- This event is over. However, time travel possible through our Audio & Video! See upcoming events
ದಕ್ಲಕಥಾ ದೇವಿಕಾವ್ಯ | Daklakatha Devikavya
An Experimental Play in Kannada
Artistes
Kannada | 90 minutes
An adaptation of K B Siddaiah’s selected writings devised and Directed by Lakshman K P
Actors and Musicians:
Bindu Raxidi, Bharath Dingri, Narsimharaju B K, Ramika Chaitra and Santhosh Dindagur
Assistant Director: Skanda Ghate, Sriharsha B N
Dramatrug: Mohit Kaycee
Light designed by: Manju Narayan
Costume designed by: Shwetha H K
Daklakatha Devikavya is an experimental play drawing on the epic poetry and stories of the important Kannada writer and founder member of the Dalit Sangharsha Samiti, K B Siddaiah. This experimental piece begins with a re-reading of a cosmogonic myth from a community that is oppressed even amongst the oppressed – narrating the origins of the world and of life on it.
The play progresses by weaving and unravelling untouchable rituals, beliefs, hunger and desire through song and storytelling. For untouchable communities nudi (speech, sound, voice, and word) is like breath that cannot be separated from the body. The play uses instruments such as the areye and tamte as vines of nudi that enmesh the narrative and sprout new directions from within. Thereby opening up the untouchable world as a world of deep sonic imprints. In a context such as this, the play confronts what happens when the ‘written word’ that has so far been unreachable collides with and becomes an organ of the untouchable body giving rise to a new relationship of intimacy and struggle. The play provokes how the received insights through the experience of untouchability and the written word force us to confront what it means to be human in the depths of our being.
About K B Siddiah:
Professor K B Siddaiah (1954-2019), or K B as he came to be popularly known, was one of the founders of the Dalit Sangharsha Samiti (DSS) and was one of its most creative writers and critics. He was born in Kenkere in Magadi, completed his Masters in English at Mysore University, and spent several years teaching English Literature at Tumkur. He is well known for writing and composing a moving horatda hadu (song of resistance) titled ondu dahanada kathe (The story of a burning). The song simultaneously evoked mourning and sought political strength in the aftermath of the massacre of Dalits in Belchi, Bihar, and similar incidents closer home, like the atrocity against Dalits in Dasanapura in Tumkur District. K.B. Siddaiah is the author of four epic poems: Bakaala, Daklakatha Devikavya, Anatma, and Gallebani. A collection of his prose, including his early writing in the DSS magazine Panchama,was published in 2019 as Kattalodane Maatukate (A Conversation with Darkness). He is a recipient of the Karnataka Sahitya Akademi Award and the Karnataka Rajyotsava Award.
‘ದಕ್ಲ ಕಥಾ ದೇವಿ ಕಾವ್ಯ’ ಕನ್ನಡ ಮಹತ್ವದ ಬರಹಗಾರರು ಮತ್ತು ಕರ್ನಾಟಕ ‘ದಲಿತ ಸಂಘರ್ಷ ಸಮಿತಿ’ ಯ ಸ್ಥಾಪಕ ಸದಸ್ಯರು ಆದ ಕೆ ಬಿ ಸಿದ್ಧಯ್ಯ ಅವರ ಖಂಡಕಾವ್ಯ ಮತ್ತು ಕಥನಗಳನ್ನು ಒಟ್ಟಿಗೆ ಹೊಸೆದು ಕಟ್ಟಿರುವ ರಂಗಪ್ರಯೋಗ. ತಳಾತಿತಳ ಸಮುದಾಯಗಳ ಕಲ್ಪನೆಯಲ್ಲಿ ಅರಳಿರುವ ಭೂಮಿ ಹುಟ್ಟಿದ, ಜೀವ ಹುಟ್ಟಿದ ಕಥನದಿಂದ ಆರಂಭವಾಗುವ ಈ ಪ್ರಯೋಗ, ಈ ಸಮುದಾಯಗಳ ಆಚರಣೆ ನಂಬುಗೆ, ಹಸಿವು, ಬಯಕೆ, ಹಾಡು-ಪಾಡನ್ನು ಬಿಚ್ಚಿಡುತ್ತಾ ಹರಿಯುತ್ತದೆ. ‘ನುಡಿ’ ಎನ್ನುವುದು ಈ ಸಮುದಾಯಗಳಿಗೆ ಮೈಯ್ಯನ್ನು ಬಿಟ್ಟಿರಲಾಗದ ಉಸುರಿದ್ದಂತೆ. ಅರೆ, ತಮಟೆಯಂತಹ ವಾದ್ಯಗಳು ಆ ನುಡಿಬಳ್ಳಿಯ ಕುಡಿಗಳು. ಹೀಗೆ ಅಸ್ಪೃಶ್ಯ ಜಗತ್ತು ನಾದ ಜಗತ್ತು ಕೂಡ ಹೌದು. ಹೀಗಿರುವಾಗ ಶತಮಾನಗಳಿಂದ ದೂರವಿದ್ದ ‘ಅಕ್ಷರ’ವೆಂಬ ಮತ್ತೊಂದು ಅಂಗ ಅಸ್ಪೃಶ್ಯ ಮೈ ಪ್ರಜ್ಞೆಗೆ ತಾಕಿಕೊಂಡಾಗ ಅಲ್ಲಿ ಉಂಟಾಗುವ ಪ್ರೀತಿ, ಹಗೆಯ ಸಂಬಂಧವನ್ನು ಪ್ರಯೋಗ ಎದುರಾಗುತ್ತದೆ. ಹೀಗೆ ‘ಅಸ್ಪೃಶ್ಯತೆ ಮತ್ತು ಅಕ್ಷರದ ಅನುಭವದಿಂದ ದಕ್ಕಿದ ಅರಿವಿನ ಮೂಲಕ ನಮ್ಮಾಳದ ಮನುಷ್ಯನನ್ನು ಎದುರುಗೊಳ್ಳುತ್ತದೆ.
ಕೆ ಬಿ ಸಿದ್ದಯ್ಯ
ಪ್ರೊಫೆಸರ್ ಕೆ ಬಿ ಸಿದ್ದಯ್ಯನವ್ರು (ಅಥವ ಪುಟ್ಟದಾಗಿ, ಕೆ ಬಿ) ದಲಿತ ಸಂಘರ್ಷ ಸಮಿತಿದು ಸ್ಥಾಪಕರಲ್ಲಿ ಒಬ್ರು. ಅಲ್ದೆ, ಸೃಜನಾತ್ಮಕ ಕವಿ ಮತ್ತೆ ವಿಮರ್ಶಕರೂ ಕೂಡ. ಇವ್ರು ಹುಟ್ಟಿದ್ದು ಮಾಗಡಿ ತಾಲೂಕಿನ ಕೆಂಕೆರೆಯಲ್ಲಿ. ಆಮೇಲೆ ಇಂಗ್ಲಿಷ್ ಅಲ್ಲಿ ಮಾಸ್ಟರ್ಸ್ ಮಾಡಿ ಸುಮಾರು ವರ್ಷ ತುಮ್ಕೂರಲ್ಲಿ ಇಂಗ್ಲಿಷ್ ಲಿಟರೇಚರ್ ಪಾಠ ಮಾಡ್ತಿದ್ರು. “ಒಂದು ದಹನದ ಕಥೆ” ಅನ್ನೊ ಒಂದು ಹೋರಾಟದ ಹಾಡಿಂದ ಇವ್ರನ್ನ ಸಾಮಾನ್ಯವಾಗಿ ಗುರುತಿಸ್ತಾರೆ. ಈ ಹಾಡು ಬಿಹಾರದಲ್ಲಿರೋ ಬೆಲ್ಚಿಯಲ್ಲಿ ದಲಿತರ ಮೇಲೆ ನಡೆದ ಕಗ್ಗೋಲೆ ಮತ್ತು ಇಲ್ಲೇ ಹತ್ತಿರದಲ್ಲೇ ತುಮಕೂರಲ್ಲಿರೋ ದಾಸನಪುರದಲ್ಲಿ ದಲಿತರ ಮೇಲೆ ಅತ್ಯಾಚಾರದಿಂದಾದ ನೋವನ್ನ ವ್ಯಕ್ತಪಡಿಸೋದಲ್ದೆ, ರಾಜಕೀಯ ಶಕ್ತಿಯನ್ನು ರೂಪಿಸಿಕೊಳ್ಳೋದ್ರ ಬಗ್ಗೆ ಮಾತಾಡತ್ತೆ. ಕೆ ಬಿ ಅವ್ರು ನಾಲ್ಕು ಖಂಡ-ಕಾವ್ಯಗಳನ್ನ ಬರ್ದಿದಾರೆ: ಬಕಾಲ, ದಕ್ಲಕಥಾ ದೇವಿಕಾವ್ಯ, ಅನಾತ್ಮ ಮತ್ತೆ ಗಲ್ಲೆಬಾನಿ. ಅವ್ರು ಮೊದ್ಲು DSSನ ಪಂಚಮ ಮ್ಯಾಗ್ಜಿನಲ್ಲಿ ಬರೀತಿದ್ದ ಲೇಖನಗಳು ಮತ್ತೆ ಉಳಿದ ಲೇಖನಗಳನ್ನ ಸಂಗ್ರಹಣೆ ಮಾಡಿ, ‘ಕತ್ತಲೊಡನೆ ಮಾತುಕತೆ’ ಅನ್ನೊ ಪುಸ್ತಕದಲ್ಲಿ ಪ್ರಕಟವಾಗಿದೆ. ಇವ್ರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮಾತ್ತೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ.
ಜಂಗಮ ಕಲೆಕ್ಟಿವ್
ಜಂಗಮ ಕಲೆಕ್ಟಿವ್ ಒಂದು ಚಲನೆ ಮತ್ತು ರೂಪಾಂತರ ತತ್ವಗಳಲ್ಲಿ ನಂಬಿಕೆ ಇರುವ ವಿಭಿನ್ನ ಹಿನ್ನಲೆಯ ಕಲಾವಿದರ ಸಮೂಹ. ಸಾಂಸ್ಕೃತಿಕ ಎಚ್ಚರ ಮತ್ತು ಅರಿವನ್ನು ಹಬ್ಬಿಸುವ ಕಾಯಕವನ್ನು ಮುಖ್ಯವೆಂದು ಭಾವಿಸಿ ಅದಕ್ಕಾಗಿ ರಂಗಭೂಮಿಯನ್ನು ತನ್ನ ಅಭಿವ್ಯಕ್ತಿಯ ದಾರಿಯಾಗಿಸಿಕೊಂಡಿದೆ, ಮತ್ತದರ ವಿಸ್ತರಣೆವೆಂಬಂತೆ ಶಿಕ್ಷಣ, ಸಾಹಿತ್ಯ, ಪ್ರಾಕಾಶನ, ಸಿನೆಮಾ, ಸಾಮಾಜಿಕ ಹೋರಾಟಗಳಂತಹ ಸೃಜನಶೀಲ ಪ್ರಕ್ರಿಯೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಕರ್ನಾಟಕವನ್ನು ತನ್ನ ಮುಖ್ಯ ಪ್ರಯೋಗ ಭೂಮಿಯಾಗಿಸಿಕೊಂಡು ಜೊತೆಗೆ, ದೇಶ ವಿದೇಶಗಳಲ್ಲಿ ಸಾಂಸ್ಕೃತಿಕ ಜೀವಂತಿಕೆಯನ್ನು ಕಾಪಾಡಿಕೊಳ್ಳಲು ಕೈ ಜೋಡಿಸುತ್ತ ಆ ಮೂಲಕ ಜೀವತತ್ವ ಪ್ರತಿಪಾದಿಸುವ ರಾಜಕೀಯ ಪ್ರಶ್ನೆಯನ್ನು ರೂಪಿಸುತ್ತ ನಾವಿರುವ ನೆಲದ ಮತ್ತು ಸುತ್ತಲಿನ ಜನ ಸಮುದಾಯಗಳ ಬದುಕಿನ ಜೊತೆಗೆ ಬೆರೆತು ಹೋಗುವುದು ಜಂಗಮದ ಮುಖ್ಯ ತುಡಿತ.
Artistes

Lakshmana K P
Lakshmana KP is an actor, director, writer and teacher from Karnataka, India. He graduated from Intercultural Theatre Institute, Singapore in 2018 and Ninasam Theatre Institute in 2012 and has been travelling across India, working in various productions with different theatre groups. He has performed in many national and international theatre festivals in India and abroad. Lakshmana has had the opportunity to work not just in professional theatre, but also exploring theatre-in-education with children and young adults. Lakshmana is also a published poet and an activist concerned about the marginalised people and cultures of Indian society. He is a founder member and artist at Jangama Collective. His recently directed works are: We the People of India (2022), Waiting for Godot (2021), Court Martial (2020)

Bindu Raxidi
ಬಿಂದು ಅವ್ರು ಸಕಲೇಶಪುರದ ರಕ್ಷಿದಿಯವ್ರು. ಅಪ್ಪ ಅಮ್ಮ ಇಬ್ರೂ ಹವ್ಯಾಸಿ ಕಲಾವಿದ್ರಾಗಿದ್ರು. ಇವ್ರೂ ಕೂಡ ಸಣ್ಣವ್ರಾಗಿದ್ದಾಗ್ಲಿಂದ ‘ಬೆಳ್ಳೇಕೆರೆ ಹಳ್ಳಿಥಿಯೇಟರ್’ ಅನ್ನೋ ತಂಡದಲ್ಲಿ ನಾಟ್ಕಗಳಲ್ಲಿ ಮಾಡ್ತಿದ್ರು. ಓದು ಮತ್ತೆ ಕಲಿಕೆಯನ್ನ ಮುಂದ್ವರ್ಸಕ್ಕೆ ಮೂಡುಗೆರೆಯ ಡಿ.ಎಸ್.ಬಿ.ಜಿ ಕಾಲೇಜಲ್ಲಿ ಬಿ.ಬಿ.ಎಮ್. ಮಾಡಿದ್ರು. ಆಮೇಲೆ ಮಂಗ್ಳೂರಲ್ಲಿ BPO ಅಲ್ಲಿ ಕೆಲ್ಸ ಮಾಡ್ತಿದ್ರು. ಅದ್ರಲ್ಲಿ ಇವ್ರಿಗೆ ಆಸಕ್ತಿ ಇರ್ಲಿಲ್ಲ. ಹಾಗಾಗಿ ಕೆಲ್ಸ ಬಿಟ್ಟು ರಂಗ್ಬೂಮಿ ಆಯ್ಕೆ ಮಾಡ್ಕೊಂಡ್ರು. 2013-14 ಅಲ್ಲಿ ಇವ್ರು ನೀನಾಸಂನಲ್ಲಿ ಕೋರ್ಸ್ ಮಾಡೋವಾಗ ಇವ್ರಪ್ಪೌರು ತೀರ್ಕೊಂಡ್ಬಿಟ್ರು. ಮನೆಯಲ್ಲಿ ದುಡ್ಡಿನ್ ಸಮಸ್ಯೆ ಆಗುತ್ತೆ ಅಂತ ಇವ್ರು ಮೂರ್ವರ್ಷ ನೀನಾಸಂ ತಿರುಗಾಟ ಮಾಡಿದ್ರು. ಅದಾದ್ಮೇಲೆ ಥಿಯೇಟರ್ ಸಮುರಾಯ್ ಅಲ್ಲಿ ಒಂದ್ವರ್ಷ ತಿರುಗಾಟ ಮಾಡಿ, ಚಾವಡಿ ಥಿಯೇಟರ್ ಅಲ್ಲಿ ಒಂದ್ವರ್ಷ ತಿರುಗಾಟ ಮಾಡಿದ್ರು. ಬೆಂಗ್ಳೂರಿಗ್ ಬಂದು “ಆಕ್ಟ್ ರಿಯಾಕ್ಟ್” ಅಂತ ತಂಡ ಕಟ್ಟಿ, ನಾಟ್ಕಗಳನ್ನ ಮಾಡ್ತಾ ಇದಾರೆ. ‘ಪಡ್ಡಾಯಿ’ ಅನ್ನೋ ತುಳು ಸಿನಿಮಾದಲ್ಲಿ ನಟಿಸಿದ್ರು. ಈಗ ರಂಗ್ಬೂಮಿಯಲ್ದೆ, ಸಿನಿಮಾಗಳಲ್ಲಿ ನಟನೆ ಮಾಡ್ತಾ, ಧ್ವನಿ ಕಲಾವಿದೆಯಾಗೂ, ರಂಗಶಿಕ್ಷಕರಾಗೂ ಕೇಲ್ಸ ಮಾಡತಿದಾರೆ.

Bharath Dingri
ಭರತ್ ಡಿಂಗ್ರಿ ರಾಯಚೂರಲ್ಲಿರೋ ಆಶಾಪುರದವ್ರು. ಹುಟ್ದಾಗಿಂದ ಬೀದಿ ನಾಟ್ಕದ್ ಹಾಡ್ಗಳು, ಹೋರಾಟದ್ ಹಾಡ್ಗಳನ್ನ ಕೇಳ್ಕೊಂಡು ಬೆಳ್ದವ್ರು. ೫ ವರ್ಷ ಇರ್ವಾಗ್ಲೇ ತಮಟೆ ನುಡ್ಸಕ್ಕೆ ಶುರು ಮಾಡಿದ್ರು. ಇವ್ರಪ್ಪ ಬೀದಿ ನಾಟ್ಕದ ಕಲಾವಿದ್ರು. ಅವ್ರ ಜೊತೆ ಇವ್ರು ಬೇರೆ ಬೇರೆ ಊರಲ್ಲಿ ಬೀದಿ ನಾಟ್ಕಕ್ಕೆ ತಮ್ಟೆ ನುಡ್ಸ್ಕೊಂಡು ಇರ್ತಿದ್ರು. ಹಂಗೆ ಸುಮಾರು ಹೋರಾಟದ್ ಹಾಡ್ಗಳನ್ನ ಕಲಿಯೋದಲ್ದೇ, ದಲಿತ ಹೋರಾಟದ್ ಬಗ್ಗೆನೂ ತಿಳ್ಕೊಂಡ್ರು. SSLC ಪರೀಕ್ಷೆ ಆದ್ಮೇಲೆ, ಓದನ್ನ ಅರ್ಧಕ್ಕೆ ನಿಲ್ಸಿ ಜನಮನದಾಟ ಅನ್ನೋ ತಂಡದಲ್ಲಿ ಎರ್ಡುವರೆವರ್ಶ ಕಲಾವಿದರಾಗಿ ಕೆಲ್ಸ ಮಾಡಿದ್ರು. “ಅಲ್ಲಿ ಬೇರೆ ಬೇರೆ ಜನ್ರ ಜೊತೆ ಬೆರ್ತಿದ್ದು, ಅವ್ರ ಜೊತೆ ಒಡ್ನಾಡಿದ್ದು ಒಂದ್ ರೀತಿಯಲ್ಲಿ ಸಮಾಜದ್ ಬಗ್ಗೆ ಬೇರೆ ನೋಟ ಕೊಡ್ತು ನಂಗೆ” ಅಂತಾರೆ. ಜನಮನದಾಟ ಆದ್ಮೇಲೆ, ಧಾತ್ರಿ ರಂಗಸಂಸ್ಥೆಯಲ್ಲಿ ಕೆಲ್ಸ ಮಾಡಿ, ಒಂದ್ ವರ್ಷ ನೀನಾಸಂ ತಿರುಗಾಟ ಮಾಡಿದ್ರು. “ಈ ರಂಗ್ಬೂಮಿಯಲ್ಲಿ ಏನೋ ಇದೆ” ಅಂತನ್ಕೊಂಡು ನೀನಾಸಂ ಕೋರ್ಸ್ ಸೇರ್ಕೊಂಡ್ರು. ಕೋರ್ಸ್ ಮುಗ್ದಾದ್ಮೇಲೆ ಲಾಕ್ಡೌನಲ್ಲಿ ಏನಾದ್ರು ಹೊಸಾದ್ ಕಲಿಬೇಕು ಅಂತ ಬೆಂಗ್ಳೂರಲ್ಲಿ ಬದುಕು ಕಮ್ಯೂನಿಟಿ ಕಾಲೇಜಲ್ಲಿ (ಸಂವಾದ) ಜರ್ನಲಿಸಮ್ ಕೊರ್ಸ್ ಮಾಡಿದ್ರು. ಈಗ ಸಧ್ಯಕ್ಕೆ ಪೀಪಲ್ ಮೀಡಿಯದಲ್ಲಿ ವೀಡಿಯೋ ಎಡಿಟರ್ ಆಗಿ ಕೆಲ್ಸ ಮಾಡ್ತಿದಾರೆ. ಜೊತೆಗೆ ರಂಗ್ಬೂಮಿಯಲ್ಲೂ ಕೆಲ್ಸ ಮಾಡ್ತಿದಾರೆ.

Narsimharaju B K
ನರಸಿಂಹರಾಜು ಅವ್ರು ಸಿರಾ ತಾಲ್ಲೂಕಲ್ಲಿರೋ ಬೇವಿನಹಳ್ಳಿಯವ್ರು. ಇವ್ರ ಅಪ್ಪ ಅರೆವಾದ್ಯ ಬಡಿತಿದ್ರು. ಆದ್ರುನೂ ಇವ್ರಿಗೆ “ನೀನು ಅರೆ ಮುಟ್ಬ್ಯಾಡ. ನಾವೀಗಾಗ್ಲೇ ಹಾಳಾಗಿರೋದು ಸಾಕು.” ಅಂತ ಹೇಳ್ತಿದ್ರು. ಆದ್ರೂ ಅಪ್ಪ ಇಲ್ದಿದ್ದಾಗ ಕದ್ದು ಅರೆನ ಅಭ್ಯಾಸ ಮಾಡ್ತಿದ್ರು. ಯಾವ್ ಆಚರಣೆಯಲ್ಲಾದ್ರೂ ಸಾಮಾನ್ಯವಾಗಿ ಇಬ್ರು ಅರೆ ಬಡಿಯವ್ರು ಇರ್ಬೇಕು ಅನ್ನೋದು ವಾಡಿಕೆ. ದಸರಾ ಟೈಮಲ್ಲಿ ಇವ್ರಪ್ಪೌರ್ ಜೊತೆ ಅರೆ ಬಡಿಯಕ್ಕೆ ಯಾರೂ ಇರ್ಲಿಲ್ಲ. ಆಗ, ಇವ್ರೇ ಅರೆ ತಗಂಡು ಅವ್ರಪ್ಪೌರ್ ಜತೆ ಬಡುದ್ರು. ಆಗಿಂದ ಈಗಿನ್ವರ್ಗೂ ಅರೆನ ಬಿಟ್ಟಿಲ್ಲ. ತುಮಕೂರು ವಿಶ್ವವಿದ್ಯಾಲಯದಲ್ಲಿ ಬಿ.ಎಡ್. ಮಾಡೋವಾಗ ಕಾಲೇಜ್ ಫೀಸೆಲ್ಲಾ ಬೇರ್ಬೇರೆ ಜಾತ್ರೆ, ಮೆರ್ವಣಿಗೆ, ಊರಿನ್ ಹಬ್ಬ, ಮದ್ವೆ ಕಾರ್ಯಕ್ರಮಕ್ಕೆ ಹೋಗಿ ಅರೆ ಬಡ್ದು ದುಡ್ ಸಂಪಾದ್ನೆ ಮಾಡಿ ಕಟ್ತಿದ್ರು.
‘ಅರೆನ ಬಡಿತಾ ಬಡಿತಾ “ಈ ಅರೆಯಲ್ಲಿ ಉಳ್ದಿದ್ ವಾದ್ಯಗಳಿಗಿಂತ ಬೇರೆ ಏನೋ ಇದೆ. ಇದನ್ನ ಬೇರೆ ರೀತಿಯಲ್ಲಿ ಪ್ರಯೋಗ ಮಾಡ್ಬೇಕು” ಅಂತ ಅನ್ಸ್ತಿತ್ತು’ ಅಂತಾರೆ. ಬಿ.ಎಡ್ ಆದ್ಮೇಲೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಏ ಮಾಡಿದ್ರು. ಆಮೇಲೆ ಊರಿಗ್ ವಾಪಸ್ ಬಂದಾಗ ಗೋಮಾರದಹಳ್ಳಿ ಮಂಜುನಾಥ ಅನ್ನೋ ರಂಗಭೂಮಿ ಕಲಾವಿದ್ರು, ಇವ್ರು ಅರೆ ಬಡಿಯೋದ್ನ ಕೇಳ್ಸ್ಕೊಂಡು, ತಳಸಮುದಾಯಗಳ ವಾದ್ಯಗಳನ್ನ ರಂಗಭೂಮಿಗೆ ತರ್ಬೇಕು, ದಲಿತ ಸಂಸ್ಕೃತಿಯನ್ನ ಜನ್ರಿಗೆ ತೋರ್ಸ್ಬೇಕು ಅಂತ ಇವ್ರಿಗೆ ಹೇಳಿ, ಅದೇ ನೆಲದ ಶಿವೋತ್ಸವದಲ್ಲಿ “ಗಣೆಗೌರವ”ದ ಸಮಯದಲ್ಲಿ ಇವ್ರಿಗೆ ಅರೆ ಬಡಿಯಕ್ಕೆ ಹೇಳಿದ್ರು. ಅಲ್ಲಿಂದ ಅವ್ರಿಗೆ ದಲಿತ ಚಳುವಳಿ ಮತ್ತೆ ಹೋರಾಟದ ಹಾಡುಗಳು ಪರಿಚಯವಾದ್ವು. “ಅರೆ ಬಗ್ಗೆ ಪ್ರಜಾವಾಣಿಯಲ್ಲಿ ೩ ಪುಟದ್ ಲೇಖನ ಬಂದಾಗ, ಅರೆ ಮುಟ್ಬಾರದ್ದಲ್ಲ ಅಂತ ಅನ್ಸ್ತು. ಆದ್ರೂನೂ ಅರೆ ಬಡಿಯವ್ರನ್ನ ಜನ ಕೀಳಾಗಿ ನೋಡ್ತಾರೆ” ಅಂತಾರೆ. ಇವ್ರಿಗೆ ರಂಗ್ಬೂಮಿಯಲ್ಲಿ ಮೋದ್ಲ ಅನುಭವ ಆಗಿದ್ದು ಲಕ್ಷ್ಮಣ ಕೆ ಪಿ ಅವ್ರಿಂದ. ಸಿಂಗಾಪುರದಲ್ಲಿ “ಯಾಹೀ” ಅನ್ನೋ ಒಡಿಸ್ಸಿ ಕಾರ್ಯಕ್ರಮಕ್ಕೆ ಅರೆ ಬಡ್ದಿದ್ರು. “ಮೊದಲಬಾರಿಗೆ ರಂಗದ ಮೇಲೆ ಅರೆನ ಬಡ್ದಿದ್ದು ನಾನೇ” ಅಂತ ಹೇಳ್ತಾರೆ. ದಕ್ಲಕಥಾ ದೇವಿಕಾವ್ಯ ಇವ್ರ ಎರ್ಡ್ನೇ ನಾಟ್ಕ.

Ramika Chaitra
ರಮಿಕ ಬೆಂಗಳೂರಿನವ್ರು. ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ರು. ಓದೋದರ ಜೊತೆಗೆ ಬೇರೆ ಏನಾದ್ರೂ ಮಾಡ್ಬೇಕು ಅಂತ ಅನ್ಸಿ, ಅಪ್ಪಂಗೆ ‘ನಾನು ಆಕ್ಟಿಂಗ್ ಮಾಡ್ತಿನಿ’ ಅಂದ್ರು. ಅವ್ರು ಅದಕ್ಕೆ ಬೇಡ ಅಂದಿಲ್ಲ. ಪಿಯುಸಿ ಓದೋವಾಗ ಜತೆಜತೆಗೇ ಬಣ್ಣ ರಂಗಶಾಲೆಯಲ್ಲಿ ನಟನೆ ಅಭ್ಯಾಸ ಮಾಡಿದ್ರು. ಓದಿನ್ ಜತೆಗೇ ನಾಟ್ಕಗಳನ್ನೂ ಮಾಡಿದ್ರು. ಸೀರಿಯಲ್ ಗಳಲ್ಲೂ ಗೆಸ್ಟ್ ರೋಲ್ ಮಾಡ್ತಿದ್ರು. ದಯಾನಂದ ಸಾಗರ ಕಾಲೆಜಲ್ಲಿ ಬಿ.ಕಾಂ. ಮಾಡಿದ್ಮೇಲೆ ‘ಬಾನಾಡಿ’ ಮತ್ತೆ ‘ರಾಮಾರ್ಜುನ’ ಅನ್ನೋ ಸಿನಿಮಾಗಳಲ್ಲಿ ನಟನೆ ಮಾಡಿದಾರೆ. “ಕೋವಿಡ್ ಟೈಮಲ್ಲಿ ಅಪ್ಪೌರ ಬಿಸ್ನೆಸ್ ಕಡಿಮೆ ಆಗಿದ್ರಿಂದ ಮಾಸ್ಟರ್ಸ್ ಮಾಡಕ್ಕೆ ಆಗ್ಲಿಲ್ಲ. ಅದಿಕ್ಕೆ ಮಕ್ಳಿಗೆ ಟ್ಯೂಶನ್ ತೊಗೊಳಕ್ಕೆ ಶುರು ಮಾಡಿ ದುಡ್ ಸಂಪಾದ್ನೆ ಮಾಡ್ದೆ. ಆಮೇಲೆ ಇನ್ಫೋಸಿಸ್ ಅಲ್ಲಿ ಕೆಲ್ಸ ಸಿಕ್ತು.” ಅಂತಾರೆ. ಈಗ ಸಿನಿಮಾ, ಮಾಡೆಲಿಂಗ್ ಮತ್ತೆ ರಂಗಭೂಮಿಯನ್ನ ವೃತ್ತಿಯಾಗಿ ತೊಗೊಂಡು ಕೆಲ್ಸ ಮಾಡ್ತಿದಾರೆ.

Santhosh Dindagur
ಸಂತೋಷ್ ದಿಂಡಗೂರು, ಚನ್ನರಾಯಪಟ್ಟಣದದಿಂಡಗೂರಿನವ್ರು. ನೀನಾಸಂನಲ್ಲಿ ರಂಗಭೂಮಿಯಲ್ಲಿಡಿಪ್ಲೋಮಾ ಅದ್ಮೇಲೆ, ಮೈಸೂರಲ್ಲಿರೊ ಗಂಗೂಬಾಯ್ಹಾನಗಲ್ ಯೂನಿವರ್ಸಿಟಿಯಲ್ಲಿ ಡ್ರಾಮಾದಲ್ಲಿಮಾಸ್ಟರ್ಸ್ ಮಾಡಿದ್ರು. ಅಮೇಲೆ, ಇವ್ರು ಬಾಬಾಸಾಹೇಬ್ ಅಂಬೇಡ್ಕರ್ ಅವ್ರಿಂದ ಇನ್ಸ್ಪಯರ್ ಆಗಿ ಸುತ್ತ ಮುತ್ತಿನ ಊರಲ್ಲಿ ಸುಮಾರು ಬುಡಕಟ್ಟು ಸಮುದಾಯದ ಜನ್ರಿಗೆ ಮತ್ತೆ ಮಕ್ಳಿಗೆ ದಲಿತ ಚಿಂತನೆ, ಅಸ್ಪೃಶ್ಯತೆಗಳ ಬಗ್ಗೆ ಹೇಳ್ತಾ ಹೇಳ್ತಾ, ಪಿ ಲಂಕೇಶ್, ದೇವನೂರ ಮಹಾದೇವ ಅವ್ರದ್ದೆಲ್ಲಾ ಕತೆಗಳನ್ನ, ನಾಟ್ಕಗಳನ್ನ, ಕವಿತೆಗಳನ್ನ ಓದ್ತಾ, ಜನ್ರಿಗೆ ಅರಿವು ಮೂಡ್ಸೋ ಪ್ರಯತ್ನ ಪಟ್ಟಿದಾರೆ. ದಿಂಡಗೂರಲ್ಲೇ “ನೆಲದನಿ” ಅನ್ನೊ ತಂಡ ಕಟ್ಟಿ, ಈಥರ ಸಮಾಜದ್ ಯೋಚ್ನೆಗಳ ಬಗ್ಗೆ ಜನ್ರಿಗೆ ಗೋತ್ತಾಗ್ಲಿ ಅಂತ ನಾಟ್ಕಗಳ್ನ, ಕಮ್ಮಟಗಳ್ನ ಮಾಡಿದಾರೆ.ಇವ್ರು ತಮಟೆ ಕೂಡಾ ನುಡ್ಸ್ತಾರೆ. ೫ ವರ್ಷ ಇದ್ದಾಗ್ಲೆ ನುಡ್ಸಕ್ಕೆ ಶುರು ಮಾಡಿದ್ರು. ದಲಿತ ಚಳುವಳಿಗಳಿಗೆ ಹೋಗ್ತಿದ್ರು. ಸ್ಕೂಲಲ್ಲಿ ಇವ್ರಿಗೆ ತಮಟೆ ನುಡ್ಸಕ್ಕೆ ಪ್ರೋತ್ಸಾಹ ಸಿಗ್ತಿರ್ಲಿಲ್ಲ. ಆದ್ರೂ ಇವ್ರು ಅದನ್ನ ಬಿಡ್ಲಿಲ್ಲ. ದಿಂಡಗೂರಲ್ಲಿ ದೇವಸ್ಥಾನಗಳ ಒಳಗೆ ದಲಿತ್ರಿಗೆ ಪ್ರವೇಶ ಮಾಡಕ್ಕೆ ಬಿಡ್ಲಿಲ್ಲ ಅಂತ ದಿಂಡಗೂರಿನ ದಲಿತ ಜನ್ರನ್ನ ಸೇರ್ಸಿ ಚಳುವಳಿ ಮಾಡಿ ಪ್ರವೇಶ ಸಿಗೋಹಂಗೆ ಮಾಡಿದ್ರು. ಅಲ್ಲಿನ ಜನ್ರನ್ನೇ ಸೇರ್ಸಿ “ಕೇರಿ ಹಾಡು” ಅಂತ ನಾಟ್ಕ ಕಟ್ಟಿ, ಪ್ರದರ್ಶನ ಮಾಡಿದ್ರು. “ವಿ ದ ಪೀಪಲ್ ಆಫ್ ಇಂಡಿಯಾ” ಅನ್ನೋ ನಾಟ್ಕದಲ್ಲಿ ಅಂಬೇಡ್ಕರ್ ಅವ್ರ ಸುಮಾರು ಲೇಖನಗಳ್ನ ಓದಿ, ಅವ್ರೇ ಅಂಬೇಡ್ಕರ್ ಪಾತ್ರ ಕೂಡ ಮಾಡಿದ್ರು. ಈಗ ಸಧ್ಯಕ್ಕೆ ಪೂರ್ಣ ಲರ್ನಿಂಗ ಸೆಂಟರ್ ಅಲ್ಲಿ ಥಿಯೇಟರ್ ಟೀಚರ್ ಆಗಿ ಕೆಲ್ಸ ಮಾಡೋದಲ್ದೇ, ಚನ್ನರಾಯಪಟ್ಟಣ ತಲ್ಲೂಕ್ನ ಜನಪದ ಪರಿಷತ್ ನ ಅಧ್ಯಕ್ಷರೂ ಆಗಿದಾರೆ.