- This event is over. However, time travel possible through our Audio & Video! See upcoming events
ಗಾಯಗಳು | Wounds
A Theatrical Collage on the Futility of War
Artistes
Kannada | 105 Minutes
ಇಡಿಯ ಜಗತ್ತು ಯುದ್ಧೋನ್ಮಾದದಿಂದ ನರಳುತ್ತಿದೆ. ರಾಜಕಾರಣಿಗಳ, ಧರ್ಮಗುರುಗಳ, ಮಾರುಕಟ್ಟೆಯ ದಲ್ಲಾಳಿಗಳ ಕೈಗಳು ಲೇಡಿಮ್ಯಾಕ್ ಬೆತ್ ಳ ಕೈಗಳಂತೆ ಎಷ್ಟು ತೊಳೆದರೂ ತೊಡೆಯಲಾಗದ ರಕ್ತದ ಕಲೆಗಳಿಂದ ತೊಯ್ದಿದೆ. ಪುರುಷಾಹಂಕಾರದ ಈ ಗಾಯಗಳು ಮೇಧಿನಿ ಮತ್ತು ಮಾನಿನಿಯರ ಕರುಳ ಕತ್ತರಿಸುತ್ತಿದೆ. ಮನುಷ್ಯರನ್ನೇ ವಿಭಜಿಸುವ ಮನುಷ್ಯತ್ವವನ್ನೇ ಅಣಕಿಸುವ ವರ್ಣಭೇದವಂತೂ ಇನ್ನೂ ಕ್ರೂರ. ಇವು ನಮಗೆ ನಾವೇ ಮಾಡಿಕೊಂಡ ಗಾಯಗಳು. ಇವುಗಳಿಗೆ ಮುಖಾಮುಖಿಯಾಗದೇ ನಮಗೆ ಬಿಡುಗಡೆಯಿಲ್ಲ. ಅಂಥ ಅಸಂಖ್ಯಾತ ಗಾಯಗಳ ಕತೆಗಳಿವೆ ಈ ನೆಲದ ತುಂಬ. ಅವುಗಳಿಂದ ಯುದ್ಧ ಹಾಗೂ ಕೋಮುಹಿಂಸೆಯ ಕಥನಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ರಂಗಚಿತ್ರವಾಗಿಸುತ್ತಿದ್ದೇವೆ ಮತ್ತು ಅವು ಸಹಜವಾಗಿಯೇ ಮಹಿಳೆಯರ ನೋವಿನ ಸೊಲ್ಲುಗಳಾಗಿ ಪರಿಣಮಿಸಿವೆ. ನಿಜ. ನಮ್ಮಿಂದ ಎಣಿಸಲಾದಷ್ಟೇ ಗಾಯದ ಕತೆಗಳಿವೆ ಇಲ್ಲಿ. ಎಣಿಸಲಾಗದ ಅಸಂಖ್ಯ ಕತೆಗಳಬಗೆಗೂ ಸಹ ಅನುಭೂತಿ, ಸಂತಾಪಗಳಿವೆ.
ರಂಗಭೂಮಿಯಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳಲೆತ್ನಿಸುತ್ತಿರುವ ರಂಗವಿದ್ಯಾರ್ಥಗಳ ಕಲಿಕಾಪಠ್ಯವಾಗಿಯೂ ಇದನ್ನು ಪ್ರಯೋಗಿಸಲಾಗುತ್ತಿದೆ.
ಇಲ್ಲಿ ಕತೆಗಳಿವೆ; ಕವನಗಳಿವೆ;ನಾಟಕದ ಆಯ್ದಭಾಗಗಳಿವೆ; ಕಾದಂಬರಿಯ ಪುಟಗಳಿವೆ.
ಈ ಪ್ರಯೋಗಗಳಿಗಾಗಿ ನಾವು ಆಯ್ದುಕೊಂಡ ಪಠ್ಯಗಳು ಹೀಗಿವೆ.
ವಾರ್ – ಪಿರಾಂಡೆಲೊ. ರಂಗರೂಪ: ಎಂ.ಜಿ.ಹೆಗಡೆ
ಸ್ಮಶಾನಕುರುಕ್ಷೇತ್ರಂ- ಕುವೆಂಪು
ಶರೀಫನ್ – ಮಂಟೋ.- ಅನು: ಹಸನ್ ನಯಿಂ ಸುರಕೋಡ್
ಅಜ್ಞಾತನ ಆತ್ಮಚರಿತ್ರೆ- ಕೃಷ್ಣಮೂರ್ತಿ ಹನೂರು
ವಿಸ್ಲಾವಾ ಜಿಂಬೋರ್ಸ್ಕ್- ಅನು: ಎಚ್.ಎಸ್.ರಾಘವೇಂದ್ರ ರಾವ್
ಬ್ರೆಖ್ಟ್- ಅನು: ಶಾ.ಬಾಲುರಾವ್
ಕ್ವಾಸಿರ್ ಹಸನ್: ಅನು.ಸುಧಾ ಆಡುಕಳ
ದೇಹದೇಶ- ಅನು: ವಿಕ್ರಂ ವಿಸಾಜಿ, ಪ್ರತಿಭಾನಂದಕುಮಾರ
ಅವರಿಗೆ ಬೇಕಾಗಿದೆ ಯುದ್ಧ; ಅದನ್ನು ಬರೆದವನಾಗಲೇ ಹತನಾಗಿದ್ದಾನೆ.- ಬ್ರೆಖ್ಟ್
ನಿರ್ದಿಗಂತದ ಬಗ್ಗೆ:
ಮೈಸೂರಿಗೆ ಸಮೀಪದಲ್ಲಿರುವ ಶ್ರೀರಂಗಪಟ್ಟಣ ಸಮೀಪದ ಕೆ ಶೆಟ್ಟಹಳ್ಳಿಯಲ್ಲಿ ಶಾಂತವಾಗಿ ಹರಿಯುವ ಲೋಕಪಾವನಿ ನದಿಯ ಪಕ್ಕದಲ್ಲಿರುವ ನಿರ್ದಿಗಂತ – ಒಂದು ವಿಭಿನ್ನ ರೀತಿಯ ರಂಗ ಸಾಧ್ಯತೆಗಳನ್ನು ಅನ್ವೇಷಿಸುವ ಸ್ಥಳ. ಇಲ್ಲಿ ಹೊಸ ಬಗೆಯ ರಂಗಭೂಮಿಯನ್ನು ಕಟ್ಟಲು ಬೇಕಾದ ಎಲ್ಲಾ ಬಗೆಯ ಸಂಪನ್ಮೂಲಗಳು, ಸೌಲಭ್ಯಗಳ ಜೊತೆಗೆ ಪ್ರಶಾಂತವಾದ ಮತ್ತು ಸ್ಪೂರ್ತಿದಾಯಕ ನೈಸರ್ಗಿಕ ವಾತಾವರಣವಿದೆ. ರಮಣೀಯ ನೋಟಗಳು, ಹರಿಯುವ ನೀರಿನ ಜುಳು ಜುಳು ನಾದ ಮತ್ತು ಇಲ್ಲಿನ ತಾಜಾ ಗಾಳಿಯು ಸೃಜನಶೀಲತೆಯ ಉತ್ತುಂಗವನ್ನು ಮುಟ್ಟುವ ವಾತಾವರಣವನ್ನು ಸೃಷ್ಟಿಸಿದೆ. ಇದು ರಂಗನತಿಟ್ಟಿನ ಪಕ್ಕದಲ್ಲಿರುವ ‘ರಂಗದ ತಿಟ್ಟು’. ಇದು ಬಹುಭಾಷಾ ನಟ ಪ್ರಕಾಶ್ ರೈ ಅವರ ಕನಸಿನ ಕೂಸು.
About the play:
The world is in the throes of waging wars. As a society, we have blood on our hands. The wounds of masculinity are gutting women to pain and death. Even more cruel is racism, which mocks humanity and creates a gulf among people. These are self-inflicted wounds. We won’t be absolved from them unless we face them.
There are countless narratives of such deep gashes. We have selected some stories, poems, and plays of war and communal violence and woven them into a string of a play. This work is also being used as a text for theatre students who’d like to pursue this form.
The play is a collage on why war isn’t necessary for the world.
On the wall in chalk it is written: ‘‘They want war’’. He who wrote it has already fallen.
– Bertolt Brecht.
Text:
War – Pirandello. Stage adaptation: M G Hegde | Smashana Kurukshetram- Kuvempu | Sharifan – Manto – Translation: Hasan Nayeem Surakod | Agnatanobbana Atmacharitre – Krishnamurthy Hanur
Wislawa Szymborska translation: H S Raghavendra Rao | Brecht – Translation: Sha. Balurao
Quasir Hasan Translation: Sudha Adukala
works of Saahil, Kaifi Azmi, Jayantha Kaikini, Pratibha Nandakumar
Credits:
Concept and Direction: Dr. Shripad Bhat
Direction Support: Amith Reddy & Anusha Veeresh | Art : Khaju Guttala
Music: Anush Shetty, Munna & Sannutha, Mysore
Performers:
Akshatha Koppa | Archana Suresh Tenginamane | Lavanya | Veena Jayashankar | Thilak Chakravarthi KS
Nagendra Shrinivas | Vijay Shivamogga | Abhishek Acharya | Anilkumar | Puneeth Kumar C | Sumanth Channarayapattana | Siddappa Bijapur | Shridhara Godachi | Yogeesh Kunaji
Tour coordinator: Ganesh M. Bheemanakone
With thanks to:
Late Mohan Sona and Rathabeedi Geleyaru Udupi
Staff of Nirdigantha
About Nirdigantha:
Nirdigantha – the word in itself means transcending horizons in Kannada. This is a theatre incubator space carved out of nature to enable the possibilities of theatre to bloom to its best hues and textures. Nirdigantha is located by the serene banks of the river Lokapavani at K Shettihalli close to Srirangapattana.
It is a haven for theatre artists, providing them with a supportive environment, resources, aesthetics, convenient facilities, and a vibrant community to fortify the growth of empowering theatre experiences. It serves as a fertile ground for artistic exploration, innovation, and the creation of compelling and impactful theatrical experiences. This is the dream child of multilingual actor Prakash Raj.
Artistes

Sripada Bhat
Dr. Sripada Bhat hails from Dhareshwar, Uttarkannada district. He has directed more than 150 plays while being involved in many collective organisations of the country. He has received many awards in education and theatre. A collection of his plays, Bahubhumike, Acting Manual, Folk Theater of Uttara Kannada, Yakshagana, Sahitya and Natakprachnya have been published. The plays directed by him have been performed not only in Karnataka but also in Mumbai, Hyderabad and Delhi. He has conducted hundreds of theatre workshops for teachers, students, workers and farmers in most parts of Karnataka. The dramas he produced in the village of Seshagiri along with farmers and labourers are a testimony of his work in rural theatre.

Nirdigantha
Nirdigantha – the word in itself means transcending horizons in Kannada. This is a theatre incubator space carved out of nature to enable the possibilities of theatre to bloom to its best hues and textures. Nirdigantha is located by the serene banks of the river Lokapavani at K Shettihalli close to Srirangapattana.
It is a haven for theatre artists, providing them with a supportive environment, resources, aesthetics, convenient facilities, and a vibrant community to fortify the growth of empowering theatre experiences. It serves as a fertile ground for artistic exploration, innovation, and the creation of compelling and impactful theatrical experiences. This is the dream child of multilingual actor Prakash Raj.