Loading Events
  • This event is over. However, time travel possible through our Audio & Video! See upcoming events

Artistes

Kannada | 70 minutes | Ages 8+

ಮೂಲತಃ ದಕ್ಷಿಣ ಆಫ್ರಿಕಾ ನೆಲದ ಕತೆಯಿದು. ಆದರೆ ಎಲ್ಲ ಶ್ರೇಷ್ಠ ಕೃತಿಗಿರುವಂತೆಯೇ ಈ ಕತೆಗೂ ದೇಶ, ಕಾಲ ಮೀರಿದ ಪ್ರಸ್ತುತಿಯ ಅಪಾರ ಸಾಧ್ಯತೆ ಇದೆ. ಅಂತಹ ಪ್ರಯತ್ನವಿದು. ಕಣಿವೆಯ ಹಾಡು ಕಣಿವೆ ದಾಟುವ, ಕಣಿವೆಯೊಳಗಿನ ಬದುಕು ತನ್ನ ಹಾಡು ಮುಂದುವರಿಸುವ ಸಂಘರ್ಷದ ಕತೆ ಇದು.

ತಮ್ಮದೇ ನೆಲದಲ್ಲಿ ಪರಕೀಯರಾಗುತ್ತ, ಗುಲಾಮರಾಗುತ್ತ ಹೋಗುತ್ತಿರುವ ಮೂಲನಿವಾಸಿಗಳ ಬದುಕನ್ನೂ, ಪುಟ್ಟ ಬೀಜಗಳು ದೊಡ್ಡದಾಗಿ ಕಾಯಿ ಬಿಡುವ ನೆಲದ ಪವಾಡಗಳನ್ನೂ, ಸಾಕಷ್ಟು ಅಪಾಯಗಳಿದ್ದರೂ ಬಿಡುಗಡೆಯ ಕನಸನ್ನು ಬಿತ್ತುವ ನಗರಗಳನ್ನೂ ಒಟ್ಟಾಗಿ ಇಡುವ ನಾಟಕವು ಈ ಎಲ್ಲಬಗೆಯ ಚರ್ಚೆಗಳನ್ನೂ ಸಮತೂಕದಲ್ಲಿರಿಸುತ್ತಿದೆ ಬದುಕನ್ನು ಕಪ್ಪು ಬಿಳುಪು ಆಗಿ ನೋಡದಂತೆ, ತಾತ್ವಿಕವಾಗಿ ಬದುಕನ್ನು ನೋಡುವಂತೆ ನಮ್ಮನ್ನು ಸಿದ್ಧಗೊಳಿಸುತ್ತದೆ. ಪ್ರಸ್ತುತ ನಾಟಕದಲ್ಲಿ ನಾಟಕಕಾರನ ಪಾತ್ರ ಹಾಗೂ ಅಜ್ಜ ಬಕ್ಸ್ನ ಪಾತ್ರ ಎರಡನ್ನೂ ಒಬ್ಬರೇ ನಿರ್ವಹಿಸಬೇಕು ಎಂದು ಒತ್ತಾಯಿಸುವ ಲೇಖಕ, ಈ ಮೂಲಕ ಯಾವುದೋ ಒಂದು ವಾದದ ಕಡೆ, ಭಾವುಕವಾಗಿ ಒಂದೆಡೆ ವಾಲದೇ ಇರುವಂತೆ ನಮ್ಮನ್ನು ನಿರ್ದೇಶಿಸುತ್ತಾನೆ.

ಕಣಿವೆಯ ಹಾಡು ಹೀಗೆ… ನಮ್ಮ ಎದೆಗಳಲ್ಲಿ ಮಾತ್ರವಲ್ಲ, ಬುದ್ಧಿಯಲ್ಲೂ ರಿಂಗುಣಿಸುವುದು ಹೀಗೆ:

ದಕ್ಷಿಣ ಆಫ್ರಿಕದ ಇತಿಹಾಸ ಮತ್ತು ವರ್ತಮಾನದ ಬಗ್ಗೆ ನನ್ನಲ್ಲಿ ಅಸಾಧ್ಯ  ನೋವಿದೆ, ಸಿಟ್ಟಿದೆ. ಆದರೆ ನನ್ನ ಬರವಣಿಗೆಯ ಶಕ್ತಿ ಪ್ರೀತಿ ಮಾತ್ರ. ನಾನು ನನಗಿರುವ ಸಿಟ್ಟಿನ ಕಾರಣಗಳನ್ನು ಪ್ರೀತಿಗೆ ಹೇಳಿದ್ದೇನೆ. ಅದು ಕೃತಿ ರಚಿಸುತ್ತದೆ – ಅತೋಲ್ ಫ್ಯೂಗಾರ್ಡ್.

ರಂಗ ಸಾಂಗತ್ಯ:
ರಚನೆ: ಅತೊಲ್ ಫ್ಯೂಗಾರ್ಡ್
ಕನ್ನಡಕ್ಕೆ: ಡಾ. ಮೀರಾ ಮೂರ್ತಿ
ಸಂಗೀತ: ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು
ಸಂಗೀತ ನಿರ್ವಹಣೆ: ಚೇತನ್ ಸಿಂಗಾನಲ್ಲೂರು
ಬೆಳಕಿನ ನಿರ್ವಹಣೆ: ವಿನಯ್ ಗಣೇಶ್ ಮೈಸೂರು
ನೇಪಥ್ಯ ಸಹಾಯ: ಇಂದೂಧರ ಎಸ್. ರಾಜ್ ರಾಮನಗರ/ ಶಶಿ ಕುಮಾರ್ ಮೈಸೂರು
ನಟನ ನಿರ್ಮಾತೃ: ಮಂಡ್ಯ ರಮೇಶ್
ಅಭಿನಯ: ಮೇಘ ಸಮೀರ ಮತ್ತು ದಿಶಾ ರಮೇಶ್
ವಿನ್ಯಾಸ, ನಿರ್ದೇಶನ: ಡಾ. ಶ್ರೀಪಾದ ಭಟ್

This is a story of South Africa. But like all the great works, this play has a possibility. of presentation beyond space and time. This production is such an attempt to transpose beyond all the boundaries. The ‘song’ of the valley crosses the valley, the life inside the valley continues its song. the play unveils this conflict.

The play showcases and tries balance the lives of the aborigines who are alienated and enslaved in their own land, the miracles of the land where small seeds grow into big fruit, and the cities that sow the dream of liberation despite the many dangers. The play makes us not to see life in black and white, but to see it through logical and rational vision. Here, the playwright insists that the character of playwright and of Grandpa Bucks should be played by the same actor, thereby directing us not to emotionally lean to any one side of the conflict.

This is how the song of the valley resounds; not only in our hearts, but also in our minds:
I am incredibly hurt and angry about South Africa’s history and present. But love is the only energy I’ve ever used as a writer. I’ve never written out of anger, although anger has informed love. – Athol Fugard.

Cast and Crew:
Playwright: Athol Fugard
Translation: Dr. Meera Moorthy
Music: Anush Shetty and Munna Mysore
Music Accompaniment: Chethan Singanallur
Lighting: Vinay Ganesh, Mysore
Painting: H. K. Vishwanath
Performers: Megha Sameer and Disha Ramesh
Design and direction: Dr. Shripad Bhat
Produced by Natana Mysore

 

Supported by:

Artistes

Athol Fugard

Playwright

ಅತೋಲ್ ಫ್ಯುಗಾರ್ಡ್ ಇಪ್ಪತ್ತನೆ ಶತಮಾನದ ಅತ್ಯಂತ ಪ್ರಭಾವಿ ನಾಟಕಕಾರರಲ್ಲಿ ಒಬ್ಬರು. ದಕ್ಷಿಣ ಆಫ್ರಿಕಾದ ಅಸ್ಮಿತೆಯ ಕಾರಣಕ್ಕಾಗಿ ಇವರ ನಾಟಕಗಳು ಜಗತ್ತಿನಾದ್ಯಂತ ಪರಿಚಿತ. ಇವರ ನಾಟಕಗಳೆಲ್ಲ ರಂಗ ಕಾರ್ಯಾಗಾರಗಳಲ್ಲಿ ಮೂಡಿಬಂದAಥವು. ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ನಾಟಕ ರಚನೆ, ನಟನೆ ಮತ್ತು ನಿರ್ದೇಶನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಫ್ಯೂಗಾರ್ಡ್ ಮೂವತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ಅವರ ಅನೇಕ ನಾಟಕಗಳು ಮತ್ತು ಕಾದಂಬರಿಗಳು ಚಲನಚಿತ್ರವಾಗಿಯೂ ತೆರೆಕಂಡಿದೆ. ‘ದಿ ಐಲ್ಯಾಂಡ್’, ‘ದಿ ರೋಡ್ ಟು ಮೆಕ್ಕಾ’, ‘ಮೈ ಚಿಲ್ಡçನ್ ಮೈ ಆಫ್ರಿಕಾ’, ‘ವ್ಯಾಲಿ ಸಾಂಗ್’ ಮುಂತಾದವು ಇವರ ಪ್ರಸಿದ್ಧ ನಾಟಕಗಳು. ಜಾಗತೀಕ ಮಟ್ಟದಲ್ಲಿ ಅನೇಕ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳಿಗೆ ಇವರು ಭಾಜನರು.

Athol Fugard is a renowned South African playwright, novelist, and director whose works critically investigate South African history and apartheid. Time Magazine hailed him as “the greatest active playwright in the English-speaking world” in 1985. His acclaimed plays include The Blood Knot, Boesman and Lena, Sizwe Banzi is Dead, The Island, The Road to Mecca, and My Children! My Africa!, offering unflinching depictions of apartheid’s cruelties.

Fugard organised a multiracial theatre and the Serpent Players, a black acting troupe. An active anti-apartheid proponent, he often had plays produced outside South Africa to avoid censorship. After apartheid’s end, plays like Valley Song explored post-apartheid issues. Fugard’s novel Tsotsi was adapted into an Academy Award-winning film. Honoured with the Order of Ikhamanga, Tony Award for lifetime achievement, and named an Honorary Fellow of the Royal Society of Literature, Fugard’s influential body of work cements his legacy as one of South Africa’s most important literary voices.

Meera Moorthy

Translator

ಡಾ. ಮೀರಾ ಮೂರ್ತಿ ಕನ್ನಡ ರಂಗಭೂಮಿಯ ಪರಿಚಿತ ಹೆಸರು. ಮೈಸೂರು ವಿಶ್ವವಿದ್ಯಾನಿಲಯದ ಲಲಿತಕಲಾ ಕಾಲೇಜಿನ ನಾಟಕಶಾಸ್ತç ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಮೀರಾ ಮೂರ್ತಿ ೩೮ ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಇವರು ಕನ್ನಡದ ವಿಶಿಷ್ಟ ನಾಟಕಕಾರ ಸಂಸರ ನಾಟಕಗಳ ಮೇಲೆ ಡಾಕ್ಟರೇಟ್ ಪದವಿಯನ್ನು ಪಡೆದಿರುವುದಲ್ಲದೆ, ಗಿರೀಶ್ ಕಾರ್ನಾಡರ ಬದುಕು ಬರಹದ ಕುರಿತು ಗ್ರಂಥವನ್ನೂ ರಚಿಸಿದ್ದಾರೆ. ನಟನೆ, ನಾಟಕ ನಿರ್ದೇಶನ, ರಂಗ ಕಾರ್ಯಾಗಾರ, ನಾಟಕ ರಚನಾ ಶಿಬಿರ ಹೀಗೆ ರಂಗಭೂಮಿಯ ಹಲವು ಆಯಾಮಗಳಲ್ಲಿ ತಜ್ಞರಿವರು

Dr Meera Moorthy is a well-known personality in Kannada modern theatre. She possesses expertise in the fields of acting, playwriting, and direction. For 38 years, she served as a professor in the Department of Theatre at the University of Mysore. Her research focused on the plays of Samsa, the most unique Kannada playwright. Additionally, she has published a book exploring the life and achievements of the renowned Girish Karnad.

Sripad Bhat

Director

ಡಾ. ಶ್ರೀಪಾದ ಭಟ್ ಉತ್ತರ ಕನ್ನಡ ಜಿಲ್ಲೆಯ ಧಾರೇಶ್ವರದವರು. ಉತ್ತರ ಕನ್ನಡದ ರಂಗಭೂಮಿಯ ಕುರಿತು ಮೌಲಿಕವಾದ ಸಂಶೋಧನೆ ಮಾಡಿದ್ದಾರೆ. ಸಾಹಿತ್ಯ, ಶಿಕ್ಷಣ, ರಂಗಭೂಮಿ, ಜನಪದ, ಅಧ್ಯಯನ, ಸಂಗೀತ, ಸಂಘಟನೆ… ಹೀಗೆ ಹಲವು ರಂಗಗಳ ಅರಿವು ಇವರಿಗಿದೆ. ಇವರ ವ್ಯಕ್ತಿತ್ವ ಬಹುಮುಖಿಯಾದದ್ದು. ರಂಗಭೂಮಿಯ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಎರಡೂ ರಂಗಗಳಲ್ಲಿ ಸಿದ್ಧಹಸ್ತರು. ಬಾಲ್ಯದಲ್ಲಿ ತಂದೆಯ ಸಂಸ್ಕಾರದಿಂದ ಒದಗಿದ ಯಕ್ಷಗಾನ ರಂಗಭೂಮಿಯ ಪ್ರಜ್ಞೆ, ಸಾಹಿತ್ಯ ಅಧ್ಯಯನದಿಂದೊದಗಿದ ಭೂಮಿ ಪ್ರಜ್ಞೆ, ಕಾವ್ಯ, ¸ ಸಂಗೀತ, ನೃತ್ಯ ಸಾಹಚರ್ಯಗಳಿಂದ ಒದಗಿದ ಸೌಂದರ್ಯ ಪ್ರಜ್ಞೆ, ಹಲವು ಸಾಮಾಜಿಕ ಚಳುವಳಿಗಳ ಸಂಪರ್ಕದಿಂದೊದಗಿದ ಸಾಮಾಜಿಕ ಬದ್ಧತೆ ಇವೆಲ್ಲ ಹುರಿಗೊಂಡು ಶ್ರೀಪಾದ ಭಟ್ಟರ ರಂಗಭೂಮಿ ಮೈದಾಳುತ್ತದೆ. ಹೀಗಾಗಿ ಇವರು ಶಿಕ್ಷಣವನ್ನು ರಂಗಭೂಮಿಯ ಜತೆಗೆ ¸ ಸುಲಭವಾಗಿ ಸಮಾಸಗೊಳಿಸಿದ್ದಾರೆ. ಮಕ್ಕಳ ರಂಗಭೂಮಿಯಲ್ಲಿಯೂ ಅಪರೂಪದ ಪ್ರಯೋಗ ಮಾಡಿದ್ದಾರೆ. ಜಾನಪದ ಮತ್ತು ಆಧುನಿಕ ರಂಗಭೂಮಿಯ ಅನ್ವಯದಲ್ಲಿ ರಸಗಂಧಿಯಾದ ರಂಗರೂಪ ಕಟ್ಟಿದ್ದಾರೆ. ಪ್ರಖರವಾದ ರಾಜಕೀಯ ಪ್ರಜ್ಞೆಯ ಕಲಾತ್ಮಕ ಬೀದಿ ನಾಟಕ ನಿರ್ದೇಶಿಸಿದ್ದಾರೆ. ನಾಡಿನ ಹಲವು ಸಾಮೂಹಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡೇ ಇವರು ಸುಮಾರು ೧೫೦ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಶಿಕ್ಷಣ ಹಾಗೂ ರಂಗಭೂಮಿಯ ಹಲವು ಪ್ರಶಸ್ತಿಗಳು ಇವರನ್ನು ಪುರಸ್ಕರಿಸಿವೆ.

Dr Shripad Bhat hails from the small village of Dhareshwara in Uttara Kannada. He has conducted valuable research on the theatre of the Uttara Kannada district. His work is deeply informed by his profound interest and engagement in fields such as literature, education, theatre, folklore, and music. Dr Shripad is well-versed in both the theoretical and practical aspects of the theatre arts.

Shripad Bhat’s theatre draws inspiration from the essence of Yakshagana, a theatre form he was exposed to by his father, the sense of earthiness gathered through his study of literature, the aesthetic sensibilities gained from his association with poetry, music, and dance, and the social commitment accumulated through his connection with various social movements. Thus, he has seamlessly reconciled education with theatre. He has conducted numerous experiments in children’s theatre as well. Bhat has been associated with many organisations across the state and has directed more than 150 theatre performances. He has been honoured with numerous prestigious awards related to theatre and education.

Megha Sameera

Actor

ಮೇಘ ಸಮೀರ ಇಂಗ್ಲೀಷ್ ಎಂ. ಎ ಮತ್ತು ರಂಗಭೂಮಿ ಎಂ.ಎ. ಪದವೀಧರ. ಯು.ಜಿ.ಸಿ. ನಡೆಸುವ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ರಂಗಭೂಮಿ ವಿಷಯದಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆ. ಕಳೆದ ೨೮ ವರ್ಷಗಳಿಂದ ರಂಗಭೂಮಿಯ ನಂಟು. ಎಳವೆಯಿಂದಲೇ ರಂಗದಲ್ಲಿ ತೊಡಗಿಕೊಂಡು ರಂಗಭೂಮಿಯ ಎಲ್ಲಾ ಆಯಾಮಗಳಿಗೂ ಸಲ್ಲುವ ಮೇಘ ಸಮೀರ ಅನೇಕ ನಾಟಕಗಳಲ್ಲಿ ನಟನಾಗಿ, ಸಂಗೀತಗಾರನಾಗಿ, ವಿನ್ಯಾಸಕಾರನಾಗಿ, ತಂತ್ರಜ್ಞನಾಗಿ, ಪ್ರಸಾಧನಕಾರನಾಗಿ, ಬೆಳಕಿನ ವಿನ್ಯಾಸಕಾರನಾಗಿ, ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ವಯಸ್ಕರಿಗೆ ಮತ್ತು ಮಕ್ಕಳಿಗೆ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಹಲವಾರು ರಂಗ ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಪ್ರಸ್ತುತ ನಟನದ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Megha Sameer has completed his postgraduate studies in Theatre as well as English Literature. He has been involved in theatre and art since childhood and has been working in theatre for the past 27 years. He is well-versed in every aspect of theatre, including acting, music, make-up, stage design, costume, and lighting, and has also directed numerous plays for adults and children. Megha Sameer has trained many theatre enthusiasts and conducted several theatre and acting workshops in different places. He is currently working as the principal of Natana Rangashaale.

 

Disha Ramesh

Actor

ದಿಶಾ ರಮೇಶ್ ರಂಗಭೂಮಿ ಎಂ.ಎ. ಪದವೀಧರೆ. ಬಾಲ್ಯದಿಂದಲೇ ರಂಗಭೂಮಿಯ ನಂಟು. ಕಳೆದ ೨೫ ವರ್ಷಗಳಿಂದ ನೂರಾರು ಪ್ರಯೋಗಗಳಲ್ಲಿ ನಟಿಯಾಗಿ, ಗಾಯಕಿಯಾಗಿ, ಸಂಗೀತ ಸಂಯೋಜಕರಾಗಿ, ಬೆಳಕಿನ ತಂತ್ರಜ್ಞೆಯಾಗಿ ನಟನ ತಂಡದೊಂದಿಗೆ ರಂಗ ಕಾರ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಕನ್ನಡದ ಕೆಲವು ಚಲನಚಿತ್ರಗಳ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಅಮೇರಿಕಾ, ರ‍್ಲೆಂಡ್, ಇಂಗ್ಲೆಂಡ್, ಸಿಂಗಾಪೂರ್ ಮುಂತಾದ ದೇಶಗಳಲ್ಲಿ, ಮೈಸೂರಿನ ವಿಶ್ವ ವಿಖ್ಯಾತ ದಸರಾ ಮಹೋತ್ಸವ, ಭಾರತ್ ರಂಗ ಮಹೋತ್ಸವ, ಬಹುರೂಪಿ ರಂಗೋತ್ಸವ ಸೇರಿದಂತೆ ಅನೇಕ ಪ್ರತಿಷ್ಠಿತ ಉತ್ಸವಗಳಲ್ಲಿ ನಾಟಕ ಪ್ರದರ್ಶನ, ರಂಗಗೀತೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪ್ರಸ್ತುತ ನಟನ ರಂಗಶಾಲೆಯಲ್ಲಿ ಉಪನ್ಯಾಸಕಿಯಾಗಿ, ಸಂಯೋಜಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Disha Ramesh has been involved in theatre since her childhood. She has completed her postgraduate studies in theatre. For the past 24 years, she has been associated with the Natana troupe from its early stages. She has participated in hundreds of theatre performances and productions as an actress, singer, music composer, and lighting technician. She has also worked as the female lead in a few Kannada films.

Disha has rendered theatre music concerts and performed stage shows across several countries as well as in many prestigious cultural events and festivals, including the world-famous Mysore Dasara Mahotsav, Bharat Rang Mahotsav, Jashn E Bachpan organised by the National School of Drama, Bahurupi Rangothsava of Rangayana, and many more. Currently, she is working as a theatre facilitator and creative coordinator at Natana.

Anush Shetty

Musician

ಅನುಷ್ ಓರ್ವ ಸಂಗೀತಗಾರ ಮತ್ತು ಯುವ ಬರಹಗಾರ. ಈವರೆಗೂ ಸಾವಿರಕ್ಕೂ ಹೆಚ್ಚು ಶಾಸ್ತ್ರೀಯ ಮತ್ತು ಭಾವಗೀತೆ ಕಾರ್ಯಕ್ರಮಗಳಿಗೆ ವಾದ್ಯ ಸಾಂಗತ್ಯ ನೀಡಿರುವ ಇವರು ತಮ್ಮ ‘ನಾವು’ ಮತ್ತು ‘ರಿದಂ ಅಡ್ಡ’ ಬ್ಯಾಂಡ್‌ಗಳ ಮೂಲಕ ಸಂಗೀತದ ವಿವಿಧ ಸಾಧ್ಯತೆಗಳನ್ನು ಪ್ರಯೋಗಿಸುತ್ತಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲದಿಂದ ರಂಗ ಸಂಗೀತವನ್ನು ಮಾಡುತ್ತಿರುವ ಅನುಷ್, ಖ್ಯಾತ ಕಾದಂಬರಿಕಾರರೂ ಆಗಿದ್ದು ಈಗಾಗಲೇ ಅವರ ೬ ಜನಪ್ರಿಯ ಕಾದಂಬರಿಗಳು ಪ್ರಕಟವಾಗಿವೆ.

Anush is a musician and a young writer. He has accompanied more than 1000 classical and light music concerts. he has been experimenting with various possibilities of music through his music bands ‘Naavu’ and ‘Rhythm Adda’. Anush, who is working in the field of theatre music for more than a decade, is also a novelist who has published six popular novels in Kannada.

Munna Mysore

Musician

ಮುನ್ನ ಮೈಸೂರು (ಸುಂದರೇಶ ದೇವಪ್ರಿಯಂ) ವಿಶಿಷ್ಟ ಬಗೆಯ ಸಂಗೀತ ಸಂಯೋಜಕ. ನಾಟಕ, ಕಿರುಚಿತ್ರ, ಆಲ್ಬಂ ಬ್ಯಾಂಡ್ಗಳಿಗೆ ಸಂಗೀತ ಸಂಯೋಜಿಸುವ, ಹಾಡುವ, ಗಿಟಾರ್ ತರಗತಿ ನಡೆಸುವ ಸಂಗೀತಗಾರ. ‘ನಾವು’ ಮತ್ತು ‘ರಿದಂ ಅಡ್ಡ’ದ ಮೂಲಕ ನಾಡಿನಲ್ಲೆಡೆ ಪ್ರಸಿದ್ಧ. ಮೈಸೂರಿನಲ್ಲಿ ಸುಸಜ್ಜಿತ ರೆಕಾರ್ಡಿಂಗ್ ಸ್ಟುಡಿಯೊ ನಡೆಸುತ್ತಾರೆ. ಹಾರ್ಡ್ವಿಕ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Munna Mysore (Sundaresha Devapriyam) is a unique music composer. He composes music for plays, short films, music albums, bands etc. He sings and conducts guitar classes as well. He is known for his music bands ‘Naavu’ and ‘Rhythm Adda’. He runs a recording studio in Mysore and has been working as the Principal of Hardwick PU college, Mysore.