Loading Events
  • This event is over. However, time travel possible through our Audio & Video! See upcoming events

ಕರ್ನಾಟಕವು ಹಲವು ವೈವಿಧ್ಯತೆಗಳ ನಾಡು. ಅದೇ ಅದರ ಅಸ್ಮಿತೆ. ಹಲವು ಸಂಸ್ಕೃತಿಗಳು ಮತ್ತು ಭಾಷೆಗಳೊಂದಿಗೆ ಜೀವ ಮಿಡಿಯುವ ಚಿತ್ರಚಿತ್ತಾರದ ನಮ್ಮ ವಿಶಾಲ ಕರ್ನಾಟಕದ ಸುತ್ತ ಪಯಣಿಸೋಣ ಬನ್ನಿ. ಕರ್ನಾಟಕದ ಉದ್ದಗಲಗಳಲ್ಲಿ ಅದರ ಭೂಭಾಗವನ್ನು, ಸಮುದಾಯಗಳನ್ನು ಮತ್ತು ಅನುಭವಗಳನ್ನು ತಮ್ಮ ಮಡಿಲೊಳಗಿಟ್ಟುಕೊಂಡ ಶಕ್ತಿಶಾಲಿ ನದಿಗಳಾದ ಕೃಷ್ಣೆ, ಕಾವೇರಿಯರಿಂದ ನಮ್ಮ ಉತ್ಸವವು ಪ್ರೇರಿತವಾಗಿದೆ. ಅಂತೆಯೇ “ಕೃಷ್ಣೆಯಿಂದ ಕಾವೇರಿಯವರೆಗೆ” ಎಂಬ ಈ ನಮ್ಮ ಪ್ರಸ್ತುತಿ.

ಕೃಷ್ಣೆ ಮತ್ತು ಕಾವೇರಿಯೆಂಬ ಎರಡು ನದಿಗಳು ಈ ರಾಜ್ಯದ ವಿವಿಧ ಭೂಭಾಗಗಳ ಉದ್ದಕ್ಕೂ ಹರಿಯುತ್ತಿರುವ ಹಾಗೆಯೇ ನಮ್ಮ ಹಬ್ಬವು ಕರ್ನಾಟಕದ ವಿವಿಧ ಸಂಸ್ಕೃತಿ ಮತ್ತು ಭಾಷೆಗಳೊಂದಿಗೆ ಕೊಂಡಿಯನ್ನು ಬೆಸೆಯುವ ಆಶಯವನ್ನು ಹೊಂದಿದೆ. ಈ ಜೀವದಾಯಿನಿ ನದಿಗಳು ವಿಸ್ತೃತ ಭೂಭಾಗ,
ಸಮೃದ್ಧ ವೈವಿಧ್ಯತೆ ಮತ್ತು ಸಮನ್ವಯಿತ ಸ್ವರೂಪದ ಈ ರಾಜ್ಯಕ್ಕೆ ಒಂದು ಸಶಕ್ತ ರೂಪಕವಾಗಬಲ್ಲವು.

ಜೀವಜಾಲಕ್ಕೆ ಹೊಸಚೈತನ್ಯವನ್ನು ನೀಡುವ ಈ ಪವಿತ್ರ ನದಿಗಳನ್ನು ಮಾದರಿಯಾಗಿಸಿಕೊಂಡು ನಾವು ನಮ್ಮ ಈ ಹಬ್ಬವನ್ನು ಮರುಹುಟ್ಟು ಹಾಗೂ ಮರುಚೈತನ್ಯವೆಂಬ ಎರಡು ಪರಿಕಲ್ಪನೆಗಳ ಸುತ್ತ ಸಂಯೋಜಿಸಿದ್ದೇವೆ. ಈ ನೆಲದ ಸಾಂಪ್ರದಾಯಿಕ ಕಲಾ ಪ್ರಕಾರಗಳು, ಪದ್ಧತಿಗಳು, ಮತ್ತು ಆಚರಣೆಗಳು ಸಮಕಾಲೀನ ಸಂದರ್ಭದಲ್ಲಿ ಎಷ್ಟು ಮಹತ್ವವಾಗುತ್ತವೆ ಎನ್ನುವುದನ್ನು ತಿಳಿಯಪಡಿಸುತ್ತ ಈ ಎಲ್ಲವುಗಳಿಗೆ ಹೊಸಜೀವವನ್ನು ಕಲ್ಪಿಸುವ ಆಶಯ ನಮ್ಮದು. ಸಂಸ್ಕೃತಿಗಳು ಒಂದರೊಳಗೊಂದು ಬೆರೆತು ಬೆಳೆಯುವ ನೆಲ ಕರ್ನಾಟಕ. ಅದರ ಅಸ್ಮಿತೆಯನ್ನು ರೂಪಿಸುವ ನದಿಗಳ ಹಾಗೆ. ರಾಜ್ಯದ ಈ ಮೂಲಗುಣಕ್ಕೆ ಚೈತನ್ಯವನ್ನು ತುಂಬುವ ಸಂಭ್ರಮಾಚರಣೆಯಲ್ಲಿ ನೀವೂ ಜೊತೆಯಾಗಿ.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದ ಸಹಭಾಗಿತ್ವದಲ್ಲಿ ಈ ಹಬ್ಬವನ್ನು ಪ್ರಸ್ತುತಪಡಿಸುತ್ತಿದೆ.

Journey through the heart of Karnataka as we explore the vibrant tapestry of cultures and languages that define this diverse state. Our festival, “Krishna to Kaveri,” draws inspiration from the mighty rivers that cradle Karnataka’s landscapes, communities, and experiences.

Just as the Krishna and Kaveri rivers traverse geographies, our festival aims to bridge the myriad cultures and languages of Karnataka. These life-giving waters serve as a powerful metaphor for the state’s expansive terrain, rich diversity, and syncretic nature.

Taking our cue from the rejuvenating powers of these sacred rivers, our event curation focuses on revival and revitalisation. We aim to breathe new life into traditional art forms, customs, and practices, ensuring their relevance in contemporary times.

Join us for two days of immersive experiences as we celebrate the essence of Karnataka – a land where cultures converge and flourish, much like the rivers that shape its identity.

Presented by Azim Premji University in collaboration with Bangalore International Centre

Schedule:

Day 1 | Saturday, November 9

10:00 am | Ground Floor Foyer

Welcome: Procession of folk artistes and launch 

T S Nagabharana and Dharanidevi Malagatti

11:00 am | Auditorium

Sangeeta Ganga Kaveri 

A lecture-demonstration by Dr. Nagarajrao Havaldar on the history and evolution of Hindustani music in Karnataka

11:30 am | Seminar Halls

United by Language

The Story of How Karnataka was Born with Prof. Rajendra Chenni and Vikhar Ahmed Sayeed

12:00 noon | Library

Workshop on Chittara

The Chittara Mural artform, established by the Deevaru Community, is a traditional phenomenon that involves intricate stories and geometric patterns. Geetha Bhat will lead a workshop where participants can engage in learning the basics of the art form and interact with the artists while learning about its 500 year old history and cultural significance.

12:30 pm | Amphitheatre

Dollu Kunitha

A unique presentation of Karnataka’s traditional Dollu Kunitha by an all-women ensemble. This innovative interpretation reimagines the art form that originated as part of Lord Beerappa worship.

2:00 pm | Auditorium

Adbhuta Ramayana
A Leather Shadow Puppet Performance by Gombe Mane, Dharwad

3:00 pm | Library

Banjara Mirror Embroidery Workshop

4:00 pm | Seminar Halls

Malenad: Bringing Big Cats Back from the Brink

A talk by Dr. Ullas Karanth on the necessary framework necessary to balance nature protection with development.

4:30 pm | Amphitheatre

Rangageethe

A sharing session of songs that have emerged from the ear of musical theatre in Karnataka over many decades.

6:00 pm | Seminar Halls

The Champions Huddle

Young sportspersons, Dhinidhi Desinghu and Rakshitha Raju in conversation with Prajwal Hegde on the sporting future of Karnataka.

6:30 pm | Auditorium

Sangamam Hubba

Suhas Shivanna, Nayana Nagaraj, Ranga Charaka Team and Mysuru Puppet Theatre team will be presenting a 5 different folk artforms from Folk songs, Dances and Traditional pupppet show as a part of the 13th edition of Sangamam by SFPI.

For Day 2 | Sunday, November 10 Click Here

Ongoing Throughout the Festival

10:00 am to 8:00 pm

Exhibition | Through the Building

Karnataka Vaibhava: Treasures & Turning Points

In collaboration with Shashidhar Adapa

Food Festival | Terrace

Flavour Fair

Anchored by Coracle with Chef Tresa

Experiential Interactions with Artisans | Ground Floor Foyer

Hand in Hand

Guided by Master Artisans

ಕಾರ್ಯಕ್ರಮಗಳ ವಿವರ

ಮೊದಲನೆಯ ದಿನ | ಶನಿವಾರ, ನವೆಂಬರ್ 9
ಬೆಳಗ್ಗೆ 10:00 ಗಂಟೆಗೆ | ನೆಲ ಅಂತಸ್ತಿನ ಪ್ರಾಂಗಣ (Ground Floor Foyer)
ಉದ್ಘಾಟನೆ

ಬೆಳಗ್ಗೆ 11.00 ಗಂಟೆಗೆ | ಆಡಿಟೋರಿಯಂ
ಸಂಗೀತ ಗಂಗಾ ಕಾವೇರಿ

ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತದ ಚರಿತ್ರೆ ಮತ್ತು ವಿಕಾಸವನ್ನು ಕುರಿತು ಡಾ.ನಾಗರಾಜರಾವ್
ಹವಾಲ್ದಾರ್‌ರವರಿಂದ ಉಪನ್ಯಾಸ – ಪ್ರಾತ್ಯಕ್ಷಿಕೆ

ಬೆಳಗ್ಗೆ 11:30 ಕ್ಕೆ | ಸೆಮಿನಾರ್ ಹಾಲ್

ನುಡಿಯ ನಂಟಿನಿಂದ ಬೆಸೆದವರು

ನಮ್ಮ ನಾಡಿನ ಹುಟ್ಟು, ಕರ್ನಾಟಕದ ಐತಿಹಾಸಿಕ ನೆನಪುಗಳು ಪ್ರೊ. ರಾಜೇಂದ್ರ ಚೆನ್ನಿ & ವಿಖಾರ್ ಅಹ್ಮದ್ ಸಯೀದ್ ಅವರ ಸಂವಾದ

ಮಧ್ಯಾಹ್ನ 12:00 ಗಂಟೆಗೆ | ಲೈಬ್ರೆರಿ
ಚಿತ್ತಾರ ಕಾರ್ಯಾಗಾರ

ಚಿತ್ತಾರವೆಂಬ ಸಾಂಪ್ರದಾಯಿಕ ಕಲಾ ಪ್ರಕಾರವು ಕರ್ನಾಟಕದಲ್ಲಿ ದೀವರು ಸಮುದಾಯದಿಂದ ಆರಂಭಗೊಂಡಿದೆ. ಸಂಕೀರ್ಣ ಕತೆಗಳು ಮತ್ತು ಜ್ಯಾಮಿತಿಯ ವಿನ್ಯಾಸಗಳನ್ನೊಳಗೊಂಡ ಈ ಕಲೆಯನ್ನು ಗೋಡೆಗಳ ಮೇಲೆ ಚಿತ್ರಿಸಲಾಗುತ್ತದೆ. ಗೀತಾ ಭಟ್ ಈ ಕಲೆಯನ್ನು ಕುರಿತ ಕಾರ್ಯಾಗಾರವೊಂದನ್ನು ನಡೆಸಿಕೊಡುತ್ತಾರೆ. ಇದರಲ್ಲಿ ಪಾಲ್ಗೊಳ್ಳುವವರು ಈ ಕಲೆಯ ಮೂಲ ಕೌಶಲಗಳನ್ನು ಕಲಿಯುವುದರ ಜೊತೆಗೆ ಈ ಕಲೆಯನ್ನು ಬಲ್ಲ ಕಲಾವಿದರೊಂದಿಗೆ ಸಂವಾದ ನಡೆಸಬಹುದು ಮತ್ತು ಹಸೆ ಚಿತ್ತಾರದ 500 ವರ್ಷಗಳ ಚರಿತ್ರೆ ಹಾಗೂ ಅದರ ಸಾಂಸ್ಕೃತಿಕ ಮಹತ್ವವನ್ನು ಕುರಿತು ಅರಿಯಬಹುದು.

ಮಧ್ಯಾಹ್ನ 12:30 ಕ್ಕೆ | ಆಂಪಿಥಿಯೇಟರ್
ರಂಗಗೀತೆ
ರಂಗಗೀತೆಗಳ ಪ್ರಸ್ತುತಿ. ಕರ್ನಾಟಕದಲ್ಲಿ ಅನೇಕ ದಶಕಗಳಿಂದ ಬೆಳೆದು ಬಂದ ನಾಟಕ ಸಂಗೀತ ಪರಂಪರೆಯ ಒಂದು ಝಲಕ್ ಸಿಗುತ್ತದೆ.

ಮಧ್ಯಾಹ್ನ 2:00 ಗಂಟೆಗೆ | ಆಡಿಟೋರಿಯಂ
ಅದ್ಭುತ ರಾಮಾಯಣ
ಧಾರವಾಡದ ಗೊಂಬೆ ಮನೆ ತಂಡದವರಿಂದ ತೊಗಲು ಬೊಂಬೆಯಾಟ ಪ್ರದರ್ಶನ.

ಮಧ್ಯಾಹ್ನ 3:00 ಗಂಟೆಗೆ | ಲೈಬ್ರೆರಿ
ಬಂಜಾರ ಕನ್ನಡಿ ಕಸೂತಿ ಕಾರ್ಯಾಗಾರ

ಮಧ್ಯಾಹ್ನ 4:00 ಗಂಟೆಗೆ | ಸೆಮಿನಾರ್ ಹಾಲ್
ಮಲೆನಾಡಿನ ಹುಲಿ, ಚಿರತೆಗಳ ಜಾಡಿನಲ್ಲಿ

ಡಾ. ಉಲ್ಲಾಸ್ ಕಾರಂತ್ ಅವರಿಂದ ಪ್ರಕೃತಿ ಸಂರಕ್ಷಣೆ ಮತ್ತು ಅಭಿವೃದ್ಧಿಯ ನಡುವೆ ಸಮತೋಲನ ಸಾಧಿಸಲು ಅಗತ್ಯವಿರುವ ಚೌಕಟ್ಟಿನ ಕುರಿತು ಉಪನ್ಯಾಸ

ಸಂಜೆ 4:30 ಗಂಟೆಗೆ | ಆಂಪಿಥಿಯೇಟರ್
ಡೊಳ್ಳು ಕುಣಿತ
ಕರ್ನಾಟಕದ ಪಾರಂಪರಿಕ ಡೊಳ್ಳು ಕುಣಿತವನ್ನು ಮಹಿಳೆಯರ ತಂಡದಿಂದ ವಿಶಿಷ್ಟ ರೀತಿಯಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಬೀರಪ್ಪ ದೇವರ ಆರಾಧನೆಯ ಭಾಗವಾಗಿ ರೂಪುಗೊಂಡ ಈ ಕಲೆಯ ಹೊಸ ಪ್ರಯೋಗ.

ಸಂಜೆ 6:00 ಗಂಟೆಗೆ | ಸೆಮಿನಾರ್ ಹಾಲ್

ಚಾಂಪಿಯನ್‌ಗಳ ನಡುವೆ

ಯುವ ಕ್ರೀಡಾಪಟುಗಳು ಧಿನಿಧಿ ದೇಸಿಂಗು ಮತ್ತು ರಕ್ಷಿತಾ ರಾಜು ಪ್ರಜ್ವಲ್ ಹೆಗಡೆ ಅವರೊಂದಿಗೆ ಕರ್ನಾಟಕದ ಕ್ರೀಡಾ ಭವಿಷ್ಯದ ಕುರಿತು ಸಂವಾದ

ಸಂಜೆ 7:00 | ಆಡಿಟೋರಿಯಂ

ಸಂಗಮಂ ಹಬ್ಬ

ಸುಹಾಸ್ ಶಿವಣ್ಣ, ನಯನಾ ನಾಗರಾಜ್, ರಂಗ ಚರಕ ತಂಡ ಮತ್ತು ಮೈಸೂರು ಪಪ್ಪೆಟ್ ಥಿಯೇಟರ್ ತಂಡವು ಸಂಗಮಂ ಕಾರ್ಯಕ್ರಮದ 13ನೇ ಆವೃತ್ತಿಯ ಭಾಗವಾಗಿ ಜಾನಪದ ಗೀತೆಗಳು, ನೃತ್ಯಗಳು ಮತ್ತು ಸಾಂಪ್ರದಾಯಿಕ ಗೊಂಬೆಯಾಟವನ್ನೊಳಗೊಂಡ 5 ವಿಭಿನ್ನ ಜಾನಪದ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸಲಿದ್ದಾರೆ.

ದಿನ 2 | ಭಾನುವಾರ, ನವೆಂಬರ್ 10ರ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎರಡು ದಿನಗಳೂ ನಡೆಯುವ ಕಾರ್ಯಕ್ರಮಗಳು:
ಬೆಳಗ್ಗೆ 10:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ
ಕಲಾ ಪ್ರದರ್ಶನ | ವಿವಿಧ ಅಂತಸ್ತುಗಳಲ್ಲಿ

ಕರ್ನಾಟಕ ವೈಭವ: ಹಿರಿಮೆಗಳು ಮತ್ತು ಸಂಧಿಕಾಲಗಳು
ಶಶಿಧರ ಅಡಪರವರ ಸಹಭಾಗಿತ್ವದಲ್ಲಿ

ಆಹಾರ ಮೇಳ (ಫುಡ್ ಫೆಸ್ಟಿವಲ್) | ಟೆರೇಸ್‌ನಲ್ಲಿ
ರುಚಿಗಳ ಜಾತ್ರೆ
ಚೆಫ್ ಟ್ರೆಸಾರವರ ಕೊರಾಕಲ್‌ನಿಂದ ಆಯೋಜನೆ.

ಕುಶಲಕರ್ಮಿಗಳೊಂದಿಗೆ ಮುಖಾಮುಖಿಯಾಗಿ ಅವರ ಅನುಭವಗಳನ್ನು ಕೇಳಿ ತಿಳಿಯಿರಿ | ನೆಲ ಅಂತಸ್ತಿನ ಪ್ರಾಂಗಣದಲ್ಲಿ
ಕರಕುಶಲತೆಯ ಕೈಪಿಡಿ
ಕುಶಲಕರ್ಮಿಗಳ ಮಾರ್ಗದರ್ಶನದಲ್ಲಿ