯಾಗಿದ್ದಾರೆ. ವಿದ್ವಾನ್ ರಾಜು ಅನಂತಸ್ವಾಮಿ ಅವರ ಶಿಷ್ಯೆಯಾಗಿರುವ ಅವರು ಆಲಾಪನಾ ಕಲಾ ಸಂಸ್ಥೆಯ ಮೂಲಕ ನೂರಾರು ಯುವ ಗಾಯಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಕೆಂಪೇಗೌಡ ಪ್ರಶಸ್ತಿ, KIMA ಪ್ರಶಸ್ತಿ ಮತ್ತು ಜಿ.ವಿ. ಅತ್ರಿ ಪ್ರಶಸ್ತಿಗಳ ಪುರಸ್ಕೃತೆಯಾಗಿರುವ ಅವರ ಕೊಡುಗೆಗಳು ಸುಗಮ ಸಂಗೀತ ಮತ್ತು ಕನ್ನಡ ಸಂಗೀತ ಲೋಕದಲ್ಲಿ ಸ್ಮರಣೀಯವಾಗಿವೆ.
Ravi Kiran Rajaram | ರವಿಕಿರಣ್ ರಾಜಾರಾಮ್
Ravi Kiran Rajaram, a talented tabla artist with 15 years of experience, has been trained under Karnataka Kalashree T. Rajaram and Pandit Vishwanath Nakod. His performances in Hindustani classical, Sugama Sangeetha, and film music have received acclaim across Karnataka. Recognized for his rhythmic precision and expressive artistry, Ravi Kiran continues to enrich the state’s musical landscape through dedicated performance and collaboration.
ಹದಿನೈದು ವರ್ಷಗಳ ಅನುಭವ ಹೊಂದಿರುವ ಪ್ರತಿಭಾವಂತ ತಬಲಾ ವಾದಕ ರವಿಕಿರಣ್ ರಾಜಾರಾಮ್, ಕರ್ನಾಟಕ ಕಲಾಶ್ರೀ ಟಿ. ರಾಜಾರಾಮ್ ಮತ್ತು ಪಂಡಿತ್ ವಿಶ್ವನಾಥ ನಕೋಡ್ ಅವರ ಶಿಷ್ಯರಾಗಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ, ಸುಗಮ ಸಂಗೀತ ಮತ್ತು ಚಲನಚಿತ್ರ ಸಂಗೀತ ಕ್ಷೇತ್ರಗಳಲ್ಲಿ ಅವರ ವಾದನವು ರಾಜ್ಯದಾದ್ಯಂತ ಮೆಚ್ಚುಗೆ ಪಡೆದಿದೆ. ನಿಖರ ಲಯಬದ್ಧತೆ ಮತ್ತು ಭಾವಪೂರ್ಣ ವಾದನಶೈಲಿಯಿಂದ ಗುರುತಿಸಿಕೊಂಡಿರುವ ರವಿಕಿರಣ್, ತಮ್ಮ ಸೃಜನಶೀಲ ಸಹಯೋಗ ಮತ್ತು ನಿಷ್ಠೆಯಿಂದ ಕೂಡಿದ ಪ್ರದರ್ಶನಗಳಿಂದ ಕರ್ನಾಟಕದ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
Srushti Umesh and Srushti Srinivas | ಸೃಷ್ಟಿ ಉಮೇಶ್ ಮತ್ತು ಸೃಷ್ಟಿ ಶ್ರೀನಿವಾಸ್
Brothers Srushti Umesh and Srushti Srinivas have been active in light, folk, and film music for over three decades. Trained by Guru Ramachandra Rao, they have accompanied many renowned vocalists and musicians across Karnataka’s cultural stages. Known for their skill and versatility, they continue to enrich the live music scene with their dedication and musicianship.
ಸೃಷ್ಟಿ ಉಮೇಶ್ ಮತ್ತು ಸೃಷ್ಟಿ ಶ್ರೀನಿವಾಸ್ ಸಹೋದರರು ಮೂರು ದಶಕಗಳಿಂದ ಲಘು, ಜನಪದ ಮತ್ತು ಚಲನಚಿತ್ರ ಸಂಗೀತ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಗುರು ರಾಮಚಂದ್ರ ರಾವ್ ಅವರ ಶಿಷ್ಯರಾಗಿರುವ ಇವರು ಕರ್ನಾಟಕದ ಹಲವು ವೇದಿಕೆಗಳಲ್ಲಿ ನಾಡಿನ ಪ್ರಮುಖ ಗಾಯಕರು ಮತ್ತು ವಾದಕರಿಗೆ ಸಾಥ್ ನೀಡಿದ್ದಾರೆ. ತಮ್ಮ ನೈಪುಣ್ಯತೆ, ಮತ್ತು ವೈವಿಧ್ಯತೆಗಳಿಂದ ಗುರುತಿಸಿಕೊಂಡಿರುವ ಇವರಿಬ್ಬರೂ ಇಂದಿಗೂ ತಮ್ಮ ಪ್ರದರ್ಶನಗಳಿಂದ ಸಂಗೀತ ಕ್ಷೇತ್ರವನ್ನು ಸಮೃದ್ಧಗೊಳಿಸುತ್ತಿದ್ದಾರೆ.
Rajkiran T R | ರಾಜ್‌ಕಿರಣ್ ಟಿ.ಆರ್.
Rajkiran T R is a versatile keyboard artist and composer from Bengaluru with over 15 years of experience in classical and contemporary music. Renowned for his technical mastery and creative sound design, he excels in live performance, studio production, and collaborative projects. Rajkiran’s deep musicality and dynamic style make him a sought-after performer in Karnataka’s music community.
ಬೆಂಗಳೂರು ಮೂಲದ ಬಹುಮುಖ ಪ್ರತಿಭೆಯ ಕೀಬೋರ್ಡ್ ಕಲಾವಿದ ಮತ್ತು ಸಂಗೀತ ಸಂಯೋಜಕ ರಾಜ್‌ಕಿರಣ್ ಟಿ.ಆರ್, ಶಾಸ್ತ್ರೀಯ ಮತ್ತು ಆಧುನಿಕ ಸಂಗೀತ ಕ್ಷೇತ್ರಗಳಲ್ಲಿ 15 ವರ್ಷಗಳ ಅನುಭವ ಪಡೆದಿದ್ದಾರೆ. ತಾಂತ್ರಿಕ ಪಟುತ್ವ, ವಿನೂತನ ಧ್ವನಿ ವಿನ್ಯಾಸ ಮತ್ತು ಸೃಜನಾತ್ಮಕ ಶೈಲಿಯಿಂದ ಅವರು ಲೈವ್ ಪ್ರದರ್ಶನಗಳು, ಸ್ಟುಡಿಯೋ ಸಂಯೋಜನೆಗಳು ಮತ್ತು ಸಹಯೋಗಿ ಸಂಗೀತ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಆಳವಾದ ಸಂಗೀತಾನುಭವ ಮತ್ತು ಹುರುಪಿನ ಶೈಲಿ ಅವರನ್ನು ಕರ್ನಾಟಕದ ಸಂಗೀತ ವಲಯದಲ್ಲಿ ಬೇಡಿಕೆಯ ಕಲಾವಿದರನ್ನಾಗಿಸಿದೆ.
Students of Suraaghavi Foundation | ಸುರಾಘವಿ ಫೌಂಡೇಷನ್ ವಿದ್ಯಾರ್ಥಿಗಳು
Geetha Bhat | ಗೀತಾ ಭಟ್
Geetha Bhat is the founder of the Centre for Revival of Indigenous Arts (CFRIA), an accomplished artist, educator, and cultural ambassador. With over 40 years of experience in traditional arts including Origami, Ikebana, and Chittara, she has presented research internationally and exhibited murals widely. She has been involved with Indo-Japanese art and culture since the 1970s, and continues as the Program Director at Indo-Japanese Chamber of Commerce and Industry (IJCCI), Karnataka. She was honoured at the Attendance Annual Awards 2024 for her contributions.
ಭಾರತೀಯ ಜನಕಲೆಗಳ ಪುನರುತ್ಥಾನಕ್ಕಾಗಿ ಕಾರ್ಯನಿರ್ವಹಿಸುವ CFRIA (Centre for Revival of Indigenous Arts) ಸಂಸ್ಥೆಯ ಸ್ಥಾಪಕಿ, ಪ್ರಗತಿಶೀಲ ಕಲಾವಿದೆ, ಶಿಕ್ಷಕಿ ಮತ್ತು ಸಾಂಸ್ಕೃತಿಕ ರಾಯಭಾರಿ. ಓರಿಗಾಮಿ, ಇಕೆಬಾನಾ ಮತ್ತು ಚಿತ್ತಾರ ಸೇರಿದಂತೆ 40 ವರ್ಷಕ್ಕೂ ಮೇಲ್ಪಟ್ಟ ಸಾಂಪ್ರದಾಯಿಕ ಕಲಾ ಅನುಭವ ಹೊಂದಿರುವ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆ ಪ್ರಸ್ತುತಪಡಿಸಿ, ಗೋಡೆಯ ಚಿತ್ರಕಲೆಯನ್ನು ವ್ಯಾಪಕವಾಗಿ ಪ್ರದರ್ಶಿಸಿದ್ದಾರೆ. 1970ರ ದಶಕದಿಂದ ಇಂಡೋ-ಜಪಾನೀಸ್ ಕಲಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಕರ್ನಾಟಕದ ಇಂಡೋ-ಜಪಾನೀಸ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (IJCCI) ಯಲ್ಲಿ ಪ್ರೋಗ್ರಾಂ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಕೊಡುಗೆಗಾಗಿ 2024ರ Attendance Annual Awards ನಲ್ಲಿ ಗೌರವಿಸಲ್ಪಟ್ಟಿದ್ದಾರೆ.
Shruti Belli | ಶೃತಿ ಬೆಳ್ಳಿ
Shruti Belli is an MBA graduate and a dedicated practitioner of Chittara art. Over the years, she has immersed herself in this traditional folk art form, exploring its patterns, symbolism, and storytelling, bringing its vibrant heritage to life through workshops and creative sessions.
ಎಂಬಿಎ ಪದವೀದರೆ ಶೃತಿ ಬೆಳ್ಳಿ, ಚಿತ್ತಾರ ಜನಕಲೆಯ ನಿಷ್ಠಾವಂತ ಅಭ್ಯಸಿಸುವರಲ್ಲಿ ಒಬ್ಬರು. ವರ್ಷಗಳಿಂದ ಅವರು ಈ ಸಾಂಪ್ರದಾಯಿಕ ಜನಕಲೆಯೊಳಗೆ ಸಂಪೂರ್ಣವಾಗಿ ಮುಳುಗಿಸಿಕೊಂಡು, ಅದರ ವಿನ್ಯಾಸಗಳು, ಸಂಕೇತಗಳು ಮತ್ತು ಕಥೆ ಹೇಳುವ ಶೈಲೆಯನ್ನು ಅಧ್ಯಯನ ಮಾಡಿ, ಕಾರ್ಯಾಗಾರಗಳು ಮತ್ತು ಸೃಜನಾತ್ಮಕ ತರಗತಿಗಳ ಮೂಲಕ ಅದರ ಜೀವಂತ ಪರಂಪರೆಯನ್ನು ಪ್ರೇಕ್ಷಕರ ಮುಂದೆ ಪರಿಚಯಿಸುತ್ತಿದ್ದಾರೆ.
Srinivasa G. Kappanna | ಶ್ರೀನಿವಾಸ ಜಿ. ಕಪ್ಪಣ್ಣ
Srinivasa G. Kappanna is a distinguished theatre personality and cultural organizer. Hailing from Bengaluru, his passion for theatre began in 1964 through the National College’s Histrionic Club. In 1972, he became a founding force behind the Nataranga theatre troupe, organizing and directing landmark productions such as Poli Kitty, Kaakana Kote, Tughlaq and Mid-Summer Night’s Dream.
Kappanna has represented India at prestigious international festivals and curated cultural performances for several national events. As an actor, he has appeared in acclaimed films such as Kaadu, Kaanooru Heggadithi, and television series like Malgudi Days and Mukta Mukta and also played a key role in producing the film adaptation of Kaakana Kote. His contributions have earned him numerous honors, including Karnataka Rajyotsava, Karnataka Nataka Academy and Central Sangeet Natak Akademi Awards.
ಶ್ರೀನಿವಾಸ ಜಿ. ಕಪ್ಪಣ್ಣ ಬೆಂಗಳೂರಿನವರಾಗಿದ್ದು ಕನ್ನಡ ರಂಗಭೂಮಿ ಮತ್ತು ಸಾಂಸ್ಕೃತಿಕ ಸಂಘಟನೆಯ ಪ್ರಮುಖ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. 1964ರಲ್ಲಿ ನ್ಯಾಷನಲ್ ಕಾಲೇಜಿನ ಹಿಸ್ಟ್ರಿಯಾನಿಕ್ ಕ್ಲಬ್ ಮೂಲಕ ರಂಗಚಟುವಟಿಕೆ ಆರಂಭಿಸಿದರು. 1972ರಲ್ಲಿ ನಟರಂಗ ನಾಟಕ ತಂಡದ ಸಂಘಟನಾ ಜವಾಬ್ದಾರಿಯನ್ನು ಹೊತ್ತು ಪೋಲಿಕಿಟ್ಟಿ, ಕಾಕನ ಕೋಟೆ, ತುಘಲಕ್, ಮಿಡ್ ಸಮರ್ ನೈಟ್ಸ್ ಡ್ರೀಮ್ ಮುಂತಾದ ನಾಟಕಗಳ ಪ್ರದರ್ಶನದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ನಾಟಕೋತ್ಸವಗಳು ಮತ್ತು ದೇಶದ ಪ್ರಮುಖ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ತಂಡಗಳ ನಿರ್ದೇಶನದ ಜವಾಬ್ದಾರಿ ನಿರ್ವಹಿಸಿದ್ದಾರೆ. ನಟನಾಗಿ ಅವರು ಕಾಡು, ಕಾನೂರು ಹೆಗ್ಗಡತಿ ಚಿತ್ರಗಳಲ್ಲಿ ಹಾಗೂ ಮಾಲ್ಗುಡಿ ಡೇಸ್, ಮುಕ್ತ ಮುಕ್ತ ಧಾರಾವಾಹಿಗಳಲ್ಲಿ ಅಭಿನಯಿಸಿರುವರಲ್ಲದೆ ಕಾಕನ ಕೋಟೆ ಚಲನಚಿತ್ರದ ನಿರ್ಮಾಣದಲ್ಲಿಯೂ ಪಾಲ್ಗೊಂಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ನಾಟಕ ಅಕಾಡಮಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಮುಂತಾದ ಪ್ರಶಸ್ತಿಗಳು ದೊರೆತಿವೆ.
Savithakka (Savitha Ganesh Prasad) | ಸವಿತಕ್ಕ (ಸವಿತಾ ಗಣೇಶ್ ಪ್ರಸಾದ್)
Savithakka (Savitha Ganesh Prasad) is a celebrated Kannada folk singer and cultural ambassador who has brought the richness of Karnataka’s folk music to both national and international stages. Initiated into music at a young age under her mother’s guidance, she received formal training in Carnatic classical music from Ratna Shivashankar, Hindustani music from Pandit V. M. Nagaraj and Light Music from M. S. Kamat, Mandolin Srinivas, and Puttur Narasimha Naik.
Savithakka has performed across several prestigious global cities, sharing the vitality of Karnataka’s folk traditions. Through her music institution Savigaana and her ensemble Savithakkana Alli Band, she trains students of all ages. Savithakka made her acting debut with the solo folk drama Udho Udho Yellamma and has been honoured with several awards, including the Kittur Rani Chennamma Award (Government of Karnataka), the Kempegowda Award (BBMP), and the Basava Siri Award, in recognition of her contributions to folk music.
ಸವಿತಕ್ಕ (ಸವಿತಾ ಗಣೇಶ್ ಪ್ರಸಾದ್) ಅವರು ಕನ್ನಡ ಜನಪದ ಗಾಯನ ಕ್ರೇತ್ರದಲ್ಲಿ ಪ್ರಮುಖ ಹೆಸರಾಗಿದ್ದು ಜನಪದ ಸಂಗೀತವನ್ನು ಜಾಗತಿಕ ಮತ್ತು ದೇಶೀಯ ವೇದಿಕೆಗಳಲ್ಲಿ ಪ್ರಸಾರಗೊಳಿಸುತ್ತಿರುವ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ. ಬಾಲ್ಯದಲ್ಲಿಯೇ ತಮ್ಮ ತಾಯಿಯವರ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸ ಆರಂಭಿಸಿ, ಕರ್ನಾಟಕ ಶೈಲಿಯನ್ನು ರತ್ನಾ ಶಿವಶಂಕರ್, ಹಿಂದೂಸ್ತಾನಿ ಶೈಲಿಯನ್ನು ಪಂಡಿತ್ ವಿ. ಎಂ. ನಾಗರಾಜ್ ಮತ್ತು ಸುಗಮ ಸಂಗೀತವನ್ನು ಎಂ.ಎಸ್. ಕಾಮತ್, ಮಾಂಡೋಲಿನ್ ಪ್ರಸಾದ್ ಮತ್ತು ಪುತ್ತೂರು ನರಸಿಂಹ ನಾಯಕ್ ಅವರುಗಳಿಂದ ಅಭ್ಯಾಸ ಮಾಡಿದ್ದಾರೆ.
ಅವರು ದೇಶ-ವಿದೇಶಗಳ ಪ್ರಮುಖ ನಗರಗಳಲ್ಲಿ ಜನಪದದ ಸೊಗಡನ್ನು ಹರಡುವಲ್ಲಿ ಶ್ರಮಿಸಿದ್ದಾರೆ. ಸವಿಗಾನ ಸಾಂಸ್ಕೃತಿಕ ಕಲಾ ಕುಂಜ ಸಂಸ್ಥೆ ಮತ್ತು ಸವಿತಕ್ಕನ ಅಳ್ಳಿ ಬ್ಯಾಂಡ್ ಮೂಲಕ ವಿವಿಧ ವಯೋಮಾನದವರಿಗೆ ಜನಪದ ಸಂಗೀತದಲ್ಲಿ ತರಬೇತಿ ನೀಡುತ್ತಿದ್ದಾರೆ. ಉಧೋ ಉಧೋ ಎಲ್ಲವ್ವ ಎಂಬ ಏಕವ್ಯಕ್ತಿ ನಾಟಕದ ಮೂಲಕ ರಂಗಭೂಮಿಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸವಿತಕ್ಕ ಅವರಿಗೆ ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ, ಬಿ.ಬಿ.ಎಂ.ಪಿ ವತಿಯಿಂದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಮಸ್ಕಟ್ ನ ಬಸವ ಬಳಗದಿಂದ ಬಸವ ಸಿರಿ ಮುಂತಾದ ಪ್ರಶಸ್ತಿಗಳು ಸಂದಿವೆ.
Vasu Dixit Collective (VDC) | ವಾಸು ದೀಕ್ಷಿತ್ ಕಲೆಕ್ಟಿವ್ (ವಿಡಿಸಿ)
Vasu Dixit Collective (VDC) is an ensemble of musicians and artists united by a shared love for creativity and tradition. Known for its unique blend of electronic folk or folktronica in Kannada and Hindi, VDC reimagines the poetry of Purandaradasa, Basavanna, and Kabir. Rooted in community and compassion, the collective embodies Vasu’s vibrant artistic journey – where his rich vocals, powerful compositions, and boundless energy celebrate the beauty and rhythm of life.
“ವಾಸು ದೀಕ್ಷಿತ್ ಕಲೆಕ್ಟಿವ್” (ವಿಡಿಸಿ) ಸೃಜನಶೀಲತೆ ಮತ್ತು ಪರಂಪರೆಯ ಮೇಲಿನ ಪ್ರೀತಿಯಿಂದ ಒಗ್ಗೂಡಿದ ಸಂಗೀತಗಾರರು ಮತ್ತು ಕಲಾವಿದರ ಒಂದು ಸಮೂಹ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಎಲೆಕ್ಟ್ರಾನಿಕ್ ಫೋಕ್ ಅಥವಾ ಫೋಕ್‌ಟ್ರಾನಿಕಾ” ಶೈಲಿಯ ವಿಶಿಷ್ಟ ಸಂಯೋಜನೆಯ ಮೂಲಕ ಪ್ರಸಿದ್ಧಿ ಪಡೆದಿರುವ ವಿಡಿಸಿ, ಪುರಂದರದಾಸ, ಬಸವಣ್ಣ ಮತ್ತು ಕಬೀರರ ಕಾವ್ಯವನ್ನು ಹೊಸ ರೂಪದಲ್ಲಿ ಮರುಕಲ್ಪಿಸಿಕೊಳ್ಳುತ್ತದೆ. ಸಮುದಾಯ ಮತ್ತು ಕರುಣೆ ಎನ್ನುವ ನೆಲೆಯ ಮೇಲೆ ಬೆಳೆದಿರುವ ಈ ತಂಡ, ವಾಸು ದೀಕ್ಷಿತ್ ಅವರ ಚೈತನ್ಯಮಯ ಕಲಾಪಯಣವನ್ನು ಪ್ರತಿಫಲಿಸುತ್ತದೆ. ಅವರ ಶ್ರೀಮಂತ ಗಾಯನಶೈಲಿ, ಸಶಕ್ತ ಸಂಗೀತ ಸಂಯೋಜನೆಗಳು ಮತ್ತು ಅದಮ್ಯ ಶಕ್ತಿ ಬಾಳಿನ ಸೌಂದರ್ಯವನ್ನು ಮತ್ತು ಅದರ ಲಯವನ್ನು ಸಂಭ್ರಿಮಿಸಿ ಹೊರಹೊಮ್ಮಿಸುತ್ತವೆ.

