Loading Events
  • This event is over. However, time travel possible through our Audio & Video! See upcoming events

ಕರ್ನಾಟಕವು ಹಲವು ವೈವಿಧ್ಯತೆಗಳ ನಾಡು. ಅದೇ ಅದರ ಅಸ್ಮಿತೆ. ಹಲವು ಸಂಸ್ಕೃತಿಗಳು ಮತ್ತು ಭಾಷೆಗಳೊಂದಿಗೆ ಜೀವ ಮಿಡಿಯುವ ಚಿತ್ರಚಿತ್ತಾರದ ನಮ್ಮ ವಿಶಾಲ ಕರ್ನಾಟಕದ ಸುತ್ತ ಪಯಣಿಸೋಣ ಬನ್ನಿ. ಕರ್ನಾಟಕದ ಉದ್ದಗಲಗಳಲ್ಲಿ ಅದರ ಭೂಭಾಗವನ್ನು, ಸಮುದಾಯಗಳನ್ನು ಮತ್ತು ಅನುಭವಗಳನ್ನು ತಮ್ಮ ಮಡಿಲೊಳಗಿಟ್ಟುಕೊಂಡ ಶಕ್ತಿಶಾಲಿ ನದಿಗಳಾದ ಕೃಷ್ಣೆ, ಕಾವೇರಿಯರಿಂದ ನಮ್ಮ ಉತ್ಸವವು ಪ್ರೇರಿತವಾಗಿದೆ. ಅಂತೆಯೇ “ಕೃಷ್ಣೆಯಿಂದ ಕಾವೇರಿಯವರೆಗೆ” ಎಂಬ ಈ ನಮ್ಮ ಪ್ರಸ್ತುತಿ.

ಕೃಷ್ಣೆ ಮತ್ತು ಕಾವೇರಿಯೆಂಬ ಎರಡು ನದಿಗಳು ಈ ರಾಜ್ಯದ ವಿವಿಧ ಭೂಭಾಗಗಳ ಉದ್ದಕ್ಕೂ ಹರಿಯುತ್ತಿರುವ ಹಾಗೆಯೇ ನಮ್ಮ ಹಬ್ಬವು ಕರ್ನಾಟಕದ ವಿವಿಧ ಸಂಸ್ಕೃತಿ ಮತ್ತು ಭಾಷೆಗಳೊಂದಿಗೆ ಕೊಂಡಿಯನ್ನು ಬೆಸೆಯುವ ಆಶಯವನ್ನು ಹೊಂದಿದೆ. ಈ ಜೀವದಾಯಿನಿ ನದಿಗಳು ವಿಸ್ತೃತ ಭೂಭಾಗ, ಸಮೃದ್ಧ ವೈವಿಧ್ಯತೆ ಮತ್ತು ಸಮನ್ವಯಿತ ಸ್ವರೂಪದ ಈ ರಾಜ್ಯಕ್ಕೆ ಒಂದು ಸಶಕ್ತ ರೂಪಕವಾಗಬಲ್ಲವು.

ಜೀವಜಾಲಕ್ಕೆ ಹೊಸಚೈತನ್ಯವನ್ನು ನೀಡುವ ಈ ಪವಿತ್ರ ನದಿಗಳನ್ನು ಮಾದರಿಯಾಗಿಸಿಕೊಂಡು ನಾವು ನಮ್ಮ ಈ ಹಬ್ಬವನ್ನು ಮರುಹುಟ್ಟು ಹಾಗೂ ಮರುಚೈತನ್ಯವೆಂಬ ಎರಡು ಪರಿಕಲ್ಪನೆಗಳ ಸುತ್ತ ಸಂಯೋಜಿಸಿದ್ದೇವೆ. ಈ ನೆಲದ ಸಾಂಪ್ರದಾಯಿಕ ಕಲಾ ಪ್ರಕಾರಗಳು, ಪದ್ಧತಿಗಳು, ಮತ್ತು ಆಚರಣೆಗಳು ಸಮಕಾಲೀನ ಸಂದರ್ಭದಲ್ಲಿ ಎಷ್ಟು ಮಹತ್ವವಾಗುತ್ತವೆ ಎನ್ನುವುದನ್ನು ತಿಳಿಯಪಡಿಸುತ್ತ ಈ ಎಲ್ಲವುಗಳಿಗೆ ಹೊಸಜೀವವನ್ನು ಕಲ್ಪಿಸುವ ಆಶಯ ನಮ್ಮದು.
ಸಂಸ್ಕೃತಿಗಳು ಒಂದರೊಳಗೊಂದು ಬೆರೆತು ಬೆಳೆಯುವ ನೆಲ ಕರ್ನಾಟಕ. ಅದರ ಅಸ್ಮಿತೆಯನ್ನು ರೂಪಿಸುವ ನದಿಗಳ ಹಾಗೆ. ರಾಜ್ಯದ ಈ ಮೂಲಗುಣಕ್ಕೆ ಚೈತನ್ಯವನ್ನು ತುಂಬುವ ಸಂಭ್ರಮಾಚರಣೆಯಲ್ಲಿ ನೀವೂ ಜೊತೆಯಾಗಿ.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದ ಸಹಭಾಗಿತ್ವದಲ್ಲಿ ಈ ಹಬ್ಬವನ್ನು ಪ್ರಸ್ತುತಪಡಿಸುತ್ತಿದೆ.

Journey through the heart of Karnataka as we explore the vibrant tapestry of cultures and languages that define this diverse state. Our festival, “Krishna to Kaveri,” draws inspiration from the mighty rivers that cradle Karnataka’s landscapes, communities, and experiences.

Just as the Krishna and Kaveri rivers traverse geographies, our festival aims to bridge the myriad cultures and languages of Karnataka. These life-giving waters serve as a powerful metaphor for the state’s expansive terrain, rich diversity, and syncretic nature.

Taking our cue from the rejuvenating powers of these sacred rivers, our event curation focuses on revival and revitalisation. We aim to breathe new life into traditional art forms, customs, and practices, ensuring their relevance in contemporary times.

Join us for two days of immersive experiences as we celebrate the essence of Karnataka – a land where cultures converge and flourish, much like the rivers that shape its identity.

Presented by Azim Premji University in collaboration with Bangalore International Centre

Schedule:

For Day 1 | Saturday, November 9, See Here

Day 2 | Sunday, November 10

11:00 am | Auditorium

Abhimanyu at War

An episode from the Mahabharata performed in Yakshagana by Gana Sabha Group, Udupi

12:00 noon | Seminar Halls

Growing Together: Empowering Adolescents through Understanding and Inclusivity

A lecture by child psychologist Prof. Malavika Kapur.

12:30 pm | Library

Session 1: Karnatakada Adigegalu

This presentation by author Geetha Rao describes the diverse food culture of the state, as represented in its main cuisines of the regional, ethnic and religious communities in Karnataka. Some of the well-known cuisines are the Uttara Karnataka Cuisine, the Udupi Coastal Cuisine, Kodava Cuisine, Catholic Mangalorean Cuisine and Nawayathi Muslim Cuisine.  This does not preclude many other cuisines, which often overlap, having common geographies and food habits.

Session 2: The Art of Foraging

Artist, Community builder and farmer Suresh Kumar provides an insight into foraging practices of communities on the outskirts of urban Bangalore. This workshop consists of a presentation followed by a demonstration of select recipes which participants can partake of.

3:00 pm | Seminar Halls

A Offering of Knowledge: Book Release

Launch of six Kannada books on Education enabled by Azim Premji University in collaboration with various publishing houses.   

Madhava Peraje, Aravinda Chokkadi, and Ashok H.S. will talk about the books to be launched by Prof.O.L.Nagabhushanaswamy.

3:30 pm | Library

Workshop on Kawand Quilt Making

Led by Girija Siddhi, this workshop is an experience of Siddhi cultural heritage through patchwork quilting made from pieces of old cloth or worn-out clothing.

4:00 pm | Auditorium

Melodic Roots: Exploring Karnataka’s Carnatic Traditions

Bangalore musician Chitra Srikrishna presents an immersive journey through the rich tapestry of carnatic classical music in Karnataka, tracing its evolution from ancient times to the present day. The program showcases the musical compositions that have emerged from this culturally vibrant region, highlighting the contributions of legendary musicians and composers who have shaped the Carnatic tradition.

5:30 pm | Seminar Halls

Evolution of Kannada Consciousness and Jnanapith Awardees

A panel explores the evolution of Kannada literary consciousness through the lens of Karnataka’s eight Jnanpith awardees. Scholars M S Asha Devi, Devu Pattar, and K Sathyanarayana, chaired by Prof. Basavaraja Kalgudi, discuss the significant contributions and lasting impact of these literary giants. The session examines how these laureates have shaped Kannada literature while reflecting the cultural and social consciousness of their times.”

6:00 pm | Amphitheatre

A Standup set by Sonu Venugopal

7:30 pm | Auditorium

Kayaka

A fusion concert by an ensemble comprising artists across genres, styles and language. Led by M D Pallavi and Bruce Lee Mani, Kayaka plays with powerful poetry and song from thousand-year Indian traditions, to bring them into
a contemporary frame.

Ongoing Throughout the Festival

10:00 am to 8:00 pm

Exhibition | Through the Building

Karnataka Vaibhava: Treasures & Turning Points

In collaboration with Shashidhar Adapa

Food Festival | Terrace

Flavour Fair

Anchored by Coracle with Chef Tresa

Experiential Interactions with Artisans | Ground Floor Foyer

Hand in Hand

Guided by Master Artisans

 

ಎರಡನೆಯ ದಿನ | ಭಾನುವಾರ, ನವೆಂಬರ್ 10

ಬೆಳಗ್ಗೆ 11 ಗಂಟೆಗೆ | ಆಡಿಟೋರಿಯಂ

ಅಭಿಮನ್ಯು ಕಾಳಗ

ಮಹಾಭಾರತದ ಒಂದು ಪ್ರಸಂಗವನ್ನು ಯಕ್ಷಗಾನದ ಮೂಲಕ ಪ್ರಸ್ತುತಪಡಿಸಲಾಗುತ್ತದೆ.

ಮಧ್ಯಾಹ್ನ 12:00 ಗಂಟೆಗೆ | ಸೆಮಿನಾರ್ ಹಾಲ್

ಜೊತೆಗೂಡಿ ಬೆಳೆಯುವುದು: ಹದಿಹರೆಯದವರನ್ನು ಅರ್ಥಮಾಡಿಕೊಂಡು ಸಬಲೀಕರಿಸುವುದು ಮತ್ತು
ಒಳಗೊಳ್ಳುವುದು

ಮಕ್ಕಳ ಮನೋವಿಜ್ಞಾನಿ ಪ್ರೊಫೆಸರ್ ಮಾಲವಿಕಾ ಕಪೂರ್‌ವರಿಂದ ಉಪನ್ಯಾಸ.

ಮಧ್ಯಾಹ್ನ 12:30 | ಲೈಬ್ರೆರಿ

ಮನೆ-ಮನೆಯ ರುಚಿಯ ರಹಸ್ಯಗಳು

ಕಾರ್ಯಕ್ರಮ ೧: ಕರ್ನಾಟಕದ ಅಡಿಗೆಗಳು

ಗೀತಾ ರಾವ್ ಅವರಿಂದ ಈ ಉಪನ್ಯಾಸವು ಕರ್ನಾಟಕದ ಪ್ರಾದೇಶಿಕ, ಜನಾಂಗೀಯ ಮತ್ತು ಧಾರ್ಮಿಕ ಸಮುದಾಯಗಳ ಮುಖ್ಯ ಪಾಕಪದ್ಧತಿಗಳಲ್ಲಿ ಪ್ರತಿಬಿಂಬಿತವಾಗುವ ರಾಜ್ಯದ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ವಿವರಿಸುತ್ತದೆ. ಸುಪ್ರಸಿದ್ಧ ಪಾಕಪದ್ಧತಿಗಳಲ್ಲಿ ಉತ್ತರ ಕರ್ನಾಟಕದ ಪಾಕಪದ್ಧತಿ, ಉಡುಪಿ ಕರಾವಳಿ ಪಾಕಪದ್ಧತಿ, ಕೊಡವ ಪಾಕಪದ್ಧತಿ, ಕ್ಯಾಥೊಲಿಕ್ ಮಂಗಳೂರು ಪಾಕಪದ್ಧತಿ ಮತ್ತು ನವಾಯತಿ ಮುಸ್ಲಿಂ ಪಾಕಪದ್ಧತಿಗಳು ಸೇರಿವೆ.

ಕಾರ್ಯಕ್ರಮ ೨: ಆಹಾರ ಸಂಗ್ರಹಣೆಯ ಕಲೆ

ಕಲಾವಿದರೂ ರೈತರೂ ಆಗಿರುವ ಸುರೇಶ್‌ಕುಮಾರ್ ಸಮುದಾಯ ಕಟ್ಟುವವರೂ ಹೌದು. ಬೆಂಗಳೂರಿನಲ್ಲಿ ನಗರಪ್ರದೇಶದ ಹೊರವಲಯದಲ್ಲಿ ಕಾಡು ಸೊಪ್ಪುಗಳಿಂದ ಅಡುಗೆ ಮಾಡುವ ಸಮುದಾಯಗಳ ಆಹಾರ ಪದ್ದತಿಗಳ ಬಗೆಗೆ ಈ ಕಾರ್ಯಾಗಾರದಲ್ಲಿ ಒಳನೋಟಗಳನ್ನು ಕೊಡುತ್ತಾರೆ. ಈ ಕಾರ್ಯಾಗಾರದಲ್ಲಿ ಅಂತಹ ಅಡುಗೆ ಪದ್ದತಿಯನ್ನು ಕುರಿತ ವಿವರಗಳ ಮಂಡನೆಯ ಜೊತೆಗೆ ಆಯ್ದ ಅಡುಗೆಗಳ ಪ್ರಾತ್ಯಕ್ಷಿಕೆಯೂ ಇರುತ್ತದೆ. ಆಸಕ್ತರು ಭಾಗವಹಿಸಬಹುದು.

ಮಧ್ಯಾಹ್ನ 3:00 ಗಂಟೆಗೆ | ಸೆಮಿನಾರ್ ಹಾಲ್

ಪುಸ್ತಕ ಬಿಡುಗಡೆ

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಯತ್ನದೊಂದಿಗೆ ಪ್ರಕಟಗೊಂಡ ಕನ್ನಡದ ಕೆಲವು ಶೈಕ್ಷಣಿಕ ಪುಸ್ತಕಗಳ ಸಂಗ್ರಹವನ್ನು ಪ್ರೊಫೆಸರ್ ಓ.ಎಲ್.ನಾಗಭೂಷಣಸ್ವಾಮಿ ಬಿಡುಗಡೆ ಮಾಡುತ್ತಾರೆ.

ಮಧ್ಯಾಹ್ನ 3:30 | ಲೈಬ್ರೆರಿ
ಬಟ್ಟೆಯ ಕೌದಿ ಕಲೆಯ ಕಾರ್ಯಾಗಾರ

ಕೌದಿಯೆಂದರೆ ಹರಿದ ಅಥವಾ ಮಾಸಲಾದ ಬಟ್ಟೆಗಳ ತುಂಡುಗಳನ್ನು ಹೊಲಿದು ಮಾಡುವ ʼಕ್ವಿಲ್ಟ್.’ ಸಿದ್ದಿ ಸಾಂಸ್ಕೃತಿಕ ಪರಂಪರೆಯ ಭಾಗವಾದ ಈ ಕಲೆಯನ್ನು ಕುರಿತು ಒಂದು ಕಾರ್ಯಾಗಾರವನ್ನು ಗೀತಾ ಸಿದ್ದಿಯವರು ನಡೆಸಿಕೊಡುತ್ತಾರೆ.

ಸಂಜೆ 4:00 | ಆಡಿಟೋರಿಯಂ
ಗಾನ ಮಾಧುರ್ಯದ ಮೂಲ: ಕರ್ನಾಟಕದ ಕರ್ನಾಟಕಿ ಸಂಗೀತ ಪರಂಪರೆಯತ್ತ ಒಂದು ನೋಟ

ಬೆಂಗಳೂರಿನ ಗಾನಕಲಾವಿದೆ ಚಿತ್ರಾ ಶ್ರೀಕೃಷ್ಣರವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಒಂದು ಸಮೃದ್ಧ ಪರಂಪರೆಯ ಪಯಣದಲ್ಲಿ ನಮ್ಮನ್ನು ತಲ್ಲೀನಗೊಳಿಸಲಿದ್ದಾರೆ. ಈ ಸಂಗೀತ ಪರಂಪರೆಯ ಹುಟ್ಟು ಮತ್ತು ಬೆಳವಣಿಗೆಯಿಂದ ಹಿಡಿದು ಇವತ್ತಿನ ಸ್ವರೂಪ, ಲಕ್ಷಣಗಳ ಬಗೆಗಿನ ಒಂದು ಸಮೃದ್ಧ
ಅನುಭವಕ್ಕೆ ಅವರು ಕರೆದೊಯ್ಯುತ್ತಾರೆ. ಸಾಂಸ್ಕೃತಿಕವಾಗಿ ಸಮೃದ್ಧವಾದ ಈ ರಾಜ್ಯದಲ್ಲಿ ಉದಯಿಸಿದ ರಾಗಗಳನ್ನು ಪರಿಚಯಿಸುವುದರ ಜೊತೆಗೆ ಕರ್ನಾಟಕ ಸಂಗೀತ ಪರಂಪರೆಯನ್ನು ಕಟ್ಟಿದ ಸುಪ್ರಸಿದ್ಧ ಗಾಯಕರು ಮತ್ತು ಸಂಗೀತಗಾರರ ಕೊಡುಗೆಗಳನ್ನು ಕುರಿತೂ ಮಾತನಾಡಲಿದ್ದಾರೆ.

ಸಂಜೆ 5:30 ಗಂಟೆಗೆ | ಸೆಮಿನಾರ್ ಹಾಲ್
ಕನ್ನಡ ಪ್ರಜ್ಞೆಯ ವಿಕಾಸ ಮತ್ತು ಜ್ಞಾನಪೀಠ ಪುರಸ್ಕೃತರು

ಈ ಗೋಷ್ಠಿಯಲ್ಲಿ ಕರ್ನಾಟಕದ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ದೃಷ್ಟಿಕೋನಗಳ ಮೂಲಕ ಕನ್ನಡ ಸಾಹಿತ್ಯ ಪ್ರಜ್ಞೆಯ ವಿಕಾಸವನ್ನು ಕುರಿತು ಸಾಹಿತಿಗಳು ಚರ್ಚಿಸಲಿದ್ದಾರೆ. ಕನ್ನಡ ಪ್ರಜ್ಞೆಯ ವಿಕಾಸಕ್ಕೆ ಮತ್ತು ತಮ್ಮ ಕಾಲದ ಸಾಂಸ್ಕೃತಿಕ ಮತ್ತು ಸಾಮಾಜಿಕ ಲೋಕದೃಷ್ಟಿಯನ್ನು ಬೆಳೆಸಲು ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ನೀಡಿದ ಮಹತ್ವದ ಕೊಡುಗೆಗಳು ಮತ್ತು ಅವರ ವಿಚಾರಗಳಿಂದ ಆದ ಸುದೀರ್ಘ ಪರಿಣಾಮಗಳನ್ನು ಕುರಿತು ಪ್ರೊಫೆಸರ್ ಬಸವರಾಜ ಕಲ್ಗುಡಿಯವರ ಅಧ್ಯಕ್ಷತೆಯಲ್ಲಿ ಎಂ.ಎಸ್.ಆಶಾದೇವಿ, ದೇವು ಪತ್ತಾರ, ಎಚ್.ಎಲ್. ಪುಷ್ಪಾ, ಮತ್ತು ಕೆ.ಸತ್ಯನಾರಾಯಣ
ಚರ್ಚಿಸಲಿದ್ದಾರೆ.

ಸಂಜೆ 6:00 ಗಂಟೆಗೆ | ಆಂಪಿಥಿಯೇಟರ್

ಸೋನು ವೇಣುಗೋಪಾಲ್ ಅವರಿಂದ ಸ್ಟ್ಯಾಂಡ್‌ಅಪ್ ಕಾಮೆಡಿ.

ಸಂಜೆ 7:30 ಗಂಟೆಗೆ | ಆಡಿಟೋರಿಯಂ
ಕಾಯಕ

ಎಂ.ಡಿ. ಪಲ್ಲವಿ ಮತ್ತು ಬ್ರೂಸ್‌ಲೀ ಮಣಿ ನೇತೃತ್ವದ ತಂಡವು ವಿವಿಧ ಪ್ರಕಾರಗಳು, ಶೈಲಿಗಳು ಮತ್ತು ಭಾಷೆಗಳ ಕಲಾವಿದರೊಂದಿಗೆ ಒಂದು ಫ್ಯೂಶನ್ ಸಂಗೀತ ಕಚೇರಿಯನ್ನು ನಡೆಸಿಕೊಡಲಿದೆ. ಭಾರತೀಯ ಪರಂಪರೆಯ ಸಾವಿರ ವರ್ಷಗಳ ಹಿಂದಿನ ಸಶಕ್ತ ಕಾವ್ಯ ಮತ್ತು ಹಾಡುಗಳನ್ನು ಸಮಕಾಲೀನ
ಚೌಕಟ್ಟಿಗೆ ಅಳವಡಿಸುವ ಪ್ರಯತ್ನವನ್ನು ಕಾಯಕ ಮಾಡಲಿದೆ.

ಎರಡು ದಿನಗಳೂ ನಡೆಯುವ ಕಾರ್ಯಕ್ರಮಗಳು:
ಬೆಳಗ್ಗೆ 10:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ
ಕಲಾ ಪ್ರದರ್ಶನ | ವಿವಿಧ ಅಂತಸ್ತುಗಳಲ್ಲಿ

ಕರ್ನಾಟಕ ವೈಭವ: ಹಿರಿಮೆಗಳು ಮತ್ತು ಸಂಧಿಕಾಲಗಳು
ಶಶಿಧರ ಅಡಪರವರ ಸಹಭಾಗಿತ್ವದಲ್ಲಿ

ಆಹಾರ ಮೇಳ (ಫುಡ್ ಫೆಸ್ಟಿವಲ್) | ಟೆರೇಸ್‌ನಲ್ಲಿ
ರುಚಿಗಳ ಜಾತ್ರೆ
ಚೆಫ್ ಟ್ರೆಸಾರವರ ಕೊರಾಕಲ್‌ನಿಂದ ಆಯೋಜನೆ.

ಕುಶಲಕರ್ಮಿಗಳೊಂದಿಗೆ ಮುಖಾಮುಖಿಯಾಗಿ ಅವರ ಅನುಭವಗಳನ್ನು ಕೇಳಿ ತಿಳಿಯಿರಿ | ನೆಲ ಅಂತಸ್ತಿನ ಪ್ರಾಂಗಣದಲ್ಲಿ
ಕರಕುಶಲತೆಯ ಕೈಪಿಡಿ
ಕುಶಲಕರ್ಮಿಗಳ ಮಾರ್ಗದರ್ಶನದಲ್ಲಿ