Loading Events
  • This event is over. However, time travel possible through our Audio & Video! See upcoming events

Speaker & Artistes

Cultural Researcher, Critic & Writer
Singer & Music Director
Singer & Actor

Date & Time

Tuesday Tue, 22 Aug 2023

Location

Bangalore International Centre
7, 4th Main Road, Domlur II Stage
Bangalore, Karnataka 560071 India

This evening is dedicated to poet Dattatreya Ramachandra Bendre, commonly known as Da. Ra. Bendre, an iconic figure in the Kannada literary landscape, born on January 31, 1896, in Dharwad, Karnataka. Often dubbed the “Kannada Kavi Kula Tilaka” (The Crown Jewel of Kannada Poetry), he penned his works under the pseudonym “Ambikatanayadatta,” meaning “Datta, the child of Ambika.” Beyond his renowned poetic compositions, he was a playwright, essayist, and critic.

His poetic style stood out for its unique blend of the folk and the classical. Delving deep into the complexities of human emotion, Bendre’s poems often employed native metrical forms, making them both innovative and deeply rooted in tradition. Lesser-known among his vast repertoire is his experimentation with the “free verse” form, which he introduced to Kannada poetry.

He founded the “Geleyara Gumpu” (Group of Friends) in Dharwad, a platform that nurtured young literary talents. In recognition of his literary genius, he received the Jnanpith Award in 1974.

The event is a double bill lecture-concert with Dr. Basavaraja Kalgudi speaking on the topic, “Bhringa” in Bendre poetry: as a mythical image of the search for creativity followed by musical rendition of Bendre’s poetry by Ramachandra Hadapad.

The talk will be bilingual, in Kannada & English.

ಬೇಂದ್ರೆ ಕಾವ್ಯದಲ್ಲಿಭೃಂಗ”: ಸೃಜನಶೀಲತೆಯ ಹುಡುಕಾಟದ ಪ್ರತಿಮೆಯಾಗಿ

ಕನ್ನಡದ ಅತ್ಯಂತ ಪ್ರಮುಖ ಕವಿಗಳಾದ ಬೇಂದ್ರೆಯವರು ಸಾಹಿತ್ಯ ಸೃಷ್ಟಿಯನ್ನು ಮಾಡಿದ ಕಾಲವು ಕನ್ನಡ ಭಾಷೆಯು ಸಾಹಿತ್ಯಕವಾಗಿ ಹೊಸ ರಚನೆಗಳನ್ನು ಹುಡುಕುತ್ತಿದ್ದ ಕಾಲ. ಕೇವಲ ಭಾಷಿಕ ಅಭಿವ್ಯಕ್ತಿಯ ದೃಷ್ಟಿಯಿಂದ ಅಲ್ಲದೆ ವಸ್ತುವಿನ ದೃಷ್ಟಿಯಿಂದಲೂ ಹೊಸ ಅನ್ವೇಷಣೆಯು ತನ್ನದೆ ಆದ ಹೊಸ ಬಗೆಯಲ್ಲಿ ರೂಪುಗೊಳ್ಳಬೇಕಾದ  ತುರ್ತು ಇದ್ದಂತಹ ಕಾಲ. ಉತ್ತರ ಕರ್ನಾಟಕದ ಭಾಗದಲ್ಲಿ ಆಗ ಮರಾಠಿ ಮತ್ತು ಉರ್ದುವಿನ ನಡುವೆ ಕನ್ನಡ ಭಾಷೆಯು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದ ಕಾಲದಲ್ಲಿ ಭಾಷೆಗೆ ಸಾಮಾಜಿಕ, ಶೈಕ್ಷಣಿಕ, ಆದಂತ ಒಂದು ಚೈತನ್ಯವನ್ನು ಕೊಡುವುದಲ್ಲದೆ ಸೃಜನಶೀಲತೆಯಲ್ಲಿಯೂ ಆ ಭಾಷೆಯನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗುವ ಅಗತ್ಯ ಇತ್ತು. ಬೇಂದ್ರೆ ಅವರ ಸೃಜನಶೀಲತೆಯು ಬಹಳ ಮುಖ್ಯವಾಗಿ ವರ್ತಮಾನ ಕಾಲಕ್ಕೆ ಅನುಗುಣವಾದ ಭಾಷೆ ಮತ್ತು ಶೈಲಿಯನ್ನು ಸೃಷ್ಟಿಸಿತು ಎನ್ನುವುದು ಮಹತ್ವದ ವಿಚಾರ.
ಬೇಂದ್ರೆಯವರು ಹೊಸ ಕಾಲವನ್ನು ತನಗಾಗಿ ಮಾತ್ರವಲ್ಲದೆ  ಸುತ್ತಣ ಬದುಕಿಗಾಗಿಯೂ ಅಗತ್ಯವೆಂದು  ತೀವ್ರವಾಗಿ ನಂಬಿದ್ದರಿಂದ ಹೊಸ ಕಾವ್ಯ ಅವರಿಂದ ಸೃಷ್ಟಿಯಾಯಿತು.

ಆದರೆ ಈ  ಹೊಸ ಲಯವು ಅವರಿಗೆ ಸಾಧ್ಯವಾಗಿದ್ದು ಪರಂಪರೆಯ ಜೊತೆಗಿನ ಸಾತತ್ಯದಿಂದಲೇ. ಇಲ್ಲಿನ ಹಲವು ಪರಂಪರೆಗಳಲ್ಲಿ ಬೇಂದ್ರೆಯವರ ಆಯ್ಕೆಯು ಇಲ್ಲಿನ ದೇಸಿ ಪರಂಪರೆಯ ಭಕ್ತಿಯ ತೀವ್ರ ಪ್ರೇಮದ ಆಶಯವನ್ನು ಮುಖ್ಯವೆಂದು ತಿಳಿದಿತ್ತು. ಬೇಂದ್ರೆಯವರಿಗೆ ಇಲ್ಲಿನ ಬದುಕು ಪರಮಾರ್ಥ. ಅಲ್ಲಿ  ಪ್ರೀತಿಯ ಸತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಲಯವನ್ನು ಅವರ ಕಾವ್ಯ ಹೊಂದಿತ್ತು.
ಇಲ್ಲಿನ ಲೋಕದ ಸಂಕಟಗಳು  ಅಗಾಧವಾಗಿವೆ ಎಂದು ತಿಳಿದಿದ್ದರಿಂದ ಪ್ರೀತಿ ಎಷ್ಟು ಕಷ್ಟ ಎನ್ನುವುದು ಅವರ ಕಾವ್ಯಕ್ಕೆ ಗೊತ್ತಿರುವ ವಿಚಾರ.
ಪ್ರೀತಿಯು ಸಾಧ್ಯವಾಗುವುದು ಎರಡು ತತ್ವಗಳ ಪರಿಣಾಮಕಾರಿಯಾದ ಸಮ್ಮಿಲನದಲ್ಲಿ. ಬೇಂದ್ರೆಯವರಿಗೆ ಗಂಡುಹೆಣ್ಣು, ಪ್ರಕೃತಿಪುರುಷ, ಎರಡು ಬಹುಮುಖ್ಯ ದ್ರವ್ಯಗಳಾಗಿವೆ. ಸೃಜನಶೀಲತೆಯ ಮೂಲ ಇವುಗಳ ಹೊಂದಾಣಿಕೆಯಲ್ಲಿ ಎಂದು ಇವರ ಕಾವ್ಯ ತಿಳಿಯುತ್ತದೆ.
ಇವರಭಾವಗೀತೆ  ಈ ಸಂಕಟಗಳನ್ನು ವೈವಿಧ್ಯಮಯವಾಗಿ ಹಿಡಿಯುತ್ತದೆ. ಯುರೋಪಿಯನ್ ಮಾದರಿಯ ಭಾವಗೀತೆಗೂ, ಕನ್ನಡದ ನವೋದಯ ಕವಿಗಳ ಭಾವಗೀತೆಯ ಮಾದರಿಗಳಿಗೂ ಇರುವ ವ್ಯತ್ಯಾಸ ಸ್ಪಷ್ಟವಾಗಿದೆ.
ಬೇಂದ್ರೆಯವರ ಈ ಸಂಕಟದ ಚಿತ್ರಣ ಅವರ ಮೊದಲ ಕಾವ್ಯವಾದ ಕೃಷ್ಣ ಕುಮಾರಿಯಲ್ಲಿಯೇ ಗೊತ್ತಾಗುತ್ತದೆ. ಕೃಷ್ಣಕುಮಾರಿಯ ಸಾವು ಪ್ರೇಮದ ರಿಕ್ತತೆಯಲ್ಲಿ ಹುಟ್ಟಿದ್ದು.

ಅವರ ಭಾವಗೀತೆ ಕವನವು ಶಬ್ದ ಹಾಗೂ ಲೋಕದ ಜೊತೆಗಿನ ಅನಂತ ಸಾಹಚರ್ಯವನ್ನೇ ವಿವರಿಸುತ್ತಿದೆ.
ನಾದಲೀಲೆ ಎನ್ನುವ ಅವರ ಪ್ರಸಿದ್ಧ ಕವನವೂ ಉಲ್ಲಾಸದ ಜೊತೆಗಿನ ಎಚ್ಚರಿಕೆಯ ಸ್ಥಿತಿಯನ್ನು  ಮುಖ್ಯವೆಂದು ಹೇಳುತ್ತಿದೆ.
ನನ್ನ ಬೇಂದ್ರೆ ಕುರಿತ ಮಾತಿನಲ್ಲಿ ಬೇಂದ್ರೆಯವರ ಕಾವ್ಯವು ಹಿಡಿಯುವ ಪ್ರೀತಿ, ಸೃಜನಶೀಲತೆ ಇವುಗಳಿಗೆ ಇರುವ ಸೂಕ್ಷ್ಮ ಸಂಬಂಧಗಳನ್ನು ಗುರುತಿಸುವ ಪ್ರಯತ್ನ ಇದೆ.
ಶಬ್ದಕ್ಕೇ  ಕಾವ್ಯವಾಗಲು  ಬೇಕಾದ ಸಾಹಚರ್ಯ ಎಂತದ್ದು ಎನ್ನುವ ಪ್ರಶ್ನೆ ಬೇಂದ್ರೆಯವರ ಕಾವ್ಯದ ತೀವ್ರವಾದ ಪ್ರಶ್ನೆ.
ಗಂಡುಹೆಣ್ಣು ಪ್ರಕೃತಿಪುರುಷ ಇವುಗಳ ತೀವ್ರ ಪ್ರೀತಿಯ ಸಾಹಚರ್ಯದಲ್ಲಿಯೇ ಸೃಜನಶೀಲತೆಯ ಉಗಮ ಎನ್ನುವುದು ಕವಿಯ ಗಟ್ಟಿಯಾದ ನಂಬಿಕೆ.
ಹೀಗಾಗಿ ತನ್ನ ಕಾಲದ ಮುಖ್ಯ ಪ್ರಭಾವವಾದ ಅರವಿಂದರಿಂದ ಬೆಂದ್ರೆ ಅವರು ತೀವ್ರವಾಗಿ ಭಿನ್ನವಾಗುತ್ತಾರೆ.

ಶ್ರೀ ಅರವಿಂದರಿಗೆ  ಎನ್ನುವ ಅವರ ಕವನದ ಮುಖ್ಯ ಆಶಯ ಇದೇ ಆಗಿದೆ. ಅರವಿಂದರ ಮಾರ್ಗವನ್ನು ತುಳಿದ ಕನ್ನಡದ ಇನ್ನೊಬ್ಬ ಕವಿ ಮಧುರ ಚೆನ್ನರಿಂದಲೂ ಬೇಂದ್ರೆಯವರು ಭಿನ್ನವಾದ ಮಾರ್ಗವನ್ನು ತುಳಿಯುತ್ತಾರೆ.  ಪ್ರಕೃತಿ ಇಲ್ಲದ ಲೋಕ (ಪುರುಷ) ಬದುಕು ಅರ್ಧ ಸೃಜನಶೀಲವೆನ್ನುವುದು  ಬೇಂದ್ರೆಯವರ ಮುಖ್ಯ ತಾತ್ವಿಕತೆ. ಪ್ರಕೃತಿಯ ಸಂಕೇತವಾದ ಹೆಣ್ಣು ಇವರ ಕಾವ್ಯದಲ್ಲಿ ಸೇಂದ್ರೀಯವಾಗಿಯೂ, ತಾತ್ವಿಕವಾಗಿಯೂ ಮುಖ್ಯವಾದ ಅಂಶ. ಕವಿಗೆ  ಹೆಣ್ಣುಸಖಿಯಾಗಬೇಕಾದ ತುರ್ತು ವರ್ತಮಾನದ ಅಗತ್ಯ. ಕವಿಯು ತನ್ನನ್ನು ತಾನು ಅಂಬಿಕಾತನಯ ದತ್ತ ಎಂದು ಕರೆದುಕೊಳ್ಳುವುದರಲ್ಲಿ ಈ ಭಾವ ವ್ಯಕ್ತವಾಗುತ್ತದೆ.
ಬೇಂದ್ರೆಯವರ ಕಾವ್ಯದಲ್ಲಿಭೃಂಗ  ಇಂಥ ತಾತ್ವಿಕತೆಯನ್ನು ಹಿಡಿಯುವ ಮುಖ್ಯವಾದ ಪ್ರತಿಮೆ. ಬೇಂದ್ರೆಯವರ ಹಲವು ಕವನಗಳಲ್ಲಿ ಭೃಂಗ ಒಂದು ಸಂಕೀರ್ಣ ಪ್ರತಿಮೆಯಾಗಿ ರೂಪಗೊಳ್ಳುವುದನ್ನು ಈ ಹಿನ್ನೆಲೆಯಲ್ಲಿ ಚರ್ಚಿಸಲು ಬಯಸುತ್ತೇನೆ.

“Bhringa” in Bendre poetry: as a mythical image of the search for creativity

The time when Kannada’s most prominent poets, Bendre, created literature was a time when the Kannada language was looking for new forms of literature. It was a time when a new discovery had to be formed in its own new way, not only in terms of linguistic expression but also in terms of material. At a time when the Kannada language was losing its existence between Marathi and Urdu in North Karnataka, there was not only  a need to bring this language into  social, educational usage , but also to take the language to a new heights of creativity. It is significant that Bendre created a new language and style in his poetry that was very relevant to the present times.

New poetic language was essential for  Bendre because he strongly believed that the new era was necessary not only for himself but also for the surrounding life.

This new rhythm was possible for him  only because of his affiliation  with the desi Bhakti  tradition. , Bendre  knew the importance of the intense love . For Bendre, life here is paramartha. His poetry had the rhythm of adopting the essence of love in life.

But His poetry knew the difficulty of  this process  because poet bendre  knew that the sufferings of this world are enormous.

Love in this loukika world  is possible in the effective union of the two principles. For  Bendre , male and female, Prakriti and purusha , are the two most important elements. His poetry shows that the source of creativity lies in their harmony.

“Bhava gita” according to bendre has to capture these tasks  in a variety of ways. The difference between the European style of lyric poetry and the lyric style of Kannada Renaissance poets is clear.

Bendre’s depiction of this suffering to discover Love  is  created in his first poem, Krishna Kumari. Krishna Kumari’s death was born in the emptiness of love.

His lyric poetry “Bhavagitha” describes the infinite association between sound and world.

His famous poem Nadalile which calls for euphoric enjoyment with dance  also emphasizes the importance of alertness in this world .

There is an attempt to identify the subtle relationships between the love and creativity captured by Bendre’s poetry in this talk about Bendre.

The question of what kind of essential touch is needed for words to become poem,  is an intense question of Bendre’s poetry.

It is the firm belief of the poet that the origin of creativity is in the companionship of intense love between male-female, prakrathi-purusha.

Bendre thus differs sharply from Aurobindo, the main influence of his time. This is the main content  of his poem “To Sri Aurobindo”. Bendre treads a different path from Madhura Chenna, another Kannada poet who treads Aurobindo’s path.

Bendre’s main philosophy is that the world without the association with nature  is half creative. A symbol of nature, “the female”  is a central and philosophically important element in his poetry. The urgent need of the present yuga for Bendre is  “a wife”  of patriarchy  – to become  Sakhi. This sentiment is expressed by the poet  in  calling himself as  “Ambikatanaya Datta ‘.

In Bendre’s poetry, “Bhringa” is an important image. Bendre uses this mythical image to probe the essentiality of the creativity. Dr. Kalgudi discusses how his poems explore this image to recreate complex dramatic experiences of creativity.

Header image courtesy: Da Ra Bendre – Saahithyada Balaga

Speaker & Artistes

Basavaraja Kalgudi

Cultural Researcher, Critic & Writer

Dr. Basavaraj Kalgudi, born in 1954 in Belagavi, Karnataka, is a Professor in Kannada. He has a doctorate in an interdisciplinary subject on Medieval Mystical Poetry and Historical Sense. Dr. Kalgudi has published numerous books, research papers, articles, in various national and international journals. His important works include A Study of Sathi System, Mysticism: As a Study of Cultural Problem and Search for New Existence and Concept of Modernism: Study of Major poets of Kannada among others.

He has been one of the few theorists of cultural studies in Kannada. The theories, which he has developed in understanding the philosophy of history, analyzing the medieval literary resources of Karnataka culture, have paved new way of seeing the source materials in new perspective. He has done  research on Siddha and Natha traditions of medieval period of India.

The students who studied under his thirty years of research guidance, have developed their original way of looking at the language and literary materials in non empirical way and creating new social and philosophical aspects of studying the sources.

As the director of Centre of Kannada Studies, Gandhian Study Centre, and Ambedkar Center, many valuable publications on contemporary practical practitioners of Gandhian and Ambedkar ethics were brought out by him. Numerous national seminars were conducted by him as the director of both these centres. He has participated in many International, National, and State level conferences, and new cultural interpretations of literature have been put forth to give new dimension to understand it.

He has won many awards for best books on literary criticism, and research work by institutions such as state Sahithya Academy, Institution of Kannada and Culture Government of Karnataka, Shambha Joshi Research Foundation. He has recently completed his work on Modernism in Kannada Literature as Tagore fellow of MHRD which is to be published soon.

ಬಸವರಾಜ ಕಲ್ಗುಡಿಯವರು ಹುಟ್ಟಿದ್ದು ೧೯೫೪ ಬೆಳಗಾವಿಯಲ್ಲಿ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಕಾಲೇಜು ವ್ಯಾಸಂಗ ಬೆಂಗಳೂರಿನಲ್ಲಿ. ೧೯೭೫ರಲ್ಲಿ ಎಂ..ಪದವಿ, ೧೯೮೩ರಲ್ಲಿ ಪಿಎಚ್.ಡಿ ಪದವಿ. ‘ಅನುಭಾವ ಮತ್ತು ಸಾಂಸ್ಕೃತಿಕ ಸಮಸ್ಯೆಗಳು’- ಸಂಶೋಧನಾ ಪ್ರಬಂಧ. ಕರ್ನಾಟಕದಲ್ಲಿನ ಮಾಸ್ತಿಕಲ್ಲು ಕುರಿತಾಗಿ ಕ್ಷೇತ್ರಕಾರ್ಯ ಮಾಡಿ ಮಂಡಿಸಿದ ಮತ್ತೊಂದು ಸಂಶೋಧನೆಮಹಾಸತಿ ಆಚರಣೆವಿಶೇಷವಾಗಿ ಶಾಸನವನ್ನು ಕುರಿತು ಅಧ್ಯಯನವನ್ನು ನಡೆಸಿದ್ದರೂ, ಶಾಸನದ ಪಠ್ಯವನ್ನು ಕನ್ನಡ ಸಂಸ್ಕೃತಿಯ ಶೋಧನೆಗೆ ಪ್ರಮುಖ ಆಕರವಾಗಿ ಬಳಸಿಕೊಂಡಿದ್ದಾರೆ.

ಸಂಸ್ಕೃತಿಯನ್ನು ಕುರಿತಂತೆ ವ್ಯಾಖ್ಯಾನಿಸುವಲ್ಲಿ ಸಂಸ್ಕೃತಿಯಲ್ಲಿನ ಚಲನೆಯ ಪಲ್ಲಟವನ್ನು ಸಮಗ್ರವಾಗಿ ವಿವಿಧ ನೆಲೆಗಳಿಂದ ಶೋಧಿಸುವ ಕ್ರಮ ಇವರದು. ಹೀಗಾಗಿ, ಇವರ ವಚನ ಸಾಹಿತ್ಯವನ್ನು ಕುರಿತಾದ ಸಂಶೋಧನೆಯ ಅಧ್ಯಯನ  ಅನುಭಾವ:ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟಕೃತಿಯು ವಿವಿಧ ಜ್ಞಾನಶಿಸ್ತುಗಳನ್ನು ಒಳಗೊಂಡು, ವರ್ತಮಾನದ ಹಿನ್ನಲೆಯಿಂದ ವಚನ ಸಂಸ್ಕೃತಿಯನ್ನು ವ್ಯಾಖ್ಯಾನಿಸಿದ್ದು ಕನ್ನಡ ವಿಮರ್ಶೆಯ ಲೋಕದಲ್ಲಿಯೇ ವಿಶಿಷ್ಟವಾದುದಾಗಿದೆ.

ಕನ್ನಡ ಸಾಹಿತ್ಯ ಸಂಸ್ಕೃತಿಯ ಪ್ರಾಚೀನತೆ ಮತ್ತು ಆಧುನಿಕತೆಯನ್ನು ಏಕತ್ರ ಮೇಳವಿಸಿ ನೋಡುವ ಇವರ ಚಿಂತನೆಯ ದೃಷ್ಟಿಕೋನ ವಿಶಿಷ್ಟವಾದದ್ದು ಮತ್ತು ಅಪರೂಪವಾದದ್ದು. ಅಂತರಾಳದಲ್ಲಿ ಅಡಗಿ ಕುಳಿತ ಶಬ್ದ ಬೀಜಾಣು ಜಾಲದ ಸೂಕ್ಷ್ಮಗಳನ್ನು ಕಲ್ಗುಡಿಯವರಂತೆ ಶೋಧಿಸಿ, ಹೊರತೆಗೆದವರು ಬಹಳ ಅಪರೂಪ. ‘ಮೈಯೇ ಸೂರು ಮನವೇ ಮಾತುಎನ್ನುವ ಅವರ ಸಂಶೋಧನ ಕೃತಿಯಲ್ಲಿ ಯ ಲೇಖನಗಳಲ್ಲಿ ಇಂಥ ಹಲವಾರು ಹೊಸ ಒಳನೋಟಗಳನ್ನು ಓದುಗರು ಕಾಣಬಹುದು. ಇಲ್ಲಿನ ಆಧುನಿಕ ಸಾಹಿತ್ಯದ ಬಗೆಗಿನ ಬರವಣಿಗೆಯಲ್ಲಿ ಕಂಡುಬರುವ ಕವಿಗಳ ಪ್ರತಿಭೆಯ ವೈವಿಧ್ಯತೆಯ ಸೂಕ್ಷ್ಮಗಳು, ಕನ್ನಡದ ಕಾವ್ಯ ಪರಂಪರೆಯನ್ನೇ ಹೊಸದಾಗಿ ನೋಡುವಂತೆ ಮಾಡಿವೆ. ಈ ಕೃತಿಯಲೋಕಜ್ಞಾನ ಮತ್ತು ಕನ್ನಡಹಾಗೂಕಾಲಜ್ಞಾನ’- ಈ ವಿಭಾಗಗಳಲ್ಲಿ ಮಂಡಿಸಲಾದ ವಿವಿಧ ಚಿಂತನೆಗಳು ಅವರ ಓದಿನ ವೈಶಾಲ್ಯತೆಯನ್ನೂ, ಆಲೋಚನೆಯ ಸ್ವಂತಿಕೆಯನ್ನೂ ಸೂಚಿಸುತ್ತವೆ.

ಪ್ರಕಟಿತ ಕೃತಿಗಳು: ಮಹಾಸತಿ ಆಚರಣೆಒಂದು ಅಧ್ಯಯನ, ಬೆಂಗಳೂರು ವಿಶ್ವವಿದ್ಯಾಲಯ, ಅನುಭಾವ : ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ(ಐದನೆಯ ಮುದ್ರಣ), ನಕ್ಷೆ ನಕ್ಷತ್ರ, ವಿಮರ್ಶಾ ಸಂಕಲನ, ಕ್ರೈಸ್ಟ್ ಕಾಲೇಜು, ಬೆಂಗಳೂರು, ಬೇಂದ್ರೆಯವರ ಕಾವ್ಯಪ್ರೇಮ ಅವಿಷ್ಕಾರದ ಸ್ವರೂಪಗಳು, ಕ್ರೈಸ್ಟ್ ಕಾಲೇಜು, ಬೆಂಗಳೂರುಮೈಯೇ ಸೂರು ಮನವೇ ಮಾತು’, ಅಭಿನವ, ಬೆಂಗಳೂರು, ಸಂಪಾದಿತ ಕೃತಿಗಳು: ಕರ್ನಾಟಕ ಸಂಗಾತಿ(ಸಂ), ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬಹುರೂಪಿ(ಸಂ), ಬೆಂಗಳೂರು ವಿಶ್ವವಿದ್ಯಾಲಯ, ಆಧುನಿಕ ಕನ್ನಡ ಕಥಾ ಸಾಹಿತ್ಯ(ಸಂ), ಬೆಂಗಳೂರು ವಿಶ್ವವಿದ್ಯಾಲಯ, ವಿಚಾರ ಸಾಹಿತ್ಯ (ಸಂ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ವಾರ್ಷಿಕ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಆಡು ಹಾವೇ: (ತಮಿಳು ಆದುನಿಕಪೂರ್ವ ಕಾವ್ಯದ ಆಯ್ದ ಭಾಗಗಳು). (ಸಂಯೋಜಕರು), ಕೇಂದ್ರ ಸಾಹಿತ್ಯ ಅಕಾದೆಮಿ, ಕಂಬಾರರ ಸಾಹಿತ್ಯದ ನೆಲೆ ಬೆಲೆ(ಸಂ), ಅಂಕಿತ ಪುಸ್ತಕ, ಕಂಬಾರರ ಸಮಗ್ರ ಸಂಪುಟಗಳು: ಕನ್ನಡ ಸಂಸ್ಕೃತಿ ಇಲಾಖೆ, ಮತ್ತು ಪುಸ್ತಕ ಪ್ರಾಧಿಕಾರ ಕರ‍್ನಾಟಕ ಸರಕಾರ.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿ, ಸತತವಾಗಿ ಮೂವತ್ತಕ್ಕೂ ಮಿಕ್ಕ ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಉತ್ತಮ ಬೋಧಕರು ಮಾತ್ರವೇ ಅಲ್ಲದೆ, ದಕ್ಷ ಆಡಳಿತಗಾರರು ಆಗಿದ್ದವರು ಹೌದು. ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ ಅನೇಕ ಮೌಲಿಕ ಪ್ರಕಟಣೆಗಳಿಗೆ ಡಾ.ಕಲ್ಗುಡಿಯವರು ಸಂಚಲನೆ ನೀಡಿದ್ದಾರೆ. ಗಾಂಧಿ ಅಧ್ಯಯನ ಕೇಂದ್ರ, ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಹಲವು ಗುರುತರ ಕಾರ್ಯವನ್ನು, ಅದರಲ್ಲಿಯೂ ಹೊಸ ಪಠ್ಯಕ್ರಮದ ಪ್ರಾರಂಭಕ್ಕೆ ಉತ್ತಮ ರೀತಿಯಲ್ಲಿ ಅಸ್ತಿಭಾರ ಹಾಕಿದವರು.

ಅನೇಕ ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಸಾಹಿತ್ಯ ಚಿಂತನೆ, ವಿಚಾರಸಂಕಿರಣಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ಚಿಂತನೆಗಳನ್ನು ತಾತ್ವಿಕವಾಗಿ ಮಂಡಿಸಿ, ತಮ್ಮ ಚಿಂತನೆಗಳು ಶೈಕ್ಷಣಿಕ ವಲಯದಲ್ಲಿ ವಿಸ್ತರಿಸುವಂತೆ ಮಾಡಿದ್ದಾರೆ. ೨೦೧೩ ರಲ್ಲಿ ಭಾರತೀಯ ಸರಕಾರದ ವತಿಯಿಂದ ಅಂತಾರಾಷ್ಟ್ರೀಯ ಪುಸ್ತಕ ಹಾಗೂ ಸಾಹಿತ್ಯ ಸಮ್ಮೆಳನಕ್ಕೆ, ದಕ್ಷಿಣ ಕೊರಿಯಾ ರಾಷ್ಟ್ರಕ್ಕೆ ಹೋಗಿ, ಕನ್ನಡ ಸಾಹಿತ್ಯ ಕುರಿತ ಉಪನ್ಯಾಸ ಕೊಟ್ಟಿದ್ದಾರೆ.

ಇವರ ಪ್ರತಿಭೆಗೆ ಸಂದ ಮನ್ನಣೆಗಳು ಹಲವು. ಶಂಬಾ ಅಧ್ಯಯನ ಮಂಡಳಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(ವಿಮರ್ಶೆ)-೧೯೯೮, ೨೦೧೩, ಜಿ.ಎಸ್.ಎಸ್. ವಿಶ್ವಸ್ಥ ಮಂಡಳಿ ಪ್ರಶಸ್ತಿ(೧೯೯೮), ಜೆ.ಎಸ್.ಎಸ್.(ಮೈಸೂರು) ಪೀಠ ಪ್ರಶಸ್ತಿ(೧೯೯೮), ಡಾ.ಎಚ್.ಎನ್ ಪ್ರಶಸ್ತಿ(೨೦೧೧), ಬುದ್ಧ ಪೂರ್ಣಿಮೆ ಗೌತಮ ಪ್ರಶಸ್ತಿ, ವಚನ ಶ್ರೀ ಪ್ರಶಸ್ತಿ(೨೦೧೧), ಪ್ರೊ.ಸೂ.ವೆಂ.ಆರಗ ಸ್ಮಾರಕ ವಿಮರ್ಶಾ ಪ್ರಶಸ್ತಿ(೨೦೧೩) ಬಿ.ಎಂ.ಶ್ರೀ ಪ್ರತಿಷ್ಠಾನ. ವರ‍್ಧಮಾನ ಪ್ರಶಸ್ತಿ ಮೂಡುಬಿದ್ರಿ ೨೦19, ಸಮಗ್ರ ಸಾಹಿತ್ಯದ ಸಾಧನೆಗಾಗಿ. ಡಾ.ಎಂ.ಎಂ.ಕಲಬುರ‍್ಗಿ ಮಾನವಿಕ ಪ್ರಶಸ್ತಿ, ೨೦೨೧, ಪುಸ್ತಕ ಪ್ರಾಧಿಕಾರ, ಕರ‍್ನಾಟಕ ಸರಕಾರ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ,೨೦೨೧.

 

Ramachandra Hadapad

Singer & Music Director

Ramachandra Hadapad is a singer, composer, and music director. Originally from Kalburgi, his first guru in Hindustani music was MR Durgesh. He later moved to Bangalore where he learned music from Fayaaz Khan. Ramachandra’s repertoire includes Ghazals, Gandhi bhajans, and Sufi music, among others.

He was an associate music director for the Kannada film Santeyalli Ninta Kabira and in 2018 scored music for the film Hottegaagi Genu Battegaagi. He composes music for theatre productions and has received several awards and recognition for it.

ರಾಮಚಂದ್ರ ಹಡಪದ್ ಒಬ್ಬ ಗಾಯಕ, ಸಂಯೋಜಕ ಮತ್ತು ಸಂಗೀತ ನಿರ್ದೇಶಕ. ಮೂಲತಃ ಕಲ್ಬುರ್ಗಿಯವರಾದ ಇವರ ಹಿಂದೂಸ್ತಾನಿ ಸಂಗೀತದಲ್ಲಿ ಮೊದಲ ಗುರು ಎಂ.ಆರ್.ದುರ್ಗೇಶ್. ನಂತರ ಬೆಂಗಳೂರಿಗೆ ತೆರಳಿ ಅಲ್ಲಿ ಫಯಾಜ್ ಖಾನ್ ಅವರಿಂದ ಸಂಗೀತ ಕಲಿತರು. ರಾಮಚಂದ್ರ ಅವರ ಸಂಗ್ರಹವು ಗಜಲ್‌ಗಳು, ಗಾಂಧಿ ಭಜನೆಗಳು ಮತ್ತು ಸೂಫಿ ಸಂಗೀತವನ್ನು ಒಳಗೊಂಡಿದೆ.

ಅವರು ‘ಸಂತೆಯಲ್ಲಿ ನಿಂತ ಕಬೀರ’ ಎಂಬ ಕನ್ನಡ ಚಲನಚಿತ್ರಕ್ಕೆ ಸಹಾಯಕ ಸಂಗೀತ ನಿರ್ದೇಶಕರಾಗಿದ್ದರು ಮತ್ತು 2018 ರಲ್ಲಿ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅವರು ಹಲವಾರು ನಾಟಕಗಳಿಗೆ ಸಂಗೀತ ಸಂಯೋಜಿಸಿದ್ದಾರೆ ಮತ್ತು ಅದಕ್ಕಾಗಿ ಹಲವಾರು ಪ್ರಶಸ್ತಿಗಳು ಮತ್ತು ಮನ್ನಣೆಯನ್ನು ಪಡೆದಿದ್ದಾರೆ.

Sparsha RK

Singer & Actor

Sparsha RK is a Hindustani classical singer, actor and voice actor. She first gained recognition through the television reality music show Ede Tumbi Haaduvenu and has subsequently built her career as a playback singer in Kannada cinema.