Loading Events

Date & Time

Sunday Sun, 5 Apr 2026 11:00 am — 1:00 pm
Free Entry on a First Come First Served basis on RSVP and availability.

Location

Bangalore International Centre
7, 4th Main Road, Domlur II Stage
Bangalore, Karnataka 560071 India

ಈ ಕಾರ್ಯಕ್ರಮವು ಗ್ರೋಯಿಂಗ್ ಅಪ್ ಕಾರಂತ ಎಂಬ ಇಂಗ್ಲಿಷ್ ಮೆಮೊಯಿರ್ನ ಕನ್ನಡ ಅನುವಾದಿತ ಕೃತಿಯಾದ ಕಾರಂತರ ಸುಳಿಯಲ್ಲಿ ಎಂಬ ಹೊಸಗ್ರಂಥದ ಬಿಡುಗಡೆಯ ಸಮಾರಂಭ. ಖ್ಯಾತ ಸಾಹಿತಿ ಕೋಟ ಶಿವರಾಮ ಕಾರಂತರ ಮಕ್ಕಳಾದ ಉಲ್ಲಾಸ ಕಾರಂತ,ಮಾಲವಿಕ ಕಪೂರ ಮತ್ತು ಕ್ಷಮಾ ರಾವ್ ಸೇರಿ ಬರೆದ ತಮ್ಮ ಅನುಭವ ಸಂಗ್ರಹದ ಅನನ್ಯ ಹೊತ್ತಗೆಯ ಸುಲಲಿತ ಕನ್ನಡ ಅನುವಾದವನ್ನು ಮಾಡಿದವರು ಖ್ಯಾತ ಪತ್ರಕರ್ತ, ಸಂಪಾದಕ, ವಿಶ್ವೇಶ್ವರ ಭಟ್ಟರು.ಈ ಕಾರ್ಯಕ್ರ್ರಮ ವನ್ನು ನಿರೂಪಿಸುವವವರು ಪತ್ರಕರ್ತೆ ಶೋಭಾ ನಾರಾಯಣ್.

ಪುಸ್ತಕ ಲೋಕದ ಗಣ್ಯ ಸಾಹಿತಿಗಳೂ ಮತ್ತು ವಿಮರ್ಶಕರಾದ ವಿಜಯಶಂಕರ ಎಸ್ ಆರ್ ಹಾಗೂ ಎಸ್ ದಿವಾಕರ ಮತ್ತು ಉಲ್ಲಾಸ ಕಾರಂತ, ವಿಶ್ವೇಶ್ವರ ಭಟ್ ಭಾಷಣ ಮಾಡುವುದಲ್ಲದೆಯೇ ಸಹ ಲೇಖಕರಾದ ಮಾಲವಿಕ ಮತ್ತು ಕ್ಷಮಾ ಹಾಗೂ ಶೋಭಾ ಅವರ ಜತೆಗೂಡಿ ಅನುವಾದಿತ ಕೃತಿ ಮತ್ತು ವಿಸ್ತ್ರತ ಕಾರಂತ ಪ್ರಪಂಚದಬಗ್ಗೆ ಗಹನವಾದ ವಿಚಾರ ವಿನಿಮಯ ಮಾಡಿಕೊಳ್ಳುತ್ತ ಸಭಿಕರ ಜೊತೆಯೂ ಇದನ್ನು ಹಂಚಿಕೊಳ್ಳುವುದು ಈ ಕಾರ್ಯಕ್ರಮದ ಭಾಗವಾಗಿದೆ. ಈ ಗ್ರಂಥವಲ್ಲದೆ ಲೇಖಕರ ಇತರ ಗ್ರಂಥಗಳೂ ಸಹಾ ಸ್ಥಳದಲ್ಲಿ ಗ್ರಾಹಕರಿಗೆ ಇಲ್ಲಿ ಮಾರಾಟಕ್ಕೆ ಇರುತ್ತವೆ.

ಈ ಕಾರ್ಯಕ್ರಮವು ಪ್ರಶ್ನೋತ್ತರಗಳೊಂದಿಗೆ ಮುಕ್ತಾಯಗೊಳ್ಳುತ್ತದೆ.

ಬೆಳಿಗ್ಗೆ 10:30 ರಿಂದ ಚಹಾ/ಕಾಫಿ ನೀಡಲಾಗುವುದು.

The event celebrates the publication of the Kannada Translation of the acclaimed memoir Growing up Karanth (Publishers: West Land) coauthored by in 2021 by three highly accomplished children of the literary giant Kota Shivarama Karanth: Wildlife Biologist Ullas Karanth, Psychologist Malavika Kapur and Classical dancer Kshama Rau. The memoir has been translated into Kannada by the well-known journalist, writer and adventurer Vishweshwar Bhat under the title Karanthara Suliyalli (In the Whirlpool of Karanth’s World). The book has 10 chapters and an abundance of images from a century of Shivarama Karanth’s life and times. This book and other works by the authors will be available for sale at the event.

Well known writer, journalist and content creator Shoba Narayan will compere the event, which will begin with an introductory talk by the lead author of the book Ullas Karanth. This will be followed by three brief talks by the translator journalist and editor Vishweshwar Bhat, novelist and art critic S Diwakar and literary critic S R Vijayashankar. These talks will be followed by a Panel Discussion moderated by Shoba Narayan, with the participation of authors Ullas Karanth, Malavika Kapur, Kshama Rau and Vishweshwar Bhat. The discussion will culminate with questions and answers session.

Tea/ Coffee will be served from 10:30am onwards.

Presented by: Ullas Karanth

Speakers

ಉಲ್ಲಾಸ ಕಾರಂತ | Ullas Karanth

Author & Wildlife Biologist

ಮೂಲತಃ ಎಂಜಿನಿಯರ್. ಇಷ್ಟಪಟ್ಟು ಕಲಿತದ್ದು ವನ್ಯಜೀವಿಶಾಸ್ತ್ರ. ಅದೇ ವಿಷಯದಲ್ಲಿ ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (1988) ಹಾಗೂ ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ (1993) ಪಡೆದಿದ್ದಾರೆ. ಹುಲಿಗಳ ಕುರಿತು ಸಂಶೋಧನೆಯಲ್ಲಿ ತೊಡಗಿ ಉಲ್ಲಾಸ್ ಕಾರಂತ್ 150ಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳು, ಇಂಗ್ಲಿಷಿನಲ್ಲಿ 8 ಹಾಗೂ ಕನ್ನಡದಲ್ಲಿ 4 ಪುಸ್ತಕಗಳನ್ನು ಬರೆದಿದ್ದಾರೆ. ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‌ನಿಂದ ಅವರಿಗೆ ಫೆಲೋಶಿಪ್ ದೊರಕಿದೆ. ರಾಷ್ಟ್ರಪತಿಗಳಿಂದ ಪದ್ಮಶ್ರೀ ಗೌರವ ಸ್ವೀಕರಿಸಿದ್ದಾರೆ. ಅಮೆರಿಕದ ವರ್ಲ್ಡ್ ವೈಲ್ಡ್‌ಲೈಫ್ ಫಂಡ್‌ನಿಂದ ಜೆ. ಪಾಲ್ ಗೆಟ್ಟಿ ಪ್ರಶಸ್ತಿ ಕೂಡ ಪಡೆದಿದ್ದಾರೆ. ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಹಾಗೂ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್-ಎನ್‌ಸಿಬಿಎಸ್ ಜೊತೆ ಉಲ್ಲಾಸ್ ಶೈಕ್ಷಣಿಕ ಸಹಯೋಗ ಹೊಂದಿದ್ದರು.

Ullas Karanth was originally trained as an engineer but later pursued his passion for wildlife science. He obtained his Master’s degree from the University of Florida (1988) and a PhD from Mangalore University (1993). A leading researcher on tigers, he has authored over 150 scientific papers, along with 8 books in English and 4 in Kannada. He is a Fellow of the Indian Academy of Sciences and has received the Padma Shri from the Government of India. He has also been awarded the J. Paul Getty Wildlife Conservation Prize by the World Wildlife Fund. He has been associated academically with the University of Florida and the National Centre for Biological Sciences (NCBS), Bangalore.

ಮಾಲವಿಕಾ ಕಪೂರ | Malavika Kapur

Author & Psychologist

ಮನಶಾಸ್ತ್ರ (ಸೈಕಾಲಜಿ)ದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸ್ಕಾಟ್‌ಲ್ಯಾಂಡಿನಲ್ಲಿ ವೃತ್ತಿ ಮಾಡಿದ್ದಾರೆ. ನಂತರ ದೀರ್ಘಕಾಲ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ರಾಷ್ಟ್ರೀಯ ಸಂಸ್ಥೆ (ನಿಮ್ಹಾನ್ಸ್)ಯ ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಈಗ ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ನಿಯಾಸ್)ನಲ್ಲಿ ಸಂದರ್ಶಕ ಪ್ರಾಧ್ಯಾಪಕಿ. ಮಾಲವಿಕಾ ಕಪೂರ್ 20ಕ್ಕೂ ಹೆಚ್ಚು ಪುಸ್ತಕಗಳು ಹಾಗೂ 100ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಇಂಡಿಯನ್ ಅಸೋಸಿಯೇಶನ್ ಆಫ್ ಕ್ಲಿನಿಕಲ್ ಸೈಕಾಲಜಿಸ್ಟ್ಸ್, ಬ್ರಿಟಿಷ್ ಸೈಕಾಲಜಿಕಲ್ ಸೊಸೈಟಿಯಿಂದ ಫೆಲೋಶಿಪ್ ಪಡೆದಿದ್ದಾರೆ. ನ್ಯಾಷನಲ್ ಅಕಾಡೆಮಿ ಆಫ್ ಸೈಕಾಲಜಿಯಿಂದ ಜೀವನ ಸಾಧನೆ ಪ್ರಶಸ್ತಿ ಪಡೆದಿದ್ದಾರೆ.

Malavika Kapur holds a postgraduate degree in Psychology and worked in Scotland early in her career. She later served for many years as the Head of the Clinical Psychology Department at NIMHANS (National Institute of Mental Health and Neurosciences), Bengaluru, before retiring. She is currently a Visiting Professor at the National Institute of Advanced Studies (NIAS), Bengaluru. She has authored over 20 books and more than 100 research papers. She is a Fellow of the Indian Association of Clinical Psychologists and the British Psychological Society. She has also received a Lifetime Achievement Award from the National Academy of Psychology.

ಕ್ಷಮಾ ರಾವ್ | Kshama Rau

Author & Classical Dancer

ತಂದೆಯಿಂದಾಗಿ ಪ್ರದರ್ಶಕ ಕಲೆಯ ಬಗ್ಗೆ ಪ್ರೀತಿ ಬೆಳೆಸಿಕೊಂಡು ಪ್ರಸಿದ್ಧ ಒಡಿಸ್ಸಿ ನೃತ್ಯಗಾರ್ತಿ ಮತ್ತು ನೃತ್ಯ ಶಿಕ್ಷಕಿಯಾಗಿ ಹೆಸರು ಗಳಿಸಿದ್ದಾರೆ. ರಸಾಯನಶಾಸ್ತ್ರದಲ್ಲಿ ಪದವಿ ಪಡೆದ ಬಳಿಕ ಅವರು ಚೆನ್ನೈನ ಕಲಾಕ್ಷೇತ್ರದಲ್ಲಿ ಒಡಿಸ್ಸಿ ನೃತ್ಯದ ತರಬೇತಿ ಪಡೆದರು. ನಂತರ ಗುರು ಕೇಳುಚರಣ್ ಮಹಾಪಾತ್ರರಿಂದ ಉನ್ನತ ತರಬೇತಿ ಪಡೆದು ಒಡಿಸ್ಸಿ ನೃತ್ಯದಲ್ಲಿ ನೈಪುಣ್ಯ ಸಾಧಿಸಿದ್ದಾರೆ. ಈಗ ಬೆಂಗಳೂರಿನಲ್ಲಿ ತಮ್ಮದೇ ನೃತ್ಯಶಾಲೆಯಾದ ‘ನೃತ್ಯಶಿಲ್ಪ’ಕ್ಕೆ ನಿರ್ದೇಶಕಿ. ಶಿವರಾಮ ಕಾರಂತರ ಬಾಲವನದ ಜೀರ್ಣೋದ್ಧಾರ ಕಾಮಗಾರಿಗಳ ಮೇಲ್ವಿಚಾರಣೆ ನೋಡಿಕೊಳ್ಳಲು ಕರ್ನಾಟಕ ಸರ್ಕಾರ ರಚಿಸಿದ ಸಲಹಾ ಸಮಿತಿಗೆ ಕ್ಷಮಾ ರಾವ್ ಸದಸ್ಯೆ.

Kshama Rau developed a deep interest in the performing arts under the influence of her father. She is a well-known Odissi dancer and teacher. After completing a degree in Chemistry, she trained in Odissi dance at Kalakshetra, Chennai, and later received advanced training under Guru Kelucharan Mohapatra, achieving mastery in the form. She currently runs her own dance school, “Nrityashilpa,” in Bengaluru. She is also a member of the committee constituted by the Karnataka government to oversee the restoration of Karanth’s “Balavana.”

ವಿಶ್ವೇಶ್ವರ ಭಟ್ | Vishweshwar Bhat

Journalist & Editor

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರು. ಓದಿದ್ದು ಎಂ.ಎಸ್‌ಸಿ (ಜಿಯಾಲಜಿ) ಹಾಗೂ ಎಂ.ಎ (ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ), ನಾಲ್ಕು ಚಿನ್ನದ ಪದಕ ಪುರಸ್ಕೃತ. ಬ್ರಿಟನ್‌ನ ವೇಲ್ಸ್‌ನಲ್ಲಿರುವ ಥಾಮ್ಸನ್ ಫೌಂಡೇಶನ್‌ನಲ್ಲಿ ಅಂತಾರಾಷ್ಟ್ರೀಯ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ‘ವಿಜಯ ಕರ್ನಾಟಕ’, ‘ಕನ್ನಡ ಪ್ರಭ’ ಮತ್ತು ‘ಸುವರ್ಣ ನ್ಯೂಸ್’ ಚಾನೆಲ್‌ಗಳ ಪ್ರಧಾನ ಸಂಪಾದಕ. ಕಳೆದ ಒಂದು ದಶಕದಿಂದ ‘ವಿಶ್ವವಾಣಿ’ ದೈನಿಕದ ಪ್ರಕಾಶಕ ಮತ್ತು ಪ್ರಧಾನ ಸಂಪಾದಕ. ‘ಪ್ರವಾಸಿ ಪ್ರಪಂಚ’ ವಾರಪತ್ರಿಕೆಯ ಸಂಪಾದಕ. ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ನೂರಕ್ಕೂ ಹೆಚ್ಚು ಕೃತಿಗಳ ಲೇಖಕ. ನೂರಕ್ಕೂ ಹೆಚ್ಚು ದೇಶಗಳಿಗೆ ಪ್ರವಾಸ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.

Vishweshwar Bhat hails from Kumta in Uttara Kannada district. He holds an M.Sc. (Geology) and an M.A. in Mass Communication and Journalism, and is a gold medallist. He received advanced training in international journalism at the Thomson Foundation in Wales. He has served as Editor-in-Chief of leading Kannada publications such as Vijaya Karnataka, Kannada Prabha, and Suvarna News channel. For over a decade, he has been the Publisher and Editor-in-Chief of the daily Vishwavani. He has also edited Pravasi Prapancha, a Kannada travel magazine. He has served as a Special Officer in the Karnataka government’s Department of Tourism and Culture. He has authored over 100 books and travelled to more than 100 countries. He is a recipient of several prestigious awards, including the Karnataka Rajyotsava Award and the Karnataka Media Academy Award.

ಎಸ್ ಆರ್ ವಿಜಯಶಂಕರ | S R Vijayshankar

Literary Critic

ಶ್ರೀ ಎಸ್. ಆರ್. ವಿಜಯಶಂಕರ ಕನ್ನಡದ ಮುಖ್ಯ ವಿಮರ್ಶಕರಲ್ಲೊಬ್ಬರು. ಈ ತನಕ 23 ಪುಸ್ತಕಗಳನ್ನು ಬರೆದಿದ್ದಾರೆ. ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಒಟ್ಟು 10 ಪ್ರತಿಷ್ಠಿತ ಸಾಹಿತ್ಯ-ವಿಮರ್ಶಾ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಕೇಂದ್ರ ಸಾಹಿತ್ಯ ಭಾಷಾಂತರ ವಿಭಾಗದಲ್ಲಿ 5 ವರ್ಷಗಳ ಕಾಲ ಗೌರವ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ದೇಶ-ವಿದೇಶಗಳ ವಿಶ್ವವಿದ್ಯಾಲಯಗಳು ಹಾಗೂ ಸಂಘ ಸಂಸ್ಥೆಗಳಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ; ಸಾಹಿತ್ಯ ಕಾರ್ಯಾಗಾರಗಳನ್ನು ನಡೆಸುತ್ತಾರೆ. ಭಾರತ ಹಾಗೂ ಅಮೆರಿಕದ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ 4 ದಶಕಗಳ ಕಾಲ ಕೆಲಸ ಮಾಡಿ ನಿವೃತ್ತಿಯಾಗಿ ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

S. R. Vijayshankar is one of the leading literary critics in Kannada. He has authored 23 books so far. He has received around 10 prestigious literary and criticism awards, including two Karnataka Sahitya Akademi Awards. He has served as a Visiting Professor at Bangalore University and worked for five years as Honorary Director in the Translation Department of the Central Sahitya Akademi. He has delivered special lectures and conducted literary workshops at universities and institutions in India and abroad. He also had a long professional career spanning four decades in multinational companies in India and the United States, and is now retired and based in Bengaluru.

ಎಸ್ ದಿವಾಕರ | S Diwakar

Writer & Literary Critic

ದಿವಾಕರ ಅವರು 40ಕ್ಕೂ ಹೆಚ್ಚು ಕೃತಿಗಳಲ್ಲಿ ಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಭಾಷಾಂತರ, ಸಂಪಾದನೆ, ಕಾಲಮ್ ಬರಹ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಪಡೆದಿರುವ ಅನೇಕ ಪ್ರಶಸ್ತಿಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ವಿ.ಸಿ. ಸಂಪದ ಪ್ರಶಸ್ತಿ ಪ್ರಮುಖವಾದವು.

Diwakar has authored over 40 books of short fiction, poetry, essays, translations and literary criticism. As a journalist he has served as reporter, assistant editor and editor in several newspapers and journals. An acclaimed fiction writer, Diwakar occupies a unique position for the way in which he indigenizes his varied experiences, weaves in and out of different perspectives, time periods, and characters to explore grief, hope, passion, and alienation.

ಶೋಭಾ ನಾರಾಯಣ್ | Shoba Narayan

Journalist & Podcaster

ಶೋಭಾ ನಾರಾಯಣ್ ಲೇಖಕಿ, ಕವಯತ್ರಿ, ಪಾಡ್‌ಕಾಸ್ಟ್ ನಿರೂಪಕಿ ಹಾಗೂ ‘ಜಪಿಗೋ’ ಎಂಬ ಸಂಭ್ರಮ-ಕೇಂದ್ರಿತ ಇ-ಕಾಮರ್ಸ್ ವೇದಿಕೆಯ ಸಹ-ಸ್ಥಾಪಕಿ. ಅವರು ಎಂಟು ಪುಸ್ತಕಗಳ ಲೇಖಕಿ ಹಾಗೂ ಪತ್ರಕರ್ತೆ. ಆಹಾರ ಬರವಣಿಗೆಯಲ್ಲಿ ವಿಶಿಷ್ಟ ಸಾಧನೆಗಾಗಿ ಜೇಮ್ಸ್ ಬಿಯರ್ಡ್ ಎಂ.ಎಫ್.ಕೆ. ಫಿಷರ್ ಪ್ರಶಸ್ತಿ ಮತ್ತು ಪುಲಿಟ್ಜರ್ ಫೆಲೋಶಿಪ್ ಪಡೆದಿದ್ದಾರೆ. ಭಾರತೀಯ ವಸ್ತ್ರಗಳು, ಆಭರಣಗಳು, ಸುಗಂಧ ದ್ರವ್ಯಗಳು ಮತ್ತು ಹಸ್ತಕಲೆಯ ಮೇಲೆ ಅವರಿಗೆ ವಿಶೇಷ ಆಸಕ್ತಿ ಇದೆ. ಅವರು ಪಕ್ಷಿ ವೀಕ್ಷಕಿಯಾಗಿದ್ದು ‘ಬರ್ಡ್ ಪಾಡ್‌ಕಾಸ್ಟ್’ನ್ನು ನಡೆಸುತ್ತಾರೆ. ಪ್ರಕಟಿತ ಕವಯತ್ರಿಯಾಗಿರುವ ಅವರು 2025ರ ಎರ್ಬಾಕೆ ಕವಿತಾ ಪ್ರಶಸ್ತಿಯನ್ನು ಪಡೆದಿದ್ದಾರೆ. ವ್ಯಾಯಾಮ ಮಾಡದೆ ಫಿಟ್ ಆಗುವುದು ಮತ್ತು ಡೈಟ್ ಮಾಡದೆ ತೂಕ ಇಳಿಸುವುದು ಅವರ ಜೀವನಪರ್ಯಂತದ ಗುರಿಯಾಗಿದೆ.

Shoba Narayan is an author, poet, podcaster and co-founder of Zapigo, an e-commerce platform in the celebration space. She is the author of eight books and a journalist who has won a James Beard MFK Fisher Award for Distinguished Food Writing, and a Pulitzer Fellowship. She loves Indian textiles, jewellery, perfumes and crafts. She is a bird-watcher and hosts the Bird Podcast. A published poet, she has won the Erbacce Prize for Poetry 2025. Her lifelong goal is to get fit without exercising and lose weight without dieting.