Loading Events

Date & Time

Friday 19 Jul 2019

Categories

Location

Bangalore International Centre
7, 4th Main Road, Domlur II Stage
Bengaluru, Karnataka 560 071 India
View Map

Contact

+91 98865 99675 bic@bangaloreinternationalcentre.org

ಪರಿಚಯ:

ಕನ್ನಡ ಭಾಷೆ ಮತ್ತು ಸಂಸೃತಿಗಳಿಗೆ ಧೀರ್ಘ, ಸಂಪನ್ನ ಹಾಗೂ ಕುತೂಹಲಕಾರಿ ಚರಿತ್ರೆ ಇದೆ. “ಎಚ್ಚೆತ್ತ ಕನ್ನಡ” ಚರ್ಚೆಯಲ್ಲಿ ಭಾಗವಗಿಸುವ ಪರಿಣಿತರು ಈ ಒಂದು “ಕನ್ನಡತನ” ತಲೆಯೆತ್ತಿ ಮೈದಳೆಯಲು ಎಂತಹ ತೀವ್ರ ಹೋರಾಟಗಳು ನಡೆದೆವೆಂದು ವಿವರಿಸುತ್ತಾರೆ. ಈ ಚಾರಿತ್ರಿಕ ಘಟ್ಟದಲ್ಲಿ ಮರಾಠ, ಮುಸಲ್ಮಾನ ಮತ್ತು ವಸಾಹತುಶಾಹಿ ರಾಜ್ಯಭಾರಗಳ ಕೆಳಗೆ ಕನ್ನಡ ನಾಡು  ಛಿದ್ರವಾಗಿ ಕನ್ನಡ ಭಾಷಿಗರು ನಲುಗಿ ಕಂಗೆಟ್ಟಿದ್ದರು. ಮುಂದಕ್ಕೆ 19ನೇ ಶತಮಾನದಲ್ಲಿ ಹೇಗೆ ಒಂದು ಹೊಸ “ಕನ್ನಡತನ” ತಲೆಯೆತ್ತಿ “ಕರ್ನಾಟಕ ಏಕೀಕರಣ” ಚಳುವಳಿಯಾಗಿ ಮೈದಳೆದು, ರಾಷ್ಟ್ರೀಯ ಸ್ವಾತಂತ್ರ ಮತ್ತು ಭಾಷಾವಾರು ಪ್ರಾಂತ್ಯಗಳ ರಚನೆಗೆ ಇಂಬುಗೊಟ್ಟಿತು ಎಂದು ಕಾಣಬಹುದು. ಈ ಚರ್ಚೆಯು ನಾವೀಗ ಬದುಕುತ್ತಿರುವ ಕರ್ನಾಟಕ ರಾಜ್ಯ ಒಂದಾಗಲು – ಏಕೆ, ಈ ಹೆಸರು ಪಡೆಯಲೂ ಸಹ – ಏನೇನು ಅಡಚಣೆಗಳನ್ನು ಚಳುವಳಿ ಎದುರಿಸಿ ಗೆದ್ದಿತೆಂದು ವಿಷದಪಡಿಸುತ್ತದೆ. ಈ ಹಿನ್ನೆಲೆಯಲ್ಲಿ, ಇತ್ತೀಚೆಗೆ ರಾಜ್ಯದ ಕ್ಷಿಪ್ರ ಆರ್ಥಿಕ ಪ್ರಗತಿಯಿಂದ ಆಕರ್ಷಿತರಾಗಿ ಲಕ್ಷಾಂತರ ಬಡವ ಹಾಗೂ ಬಲ್ಲಿದ ಜನಮೂಹಗಳು ಇಲ್ಲಿಗೆ ವಲಸೆ ಬರುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಹೊಸ ವಲಸಿಗರ ಮನದಾಳದಲ್ಲಿ ಕರ್ನಾಟಕದ ಚರಿತ್ರೆ ಮತ್ತು ಪರಂಪರೆಗಳ ಅರಿವಿನ ತೀವ್ರ ಕೊರತೆಯಿಂದಾಗಿ, ಈಗ “ಕನ್ನಡತನ”ದ ಉಳಿವಿನ ಬಗ್ಗೆಯೇ ತಲೆಯೆತ್ತುತ್ತಿರುವ ಹೊಸ ಆತಂಕಗಳನ್ನು ಬಗೆಹರಿಸುವ ದಿಕ್ಕಿನಲ್ಲಿ ಈ ಚರ್ಚೆ ಪ್ರಯತ್ನಿಸುತ್ತದೆ.

Kannada language and associated cultures have a long and rich history. “Kannada Rising” panelists will explore the emergence of the “Kannadiga identity” from these historical roots, through several centuries of struggle to overcome social and political domination by Maratha, Muslim and Colonial rulers, under whom the Kannada land was fragmented and its native speakers disempowered. They will also examine how the emergence of a modern Kannada identity in the 19th century led to the quest for a “re-united Karnataka”, which became a part of the national freedom movement, and, for the formation of linguistic states. The moderated discussion will explore the pulls and pressures around the formation of-and even naming- of the unified “Karnataka”, the modern state that we live in. It will finally, explore how the massive new waves of economic immigration, of both elite and subaltern social groups largely unaware of Karnataka’s history and heritage, is leading to new identity-related anxieties and how these can be mitigated. 

Speakers

ಪ್ರೊಫೆಸರ್ ಎಂ. ಚಿದಾನಂದ ಮೂರ್ತಿ (Prof. M Chidananda Murthy)

Kannada Scholar and Cultural Activist

ಪ್ರೊಫೆಸರ್ ಎಂ. ಚಿದಾನಂದ ಮೂರ್ತಿ (ಜನನ 1931) ಕನ್ನಡದ ಸಾಹಿತ್ಯ, ಚರಿತ್ರೆ ಮತ್ತು ಸಂಸೃತಿಗಳ ಹಿರಿಯ ವಿದ್ವಾಂಸರು. ಅವರ “ಕನ್ನಡ ಶಾಸನಗಳ ಸಾಂಸೃತಿಗಳ ಅಧ್ಯಯನ” ಎಂಬ ಡಾಕ್ಟರೇಟ್ ಪ್ರಬಂಧವು (1964) ಅವರ ಇಂದಿನ ಪ್ರಖ್ಯಾತಿಗೆ ಮೊದಲ ಹೆಜ್ಜೆಯಾಗಿತ್ತು. ಅವರು ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಕನ್ನಡ ಭೋಧಕರಾಗಿಯೂ ಇದ್ದರು (1967-68). ವಿದ್ಯಾರ್ಥಿಯಾಗಿದ್ದಲೇ ಅವರು ಕನ್ನಡ ಸಾಹಿತ್ಯದ ಹಳೆಯ ದಿಗ್ಗಜಗಳಾದ ಮಾಸ್ತಿ, ಕಾರಂತ ಮತ್ತು ಕುವೆಂಪು ಅವರಿಂದ ಪ್ರಭಾವಿತರಾಗಿದ್ದರು. ಅವರ ಧೀರ್ಘ ಕಾಲದ (1954-1990) ಪ್ರಾಧ್ಯಾಪಕ ವೃತ್ತಿಯಲ್ಲಿ ಕನ್ನಡ ಭಾಷೆ, ಚರಿತ್ರೆ, ಸಂಸೃತಿಗಳ ಅಧ್ಯಯನಕ್ಕೆ ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ವಿಶಿಷ್ಠವಾಗಿ ಇದರ ಜೊತೆಗೇ ವಿದ್ವಾಂಸನ ಕಟ್ಟುಪಾಡುಗಳನ್ನು ಮೀರಿ, ತಮಗಿಷ್ಟವಾದ ಸಾಮಾಜಿಕ ಚಳುವಳಿಗಳಿಗೂ ಧುಮುಕಿದ್ದಾರೆ. ಹಿಂದೂ ಸಂಪ್ರದಾಯಗಳಿಗೆ ಚೈತನ್ಯ ತುಂಬುವುದೂ, ಲಿಂಗಾಯತ-ವೀರಶೈವ ಸಂಪ್ರದಾಯಗಳ ಅರಿವು ಹೆಚ್ಚಿಸಿ ಒಗ್ಗೂಡಿಸುವುದೂ ಹಾಗೂ ಇದಕ್ಕಿಂತ ಪ್ರಸ್ತುತವಾಗಿ, ಕರ್ನಾಟಕ ಏಕೀಕರಣ ಮತ್ತು ಕನ್ನಡಿಗರ ಹಕ್ಕುಗಳ ಬಗ್ಗೆ ಹೋರಾಡುತ್ತಿರುವುದೂ ಇದರ ಉದಾಹರಣೆಗಳು. ಅವರು ತಮ್ಮ ಜನಪರ ಹೋರಾಟಗಳು ಮತ್ತು ಬರವಣಿಗೆಗಳ ಮೂಲಕ ಕರ್ನಾಟಕ ದ ಜನಮನದಲ್ಲಿ “ಚಿ.ಮೂ” ಎಂದೇ ಪ್ರಿಯರಾಗಿದ್ದಾರೆ. “ಕನ್ನಡ ಸಂಸೃತಿಯ ಹಿರಿಮೆ ಗರಿಮೆ” ಎಂಬ ಕಿರುಹೊತ್ತಿಗೆ 28 ಮರು ಪ್ರಕಟಣೆಗಳನ್ನು ಕಂಡಿದ್ದೂ, ಅವರು ಸ್ಥಾಪಿಸಿದ ಕನ್ನಡ ಶಕ್ತಿ ಕೇಂದ್ರವು ಈಗ ಕನ್ನಡಕ್ಕಾಗಿ ಹೋರಾಡುತ್ತಿರುವ ತಲೆಮಾರಿನ ಅನೇಕ ನಾಯಕರಿಗೆ ಸ್ಪೂರ್ತಿ ನೀಡಿವೆ.

Prof. M Chidananda Murthy is a senior scholar in Kannada literature, history and culture. His doctoral thesis, a landmark cultural study of Kannada epigraphy, was the first step in building his formidable intellectual reputation. He was also a post-doctoral scholar at the University of Chicago received many other honors.  He was influenced greatly by Kannada literary giants, Masti Venkatesha Iyengar, Shivarama Karanth and K. V. Puttappa as a student. In his long and distinguished academic career (1954-1990), Prof. Murthy made major contributions to the study of Kannada language, history and culture. Uniquely, for an academic of distinction, he has also plunged deeply into social issues close to his heart: revitalization of Hindu traditions, understanding and unifying Lingayatha-Veerashiva traditions and, above all, the passionate struggle for the unification of Karnataka and the rights of Kannadigas in the increasingly prosperous State. He reached out to Kannadigas through his activism and writings, becoming widely popular as “Chi-Mu”. His booklet on vitality of Kannada culture has seen 28 reprints. His leadership of the “Kannada Shakthi Kendra” (Center for Kannada empowerment) inspired the next-generation of leaders who are now fighting for the Kannada cause.

ಡಾ. ಎಚ್.ಎಸ್. ಗೋಪಾಲ್ ರಾವ್(Dr. HS Gopala Rao)

Engineer and Historian of Karnataka Unification

ಡಾ. ಎಚ್.ಎಸ್. ಗೋಪಾಲ್ ರಾವ್ (ಜನನ 1946) ವೃತ್ತಿಯಿಂದ ಇಂಜಿನಿಯರ್ ಆಗಿದ್ದರೂ ಮೊದಲು ಕನ್ನಡ ಸಾಹಿತ್ಯಕ್ಕೆ ಆಕರ್ಷಿತರಾಗಿ ನಂತರ ಕನ್ನಡ ಶಾಸನ ಹಾಗೂ ಚರಿತ್ರೆಗಳ ಅಧ್ಯಯನದಲ್ಲಿ ತಲ್ಲೀನರಾದರು. 1991ರಲ್ಲಿ ಅವರು ತಮ್ಮ ಶಾಸನಗಳ ಅಧ್ಯಯನದ ಆಧಾರದಲ್ಲಿ ಡಾಕ್ಟರೇಟ್ ಪಡೆದರು. ಗೋಪಾಲರಾಯರ ಸಾಮಾಜಿಕ ಧೋರಣೆಗಳು ಜಾತ್ಯಾತೀತ ಹಾಗೂ ಎಡಪಂಥ ಗಳಿಗೆ ಹತ್ತಿರವಿದ್ದರೂ ಕನ್ನಡ ಸಂಸೃತಿಯ ವಿಚಾರಗಳಲ್ಲಿ ಅವರು “ಚಿ.ಮೂ” ಅವರಿಂದಲೂ ಸಾಕಷ್ಟು ಪ್ರೇರಣೆ ಪಡೆದಿದ್ದಾರೆ. ಕ್ರಮೇಣ ಅವರ ಆಸಕ್ತಿ 150 ವರ್ಷಗಳ ಕನ್ನಡಪರ ಹೋರಾಟಗಳ ಬಗ್ಗೆ ಮತ್ತು ಕರ್ನಾಟಕ ಏಕೀಕರಣ ಚಳುವಳಿಯ ಕಡೆಗೆ ಕೇಂದ್ರೀಕೃತವಾಯಿತು. ಇಂತಹ ಹೋರಾಟಗಳು ಕನ್ನಡ ಭಾಷಿಗರ ಮೇಲೆ ಸರ್ವೇಸಾಮಾನ್ಯವಾಗಿ ಹೇರಿದ್ದ ಭಾಷಾ ಕಲಿಕೆ ಮತ್ತು ಉದ್ಯೋಗವಕಾಶಗಳ ಬಗೆಗಿನ ಅನ್ಯಾಯಗಳ ವಿರುಧ್ಧ ತಲೆ ಎತ್ತಿದ್ದವು. ಮದರಾಸು ಮತ್ತು ಮುಂಬೈ ಬ್ರಿಟಿಷ್ ಪ್ರಾಂತ್ಯಗಳಲ್ಲಿ ಹಾಗೂ ರಾಜಾಡಳಿತವಿದ್ದ ಹೈದರಾಬಾದ್ ಮತ್ತು ಮೈಸೂರು ಸಂಸ್ಥಾನಗಳ ನಡುವೆ ಹರಿದು ಹಂಚಾಗಿದ್ದ ಕನ್ನಡ ನಾಡಿನಲ್ಲಿ ಏಕೀಕರಣ ಚಳುವಳಿ ಭುಗಿಲೆದ್ದು ಸಫಲವಾಯಿತು. ಚಾರಿತ್ರಿಕ ದಾಖಲೆಗಳು ಹಾಗೂ ಚಳುವಳಿನಿರತ ಕನ್ನಡ ಹೋರಾಟಗಾರರೊಂದಿಗೆ ನಡೆಸಿದ ಮಾತುಕತೆಗಳ ಆಧಾರದ ಮೇಲೆ ಗೋಪಾಲರಾಯರು ಬರೆದ ಮಹಾ ಗ್ರಂಥವೇ “ಕರ್ನಾಟಕ ಏಕೀಕರಣ ಇತಿಹಾಸ”. ಈವರೆಗೆ ಎಂಟು ಆವೃತ್ತಿಗಳನ್ನು ಕಂಡಿರುವ ಈ ಪುಸ್ತಕ ಗೋಪಾಲರಾಯರ ವಿದ್ವತ್ತು ಮತ್ತು ಕನ್ನಡಪರ ಕಳಕಳಿಗಳಿಗೆ ಸಾಕ್ಷಿಯಾಗಿದೆ.

Dr. HS Gopala Rao, an Engineer by training, was drawn to Kannada literature and subsequently to the study of Kannada epigraphy and history, which became his true passion. While working as an engineer, Dr. Rao obtained his doctorate (1991) for his studies of Kannada Epigraphy. In this process, he was mentored by “Chi Mu” although his own philosophical orientation remained secular and leftist. During his intellectual explorations, Dr. Rao was fascinated by the 150-year history of struggles by extraordinary individuals across the Kannada land, to forge a new, unified identity. These struggles were mounted in response to widespread discrimination in language education and employment options, in the fragments of Kannada geography ruled under Madras and Bombay Presidencies, and, the Princely states of Hyderabad and Mysore.  His explorations resulted in Rao’s massive and richly documented book, written in collaboration with many Kannada activists and scholars and based on years spent personally interviewing leaders of the unification movement. Titled “Karnataka Ekikarana Ithihasa”, and re-published in eight editions so far, the monumental work is a testimony to Dr. Rao’s deep scholarship and passionate commitment to the Kannada cause.

 

ಶ್ರೀ ಚಿರಂಜೀವ್ ಸಿಂಘ್ (Dr. Chiranjiv Singh)

Scholar, Administrator, and Kannadiga by choice

ಶ್ರೀ ಚಿರಂಜೀವ್ ಸಿಂಘ್ (ಜನನ 1945) ಐ.ಎ.ಎಸ್. ಅಧಿಕಾರಿಯಾಗಿ 1969ರಲ್ಲಿ ಕರ್ನಾಟಕ ಸೇರಿದರು. ಅನಂತರ ಕರ್ನಾಟಕ ಸರ್ಕಾರದಲ್ಲಿ ಅನೇಕ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತ, ಈ ಮಧ್ಯೆ ಪ್ಯಾರಿಸ್ ನಲ್ಲಿ ಯುನೆಸ್ಕೊ ಸಂಸ್ಥೆಗೆ ಭಾರತದ ರಾಯಭಾರಿಯಾಗಿ, ಕೊನೆಗೆ 2005ರಲ್ಲಿ ನಿವೃತ್ತರಾದರು. ಹುಟ್ಟಿನಿಂದ ಪಂಜಾಬಿಯಾಗಿದ್ದು, ಆಯ್ಕೆಯಿಂದ ಕನ್ನಡಿಗನಾದ ಶ್ರೀ ಸಿಂಘ್ ರವರು ಪರಿಣಿತ ಆಡಳಿತಗಾರ ಹಾಗೂ ಸಕ್ರಿಯ ವಿದ್ವಾಂಸ ಎರಡೂ ಆಗಿದ್ದಾರೆ. ಧರ್ಮ, ತತ್ವಶಾಸ್ತ್ರ, ಚರಿತ್ರೆ ಹಾಗೂ ವಿವಿಧ ಕಲಾ ಪ್ರಾಕಾರಗಳಲ್ಲಿ ಅವರಿಗಿರುವ ಕುತೂಹಲ ಆಳವಾದುದು. ಇದೆಲ್ಲವನ್ನೂ ಮೀರಿ ಕನ್ನಡ ಭಾಷೆ ಮತ್ತು ಸಂಸೃತಿಗಳ ಬಗ್ಗೆ ಅವರಿಗಿರುವ
ತಿಳುವಳಿಕೆ ಮತ್ತು ಕರ್ನಾಟಕ ದ ಮೂಲೆ ಮೂಲೆಗಳಲ್ಲಿ ಅವರು ಗ್ರಹಿಸಿರುವ ಸಾಮಾಜಿಕ ಸತ್ಯಗಳು, ಪ್ರಸ್ತುತ ಚರ್ಚೆಯ ಮೇಲೆ ಹೊಸ ಬೆಳಕು ಚೆಲ್ಲುವಂತಹವು. ಅವರು ಶುಧ್ಧ ಕನ್ನಡದಲ್ಲಿ ಬರೆದ “ಯಾವ ಜನ್ಮದ ಮೈತ್ರಿ?” ಎಂಬ ಪ್ರಬಂಧ ಸಂಕಲನ ಅವರ ವ್ಯಕ್ತಿತ್ವದ ಹಲವು ಮುಖಗಳಿಗೆ ಸಾಕ್ಷಿಯಾಗಿದೆ. ಯಾರು ಎಲ್ಲಿಂದಲೇ ಬಂದಿದ್ದರೂ, ಮೂಲ ಕನ್ನಡಿಗರ ಸಾತ್ವಿಕ ಉದಾರತೆಯನ್ನು ಅರಿತು ಸ್ಪಂದಿಸಿದರೆ ಹೇಗೆ ಕನ್ನಡಿಗರೇ ಆಗಿ ಬಾಳಬಹುದು ಎಂಬುದಕ್ಕೆ ಶ್ರೀ ಚಿರಂಜೀವ್ ಸಿಂಘ್ ಮಾದರಿಯಾಗಿದ್ದಾರೆ.

Mr. Chiranjiv Singh is an Indian Administrative Service officer of 1969 vintage, who served in many capacities in the Government of Karnataka until 2005. He also served on deputation as the Indian Ambassador to UNESCO in Paris. Of Punjabi origin- and a Kannadiga by choice – Mr. Singh is a rare example of the scholar-administrators who were more common in the colonial era. His interest in religion, philosophy, history and arts demonstrate his wide ranging intellectual quest.  His deep understanding of Kannada culture and exposure to social realities that he has witnessed across Karnataka provide a unique perspective to this discussion. Dr. Singh’s semi-autobiographical collection of Essays in chaste Kannada, titled “Yaava Janmada Maithri” (In which Janma was this bond forged?), is a testimony to the many dimensions of his personality. Dr. Singh is a living example of how, by simply reciprocating the innate tolerance of the Kannadigas, anyone from anywhere can indeed become a Kannadiga by choice.

ಡಾ.ಕೆ.ಉಲ್ಲಾಸ ಕಾರಂತ (Dr. K Ullas Karanth)

Moderator, Scientist and Kannada Enthusiast

ಈ ಚರ್ಚೆಯನ್ನು ನಡೆಸಿಕೊಡುವ ಡಾ.ಕೆ.ಉಲ್ಲಾಸ ಕಾರಂತ (ಜನನ 1948) ಮೊದಲಿಗೆ ಇಂಜಿನಿಯರ್ ನಂತರ ವ್ಯವಸಾಯಗಾರ ಆಗಿದ್ದರೂ ಅವರಿಗೆ ಬಾಲ್ಯದಿಂದಲೇ ಇದ್ದ ವನ್ಯಜೀವಿಗಳ ಬಗೆಗಿನ ಆಸಕ್ತಿಯನ್ನು ದಶಕಗಳ ಸತತ ಪರಿಶ್ರಮದ ಮೂಲಕ ಬೆನ್ನಟ್ಟಿದ್ದರು. 1990ರಲ್ಲಿ ಹುಲಿಗಳ ಜೀವನ ಕ್ರಮದ ಅಧ್ಯಯನದ ಆಧಾರದಿಂದ ವನ್ಯಜೀವಿ ವಿಙ್ಙಾನದಲ್ಲಿ ಡಾಕ್ಟರೇಟ್ ಪಡೆದರು. ಮುಂದಿನ ಮೂರು ದಶಕಗಳಲ್ಲಿ ವೈಲ್ಡ್ ಲೈಫ್ ಕನ್ಸರ್ವೇಶನ್ ಸೊಸೈಟಿ ಯಲ್ಲಿ ಹಿರಿಯ ವಿಙ್ಙಾನಿಯಾಗಿ ಕಾರ್ಯಪ್ರವೃತ್ತರಾಗಿದ್ದರು. ಈ ಅವಧಿಯಲ್ಲಿ ಅವರು ಭಾರತೀಯ ವಿಙ್ಙಾನ ಅಕಾಡೆಮಿಯ “ಫೆಲೊ” ಮತ್ತು ಇತರ ಅನೇಕ ಗೌರವಗಳಿಗೆ ಆಯ್ಕೆಗೊಂಡರು. ಅವರ ತಂದೆ ಹಿರಿಯ ಸಾಹಿತಿ ಶಿವರಾಮ ಕಾರಂತರಿಂದ ಬಾಲ್ಯದಲ್ಲೇ ಅವರು ಕನ್ನಡ ಸಾಹಿತ್ಯ ಮತ್ತು ಜನಪ್ರಿಯ ವಿಙ್ಙಾನಗಳಲ್ಲಿ ಆಸಕ್ತರಾದರು. ಅಂದು ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಕನ್ನಡ ಮಾಧ್ಯಮದಲ್ಲೇ ಕಲಿತ ಕಾರಂತರು ತಮ್ಮ ಸುತ್ತ ಮುತ್ತ ನಡೆಯುತ್ತಿದ್ದ ಕರ್ನಾಟಕ ಏಕೀಕರಣ ಚಳುವಳಿಯನ್ನು ಕುತೂಹಲದಿಂದ ಕಂಡಿದ್ದರು. ಅವರ ತಂದೆ ಮತ್ತು ದೊಡ್ಡ ತಂದೆ ಕೋಟ ರಾಮಕೃಷ್ಣ ಕಾರಂತರು, ಇಬ್ಬರೂ ಏಕೀಕರಣ ಚಳುವಳಿಯ ಪ್ರಮುಖರಾಗಿದ್ದರು. ವೃತ್ತಿಪರವಾದ ಇಂಗ್ಲಿಷ್ ಬರವಣಿಗೆಯ ಜೊತೆಗೇ ಉಲ್ಲಾಸ ಕಾರಂತರು ಕನ್ನಡ ಭಾಷೆಯಲ್ಲಿ ವನ್ಯ ಸಂರಕ್ಷಣೆ ಮತ್ತು ಪರಿಸರ ವಿಙ್ಙಾನಗಳ ಬಗ್ಗೆ ಅನೇಕ ಲೇಖನಗಳನ್ನು ಮತ್ತು 4 ಜನಪ್ರಿಯ ಪುಸ್ತಕಗಳನ್ನೂ ಬರೆದಿದ್ದಾರೆ.

Dr. K Ullas Karanth originally trained as a mechanical engineer, then turned to farming, and after a persistent, decade-long pursuit of his true passion, wildlife science, obtained a doctoral degree studying tiger ecology (1993). He carved out a 30-year career for himself as a senior scientist with the Wildlife Conservation Society, with his work being recognized through a Fellowship of the Indian Academy of Sciences and other accolades along the way. Ullas Karanth’s interest in Kannada, both fiction and popular-science, was nurtured by his father Shivarama Karanth, a literary giant and polymath. Growing up in Dakshina Kannada District, then a part of the Madras Presidency and schooled entirely in Kannada medium, he was a keen witness to the struggle for the unification of Karnataka, in which his father, and his uncle the freedom-fighter KR Karanth, played leading roles. In addition to his professional contributions in English, Karanth has published numerous articles and four books in Kannada on wildlife conservation and environmental sciences.